ಇದು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ಪ್ರಸ್ತುತ ಆವೃತ್ತಿ ಅಥವಾ ಎಲ್ಲ ಹಿಂದಿನ ಆವೃತ್ತಿಗಳನ್ನು ವೀಕ್ಷಿಸಿ.

ಗೌಪ್ಯತಾ ನೀತಿ

ಕೊನೆಯ ಬಾರಿ ಮಾರ್ಪಡಿಸಿರುವುದು: 24 ಜೂನ್ 2013 (ಆರ್ಕೈವ್ ಮಾಡಲಾದ ಆವೃತ್ತಿಗಳನ್ನು ವೀಕ್ಷಿಸಿ)

ಮಾಹಿತಿಯನ್ನು ಹುಡುಕುವುದಕ್ಕಾಗಿ ಮತ್ತು ಹಂಚಿಕೊಳ್ಳುವುದಕ್ಕಾಗಿ, ಇತರ ಜನರೊಂದಿಗೆ ಸಂವಹಿಸುವುದಕ್ಕಾಗಿ ಅಥವಾ ಹೊಸ ವಿಷಯವನ್ನು ರಚಿಸುವುದಕ್ಕಾಗಿ – ಹೀಗೆ ನಮ್ಮ ಸೇವೆಗಳನ್ನು ಹತ್ತು ಹಲವು ಬಗೆಗಳಲ್ಲಿ ನೀವು ಬಳಸಬಹುದು. Google ಖಾತೆಯನ್ನು ರಚಿಸುವುದರ ಮೂಲಕ ಮಾಹಿತಿಯನ್ನು ನೀವು ನಮ್ಮೊಂದಿಗೆ ಹಂಚಿಕೊಂಡಾಗ,ಅಂತಹ ಸೇವೆಗಳನ್ನು ನಾವು ಇನ್ನಷ್ಟು ಉತ್ತಮಗೊಳಿಸಬಹುದಾಗಿದೆ ಉದಾಹರಣೆಗೆ, ಹೆಚ್ಚು ಸಂಬಂಧಿತ ಹುಡುಕಾಟ ಫಲಿತಾಂಶಗಳು ಮತ್ತು ಜಾಹೀರಾತುಗಳನ್ನು ನಿಮಗೆ ತೋರಿಸಲು, ಜನರೊಂದಿಗೆ ಸಂಪರ್ಕ ಸಾಧಿಸುವಲ್ಲಿ ನಿಮಗೆ ಸಹಾಯ ಮಾಡಲು ಅಥವಾ ಹಂಚಿಕೆಯನ್ನು ಇತರರೊಂದಿಗೆ ತ್ವರಿತವಾಗಿ ಮತ್ತು ಸುಲಭವಾಗಿ ಮಾಡಲು ಸಹಾಯ ಮಾಡಲು. ನೀವು ನಮ್ಮ ಸೇವೆಗಳನ್ನು ಬಳಸಿದಂತೆ, ನಾವು ಮಾಹಿತಿಯನ್ನು ಹೇಗೆ ಬಳಸುತ್ತಿದ್ದೇವೆ ಮತ್ತು ನಿಮ್ಮ ಗೌಪ್ಯತೆಗೆ ಯಾವುದೇ ರೀತಿಯ ಧಕ್ಕೆ ಬರದಂತೆ ಹೇಗೆ ನಿರ್ವಹಿಸುತ್ತೇವೆ ಎಂಬುದನ್ನು ನೀವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕೆಂಬುದು ನಮ್ಮ ಆಕಾಂಕ್ಷೆ.

ನಮ್ಮ ಗೌಪ್ಯತಾ ನೀತಿಯು ಈ ಕೆಳಗಿನ ಸಂಗತಿಗಳನ್ನು ವಿವರಿಸುತ್ತದೆ:

  • ಯಾವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ ಹಾಗೂ ಏಕೆ ಸಂಗ್ರಹಿಸುತ್ತೇವೆ.
  • ಆ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ.
  • ಮಾಹಿತಿಯನ್ನು ಪ್ರವೇಶಿಸುವುದು ಮತ್ತು ನವೀಕರಿಸುವುದು ಹೇಗೆ ಎಂಬುದನ್ನು ಒಳಗೊಂಡಿರುವ ಆಯ್ಕೆಯನ್ನು ನಾವು ಒದಗಿಸುತ್ತೇವೆ.

ಅದನ್ನು ಸಾಧ್ಯವಾದಷ್ಟು ಸರಳವಾಗಿರುವಂತೆ ಇರಿಸಲು ನಾವು ಪ್ರಯತ್ನಿಸಿದ್ದೇವೆ, ಆದರೆ ಕುಕೀಸ್, IP ವಿಳಾಸಗಳು, ಪಿಕ್ಸೆಲ್ ಟ್ಯಾಗ್‌ಗಳು ಹಾಗೂ ಬ್ರೌಸರ್‌ಗಳಂತಹ ಪದಗಳು ನಿಮಗೆ ಪರಿಚಯವಿಲ್ಲದಿದ್ದಲ್ಲಿ , ಮೊದಲಿಗೆ ಈ ಮುಖ್ಯ ಪದಗಳ ಕುರಿತು ಓದಿ. ನಿಮ್ಮ ಗೌಪ್ಯತೆಯು Google ಗೆ ಮುಖ್ಯವಾಗಿದೆ ಆದ್ದರಿಂದಾಗಿ ನೀವು Google ಗೆ ಹೊಸಬರಾಗಲಿ ಅಥವಾ ದೀರ್ಘಕಾಲಿಕ ಬಳಕೆದಾರರಾಗಲಿ, ದಯವಿಟ್ಟು ನಮ್ಮ ಅಭ್ಯಾಸಗಳನ್ನು ತಿಳಿದುಕೊಳ್ಳಲು ಸಮಯವನ್ನು ತೆಗೆದುಕೊಳ್ಳಿ – ಮತ್ತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ನಮ್ಮನ್ನು ಸಂಪರ್ಕಿಸಿ.

ನಾವು ಸಂಗ್ರಹಿಸುವ ಮಾಹಿತಿ

ಯಾವ ಭಾಷೆಯನ್ನು ನೀವು ಮಾತನಾಡುವಿರಿ, ಹೆಚ್ಚಿನ ಕ್ಲಿಷ್ಟವಾದ ವಿಷಯಗಳಾದಂತಹ ಯಾವ ಜಾಹೀರಾತು ನಿಮಗೆ ಹೆಚ್ಚು ಉಪಯೋಗಕಾರಿಯಾಗಿ ಕಾಣುತ್ತದೆ ಅಥವಾ ನಿಮಗೆ ಆನ್‌ಲೈನ್‌ನಲ್ಲಿ ಯಾವ ವ್ಯಕ್ತಿ ಅತಿ ಹೆಚ್ಚು ಮಹತ್ವದ ವ್ಯಕ್ತಿಯಾಗಿದ್ದಾರೆ ಎಂಬ ಪ್ರಾಥಮಿಕ ಸಂಗತಿಗಳನ್ನೂ ಒಳಗೊಂಡಂತೆ, ನಮ್ಮೆಲ್ಲಾ ಬಳಕೆದಾರರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸಲು ಗುರುತಿಸಿದ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.

