ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.
"ನಿಮಗೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಬಹುದಾದ ಜಾಹೀರಾತುಗಳು"
ಉದಾಹರಣೆಗಳು
- ಉದಾಹರಣೆಗೆ, ತೋಟಗಾರಿಕೆಯ ಕುರಿತ ವೆಬ್‌ಸೈಟ್‌ಗಳು ಮತ್ತು ಬ್ಲಾಗ್‌ಗಳಿಗೆ ನೀವು ಪದೇ ಪದೇ ಭೇಟಿ ನೀಡುತ್ತಿದ್ದರೆ, ನೀವು ವೆಬ್ ಬ್ರೌಸ್ ಮಾಡಿದಂತೆಲ್ಲಾ ತೋಟಗಾರಿಕೆಗೆ ಸಂಬಂಧಿಸಿದ ಜಾಹೀರಾತುಗಳನ್ನು ನೀವು ಕಾಣಬಹುದು. ಮತ್ತು YouTube ನಲ್ಲಿ ಬೇಕಿಂಗ್ ಕುರಿತ ವೀಡಿಯೊಗಳನ್ನು ನೀವು ವೀಕ್ಷಿಸಿದರೆ, ಬೇಕಿಂಗ್‌ಗೆ ಸಂಬಂಧಿಸಿದ ಇನ್ನಷ್ಟು ಜಾಹೀರಾತುಗಳನ್ನು ನೀವು ಕಾಣಬಹುದು. ಇನ್ನಷ್ಟು ತಿಳಿಯಿರಿ.
- ನೀವಿರುವ ಸ್ಥಳದ ಅಂದಾಜು ಮಾಡಲು ನಾವು ನಿಮ್ಮ ಪ್ರಸ್ತುತ IP-ವಿಳಾಸವನ್ನು ಬಳಸುತ್ತೇವೆ. ಇದರಿಂದ ನೀವು “ಪಿಜ್ಜಾ” ಎಂದು ಹುಡುಕಿದರೆ ಹತ್ತಿರದ ಪಿಜ್ಜಾ ಪೂರೈಕೆ ಸೇವೆಗಳ ಜಾಹೀರಾತುಗಳನ್ನು ನಾವು ನಿಮಗೆ ತೋರಿಸುತ್ತೇವೆ ಅಥವಾ ನೀವು "ಸಿನಿಮಾ" ಎಂದು ಹುಡುಕಿದರೆ ಹತ್ತಿರದ ಚಲನಚಿತ್ರ ಮಂದಿರಗಳ ಪ್ರದರ್ಶನದ ಸಮಯಗಳನ್ನು ನಾವು ನಿಮಗೆ ತೋರಿಸುತ್ತೇವೆ. ಇನ್ನಷ್ಟು ತಿಳಿಯಿರಿ.
- ನಿಮಗೆ ಇನ್ನಷ್ಟು ಸೂಕ್ತ ಜಾಹೀರಾತುಗಳನ್ನು ಒದಗಿಸಲು Gmail ನಲ್ಲಿನ ಇಮೇಲ್‌ಗಳಂತಹ ನಮ್ಮ ಸೇವೆಗಳಲ್ಲಿನ ವಿಷಯವನ್ನು ನಮ್ಮ ಸಿಸ್ಟಂ ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡಬಹುದು. ಉದಾಹರಣೆಗೆ, ನೀವು ಇತ್ತೀಚೆಗೆ ಫೋಟೋಗ್ರಫಿ ಅಥವಾ ಕ್ಯಾಮರಾಗಳ ಕುರಿತು ಸಾಕಷ್ಟು ಸಂದೇಶಗಳನ್ನು ಸ್ವೀಕರಿಸಿದ್ದರೆ, ಸ್ಥಳೀಯ ಕ್ಯಾಮರಾ ಅಂಗಡಿಯಲ್ಲಿ ಚಾಲ್ತಿಯಲ್ಲಿರುವ ಬೆಲೆಗಳ ಕುರಿತು ಕೇಳುವ ಆಸಕ್ತಿ ನಿಮಗಿರಬಹುದು. ಮತ್ತೊಂದು ಕಡೆ, ನೀವು ಈ ಸಂದೇಶಗಳನ್ನು ಸ್ಪ್ಯಾಮ್ ಎಂದು ವರದಿ ಮಾಡಿದ್ದರೆ, ನಿಮಗೆ ಆ ವ್ಯವಹಾರವನ್ನು ನೋಡಲು ಸಾಧ್ಯವಾಗದಿರಬಹುದು. ಈ ಪ್ರಕಾರದ ಸ್ವಯಂಚಾಲಿತ ಪ್ರಕ್ರಿಯೆಯು, ಎಷ್ಟು ಇಮೇಲ್ ಸೇವೆಗಳು ಸ್ಪ್ಯಾಮ್ ಫಿಲ್ಟರ್ ಮಾಡುವಿಕೆ ಮತ್ತು ಕಾಗುಣಿತ ಪರೀಕ್ಷಕದ ರೀತಿಯ ವೈಶಿಷ್ಟ್ಯಗಳನ್ನು ಒದಗಿಸುತ್ತವೆ ಎಂಬುದಾಗಿದೆ. Gmail ನಲ್ಲಿ ಜಾಹೀರಾತು ಗಮನ ಹರಿಸುವಿಕೆಯು ಸಂಪೂರ್ಣ ಸ್ವಯಂಚಾಲಿತವಾಗಿದೆ ಮತ್ತು ಜಾಹೀರಾತುಗಳು ಅಥವಾ ಸಂಬಂಧಿತ ಮಾಹಿತಿಯನ್ನು ನಿಮಗೆ ತೋರಿಸುವ ಸಲುವಾಗಿ ಯಾವುದೇ ವ್ಯಕ್ತಿಗಳು ನಿಮ್ಮ ಇಮೇಲ್ ಮತ್ತು Google ಖಾತೆಯ ಮಾಹಿತಿಯನ್ನು ಓದುವುದಿಲ್ಲ. Gmail ನಲ್ಲಿನ ಜಾಹೀರಾತುಗಳ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.