ಈ ವಿಷಯವು ನಮ್ಮ ಗೌಪ್ಯತಾ ನೀತಿಯ ಆವೃತ್ತಿಯ ಸಂಗ್ರಹವಾಗಿದೆ. ನಮ್ಮ ಪ್ರಸ್ತುತ ಆವೃತ್ತಿಯನ್ನು ಇಲ್ಲಿ ನೋಡಿ.

"ಇನ್ನಷ್ಟು ಸೂಕ್ತ ಹುಡುಕಾಟದ ಫಲಿತಾಂಶಗಳು"

ಉದಾಹರಣೆಗಳು

  • ಉದಾಹರಣೆಗೆ, ಫೋಟೋಗಳು, ಪೋಸ್ಟ್‌ಗಳು ಮತ್ತು ನಿಮ್ಮ ಹಾಗೂ ನಿಮ್ಮ ಸ್ನೇಹಿತರ ಹೆಚ್ಚಿನ ಸಂಗತಿಗಳನ್ನು ಸೇರಿಸುವುದರ ಮೂಲಕ, ನಾವು ಹುಡುಕಾಟವನ್ನು ನಿಮಗೆ ಹೆಚ್ಚು ಸಕಾಲಿಕ ಹಾಗೂ ಆಸಕ್ತಿಕರಗೊಳಿಸಬಹುದು. Google+ ಮೂಲಕ ಸೈನ್ ಇನ್ ಮಾಡಿದಾಗ, ನಿಮಗೆ ತಿಳಿದಿರುವ ಅಥವಾ ನೀವು ಅನುಸರಿಸುವ ಜನರ ಸೂಕ್ತ ಫಲಿತಾಂಶಗಳು ಮತ್ತು ಪ್ರೊಫೈಲ್‌ಗಳನ್ನು ನೀವು ಕಾಣುತ್ತೀರಿ ಹಾಗೂ ನಿಮ್ಮನ್ನು ತಿಳಿದಿರುವ ಅಥವಾ ನಿಮ್ಮನ್ನು ಅನುಸರಿಸುವ ಜನರಿಗೂ ಕೂಡ ತಮ್ಮ ಫಲಿತಾಂಶಗಳಲ್ಲಿ ನಿಮ್ಮ ಪೋಸ್ಟ್‌ಗಳು ಮತ್ತು ಪ್ರೊಫೈಲ್ ನೋಡಲು ಸಾಧ್ಯವಾಗಬಹುದು. Google ಮತ್ತು ಇತರ ಹುಡುಕಾಟದ ಎಂಜಿನ್‌ಗಳು ನಿಮ್ಮ ಪ್ರೊಫೈಲ್ ಅನ್ನು ಇಂಡೆಕ್ಸ್ ಮಾಡಲು ನೀವು ಬಯಸದಿದ್ದರೆ, ನೀವು ಯಾವುದೇ ಸಮಯದಲ್ಲಿ ನಿಮ್ಮ ಪ್ರೊಫೈಲ್ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು. ಇನ್ನಷ್ಟು ತಿಳಿಯಿರಿ.
  • ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಿದಾಗ ಮತ್ತು ವೆಬ್ ಇತಿಹಾಸವನ್ನು ಸಕ್ರಿಯಗೊಳಿಸಿದಾಗ, ನಿಮ್ಮ ವೆಬ್ ಇತಿಹಾಸದ ಆಧಾರದ ಮೇಲೆ ಇನ್ನಷ್ಟು ಸೂಕ್ತ ಹುಡುಕಾಟ ಫಲಿತಾಂಶಗಳನ್ನು ನೀವು ಪಡೆದುಕೊಳ್ಳಬಹುದು. ವೆಬ್ ಇತಿಹಾಸವು ನಿಮ್ಮ ಹುಡುಕಾಟಗಳು ಮತ್ತು ಇತರ ವೆಬ್ ಚಟುವಟಿಕೆಯನ್ನು ಒಳಗೊಂಡಿರುತ್ತದೆ. ನೀವು ಸೈನ್ ಔಟ್ ಆಗಿರುವಾಗಲೂ ಸಹ ನಿಮ್ಮ ಕಂಪ್ಯೂಟರ್‌ನಿಂದ ಹುಡುಕಾಟದ ಚಟುವಟಿಕೆಯನ್ನು ಬಳಸಿಕೊಂಡು ನಿಮ್ಮ ಹುಡುಕಾಟದ ಫಲಿತಾಂಶಗಳನ್ನು ಕಸ್ಟಮೈಸ್ ಮಾಡಬಹುದು. ಇನ್ನಷ್ಟು ತಿಳಿಯಿರಿ.
Google Apps
ಪ್ರಮುಖ ಮೆನು