ನಾವು ಎರಡು ರೀತಿಯಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತೇವೆ:

  • ನೀವು ನೀಡುವಂತಹ ಮಾಹಿತಿ. ಉದಾಹರಣೆಗೆ, Google ಖಾತೆಗೆ ನೀವು ಸೈನ್‌ ಅಪ್‌ ಮಾಡಬೇಕೆಂದರೆ ನಿಮಗೆ ನಮ್ಮ ಹಲವಾರು ಸೇವೆಗಳ ಅವಶ್ಯಕತೆ ಇರುತ್ತದೆ. ನೀವು ಮಾಡುವಾಗ, ನಿಮ್ಮ ಹೆಸರು, ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಅಥವಾ ಕ್ರೆಡಿಟ್ ಕಾರ್ಡ್‌ನಂತಹ ವೈಯಕ್ತಿಕ ಮಾಹಿತಿ ಯನ್ನು, ನಾವು ಕೇಳುತ್ತೇವೆ. ನಾವು ಒದಗಿಸುವ ಹಂಚಿಕೊಳ್ಳುವ ವೈಶಿಷ್ಟ್ಯಗಳ ಪೂರ್ಣ ಪ್ರಯೋಜನವನ್ನು ನೀವು ತೆಗೆದುಕೊಳ್ಳಲು ಬಯಸಿದ್ದಲ್ಲಿ, ಸಾರ್ವಜನಿಕವಾಗಿ ವೀಕ್ಷಿಸಬಲ್ಲ ನಿಮ್ಮ ಹೆಸರು ಹಾಗೂ ಫೋಟೋವನ್ನು ಒಳಗೊಂಡಿರಬಹುದಾದGoogle ಪ್ರೊಫೈಲ್ ಅನ್ನು ರಚಿಸಲು ಕೂಡ ನಾವು ನಿಮ್ಮಲ್ಲಿ ಕೇಳಿಕೊಳ್ಳಬಹುದು.

  • ನಮ್ಮ ಸೇವೆಗಳ ನಿಮ್ಮ ಬಳಕೆಯಿಂದ ನಾವು ಸಂಗ್ರಹಿಸುವ ಮಾಹಿತಿ. ನೀವು ಬಳಸುವ ಸೇವೆಗಳು ಹಾಗೂ ಅವುಗಳನ್ನು ನೀವು ಬಳಸುವ ರೀತಿಯಿಂದಾಗಿ ನಾವು ಸಾಕಷ್ಟು ಮಾಹಿತಿಗಳನ್ನು ಪಡೆಯುತ್ತೇವೆ. ಉದಾಹರಣೆಗೆ, ನಮ್ಮ ಜಾಹೀರಾತು ಸೇವೆಗಳನ್ನು ಬಳಸಿಕೊಳ್ಳುವ ವೆಬ್‌ಸೈಟ್‌ವೊಂದಕ್ಕೆ ನೀವು ಯಾವಾಗ ಭೇಟಿ ನೀಡುತ್ತೀರಿ, ಅಥವಾ ನಮ್ಮ ಜಾಹೀರಾತುಗಳು ಹಾಗೂ ವಿಷಯವನ್ನು ಎಂದು ವೀಕ್ಷಿಸುತ್ತೀರಿ ಹಾಗೂ ಅವುಗಳೊಂದಿಗೆ ಎಂದು ಸಂವಾದಿಸುತ್ತೀರಿ ಎಂಬೆಲ್ಲಾ ಸಂಗತಿಗಳ ಆಧಾರದ ಮೇಲೆ ನಾವು ಮಾಹಿತಿ ಸಂಗ್ರಹಿಸಬಹುದು. ಈ ಮಾಹಿತಿಯು ಇದನ್ನು ಒಳಗೊಂಡಿದೆ:

    • ಸಾಧನದ ಮಾಹಿತಿ

      ಸಾಧನ-ನಿರ್ದಿಷ್ಟ ಮಾಹಿತಿಯನ್ನು ನಾವು ಸಂಗ್ರಹಿಸಬಹುದು (ನಿಮ್ಮ ಹಾರ್ಡ್‌ವೇರ್ ಮಾದರಿ, ಆಪರೇಟಿಂಗ್ ಸಿಸ್ಟಮ್ ಆವೃತ್ತಿ, ಅನನ್ಯ ಸಾಧನ ಗುರುತಿಸುವಿಕೆಗಳು, ಮತ್ತು ಫೋನ್ ಸಂಖ್ಯೆ ಸೇರಿದಂತೆ ಮೊಬೈಲ್ ನೆಟ್‌ವರ್ಕ್ ಮಾಹಿತಿಯಂತಹದು). ನಿಮ್ಮ Google ಖಾತೆಯೊಂದಿಗೆ ನಿಮ್ಮ ಸಾಧನ ಗುರುತಿಸುವಿಕೆಗಳು ಅಥವಾ ಫೋನ್ ಸಂಖ್ಯೆಯನ್ನು Google ಸಂಯೋಜಿಸಬಹುದು.

    • ಲಾಗ್ ಮಾಹಿತಿ

      ನಮ್ಮ ಸೇವೆಗಳನ್ನು ನೀವು ಬಳಸಿದಾಗ ಅಥವಾ Google ಒದಗಿಸಿರುವ ವಿಷಯವನ್ನು ವೀಕ್ಷಿಸಿದಾಗ, ನಾವು ಸ್ವಯಂಚಾಲಿತವಾಗಿ ಸರ್ವರ್ ಲಾಗ್‌ಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬಹುದು. ಇದನ್ನು ಒಳಗೊಂಡಿರಬಹುದು:

      • ನೀವು ಹುಡುಕುವಂತಹ ಪ್ರಶ್ನೆಗಳನ್ನು, ನಮ್ಮ ಸೇವೆಗಳಲ್ಲಿ ನೀವು ಹೇಗೆ ಬಳಸುತ್ತಿದ್ದೀರಿ ಎನ್ನುವ ವಿವರಗಳು.
      • ನಿಮ್ಮ ಫೋನ್ ಸಂಖ್ಯೆ, ಕರೆಮಾಡುತ್ತಿರುವ-ವ್ಯಕ್ತಿಯ ಸಂಖ್ಯೆ, ಫಾರ್ವರ್ಡ್ ಮಾಡುತ್ತಿರುವ ಸಂಖ್ಯೆಗಳು, ಕರೆಗಳನ್ನು ಮಾಡುವ ಸಮಯ ಮತ್ತು ದಿನಾಂಕ, ಕರೆಗಳ ಕಾಲಾವಧಿ, SMS ರೂಟಿಂಗ್ ಮಾಹಿತಿ ಮತ್ತು ಕರೆಗಳ ವಿಧಗಳಂತಹ ದೂರವಾಣಿ ವ್ಯವಸ್ಥೆ ಲಾಗ್.
      • ಇಂಟರ್ನೆಟ್ ಪ್ರೊಟೋಕಾಲ್ ವಿಳಾಸ.
      • ಕ್ರ್ಯಾಶ್‌ಗಳು, ಸಿಸ್ಟಮ್ ಚಟುವಟಿಕೆ, ಹಾರ್ಡ್‌ವೇರ್ ಸೆಟ್ಟಿಂಗ್‌ಗಳು, ಬ್ರೌಸರ್ ಪ್ರಕಾರ, ಬ್ರೌಸರ್ ಭಾಷೆ, ನಿಮ್ಮ ವಿನಂತಿಯ ದಿನಾಂಕ ಮತ್ತು ಸಮಯ ಹಾಗೂ ಉಲ್ಲೇಖ URL ನಂತಹ ಸಾಧನ ಈವೆಂಟ್ ಮಾಹಿತಿ.
      • ನಿಮ್ಮ ಬ್ರೌಸರ್ ಅಥವಾ ನಿಮ್ಮ Google ಖಾತೆಯನ್ನು ಅನನ್ಯವಾಗಿ ಗುರುತಿಸಬಹುದಾದಂತಹ ಕುಕೀಸ್.
    • ಸ್ಥಳ ಮಾಹಿತಿ

