ಕೀ ಪದಗಳು
- ಅಂಗಸಂಸ್ಥೆಗಳು
- ಅನನ್ಯ ಗುರುತುಗಳು
- ಅಪ್ಲಿಕೇಶನ್ ಡೇಟಾ ಸಂಗ್ರಹಣೆ
- ಅಲ್ಗಾರಿದಮ್
- ಕುಕೀಗಳು
- ಪಿಕ್ಸೆಲ್ ಟ್ಯಾಗ್
- ಬ್ರೌಸರ್ ವೆಬ್ ಸಂಗ್ರಹಣೆ
- ರೆಫರರ್ URL
- ವೈಯಕ್ತಿಕ ಮಾಹಿತಿ
- ವೈಯುಕ್ತಿಕವಲ್ಲದ ಗುರುತಿಸಬಹುದಾದ ಮಾಹಿತಿ
- ಸರ್ವರ್ ಲಾಗ್‌ಗಳು
- ಸಾಧನ
- ಸೂಕ್ಷ್ಮವಾದ ವೈಯುಕ್ತಿಕ ಮಾಹಿತಿ
- Google ಖಾತೆ
- IP ವಿಳಾಸ
ಅಂಗಸಂಸ್ಥೆಗಳು
ಅಂಗಸಂಸ್ಥೆ ಎಂದರೆ Google ಸಮೂಹದ ಕಂಪನಿಗಳಿಗೆ ಸೇರಿರುವ ಒಂದು ಸಂಸ್ಥೆಯಾಗಿದೆ. EU ನಲ್ಲಿ ಗ್ರಾಹಕ ಸೇವೆಗಳನ್ನು ಒದಗಿಸುವ ಈ ಕೆಳಗಿನ ಸಂಸ್ಥೆಗಳು ಸಹ ಇದರಲ್ಲಿ ಸೇರಿರುತ್ತವೆ: Google Ireland Limited, Google Commerce Ltd, Google Payment Corp, ಮತ್ತು Google Dialer Inc. EU ನಲ್ಲಿ ವ್ಯಾಪಾರ ಸೇವೆಗಳನ್ನು ಒದಗಿಸುತ್ತಿರುವ ಕಂಪನಿಗಳ ಕುರಿತು ಇನ್ನಷ್ಟು ತಿಳಿಯಿರಿ.
ಅನನ್ಯ ಗುರುತುಗಳು
ಅನನ್ಯ ಗುರುತು ಎಂದರೆ ಒಂದು ಬ್ರೌಸರ್, ಅಪ್ಲಿಕೇಶನ್ ಅಥವಾ ಸಾಧನವನ್ನು ಅನನ್ಯವಾಗಿ ಗುರುತಿಸಲು ಬಳಸಬಹುದಾದಂತಹ ಅಕ್ಷರಗಳ ಸ್ಟ್ರಿಂಗ್ ಆಗಿರುತ್ತದೆ. ವಿವಿಧ ಗುರುತುಗಳು, ಅವು ಎಷ್ಟು ಶಾಶ್ವತ, ಅವುಗಳನ್ನು ಬಳಕೆದಾರರು ಮರುಹೊಂದಿಸಬಹುದೇ ಮತ್ತು ಅವುಗಳಿಗೆ ಹೇಗೆ ಪ್ರವೇಶಿಸಬಹುದು ಎಂಬುದನ್ನು ಅವಲಂಬಿಸಿ ಭಿನ್ನವಾಗಿರುತ್ತವೆ.
ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ವಂಚನೆಯನ್ನು ಪತ್ತೆಹಚ್ಚಲು, ನಿಮ್ಮ ಇಮೇಲ್ ಇನ್‌ಬಾಕ್ಸ್‌ನಂತಹ ಸೇವೆಗಳನ್ನು ಸಿಂಕ್ ಮಾಡಲು, ನಿಮ್ಮ ಆದ್ಯತೆಗಳನ್ನು ನೆನಪಿಡಲು ಮತ್ತು ವೈಯಕ್ತೀಕರಿಸಿದ ಜಾಹೀರಾತುಗಳನ್ನು ಒದಗಿಸಲು ಅನನ್ಯ ಗುರುತುಗಳನ್ನು ಬಳಸಬಹುದು. ಉದಾಹರಣೆಗೆ, ಕುಕೀಗಳಲ್ಲಿ ಸಂಗ್ರಹಣೆ ಮಾಡಿರುವ ಅನನ್ಯ ಗುರುತುಗಳು, ನಿಮ್ಮ ಬ್ರೌಸರ್‌ನಲ್ಲಿರುವ ವಿಷಯವನ್ನು ನಿಮ್ಮ ಆದ್ಯತೆಯ ಭಾಷೆಯಲ್ಲಿ ಪ್ರದರ್ಶಿಸಲು ಸಹಾಯ ಮಾಡುತ್ತವೆ. ಎಲ್ಲಾ ಕುಕೀಗಳನ್ನು ನಿರಾಕರಿಸುವಂತೆ ಅಥವಾ ಕುಕೀಯನ್ನು ಕಳುಹಿಸಿದಾಗ ಸೂಚನೆ ನೀಡುವಂತೆ ನಿಮ್ಮ ಬ್ರೌಸರ್ ಅನ್ನು ನೀವು ಕಾನ್ಫಿಗರ್ ಮಾಡಬಹುದು. Google ಕುಕೀಗಳನ್ನು ಹೇಗೆ ಬಳಸುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.
