ಮೊಬೈಲ್ ಮತ್ತು PC ನಲ್ಲಿ 200,000 ಕ್ಕೂ ಹೆಚ್ಚು ಗೇಮ್‌ಗಳ ವಿಶ್ವ ದರ್ಜೆಯ ಕ್ಯಾಟಲಾಗ್ ಅನ್ನು ಎಕ್ಸ್‌ಪ್ಲೋರ್ ಮಾಡಿ ಮತ್ತು ನಿಮಗೆ ಸೂಕ್ತವಾದ ಗೇಮ್ ಅನ್ನು ಹುಡುಕಿ
Google Play ಪಾಯಿಂಟ್‌ಗಳನ್ನು1 ಗಳಿಸಿ, ಅವುಗಳನ್ನು ನೀವು ಗೇಮ್ ಖರೀದಿಗಳಿಗೆ ಬಳಸಬಹುದು ಮತ್ತು Points ಸದಸ್ಯರಾಗಿ ವಿಶೇಷ ಪರ್ಕ್‌ಗಳನ್ನು ಪಡೆದುಕೊಳ್ಳಬಹುದು
ನಿಮ್ಮ ನೆಚ್ಚಿನ ಗೇಮ್‌ಗಳು ಮತ್ತು ನಿಮ್ಮ ಸ್ವಂತ ಗೇಮಿಂಗ್ ಸಾಧನೆಗಳ ಕುರಿತಾದ ಅಪ್‌ಡೇಟ್‌ಗಳು, ಇವೆಲ್ಲವೂ ಅನುಕೂಲಕರವಾದ ಒಂದೇ ಜಾಗವಾದ ನೀವು ಟ್ಯಾಬ್‌ನಲ್ಲಿವೆ2
ಮೊಬೈಲ್ ಮತ್ತು PC ಯಲ್ಲಿ 200,000 ಕ್ಕಿಂತ ಹೆಚ್ಚಿನ ಗೇಮ್‌ಗಳೊಂದಿಗೆ, Google Play Games ನಲ್ಲಿ ಪ್ರತಿಯೊಬ್ಬರಿಗೂ ಗೇಮ್ ಇದೆ. ಪ್ರತಿ ಗೇಮ್ ಕುರಿತು ಶಿಫಾರಸುಗಳನ್ನು ಮತ್ತು ಸಮೃದ್ಧ ಮಾಹಿತಿಯನ್ನು ಪಡೆಯಿರಿ, ಇದರಿಂದಾಗಿ ನೀವು ಮುಂದೆ ಯಾವ ಗೇಮ್ ಅನ್ನು ಇಷ್ಟಪಡುತ್ತೀರಿ ಎಂದು ನಿಮಗೆ ತಿಳಿಯುತ್ತದೆ. ಮೊಬೈಲ್ ಮತ್ತು PC ಯಲ್ಲಿ ಲಭ್ಯವಿರುವ ಗೇಮ್‌ಗಳನ್ನು ನೋಡಿ.
Google Play ನ ರಿವಾರ್ಡ್ ಪ್ರೋಗ್ರಾಂ ಆದ Google Play Points ಮೂಲಕ ಮುಂದಿನ ಹಂತದ ರಿವಾರ್ಡ್‌ಗಳನ್ನು ಅನ್‌ಲಾಕ್ ಮಾಡಿ, ಅಲ್ಲಿ ನೀವು ರಿಯಾಯಿತಿಗಳು ಮತ್ತು ಗೇಮ್‌ನಲ್ಲಿನ ಐಟಂಗಳಿಗಾಗಿ ಬಳಸಲು ಪಾಯಿಂಟ್‌ಗಳು ಹಾಗೂ ರಿವಾರ್ಡ್‌ಗಳನ್ನು ಗಳಿಸಬಹುದು. ನೀವು ಹೆಚ್ಚು Play ಪಾಯಿಂಟ್‌ಗಳನ್ನು ಗಳಿಸಿದಷ್ಟೂ, ಇನ್ನಷ್ಟು ಆಕರ್ಷಕ ರಿವಾರ್ಡ್‌ಗಳು, ಪರ್ಕ್‌ಗಳು ಮತ್ತು ಹಣದಿಂದ ಖರೀದಿಸಲಾಗದ ಅನುಭವಗಳನ್ನು ನೀವು ಅನ್‌ಲಾಕ್ ಮಾಡುತ್ತೀರಿ. 1 ಈಗಲೇ ಸೇರಿಕೊಳ್ಳಿ.