      ಸ್ಥಾನ-ಸಕ್ರಿಯಗೊಳಿಸಲಾದ Google ಸೇವೆಗಳನ್ನು ನೀವು ಬಳಸಿದಾಗ, ಮೊಬೈಲ್ ಸಾಧನದ ಮೂಲಕ ಕಳುಹಿಸಿದ GPS ಸಿಗ್ನಲ್‍‌ಗಳಂತಹ, ನಿಮ್ಮ ನೈಜವಾದ ಸ್ಥಳದ ಬಗ್ಗೆ ನಾವು ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಪ್ರಕ್ರಿಯೆಗೊಳಿಸಬಹುದು. ನಿಮ್ಮ ಸಾಧನದಿಂದ ಸೆನ್ಸಾರ್ ಡೇಟಾದಂತಹ ಉದಾಹರಣೆಗೆ, ಹತ್ತಿರದ Wi-Fi ಪ್ರವೇಶ ಬಿಂದುಗಳು ಮತ್ತು ಸೆಲ್ ಟವರ್‌ಗಳ ಮಾಹಿತಿಯನ್ನು ಒದಗಿಸುವುದರಂತಹ ಸ್ಥಾನ ದೃಢೀಕರಿಸಲು ನಾವು ಹಲವಾರು ತಂತ್ರಜ್ಞಾನಗಳನ್ನು ಬಳಸಬಹುದಾಗಿದೆ.

    • ಅನನ್ಯ ಅಪ್ಲಿಕೇಶನ್ ಸಂಖ್ಯೆಗಳು

      ಕೆಲವು ಸೇವೆಗಳು ಅನನ್ಯ ಅಪ್ಲಿಕೇಶನ್ ಸಂಖ್ಯೆಯನ್ನು ಹೊಂದಿರುತ್ತವೆ. ಈ ಸಂಖ್ಯೆ ಮತ್ತು ನಿಮ್ಮ ಸ್ಥಾಪನೆ (ಉದಾಹರಣೆಗೆ, ಆಪರೇಟಿಂಗ್ ಸಿಸ್ಟಂ ಪ್ರಕಾರ ಮತ್ತು ಅಪ್ಲಿಕೇಶನ್ ಆವೃತ್ತಿ ಸಂಖ್ಯೆ) ಕುರಿತ ಮಾಹಿತಿಯನ್ನು ಆ ಸೇವೆಯನ್ನು ನೀವು ಸ್ಥಾಪಿಸಿದಾಗ ಅಥವಾ ಅಸ್ಥಾಪಿಸಿದಾಗ ಅಥವಾ ಸ್ವಯಂಚಾಲಿತ ನವೀಕರಣಗಳಂತಹ ಆ ಸೇವೆಯು ನಿಯತಕಾಲಿಕವಾಗಿ ನಮ್ಮ ಸರ್ವರ್‌ಗಳನ್ನು ಸಂಪರ್ಕಿಸಿದಾಗ Google ಗೆ ಕಳುಹಿಸಬಹುದಾಗಿದೆ.

    • ಸ್ಥಳೀಯ ಸಂಗ್ರಹಣೆ

      ಬ್ರೌಸರ್ ವೆಬ್ ಸಂಗ್ರಹಣೆ (HTML 5 ಸೇರಿದಂತೆ) ಮತ್ತು ಅಪ್ಲಿಕೇಶನ್ ಡೇಟಾ ಸಂಗ್ರಹಣೆಗಳಂತಹ ಯಾಂತ್ರೀಕತೆಯನ್ನು ಬಳಸುವ ಮೂಲಕ ನಿಮ್ಮ ಸಾಧನದಲ್ಲಿ ಸ್ಥಳೀಯವಾಗಿ ನಾವು ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ಶೇಖರಿಸಿಡಬಹುದು (ವೈಯಕ್ತಿಕ ಮಾಹಿತಿ ಸೇರಿದಂತೆ).

    • ಕುಕೀಸ್ ಮತ್ತು ಅನಾಮಧೇಯ ಗುರುತಿಸುವಿಕೆಗಳು

      ನೀವು Google ಸೇವೆಯನ್ನು ಭೇಟಿ ಮಾಡಿದಾಗ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಶೇಖರಿಸಿಡಲು ನಾವು ಹಲವಾರು ತಂತ್ರಜ್ಞಾನಗಳನ್ನು ಬಳಸುತ್ತೇವೆ, ಮತ್ತು ಇದರಲ್ಲಿ ನಿಮ್ಮ ಸಾಧನಕ್ಕೆ ಒಂದು ಅಥವಾ ಹೆಚ್ಚಿನ ಕುಕೀಸ್ ಅಥವಾ ಅನಾಮಧೇಯ ಗುರುತಿಸುವಿಕೆಗಳನ್ನು ಕಳುಹಿಸುವುದನ್ನು ಒಳಗೊಂಡಿರಬಹುದು. ನಮ್ಮ ಪಾಲುದಾರರೊಂದಿಗೆ ನಾವು ಒದಗಿಸುವ ಸೇವೆಗಳೊಂದಿಗೆ ನೀವು ಸಂವಹಿಸಿದಾಗ ನಾವು ಜಾಹೀರಾತು ಸೇವೆಗಳು ಅಥವಾ ಇತರ ಸೈಟ್‌ಗಳಲ್ಲಿ ಗೋಚರಿಸುವಂತಹ Google ವೈಶಿಷ್ಟ್ಯಗಳಂತಹ ಕುಕೀಸ್ ಮತ್ತು ಅನಾಮಧೇಯ ಗುರುತಿಸುವಿಕೆಗಳನ್ನು ಬಳಸಬಹುದಾಗಿದೆ.

ಸಂಗ್ರಹಿಸಿದ ಮಾಹಿತಿಯನ್ನು ನಾವು ಹೇಗೆ ಬಳಸಬಹುದು

ನಮ್ಮ ಎಲ್ಲ ಸೇವೆಗಳಿಂದ ನಾವು ಸಂಗ್ರಹಿಸುವ ಮಾಹಿತಿಯನ್ನು ಒದಗಿಸಲು, ನಿರ್ವಹಿಸಲು, ರಕ್ಷಿಸಲು ಮತ್ತು ಅವುಗಳನ್ನು ಸುಧಾರಿಸಲು, ಹೊಸದನ್ನು ಅಭಿವೃದ್ಧಿಪಡಿಸಲು, ಮತ್ತು Google ಹಾಗೂ ನಿಮ್ಮ ಬಳಕೆದಾರರನ್ನು ರಕ್ಷಿಸಲು ನಾವು ಬಳಸುತ್ತೇವೆ. ನಿಮ್ಮ ಅಗತ್ಯದ ವಿಷಯವನ್ನು ನೀಡಲು ಸಹ ನಾವು ಈ ಮಾಹಿತಿಯನ್ನು ಬಳಸುತ್ತೇವೆ – ಹೆಚ್ಚು ಸಂಬಂಧಿತ ಹುಡುಕಾಟ ಫಲಿತಾಂಶಗಳು ಮತ್ತು ಜಾಹೀರಾತುಗಳನ್ನು ನಿಮಗೆ ನೀಡುವುದರಂತಹದು.

