ಡೇಟಾ ವರ್ಗಾವಣೆಗಳಿಗಾಗಿ ಕಾನೂನು ಚೌಕಟ್ಟುಗಳು
ಜಾರಿಗೊಳ್ಳುವುದು ಸೆಪ್ಟೆಂಬರ್ 16, 2024 | ಆರ್ಕೈವ್ ಮಾಡಿರುವ ಆವೃತ್ತಿಗಳು
ನಾವು ವಿಶ್ವಾದ್ಯಂತ ಸರ್ವರ್ಗಳನ್ನು ನಿರ್ವಹಿಸುತ್ತೇವೆ ಮತ್ತು ನಿಮ್ಮ ಮಾಹಿತಿಯನ್ನು ನೀವು ವಾಸಿಸುವ ದೇಶದ ಹೊರಗೆ ಇರುವ ಸರ್ವರ್ಗಳಲ್ಲಿ ಪ್ರಕ್ರಿಯೆಗೊಳಿಸಬಹುದು. ಡೇಟಾ ಸಂರಕ್ಷಣೆಯ ಕಾನೂನುಗಳು ದೇಶದಿಂದ ದೇಶಕ್ಕೆ ಬದಲಾಗುತ್ತವೆ, ಅಂದರೆ ಕೆಲವು ದೇಶಗಳು ಇತರ ದೇಶಗಳಿಗಿಂತ ಹೆಚ್ಚಿನ ಸಂರಕ್ಷಣೆಯನ್ನು ಒದಗಿಸುತ್ತವೆ. ನಿಮ್ಮ ಮಾಹಿತಿಯನ್ನು ಎಲ್ಲಿ ಪ್ರಕ್ರಿಯೆಗೊಳಪಡಿಸಿದರೂ ಕೂಡಾ, ನಾವು ಗೌಪ್ಯತೆ ಕಾರ್ಯನೀತಿಯಲ್ಲಿ ಹೇಳಿರುವ ಸಂರಕ್ಷಣೆಗಳನ್ನೇ ಅನ್ವಯಿಸುತ್ತೇವೆ. ಡೇಟಾ ವರ್ಗಾವಣೆಗೆ ಸಂಬಂಧಿಸಿದಂತೆ, ನಾವು ಕೆಲವು ಕಾನೂನು ಚೌಕಟ್ಟುಗಳನ್ನು ಅನುಸರಿಸುತ್ತೇವೆ, ಉದಾಹರಣೆಗೆ, ಕೆಳಗೆ ವಿವರಿಸಿರುವ ಫ್ರೇಮ್ವರ್ಕ್ಗಳು.
ಸಮರ್ಪಕ ನಿರ್ಧಾರಗಳು
ಯುರೋಪಿಯನ್ ವಾಣಿಜ್ಯ ಪ್ರದೇಶದ (EEA) ಹೊರಗಿನ ಕೆಲವು ದೇಶಗಳು, ವೈಯಕ್ತಿಕ ಮಾಹಿತಿಯನ್ನು ಸಮರ್ಪಕವಾಗಿ ರಕ್ಷಿಸುತ್ತವೆ ಎಂಬುದನ್ನು ಯುರೋಪಿಯನ್ ಕಮಿಷನ್ ನಿರ್ಧರಿಸಿದೆ, ಅಂದರೆ ಯುರೋಪಿಯನ್ ಯೂನಿಯನ್ (EU) ಮತ್ತು ನಾರ್ವೆ, ಲಿಕ್ಟನ್ಸ್ಟೈನ್ ಹಾಗೂ ಐಸ್ಲ್ಯಾಂಡ್ನಿಂದ ಡೇಟಾವನ್ನು ಆ ದೇಶಗಳಿಗೆ ವರ್ಗಾಯಿಸಬಹುದು. ಯುನೈಟೆಡ್ ಕಿಂಗ್ಡಮ್ ಹಾಗೂ ಸ್ವಿಟ್ಜರ್ಲೆಂಡ್ ಇದೇ ರೀತಿಯ ಸಮರ್ಪಕ ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಿವೆ. ನಾವು ಈ ಕೆಳಗಿನ ಸಮರ್ಪಕ ಕಾರ್ಯವಿಧಾನಗಳನ್ನು ಅವಲಂಬಿಸಿದ್ದೇವೆ:
EU-U.S. ಮತ್ತು Swiss-U.S. ಡೇಟಾ ಗೌಪ್ಯತೆ ಫ್ರೇಮ್ವರ್ಕ್ಗಳು
ನಮ್ಮ ಡೇಟಾ ಗೌಪ್ಯತೆ ಫ್ರೇಮ್ವರ್ಕ್ ಪ್ರಮಾಣೀಕರಣದಲ್ಲಿ ವಿವರಿಸಿದಂತೆ, ನಾವು EU-U.S. ಮತ್ತು Swiss-U.S. ಡೇಟಾ ಗೌಪ್ಯತೆ ಫ್ರೇಮ್ವರ್ಕ್ಗಳು (DPF) ಮತ್ತು EU-U.S. DPF ಗೆ UK ಎಕ್ಸ್ಟೆನ್ಶನ್ EEA, ಸ್ವಿಟ್ಜರ್ಲೆಂಡ್ ಮತ್ತು ಯುಕೆಯಿಂದ ಕ್ರಮವಾಗಿ ವೈಯಕ್ತಿಕ ಮಾಹಿತಿಯ ಸಂಗ್ರಹಣೆ, ಬಳಕೆ ಮತ್ತು ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುವುದಕ್ಕೆ ಸಂಬಂಧಿಸಿದಂತೆ US ವಾಣಿಜ್ಯ ಇಲಾಖೆಯು ನಿಗದಿಪಡಿಸಿರುವ DPF ಅನ್ನು ಅನುಸರಿಸುತ್ತೇವೆ. Google LLC (ಮತ್ತು ಅದರ ಸಂಪೂರ್ಣ ಸ್ವಾಧೀನದಲ್ಲಿರುವ ಯುನೈಟೆಡ್ ಸ್ಟೇಟ್ಸ್ ಅಂಗಸಂಸ್ಥೆಗಳೂ ಸ್ಪಷ್ಟವಾಗಿ ಹೊರಗಿಡದ ಹೊರತು) DPF ತತ್ವಗಳಿಗೆ ಬದ್ಧವಾಗಿದೆ ಎಂದು ಪ್ರಮಾಣೀಕರಿಸಿದೆ. ನಮ್ಮ ಗೌಪ್ಯತೆ ನೀತಿಯಲ್ಲಿರುವ "ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳುವಿಕೆ" ವಿಭಾಗದಲ್ಲಿ ವಿವರಿಸಿದಂತೆ, ನಮ್ಮ ಪರವಾಗಿ ಬಾಹ್ಯ ಪ್ರಕ್ರಿಯೆಗಾಗಿ ಥರ್ಡ್ ಪಾರ್ಟಿಗಳೊಂದಿಗೆ ಚಾಲ್ತಿಯಲ್ಲಿರುವ ವರ್ಗಾವಣೆ ತತ್ವದ ಅಡಿಯಲ್ಲಿ ಹಂಚಿಕೊಳ್ಳಲಾದ, ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಗೆ Google ಜವಾಬ್ದಾರಿಯುತವಾಗಿರುತ್ತದೆ. DPF ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು Google ನ ಪ್ರಮಾಣೀಕರಣವನ್ನು ವೀಕ್ಷಿಸಲು, ದಯವಿಟ್ಟು DPF ವೆಬ್ಸೈಟ್ಗೆ ಭೇಟಿ ನೀಡಿ
ನಮ್ಮ DPF ಪ್ರಮಾಣೀಕರಣಕ್ಕೆ ಸಂಬಂಧಿಸಿದಂತೆ ನಮ್ಮ ಗೌಪ್ಯತೆ ರೂಢಿಗಳ ಕುರಿತು ನೀವು ವಿಚಾರಣೆಯನ್ನು ಹೊಂದಿದ್ದರೆ, ನಮ್ಮನ್ನು ಸಂಪರ್ಕಿಸಲು ನಿಮ್ಮನ್ನು ನಾವು ಪ್ರೋತ್ಸಾಹಿಸುತ್ತೇವೆ. US ಫೆಡರಲ್ ಟ್ರೇಡ್ ಕಮಿಷನ್ನ ತನಿಖಾ ಮತ್ತು ಜಾರಿ ಅಧಿಕಾರಗಳಿಗೆ Google ಬದ್ಧವಾಗಿರುತ್ತದೆ. ನಿಮ್ಮ ಸ್ಥಳೀಯ ಡೇಟಾ ರಕ್ಷಣಾ ಪ್ರಾಧಿಕಾರಕ್ಕೂ ಸಹ ನೀವು ದೂರನ್ನು ನೀಡಬಹುದು ಮತ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಅವರೊಂದಿಗೆ ನಾವು ಕಾರ್ಯನಿರ್ವಹಿಸುತ್ತೇವೆ. ಕೆಲವು ಸಂದರ್ಭಗಳಲ್ಲಿ, DPF ತತ್ವಗಳ ಅನುಬಂಧ Iರಲ್ಲಿ ವಿವರಿಸಿದಂತೆ, ಇತರೆ ವಿಧಾನಗಳಿಂದ ಬಗೆಹರಿಸಲಾಗದ ದೂರನ್ನು ಪರಿಹರಿಸಲು ನಿರ್ಬಂಧದ ನಿರ್ಣಯಗಳನ್ನು ಅನುಷ್ಠಾನಗೊಳಿಸುವ ಅಧಿಕಾರವನ್ನು DPF ಒದಗಿಸುತ್ತದೆ.
