ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.
"ಇತರ Google ಸೇವೆಗಳಿಂದ ವೈಯಕ್ತಿಕ ಮಾಹಿತಿಯೂ ಸೇರಿದಂತೆ, ಒಂದು ಸೇವೆಯ ಮಾಹಿತಿ ಬಳಸಿಕೊಂಡು ವೈಯಕ್ತಿಕ ಮಾಹಿತಿಯನ್ನು ಒಗ್ಗೂಡಿಸಿ"
ಉದಾಹರಣೆಗಳು
- ಉದಾಹರಣೆಗೆ, ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿಕೊಂಡು Google ನಲ್ಲಿ ಹುಡುಕಾಟ ನಡೆಸುತ್ತಿದ್ದರೆ, ಪುಟಗಳು, ಫೋಟೋಗಳು ಮತ್ತು ನಿಮ್ಮ ಸ್ನೇಹಿತರ Google+ ಪೋಸ್ಟ್‌ಗಳ ಜೊತೆಗೆ ಸಾರ್ವಜನಿಕ ವೆಬ್‌ನ ಹುಡುಕಾಟದ ಫಲಿತಾಂಶಗಳನ್ನು ಕೂಡ ನೀವು ನೋಡಬಹುದು. Google+ ನಲ್ಲಿರುವ ನಿಮ್ಮ ಪರಿಚಯದ ಅಥವಾ ನಿಮ್ಮನ್ನು ಅನುಸರಿಸುವ ಜನರು ತಮ್ಮ ಫಲಿತಾಂಶಗಳಲ್ಲಿ ನಿಮ್ಮ ಪೋಸ್ಟ್‌ಗಳು ಮತ್ತು ಪ್ರೊಫೈಲ್ ಅನ್ನು ನೋಡಬಹುದು. Gmail ಅಥವಾ Google ಕ್ಯಾಲೆಂಡರ್‌ನಂತಹ, ನೀವು ಬಳಸುತ್ತಿರುವ ಇತರ Google ಉತ್ಪನ್ನಗಳಲ್ಲಿ ನೀವು ಹೊಂದಿರುವ ವಿಷಯದಿಂದ ಸಂಬಂಧಿತ ಮಾಹಿತಿಯನ್ನು ಸಹ ನೀವು ಪಡೆದುಕೊಳ್ಳಬಹುದು.
- ನೀವು ಇಟಲಿಗೆ ಪ್ರವಾಸದ ಯೋಜನೆ ಹಾಕುತ್ತಿದ್ದರೆ ಮತ್ತು Google ನಲ್ಲಿ "ಫ್ಲೋರೆನ್ಸ್" ಗಾಗಿ ನೀವು ಹುಡುಕುತ್ತಿದ್ದರೆ, ಫ್ಲೋರೆನ್ಸ್ ಕುರಿತು ನಿಮ್ಮ ಸ್ನೇಹಿತರು ಒದಗಿಸಿರುವ ಫೋಟೋಗಳು ಮತ್ತು ಲೇಖನಗಳನ್ನು ನಿಮ್ಮ ಹುಡುಕಾಟದ ಫಲಿತಾಂಶಗಳಲ್ಲಿ ನೀವು ನೋಡಬಹುದು. ಈ ಫಲಿತಾಂಶಗಳು ಅವರ ಶಿಫಾರಸುಗಳನ್ನು ಎಕ್ಸ್‌ಪ್ಲೋರ್ ಮಾಡಲು ಮತ್ತು ಯಾವ ತಾಣಗಳನ್ನು ನೋಡಬೇಕೆಂದು ಚರ್ಚೆ ನಡೆಸಲು ಅವಕಾಶ ಮಾಡಿಕೊಡುತ್ತವೆ. ಇನ್ನಷ್ಟು ತಿಳಿಯಿರಿ.
- ನೀವು ಇತರ Google ಉತ್ಪನ್ನಗಳಲ್ಲಿ ಸಂಗ್ರಹಿಸಿಕೊಂಡಿರುವ ಡೇಟಾವನ್ನು Google Now ಬಳಸಿಕೊಳ್ಳುತ್ತದೆ. ಉದಾಹರಣೆಗೆ, ನಿಮ್ಮ ವೆಬ್ ಇತಿಹಾಸದಲ್ಲಿ ನೀವು ಹುಡುಕಾಟಗಳನ್ನು ಸಂಗ್ರಹಿಸಿಕೊಂಡಿದ್ದರೆ, ಕ್ರೀಡಾ ಸ್ಕೋರ್‌ಗಳು, ಫ್ಲೈಟ್ ಸ್ಥಿತಿಯನ್ನು ಆಧರಿಸಿ, ಹಾಗೆಯೇ ಹಿಂದಿನ ಹುಡುಕಾಟಗಳನ್ನು ಆಧರಿಸಿ, Google Now ಮಾಹಿತಿ ಕಾರ್ಡ್‌ಗಳನ್ನು ತೋರಿಸಬಹುದು. ನಿಮ್ಮ ವೆಬ್ ಇತಿಹಾಸವನ್ನು ನಿರ್ವಹಿಸಲು, google.com/history/ ಗೆ ಭೇಟಿ ನೀಡಿ. ನಿಮ್ಮ ವೆಬ್ ಇತಿಹಾಸವನ್ನು ನೀವು ಅಳಿಸಬಹುದು ಅಥವಾ ವಿರಾಮಗೊಳಿಸಬಹುದು ಮತ್ತು ಈಗಲೂ Google Now ಬಳಸಬಹುದು, ಆದರೆ ಕೆಲವು ರೀತಿಯ ಮಾಹಿತಿ ಕಾಣಿಸಿಕೊಳ್ಳುವುದಿಲ್ಲ. ಇನ್ನಷ್ಟು ತಿಳಿಯಿರಿ.
- ನೀವು ವ್ಯಾಪಾರದ ಅಪಾಯಿಂಟ್‌ಮೆಂಟ್‌ಗಾಗಿ Google ಕ್ಯಾಲೆಂಡರ್ ಪ್ರವೇಶವನ್ನು ಹೊಂದಿದ್ದರೆ, Google Now ಟ್ರಾಫಿಕ್ ದಟ್ಟನೆಯನ್ನು ಪರಿಶೀಲಿಸಿ, ನಿಮ್ಮ ಅಪಾಯಿಂಟ್‌ಮೆಂಟ್‌ಗೆ ಸರಿಯಾದ ಸಮಯಕ್ಕೆ ಹೋಗಲು ಎಷ್ಟು ಗಂಟೆಯ ಮೊದಲೇ ಹೊರಡಬೇಕು ಎಂಬುದನ್ನು ಸೂಚಿಸುತ್ತದೆ.