Google ಖಾತೆಗೆ ಅಗತ್ಯವಿರುವಂತಹ ನಾವು ಪೂರೈಸುವಂತಹ ಎಲ್ಲ ಸೇವೆಗಳಾದ್ಯಂತ ನಿಮ್ಮ Google ಪ್ರೊಫೈಲ್‌ಗೆ ಒದಗಿಸುವ ಹೆಸರನ್ನು ನಾವು ಬಳಸಬಹುದು. ಹೆಚ್ಚುವರಿಯಾಗಿ, ನಿಮ್ಮ Google ಖಾತೆಯೊಂದಿಗೆ ಸಂಯೋಜಿತವಾಗಿರುವಂತಹ ಹಿಂದಿನ ಹೆಸರುಗಳನ್ನು ನಾವು ಮರುಸ್ಥಾನಗೊಳಿಸಬಹುದು ಆದ್ದರಿಂದಾಗಿ ನಮ್ಮ ಎಲ್ಲ ಸೇವೆಗಳಾದ್ಯಂತ ನಿಮ್ಮನ್ನು ಸಮಂಜಸವಾಗಿ ಪ್ರತಿನಿಧಿಸಲು ಸಾಧ್ಯವಾಗುತ್ತದೆ. ಇತರ ಬಳಕೆದಾರರು ಈಗಾಗಲೇ ನಿಮ್ಮ ಇಮೇಲ್ ಅನ್ನು ಹೊಂದಿದ್ದರೆ, ಅಥವಾ ನಿಮ್ಮ ಹೆಸರು ಮತ್ತು ಫೋಟೊದಂತಹ ನಿಮ್ಮನ್ನು ಗುರುತಿಸುವಂತಹ ಇತರ ಮಾಹಿತಿಯನ್ನು ಹೊಂದಿದ್ದರೆ ನಾವು ಅವರಿಗೆ ಸಾರ್ವಜನಿಕವಾಗಿ ಗೋಚರಿಸುವಂತಹ Google ಪ್ರೊಫೈಲ್ ಮಾಹಿತಿಯನ್ನು ತೋರಿಸಬಹುದಾಗಿದೆ.

Google ಅನ್ನು ನೀವು ಸಂಪರ್ಕಿಸಿದಾಗ, ನೀವು ಎದುರಿಸುತ್ತಿರುವಂತಹ ಯಾವುದೇ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡಲು ನಿಮ್ಮ ಸಂವಹನದ ದಾಖಲೆಯನ್ನು ನಾವು ಇರಿಸಿಕೊಳ್ಳಬಹುದು. ಮುಂಬರಲಿರುವ ಬದಲಾವಣೆಗಳು ಅಥವಾ ಅಭಿವೃದ್ಧಿಗಳ ಕುರಿತು ನಿಮಗೆ ಅರಿವು ಮೂಡಿಸುವ ಸಲುವಾಗಿ ನಮ್ಮ ಸೇವೆಗಳ ಬಗ್ಗೆ ನಿಮಗೆ ತಿಳಿಸಲು ನಿಮ್ಮ ಇಮೇಲ್ ವಿಳಾಸವನ್ನು ನಾವು ಬಳಸಬಹುದಾಗಿದೆ.

ನಿಮ್ಮ ಬಳಕೆದಾರ ಅನುಭವವನ್ನು ಮತ್ತು ನಮ್ಮ ಸೇವೆಗಳ ಒಟ್ಟು ಗುಣಮಟ್ಟವನ್ನು ಸುಧಾರಿಸಲು ಪಿಕ್ಸೆಲ್ ಟ್ಯಾಗ್‌ಗಳಂತಹ ಕುಕೀಸ್ ಮತ್ತು ಇತರ ತಂತ್ರಜ್ಞಾನಗಳಿಂದ ಸಂಗ್ರಹಿಸಲಾದ ಮಾಹಿತಿಯನ್ನು ನಾವು ಬಳಸುತ್ತೇವೆ. ಉದಾಹರಣೆಗೆ, ನಿಮ್ಮ ಭಾಷೆ ಪ್ರಾಶಸ್ತ್ಯಗಳನ್ನು ಉಳಿಸುವ ಮೂಲಕ, ನಿಮ್ಮಿಚ್ಛೆಯ ಭಾಷೆಯಲ್ಲಿ ನಮ್ಮ ಸೇವೆಗಳು ಗೋಚರಿಸುವಂತೆ ನಾವು ಮಾಡಬಹುದಾಗಿದೆ. ಸರಿಯಾಗಿ ಹೊಂದಿಕೆ ಮಾಡಲಾದ ಜಾಹೀರಾತುಗಳನ್ನು ನಿಮಗೆ ತೋರಿಸುವಾಗ , ಕುಲ-ಜಾತಿ, ಧರ್ಮ, ಲೈಂಗಿಕ ಪ್ರಚೋದನೆ ಅಥವಾ ಆರೋಗ್ಯದಂತಹ ಸೂಕ್ಷ್ಮ ರೀತಿಯ ವರ್ಗಗಳೊಂದಿಗೆ ಕುಕೀ ಅಥವಾ ಅನಾಮಧೇಯ ಗುರುತಿಸುವಿಕೆಯನ್ನು ನಾವು ಸಂಯೋಜಿಸುವುದಿಲ್ಲ.

ಇತರ Google ಸೇವೆಗಳಿಂದ – ವೈಯಕ್ತಿಕ ಮಾಹಿತಿ ಸೇರಿದಂತೆ ಮಾಹಿತಿಯೊಂದಿಗೆ ಒಂದು ಸೇವೆಯಿಂದ ವೈಯಕ್ತಿಕ ಮಾಹಿತಿಯನ್ನು ನಾವು ಸೇರಿಸುತ್ತೇವೆ, ಉದಾಹರಣೆಗೆ ನೀವು ತಿಳಿದಿರುವಂತಹ ಜನರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವುದು ಸುಲಭ ಮಾಡುವುದು. ನಿಮ್ಮ ಆಯ್ಕೆಯ ಸಮ್ಮತಿ ಇಲ್ಲದ ಹೊರತು ವೈಯಕ್ತಿಕವಾಗಿ ಗುರುತಿಸಬಲ್ಲಂತಹ ಮಾಹಿತಿಯೊಂದಿಗೆ DoubleClick ಕುಕೀ ಮಾಹಿತಿಯನ್ನು ನಾವು ಸೇರಿಸುವುದಿಲ್ಲ.

ಈ ಗೌಪ್ಯತೆ ನೀತಿಯಲ್ಲಿ ತಿಳಿಸಲಾಗಿರುವ ಉದ್ದೇಶಗಳನ್ನು ಹೊರತುಪಡಿಸಿ ಮಾಹಿತಿಯನ್ನು ಬಳಸುವ ಮೊದಲು ನಾವು ನಿಮ್ಮ ಅನುಮತಿಯನ್ನು ಕೇಳುತ್ತೇವೆ.

ಪ್ರಪಂಚದಾದ್ಯಂತವಿರುವ ಹಲವಾರು ರಾಷ್ಟ್ರಗಳಲ್ಲಿರುವ ನಮ್ಮ ಸರ್ವರ್‌ಗಳಲ್ಲಿ ವೈಯಕ್ತಿಕ ಮಾಹಿತಿಯನ್ನು Google ಪ್ರಕ್ರಿಯೆಗೊಳಿಸುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀವು ವಾಸಿಸುವ ರಾಷ್ಟ್ರದ ಹೊರಗಿರುವಂತಹ ಸರ್ವರ್‌ನಲ್ಲಿ ನಾವು ಪ್ರಕ್ರಿಯೆಗೊಳಿಸಬಹುದಾಗಿದೆ.