ಬ್ರೌಸರ್‌ಗಳಲ್ಲದೆ ಇತರ ಪ್ಲಾಟ್‌ಫಾರ್ಮ್‍ಗಳಲ್ಲಿ, ಆ ಸಾಧನದಲ್ಲಿ ನಿರ್ದಿಷ್ಟ ಸಾಧನವನ್ನು ಅಥವಾ ಅಪ್ಲಿಕೇಶನ್ ಅನ್ನು ಗುರುತಿಸಲು ಅನನ್ಯ ಗುರುತುಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಜಾಹೀರಾತು ಐಡಿಯಂತಹ ಅನನ್ಯ ಗುರುತನ್ನು Android ಸಾಧನಗಳಲ್ಲಿ ಸೂಕ್ತ ಜಾಹೀರಾತುಗಳನ್ನು ಒದಗಿಸಲು ಬಳಸಲಾಗುತ್ತದೆ ಮತ್ತು ಅದನ್ನು ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ ನಿರ್ವಹಿಸಬಹುದು. ಅನನ್ಯ ಗುರುತುಗಳನ್ನು, ಸಾಧನದ ತಯಾರಕರು ಸಾಧನದಲ್ಲಿ ಅಳವಡಿಸಬಹುದು (ಇದನ್ನು ಕೆಲವೊಮ್ಮೆ ಸಾರ್ವತ್ರಿಕ ಅನನ್ಯ ಐಡಿ ಅಥವಾ UUID ಎಂದು ಕರೆಯಲಾಗುತ್ತದೆ), ಉದಾಹರಣೆಗೆ ಮೊಬೈಲ್ ಫೋನ್‌ನ IMEI-ಸಂಖ್ಯೆ. ಉದಾಹರಣೆಗೆ, ನಿಮ್ಮ ಸಾಧನಕ್ಕಾಗಿ ನಮ್ಮ ಸೇವೆಯನ್ನು ಕಸ್ಟಮೈಸ್ ಮಾಡಲು ಅಥವಾ ನಮ್ಮ ಸೇವೆಗಳಿಗೆ ಸಂಬಂಧಪಟ್ಟಂತೆ ಸಾಧನದ ಸಮಸ್ಯೆಗಳನ್ನು ವಿಶ್ಲೇಷಿಸಲು, ಸಾಧನದ ಅನನ್ಯ ಗುರುತನ್ನು ಬಳಸಬಹುದು.
ಅಪ್ಲಿಕೇಶನ್ ಡೇಟಾ ಸಂಗ್ರಹಣೆ
ಅಪ್ಲಿಕೇಶನ್ ಡೇಟಾ ಸಂಗ್ರಹಣೆ ಎಂಬುದು ಸಾಧನದಲ್ಲಿರುವ ಒಂದು ಡೇಟಾ ಭಂಡಾರವಾಗಿದೆ. ಉದಾಹರಣೆಗೆ, ವೆಬ್ ಅಪ್ಲಿಕೇಶನ್ ಇಂಟರ್ನೆಟ್‌ನ ಸಂಪರ್ಕವಿಲ್ಲದೆಯೇ ರನ್ ಆಗಲು ಸಶಕ್ತಗೊಳಿಸುತ್ತದೆ. ಜೊತೆಗೆ ವಿಷಯ ತ್ವರಿತಗತಿಯಲ್ಲಿ ಲೋಡ್ ಆಗುವಂತೆ ಮಾಡುವ ಮೂಲಕ ಅಪ್ಲಿಕೇಶನ್‌ನ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಬಹುದು.
ಅಲ್ಗಾರಿದಮ್
ಸಮಸ್ಯೆ ಪರಿಹಾರ ಕಾರ್ಯಾಚರಣೆಗಳನ್ನು ನಡೆಸುವಾಗ ಕಂಪ್ಯೂಟರ್ ಅನುಸರಿಸುವ ಪ್ರಕ್ರಿಯೆ ಅಥವಾ ನಿಯಮಗಳ ಗುಂಪು.