ನೀವು ಟ್ಯಾಬ್‌ನ ಮಧ್ಯಭಾಗದಲ್ಲಿ ನಿಮ್ಮ ಗೇಮರ್ ಪ್ರೊಫೈಲ್ ಇದೆ. ಮೊಬೈಲ್‌ನಲ್ಲಿ ಪ್ರೊಫೈಲ್ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಯಾವುದೇ ಸಮಯದಲ್ಲಿ ನೀವು ಟ್ಯಾಬ್‌ನಿಂದ ಗೇಮರ್ ಪ್ರೊಫೈಲ್‌ಗೆ ಸುಲಭವಾಗಿ ಪರಿವರ್ತನೆಗೊಳ್ಳಬಹುದು. ಮೊಬೈಲ್ ಮತ್ತು PC ಯಾದ್ಯಂತ ಒಂದೇ ಪ್ರೊಫೈಲ್‌ನೊಂದಿಗೆ, ನಿಮ್ಮ ಗೇಮ್‌ಗಳಲ್ಲಿ ನಿಮ್ಮ ಅಂಕಿಅಂಶಗಳು, ಸ್ಟ್ರೀಕ್‌ಗಳು, ಪ್ರಗತಿ ಮತ್ತು ಸಾಧನೆಗಳನ್ನು ನೀವು ಸುಲಭವಾಗಿ ಟ್ರ್ಯಾಕ್ ಮಾಡಬಹುದು. ಪ್ರತಿಯೊಂದು ಸಾಧನೆ, ಪ್ರತಿಯೊಂದು ಗೆಲುವು – ಆಚರಿಸಲು ಇದೆಲ್ಲವೂ ಇಲ್ಲಿದೆ.
Gemini Live ನೊಂದಿಗೆ Play Games ಸೈಡ್‌ಕಿಕ್ ಹೊಸ ಗೇಮಿಂಗ್ ಕಂಪ್ಯಾನಿಯನ್ ಆಗಿದ್ದು ಅದು ನಿಮ್ಮ ಗೇಮ್ ಅನ್ನು ಬಿಡದೆಯೇ ನಿಮ್ಮ ಅಂಕಿಅಂಶಗಳು, ಸಾಧನೆಗಳು ಮತ್ತು ಸಲಹೆಗಳಿಗೆ ಸುಲಭ ಆ್ಯಕ್ಸೆಸ್ ಅನ್ನು ನೀಡುತ್ತದೆ. ನೀವು ಆಟವಾಡುವಾಗ Gemini Live ನಿಂದ ನೈಜ-ಸಮಯದ ಸಂವಾದಾತ್ಮಕ ಮಾರ್ಗದರ್ಶನವನ್ನು ಸಹ ಪಡೆಯಬಹುದು. Google Play ನಿಂದ ಡೌನ್‌ಲೋಡ್ ಮಾಡಿದ ಗೇಮ್‌ಗಳನ್ನು ಆಡುವಾಗ ಮಾತ್ರ ಸೈಡ್‌ಕಿಕ್ ಲಭ್ಯವಿರುತ್ತದೆ ಮತ್ತು ಶೀಘ್ರದಲ್ಲೇ ಮೊಬೈಲ್‌ಗೆ ಬರಲಿದೆ.
Google ನಿಂದ ಸುರಕ್ಷತೆ ಮತ್ತು ರಕ್ಷಣೆಯೊಂದಿಗೆ ಮೊಬೈಲ್ ಮತ್ತು PC ಯಲ್ಲಿ ಆತ್ಮವಿಶ್ವಾಸದಿಂದ ಆಟವಾಡಿ. ನಿಮ್ಮ ಡೇಟಾ ಮತ್ತು ಸಾಧನಗಳನ್ನು ಸುರಕ್ಷಿತವಾಗಿರಿಸಲು ನಾವು ನೀಡುವ ಪ್ರತಿಯೊಂದು ಗೇಮ್‌ನಲ್ಲಿ Google Play 10,000 ಸುರಕ್ಷತೆಯ ಪರಿಶೀಲನೆಗಳನ್ನು ರನ್ ಮಾಡುತ್ತದೆ.