ಪಾರದರ್ಶಕತೆ ಮತ್ತು ಆಯ್ಕೆ

ಜನರು ವಿಭಿನ್ನ ಗೌಪ್ಯತೆ ಆಲೋಚನೆಗಳನ್ನು ಹೊಂದಿರುತ್ತಾರೆ. ನಾವು ಯಾವ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಎಂಬುದರ ಬಗ್ಗೆ ಸ್ಪಷ್ಟವಾಗಿರುವುದು ನಮ್ಮ ಗುರಿಯಾಗಿದೆ, ಇದರಿಂದಾಗಿ ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಬಗ್ಗೆ ನೀವು ಅರ್ಥಪೂರ್ಣವಾದ ಆಯ್ಕೆಗಳನ್ನು ಮಾಡಬಹುದಾಗಿದೆ. ಉದಾಹರಣೆಗೆ, ನೀವು:

ನಮ್ಮ ಸೇವೆಗಳೊಂದಿಗೆ ಗುರುತಿಸಿಕೊಂಡಿರುವ ಕುಕೀಗಳನ್ನೂ ಒಳಗೊಂಡಂತೆ ಎಲ್ಲಾ ರೀತಿಯ ಕುಕೀಗಳನ್ನು ನಿರ್ಬಂಧಿಸುವಂತೆ ಹಾಗೂ ನಮ್ಮಿಂದ ಹೊಂದಿಸಲಾದ ಕುಕೀಯೊಂದನ್ನು ಸೂಚಿಸುವಂತೆಯೂ ನಿಮ್ಮ ಬ್ರೌಸರ್‌ ಅನ್ನು ಹೊಂದಿಸಬಹುದು. ಅದಾಗ್ಯೂ, ನಿಮ್ಮ ಕುಕೀಸ್ ನಿಷ್ಕ್ರಿಯವಾದಲ್ಲಿ ನಮ್ಮ ಹಲವಾರು ಸೇವೆಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರಬಹುದು ಎಂಬುದು ನಿಮ್ಮ ಗಮನದಲ್ಲಿರಲಿ. ಉದಾಹರಣೆಗೆ, ನಿಮ್ಮ ಭಾಷೆಯ ಪ್ರಾಶಸ್ತ್ಯಗಳನ್ನು ನಾವು ಮರೆತುಬಿಡಬಹುದು.

ನೀವು ಹಂಚಿಕೊಳ್ಳುವ ಮಾಹಿತಿ

ನಮ್ಮ ಹಲವಾರು ಸೇವೆಗಳು ಇತರರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ನಿಮಗೆ ಅವಕಾಶ ನೀಡುತ್ತವೆ. ನೀವು ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಾಗ, Google ಸೇರಿದಂತೆ ಅದನ್ನು ಹುಡುಕಾಟ ಎಂಜಿನ್‌ಗಳಿಂದ ಇಂಡೆಕ್ಸ್ ಮಾಡಬಹುದಾಗಿದೆ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಿ. ನಿಮ್ಮ ವಿಷಯವನ್ನು ತೆಗೆದುಹಾಕಲು ಮತ್ತು ಹಂಚುವಿಕೆಗಾಗಿ ನಮ್ಮ ಸೇವೆಗಳು ನಿಮಗೆ ವಿವಿಧ ಆಯ್ಕೆಗಳನ್ನು ಒದಗಿಸುತ್ತದೆ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸುವುದು ಮತ್ತು ನವೀಕರಿಸುವುದು

ನಮ್ಮ ಸೇವೆಗಳನ್ನು ನೀವು ಬಳಸಿದಾಗಲೆಲ್ಲ, ನಿಮ್ಮ ವೈಯಕ್ತಿಕ ಮಾಹಿತಿಗೆ ಪ್ರವೇಶ ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಆ ಮಾಹಿತಿಯು ತಪ್ಪಾಗಿದ್ದಲ್ಲಿ, ಅದನ್ನು ತ್ವರಿತಗತಿಯಲ್ಲಿ ನವೀಕರಿಸಲು ಅಥವಾ ಅದನ್ನು ಅಳಿಸಲು ನಿಮಗೆ ಅನುಕೂಲ ಕಲ್ಪಿಸಲು ನಾವು ಶ್ರಮಿಸುತ್ತೇವೆ – ಇಲ್ಲದಿದ್ದಲ್ಲಿ ನಾವು ಆ ಮಾಹಿತಿಯನ್ನು ಕ್ರಮಬದ್ಧವಾದ ವ್ಯಾಪಾರ ಅಥವಾ ಕಾನೂನು ಉದ್ದೇಶಗಳಿಗಾಗಿ ಇರಿಸಬೇಕಾಗುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನವೀಕರಿಸುತ್ತಿರುವಾಗ, ನಿಮ್ಮ ವಿನಂತಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳುವ ಮುನ್ನ ನಿಮ್ಮ ಗುರುತನ್ನು ಮತ್ತೊಮ್ಮೆ ಪರಿಶೀಲಿಸುವಂತೆ ನಾವು ನಿಮ್ಮನ್ನು ಕೇಳಿಕೊಳ್ಳಬಹುದು.

ಕಾರಣವಿಲ್ಲದೆ ಪುನರಾವರ್ತನೆಯಾಗುವಂತಹ, ಸಮವಲ್ಲದ ತಾಂತ್ರಿಕ ಪರಿಶ್ರಮದ ಅಗತ್ಯವಿರುವಂತಹ (ಉದಾಹರಣೆಗೆ, ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವುದು ಅಥವಾ ಪ್ರಸ್ತುತ ಅಭ್ಯಾಸವನ್ನು ಮೂಲಭೂತವಾಗಿ ಬದಲಾಯಿಸುವುದು), ಇತರರ ಗೌಪ್ಯತೆಗೆ ಅಪಾಯ, ಅಥವಾ ತೀವ್ರವಾಗಿ ಕಾರ್ಯಸಾಧ್ಯವಲ್ಲದ್ದಾಗಿರುವುದಂತಹ (ಉದಾಹರಣೆಗೆ, ಬ್ಯಾಕಪ್ ಟೇಪ್‌ಗಳಲ್ಲಿರುವ ಮಾಹಿತಿಯ ಕುರಿತು ವಿನಂತಿಗಳು) ವಿನಂತಿಗಳನ್ನು ನಾವು ತಿರಸ್ಕರಿಸಬಹುದು.

ಮಾಹಿತಿ ಪ್ರವೇಶ ಮತ್ತು ತಿದ್ದುಪಡಿಯನ್ನು ನಾವು ಒದಗಿಸುವಲ್ಲಿ, ಸಮವಲ್ಲದ ಪರಿಶ್ರಮ ಅಗತ್ಯವಿರುವುದನ್ನು ಹೊರತುಪಡಿಸಿ, ನಾವು ಅಲ್ಲಿ ಉಚಿತವಾಗಿ ಹಾಗೆ ಮಾಡುತ್ತೇವೆ. ಆಕಸ್ಮಿಕ ಅಥವಾ ದುರುದ್ದೇಶಪೂರಿತ ಅವಘಡಗಳಿಂದ ಮಾಹಿತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ನಮ್ಮ ಸೇವೆಗಳನ್ನು ನಿರ್ವಹಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಕಾರಣದಿಂದಾಗಿ, ನಮ್ಮ ಸೇವೆಗಳಿಂದ ನೀವು ಮಾಹಿತಿಯನ್ನು ಅಳಿಸಿದ ನಂತರ, ನಮ್ಮ ಸಕ್ರಿಯ ಸರ್ವರ್‌ಗಳಿಂದ ಉಳಿದ ನಕಲುಗಳನ್ನು ತಕ್ಷಣವೇ ನಮಗೆ ಅಳಿಸಲಾಗುವುದಿಲ್ಲ ಮತ್ತು ನಮ್ಮ ಬ್ಯಾಕಪ್ ಸಿಸ್ಟಮ್‌ಗಳಲ್ಲಿರುವ ಮಾಹಿತಿಯನ್ನು ತೆಗೆದುಹಾಕುವುದಿಲ್ಲ.