ಪ್ರಮಾಣಿತ ಒಪ್ಪಂದದ ಷರತ್ತುಗಳು
ಪ್ರಮಾಣಿತ ಒಪ್ಪಂದದ ಷರತ್ತುಗಳು (SCC ಗಳು), ಪಾರ್ಟಿಗಳ ನಡುವಿನ ಲಿಖಿತ ಬದ್ಧತೆಗಳಾಗಿದ್ದು, ಸೂಕ್ತವಾದ ಡೇಟಾ ರಕ್ಷಣೆ ಸುರಕ್ಷತೆಗಳನ್ನು ಒದಗಿಸುವ ಮೂಲಕ EEA ನಿಂದ ಮೂರನೇ ದೇಶಗಳಿಗೆ ಡೇಟಾವನ್ನು ವರ್ಗಾಯಿಸಲು ಆಧಾರವಾಗಿ ಬಳಸಬಹುದು. SCC ಗಳನ್ನು ಯುರೋಪಿಯನ್ ಕಮಿಷನ್ ಅನುಮೋದಿಸಿದೆ ಮತ್ತು ಅವುಗಳನ್ನು ಬಳಸುವ ಪಾರ್ಟಿಗಳಿಂದ ಮಾರ್ಪಡಿಸಲಾಗುವುದಿಲ್ಲ (ಯೂರೋಪಿಯನ್ ಕಮಿಷನ್ ಅಳವಡಿಸಿಕೊಂಡ SCC ಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು). ಅಂತಹ ಷರತ್ತುಗಳನ್ನು ಯುನೈಟೆಡ್ ಕಿಂಗ್ಡಮ್ ಮತ್ತು ಸ್ವಿಟ್ಜರ್ಲೆಂಡ್ನ ಹೊರಗಿನ ದೇಶಗಳಿಗೆ ಡೇಟಾ ವರ್ಗಾವಣೆ ಮಾಡಲು ಸಹ ಅನುಮೋದಿಸಲಾಗಿದೆ. ಅಗತ್ಯವಿರುವಲ್ಲಿ ನಮ್ಮ ಡೇಟಾ ವರ್ಗಾವಣೆಗಾಗಿ, ನಾವು SCC ಗಳನ್ನು ಅವಲಂಬಿಸುತ್ತೇವೆ ಮತ್ತು ಅವುಗಳು ಸಮರ್ಪಕ ನಿರ್ಧಾರವನ್ನು ಒಳಗೊಳ್ಳದ ಸಂದರ್ಭಗಳಲ್ಲಿ. ನೀವು SCC ಗಳ ಕಾಪಿಯನ್ನು ಪಡೆಯಲು ಬಯಸಿದರೆ, ನೀವು ನಮ್ಮನ್ನು ಸಂಪರ್ಕಿಸಬಹುದು.
Google Workspace, Google Cloud Platform, Google Ads ಹಾಗೂ ಇತರೆ ಜಾಹೀರಾತುಗಳು ಮತ್ತು ಮಾಪನ ಉತ್ಪನ್ನಗಳನ್ನು ಒಳಗೊಂಡಂತೆ Google ತನ್ನ ವಾಣಿಜ್ಯ ಸೇವಾ ಗ್ರಾಹಕರೊಂದಿಗಿನ ಒಪ್ಪಂದಗಳಲ್ಲಿ SCC ಅನ್ನು ಸಹ ಸೇರಿಸಬಹುದು. privacy.google.com/businesses ನಲ್ಲಿ ಇನ್ನಷ್ಟು ತಿಳಿಯಿರಿ.