ನಾವು ಹಂಚಿಕೊಳ್ಳುವ ಮಾಹಿತಿ

ಕೆಳಗಿನ ಸಂದರ್ಭಗಳ ಹೊರತಾಗಿ ನಾವು ಯಾವ ಕಾರಣಕ್ಕೂ ವೈಯಕ್ತಿಕ ಮಾಹಿತಿಯನ್ನು Googleಗೆ ಹೊರತಾದ ಕಂಪೆನಿಗಳೊಂದಿಗೆ, ಸಂಸ್ಥೆಗಳೊಂದಿಗೆ ಮತ್ತು ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ:

  • ನಿಮ್ಮ ಸಮ್ಮತಿಯೊಂದಿಗೆ

    ನಿಮ್ಮ ಅನುಮತಿ ಇದ್ದರೆ ಮಾತ್ರ ನಾವು ವೈಯಕ್ತಿಕ ಮಾಹಿತಿಯನ್ನು Google ನ ಹೊರಗಿರುವ ಕಂಪೆನಿಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಯಾವುದೇ ಸೂಕ್ಷ್ಮ ವೈಯಕ್ತಿಕ ಮಾಹಿತಿ ಯನ್ನು ಹಂಚಿಕೊಳ್ಳುವುದಕ್ಕಾಗಿ ಸಮ್ಮತಿಯ ಅವಶ್ಯಕತೆ ನಮಗಿದ್ದೇ ಇರುತ್ತದೆ.

  • ಡೊಮೇನ್ ನಿರ್ವಾಹಕರೊಂದಿಗೆ

    ನಿಮ್ಮ Google ಖಾತೆ ಡೊಮೇನ್ ನಿರ್ವಾಹಕರಿಂದ ನಿರ್ವಹಿಸಲ್ಪಡುತ್ತಿದ್ದಲ್ಲಿ (ಉದಾಹರಣೆಗೆ, Google ಅಪ್ಲಿಕೇಶನ್‌ಗಳ ಬಳಕೆದಾರರಿಗಾಗಿ) ನಿಮ್ಮ ಸಂಸ್ಥೆಗೆ ಬಳಕೆದಾರ ಬೆಂಬಲವನ್ನು ಒದಗಿಸಿದ ನಿಮ್ಮ ಡೊಮೇನ್ ನಿರ್ವಾಹಕ ಹಾಗೂ ಮರುಮಾರಾಟಗಾರರು ನಂತರ ನಿಮ್ಮ Google ಖಾತೆ ಮಾಹಿತಿಗೆ (ನಿಮ್ಮ ಇಮೇಲ್ ಮತ್ತು ಇತರ ಡೇಟಾ ಒಳಗೊಂಡಿರುವ) ಪ್ರವೇಶವನ್ನು ಹೊಂದಿರುತ್ತಾರೆ. ನಿಮ್ಮ ಡೊಮೇನ್ ನಿರ್ವಾಹಕರಿಗೆ ಇದೆಲ್ಲವೂ ಸಾಧ್ಯ:

    • ನಿಮ್ಮ ಖಾತೆಗೆ ಸಂಬಂಧಿಸಿದಂತೆ ಅಂಕಿಅಂಶಗಳನ್ನು ವೀಕ್ಷಿಸಿ, ಅಂದರೆ ನೀವು ಸ್ಥಾಪಿಸುವಂತಹ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಅಂಕಿಅಂಶಗಳು.
    • ನಿಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಬದಲಾಯಿಸಿ.
    • ನಿಮ್ಮ ಖಾತೆಯ ಪ್ರವೇಶವನ್ನು ರದ್ದುಗೊಳಿಸಿ ಅಥವಾ ನಿಷ್ಕ್ರಿಯಗೊಳಿಸಿ.
    • ನಿಮ್ಮ ಖಾತೆಯ ಒಂದು ಭಾಗವಾಗಿ ಸಂಗ್ರಹಿತವಾಗಿರುವಂತಹ ಮಾಹಿತಿಯನ್ನು ಪ್ರವೇಶಿಸಿ ಅಥವಾ ಇರಿಸಿಕೊಳ್ಳಿ.
    • ಅನ್ವಯವಾಗುವಂತಹ ಕಾನೂನು, ನಿಯಮ, ಕಾನೂನು ಪ್ರಕ್ರಿಯೆ ಅಥವಾ ಅನುಷ್ಠಾನಗೊಳಿಸಬೇಕಾದಂತಹ ಸರ್ಕಾರಿ ವಿನಂತಿಯನ್ನು ಪೂರೈಸಲು ನಿಮ್ಮ ಖಾತೆ ಮಾಹಿತಿಯನ್ನು ಸ್ವೀಕರಿಸಿ.
    • ಅಳಿಸಲು ಅಥವಾ ಮಾಹಿತಿ ಅಥವಾ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸಂಪಾದಿಸುವಿಕೆಗೆ ನಿಮ್ಮ ಸಾಮರ್ಥ್ಯವನ್ನು ನಿರ್ಬಂಧಿಸಿ.

    ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ಡೊಮೇನ್ ಕಾರ್ಯ ನಿರ್ವಾಹಕರ ಗೌಪ್ಯತೆ ನೀತಿಯನ್ನು ಉಲ್ಲೇಖಿಸಿ.

  • ಬಾಹ್ಯ ಪ್ರಕ್ರಿಯೆಗಾಗಿ

    ನಮ್ಮ ಸೂಚನೆಗಳನ್ನು ಆಧರಿಸಿ ಮತ್ತು ನಮ್ಮ ಗೌಪ್ಯತೆ ನೀತಿ ಮತ್ತು ಯಾವುದೇ ಇತರೆ ಸೂಕ್ತವಾದ ಗೌಪ್ಯತೆ ಮತ್ತು ಭದ್ರತೆ ಕ್ರಮಗಳೊಂದಿಗೆ ಅನುಸರಣೆಯಾಗಿ ನಮ್ಮ ಅಂಗ ಸಂಸ್ಥೆಗಳು ಅಥವಾ ಇತರ ನಂಬಿಕೆಯ ವ್ಯಾಪಾರಗಳು ಅಥವಾ ವ್ಯಕ್ತಿಗಳಿಗೆ ಇದನ್ನು ಪ್ರಕ್ರಿಯೆಗೊಳಿಸುವಂತೆ ನಾವು ವೈಯಕ್ತಿಕ ಮಾಹಿತಿಯನ್ನು ಒದಗಿಸುತ್ತೇವೆ.

  • ಕಾನೂನಿನ ಕಾರಣಗಳಿಗಾಗಿ

    ಬಳಸುವಿಕೆ, ಪ್ರವೇಶ, ಸಂರಕ್ಷಣೆ ಹಾಗೂ ಬಹಿರಂಗಪಡಿಸುವ ಅವಶ್ಯಕತೆ ಇದೆ ಎಂದಾದರೆ Googleನ ಹೊರಗಿನ ನಮ್ಮ ವಿಶ್ವಾಸರ್ಹ ಕಂಪನಿಗಳು, ಸಂಸ್ಥೆಗಳು ಅಥವಾ ವ್ಯಕ್ತಿಗಳೊಂದಿಗೆ ನಾವು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ:

    • ಅನ್ವಯವಾಗುವ ಯಾವುದೇ ಕಾನೂನು, ನಿಯಮ, ಕಾನೂನು ಪ್ರಕ್ರಿಯೆ ಅಥವಾ ಸರ್ಕಾರದ ಯಾವುದೇ ಅನಿವಾರ್ಯ ಒತ್ತಡಕ್ಕೆ ಅನುಸಾರವಾಗಿ.
    • ಸಂಭಾವ್ಯ ಉಲ್ಲಂಘನೆಗಳ ತನಿಖೆ ಒಳಗೊಂಡಿರುವಂತೆ ಅನ್ವಯವಾಗುವ ಸೇವಾ ನಿಯಮಗಳ ಜಾರಿ.
    • ಪತ್ತೆ ಹಚ್ಚಲು, ನಿಯಂತ್ರಿಸುವ ಅಥವಾ ವಿಳಾಸ ವಂಚನೆ, ಭದ್ರತೆ ಅಥವಾ ತಾಂತ್ರಿಕ ಸಮಸ್ಯೆಗಳು.
    • ಹಕ್ಕುಗಳ ಹಾನಿ ವಿರುದ್ಧ, Google ನ ಸ್ವತ್ತು ಅಥವಾ ಸುರಕ್ಷತೆ, ನಮ್ಮ ಬಳಕೆದಾರರು ಅಥವಾ ಸಾರ್ವಜನಿಕರಿಗೆ ಕಾನೂನು ಅಗತ್ಯದಂತೆ ಅಥವಾ ಅನುಮತಿಸಿದಂತೆ ರಕ್ಷಣೆ.

ಸಂಗ್ರಹಿಸಿದ, ವೈಯಕ್ತಿಕವಾಗಿಲ್ಲದ ಗುರುತಿಸಬಹುದಾದ ಮಾಹಿತಿ ಯನ್ನು ಸಾರ್ವಜನಿಕವಾಗಿ ಮತ್ತು ಪ್ರಕಾಶಕರು, ಜಾಹೀರಾತುದಾರರು ಅಥವಾ ಸಂಪರ್ಕಿತ ಸೈಟ್‌ಗಳಂತಹ ನಮ್ಮ ಪಾಲುದಾರರೊಂದಿಗೆ ನಾವು ಹಂಚಬಹುದು. ಉದಾಹರಣೆಗೆ, ನಮ್ಮ ಸೇವೆಗಳಿಗೆ ಸಂಬಂಧಿಸಿದ ಸಹಜ ಟ್ರೆಂಡ್‌‌ಗಳನ್ನು ಪರಿಚಯಿಸುವ ಸಂದರ್ಭದಲ್ಲಿ ನಾವು ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಹುದು.

ಸೇರ್ಪಡೆ, ವಶಪಡಿಸಿಕೊಳ್ಳುವಿಕೆ ಅಥವಾ ಸ್ವತ್ತು ಮಾರಾಟದಲ್ಲಿ Google ತೊಡಗಿಸಿಕೊಂಡಿದ್ದರೂ ವೈಯಕ್ತಿಕ ಮಾಹಿತಿಯ ಗೌಪ್ಯತೆಗೆ ಯಾವುದೇ ಧಕ್ಕೆ ಬರದಂತೆ ಮುಂದುವರಿಯುತ್ತೇವೆ ಹಾಗೂ ಯಾರ ಖಾತೆಗಾದರೂ ಧಕ್ಕೆಯಾಗುತ್ತದೆ ಎಂದಾದರೆ ಮಾಹಿತಿಯನ್ನು ಸ್ಥಳಾಂತರಿಸುವ ಮೊದಲು ಪ್ರಸ್ತುತ ಬಳಕೆದಾರರಿಗೆ ಸೂಚನೆ ನೀಡುತ್ತೇವೆ ಇಲ್ಲವೇ ಅದು ಬೇರೊಂದು ಗೌಪ್ಯತಾ ನೀತಿಗೆ ಸಂಬಂಧಿಸುತ್ತದೆ.

ಮಾಹಿತಿಯ ಭದ್ರತೆ

ಅನಧಿಕೃತ ಪ್ರವೇಶದಿಂದ ಅಥವಾ ಅನಧಿಕೃತ ಪರಿವರ್ತನೆಗಳಿಂದ Google ಮತ್ತು ನಮ್ಮ ಬಳಕೆದಾರರನ್ನು ರಕ್ಷಿಸುವಲ್ಲಿ ನಾವು ಕಠಿಣ ಶ್ರಮವಹಿಸುತ್ತೇವೆ, ಮಾಹಿತಿಯ ಬಹಿರಂಗಪಡಿಸುವಿಕೆ ಅಥವಾ ನಾಶಪಡಿಸುವಿಕೆಯನ್ನು ನಾವು ಇರಿಸಿಕೊಂಡಿರುತ್ತೇವೆ. ನಿರ್ದಿಷ್ಟವಾಗಿ:

  • SSL ಅನ್ನು ಬಳಸಿಕೊಂಡು ನಮ್ಮ ಹೆಚ್ಚಿನ ಸೇವೆಗಳನ್ನು ನಾವು ಎನ್‌ಕ್ರಿಪ್ಟ್ ಮಾಡುತ್ತೇವೆ.
  • ನಿಮ್ಮ Google ಖಾತೆಯನ್ನು ನೀವು ಪ್ರವೇಶಿಸುವಾಗ, ಮತ್ತು Google Chrome ನಲ್ಲಿ ಸುರಕ್ಷಿತ ಬ್ರೌಸಿಂಗ್ ವೈಶಿಷ್ಟ್ಯಗಳಿಗಾಗಿ ನಾವು ಎರಡು ಹಂತದ ಪರಿಶೀಲನೆ ಯನ್ನು ನಿಮಗೆ ಒದಗಿಸುತ್ತೇವೆ.
  • ಭೌತಿಕ ಭದ್ರತೆ ಕ್ರಮಗಳು ಸೇರಿದಂತೆ ಸಿಸ್ಟಂಗಳಿಗೆ ಅನಧಿಕೃತ ಪ್ರವೇಶವನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಮಾಹಿತಿ ಸಂಗ್ರಹಣೆ, ಸಂಗ್ರಹಣೆ ಮತ್ತು ಪ್ರಕ್ರಿಯೆ ಅಭ್ಯಾಸಗಳನ್ನು ನಾವು ವಿಮರ್ಶಿಸುತ್ತೇವೆ.
  • Google ಉದ್ಯೋಗಿಗಳು, ಗುತ್ತಿಗೆದಾರರು ಮತ್ತು ನಮಗಾಗಿ ಇದನ್ನು ಪ್ರಕ್ರಿಯೆಗೊಳಿಸುವ ಸಲುವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದಿರುವ ಏಜೆಂಟ್‌ಗಳಿಗೆ ನಾವು ಯಾವ ಕಾರಣಕ್ಕೂ ಪ್ರವೇಶ ನೀಡುವುದಿಲ್ಲ. ಮಾತ್ರವಲ್ಲ, ಕಠಿಣ ಗುತ್ತಿಗೆ ಗೌಪ್ಯತೆಯ ನಿರ್ಬಂಧಗಳಿಗೆ ಒಳಪಡುವಂತಹವರನ್ನು ಮತ್ತು ಈ ನಿರ್ಬಂಧಗಳನ್ನು ಪೂರೈಸಲು ವಿಫಲವಾಗುವವರಿಗೆ ಶಿಕ್ಷೆ ವಿಧಿಸಬಹುದಾಗಿದೆ.

ಅಪ್ಲಿಕೇಶನ್

ಇತರ ಸೈಟ್‌ಗಳಿಂದ ಒದಗಿಸಲಾದ ಸೇವೆಗಳು ಸೇರಿದಂತೆ, Google Inc. ಮತ್ತು ಅದರ ಅಂಗಸಂಸ್ಥೆಗಳಿಂದ ಒದಗಿಸಲಾಗುವ ಎಲ್ಲ ಸೇವೆಗಳಿಗೆ ನಮ್ಮ ಗೌಪ್ಯತೆ ನೀತಿಗಳು ಅನ್ವಯವಾಗುತ್ತದೆ (ಅಂದರೆ ನಮ್ಮ ಜಾಹೀರಾತು ಸೇವೆಗಳು), ಆದರೆ ಈ ಗೌಪ್ಯತೆ ನೀತಿಗಳೊಂದಿಗೆ ಸಂಯೋಜನೆಗೊಳ್ಳದಿರುವಂತಹ ಪ್ರತ್ಯೇಕ ಗೌಪ್ಯತೆ ನೀತಿಗಳನ್ನು ಹೊಂದಿರುವಂತಹ ಸೇವೆಗಳಿಂದ ಇದನ್ನು ಪ್ರತ್ಯೇಕಿಸಲಾಗುತ್ತದೆ.

ಉತ್ಪನ್ನಗಳು ಅಥವಾ ನಿಮಗೆ ಪ್ರದರ್ಶಿತವಾಗಬಹುದಾದಂತಹ ಹುಡುಕಾಟ ಫಲಿತಾಂಶಗಳು, Google ಸೇವೆಗಳನ್ನು ಒಳಗೊಂಡಿರಬಹುದಾದಂತಹ ಸೈಟ್‌ಗಳು, ಅಥವಾ ನಮ್ಮ ಸೇವೆಗಳಿಂದ ಲಿಂಕ್ ಮಾಡಲಾದ ಇತರ ಸೈಟ್‌ಗಳು ಸೇರಿದಂತೆ ಇತರ ಕಂಪನಿಗಳು ಅಥವಾ ವ್ಯಕ್ತಿಗಳು ಒದಗಿಸುವ ಸೇವೆಗಳಿಗೆ ನಮ್ಮ ಗೌಪ್ಯತೆ ನೀತಿ ಅನ್ವಯವಾಗುವುದಿಲ್ಲ. ನಮ್ಮ ಗೌಪ್ಯತೆ ನೀತಿಯು ಬೇರೆ ನಮ್ಮ ಸೇವೆಗಳಿಗೆ ಜಾಹೀರಾತು ನೀಡುವ ಇನ್ನಿತರ ಕಂಪನಿಗಳ ಹಾಗೂ ಸಂಘ-ಸಂಸ್ಥೆಗಳ ಮಾಹಿತಿ ಪದ್ಧತಿಗಳನ್ನು ಒಳಗೊಳ್ಳುವುದಿಲ್ಲ ಹಾಗೂ ಪ್ರಸ್ತುತ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡಲು ಕುಕೀಗಳನ್ನು, ಪಿಕ್ಸೆಲ್‌ ಟ್ಯಾಗ್‌ಗಳನ್ನು ಬಳಸುವ ವ್ಯಕ್ತಿಗಳನ್ನೂ ನಮ್ಮ ಗೌಪ್ಯತೆ ನೀತಿಯು ಒಳಗೊಳ್ಳುವುದಿಲ್ಲ.

ಜಾರಿ

ನಮ್ಮ ಗೌಪ್ಯತೆ ನೀತಿಯ ಮೇರೆಗೇ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆಯೇ ಎಂಬುದನ್ನು ನಾವು ಆಗಾಗ ಮರುಪರಿಶೀಲಿಸುತ್ತಿರುತ್ತೇವೆ. ನಾವು ಹಲವಾರು ಸ್ವಯಂ ನಿಯಂತ್ರಣ ಫ್ರೇಮ್‌ಕಾರ್ಯಗಳಿಗೆ ಸಹ ಬದ್ಧವಾಗಿರುತ್ತೇವೆ. ಔಪಚಾರಿಕ ಲಿಖಿತ ದೂರುಗಳನ್ನು ನಾವು ಸ್ವೀಕರಿಸಿದಲ್ಲಿ, ಅದಕ್ಕೆ ಸಂಬಂಧಪಟ್ಟಂತೆ ಮುಂದಿನ ಕ್ರಮಕ್ಕಾಗಿ ದೂರು ನೀಡಿದ ಆ ವ್ಯಕ್ತಿಯನ್ನು ನಾವು ಸಂಪರ್ಕಿಸುತ್ತೇವೆ. ನಮ್ಮ ಬಳಕೆದಾರರೊಂದಿಗೆ ನೇರವಾಗಿ ಪರಿಹರಿಸಲು ಸಾಧ್ಯವಿಲ್ಲದಂತಹ ವೈಯಕ್ತಿಕ ಡೇಟಾ ವರ್ಗಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಪರಿಹರಿಸಲು ಸ್ಥಳೀಯ ಡೇಟಾ ರಕ್ಷಣೆ ಪ್ರಾಧಿಕಾರಗಳು ಸೇರಿದಂತೆ, ಸೂಕ್ತವಾದ ನಿಯಂತ್ರಣ ಪ್ರಾಧಿಕಾರಗಳೊಂದಿಗೆ ನಾವು ಕಾರ್ಯನಿರ್ವಹಿಸುತ್ತೇವೆ.

ಬದಲಾವಣೆಗಳು

ನಮ್ಮ ಗೌಪ್ಯತೆ ನೀತಿಯು ಕಾಲದಿಂದ ಕಾಲಕ್ಕೆ ಬದಲಾಗಬಹುದು. ನಿಮ್ಮ ಸ್ಪಷ್ಟ ಸಮ್ಮತಿ ಇಲ್ಲದೇ ನಾವು ಈ ಗೌಪ್ಯತೆ ನೀತಿಯಡಿಯಲ್ಲಿ ನಿಮ್ಮ ಹಕ್ಕುಗಳನ್ನು ಮೊಟಕುಗೊಳಿಸುವುದಿಲ್ಲ. ಈ ಪುಟದಲ್ಲಿನ ಯಾವುದೇ ಗೌಪ್ಯತಾ ನೀತಿ ಬದಲಾವಣೆಗಳನ್ನು ನಾವು ಪೋಸ್ಟ್ ಮಾಡುತ್ತೇವೆ ಮತ್ತು ಬದಲಾವಣೆಗಳು ಅರ್ಥಪೂರ್ಣವಾಗಿದ್ದರೆ, ನಾವು ಇನ್ನಷ್ಟು ಸೂಕ್ತವಾದ ಪ್ರಕಟಣೆಯನ್ನು ಒದಗಿಸುತ್ತೇವೆ (ಕೆಲವು ಸೇವೆಗಳು ಸೇರಿದಂತೆ, ಗೌಪ್ಯತೆ ನೀತಿ ಬದಲಾವಣೆಗಳ ಇಮೇಲ್ ಅಧಿಸೂಚನೆ). ನಿಮ್ಮ ವಿಮರ್ಶೆಗಾಗಿ ಆರ್ಕೈವ್‌ನಲ್ಲಿರುವ ಈ ಗೌಪ್ಯತೆ ನೀತಿಯ ಪ್ರಾಶಸ್ತ್ಯ ಆವೃತ್ತಿಗಳನ್ನು ನಾವು ಇರಿಸುತ್ತೇವೆ.

ನಿರ್ದಿಷ್ಟ ಉತ್ಪನ್ನದ ಅಭ್ಯಾಸಗಳು

ನೀವು ಬಳಸಬಹುದಾದಂತಹ ಕೆಲವು Google ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಈ ಪ್ರಕಟಣೆಗಳು ನಿರ್ದಿಷ್ಟ ಗೌಪ್ಯತೆ ಅಭ್ಯಾಸಗಳನ್ನು ವಿವರಿಸುತ್ತವೆ:

Google Apps
ಪ್ರಮುಖ ಮೆನು