ಕುಕೀಗಳು
ಕುಕೀ ಎಂದರೆ, ನೀವು ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ನಿಮ್ಮ ಕಂಪ್ಯೂಟರ್‌ಗೆ ಕಳುಹಿಸಲಾಗುವ, ಅಕ್ಷರಗಳ ಸ್ಟ್ರಿಂಗ್ ಅನ್ನು ಒಳಗೊಂಡಿರುವ ಸಣ್ಣ ಫೈಲ್ ಆಗಿರುತ್ತದೆ. ನೀವು ವೆಬ್‌ಸೈಟ್‌ಗೆ ಮತ್ತೆ ಭೇಟಿ ನೀಡಿದಾಗ, ಆ ಸೈಟ್‌ಗೆ ನಿಮ್ಮ ಬ್ರೌಸರ್ ಅನ್ನು ಗುರುತಿಸಲು ಕುಕೀ ಅನುವು ಮಾಡಿಕೊಡುತ್ತದೆ. ಕುಕೀಗಳು ಬಳಕೆದಾರರ ಆದ್ಯತೆಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಬಹುದು. ಎಲ್ಲಾ ಕುಕೀಗಳನ್ನು ನಿರಾಕರಿಸುವಂತೆ ಅಥವಾ ಕುಕೀಯನ್ನು ಕಳುಹಿಸಿದಾಗ ಸೂಚನೆ ನೀಡುವಂತೆ ನಿಮ್ಮ ಬ್ರೌಸರ್ ಅನ್ನು ನೀವು ಕಾನ್ಫಿಗರ್ ಮಾಡಬಹುದು. ಆದರೂ, ಕೆಲವು ವೆಬ್‌ಸೈಟ್ ವೈಶಿಷ್ಟ್ಯಗಳು ಅಥವಾ ಸೇವೆಗಳು ಕುಕೀಗಳಿಲ್ಲದೆ ಸರಿಯಾಗಿ ಕಾರ್ಯನಿರ್ವಹಿಸದಿರಬಹುದು. Google ಕುಕೀಗಳನ್ನು ಹೇಗೆ ಬಳಸುತ್ತದೆ ಮತ್ತು ನಮ್ಮ ಪಾಲುದಾರರ ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳನ್ನು ನೀವು ಬಳಸಿದಾಗ ಕುಕೀಗಳನ್ನು ಒಳಗೊಂಡಂತೆ ಡೇಟಾವನ್ನು Google ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದರ ಕುರಿತು ಇನ್ನಷ್ಟು ತಿಳಿಯಿರಿ.
ಪಿಕ್ಸೆಲ್ ಟ್ಯಾಗ್
ಪಿಕ್ಸೆಲ್ ಟ್ಯಾಗ್ ಎಂದರೆ ವೆಬ್‌ಸೈಟ್‌ನ ವೀಕ್ಷಣೆಗಳು ಅಥವಾ ಇಮೇಲ್ ಅನ್ನು ಯಾವಾಗ ತೆರೆಯಲಾಗಿದೆ ಎಂಬಂತಹ ನಿರ್ದಿಷ್ಟ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ವೆಬ್‌ಸೈಟ್‌ನಲ್ಲಿ ಅಥವಾ ಇಮೇಲ್‌ನ ವಿವರಣೆ ವಿಭಾಗದಲ್ಲಿ ಇರಿಸಲಾಗುವ ಒಂದು ರೀತಿಯ ತಂತ್ರಜ್ಞಾನವಾಗಿದೆ. ಪಿಕ್ಸೆಲ್ ಟ್ಯಾಗ್‌ಗಳನ್ನು ಹೆಚ್ಚಾಗಿ ಕುಕೀಗಳೊಂದಿಗೆ ಬಳಸಲಾಗುತ್ತದೆ.
ಬ್ರೌಸರ್ ವೆಬ್ ಸಂಗ್ರಹಣೆ
ಬ್ರೌಸರ್ ವೆಬ್ ಸಂಗ್ರಹಣೆಯು ಬ್ರೌಸರ್‌ನಲ್ಲಿರುವ ಡೇಟಾವನ್ನು ಸಾಧನದಲ್ಲಿ ಸಂಗ್ರಹಿಸಲು ವೆಬ್‌ಸೈಟ್‌ಗಳನ್ನು ಸಕ್ರಿಯಗೊಳಿಸುತ್ತದೆ. "ಸ್ಥಳೀಯ ಸಂಗ್ರಹಣೆ" ಮೋಡ್‍ನಲ್ಲಿ ಬಳಸಿದಾಗ, ಅದು ಸೆಶನ್‌ಗಳಾದ್ಯಂತ ಡೇಟಾವನ್ನು ಸಂಗ್ರಹಣೆ ಮಾಡಲು ಅವಕಾಶ ನೀಡುತ್ತದೆ. ಬ್ರೌಸರ್ ಅನ್ನು ಮುಚ್ಚಿ, ಪುನಃ ತೆರೆದ ನಂತರವೂ ಡೇಟಾವನ್ನು ಪಡೆದುಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ. ವೆಬ್ ಸಂಗ್ರಹಣೆಯನ್ನು ಸುಗಮಗೊಳಿಸುವ ಒಂದು ತಂತ್ರಜ್ಞಾನವೆಂದರೆ, ಅದು HTML 5.
ರೆಫರರ್ URL
ರೆಫರರ್ URL (ಯುನಿಫಾರ್ಮ್ ರಿಸೋರ್ಸ್ ಲೊಕೇಟರ್) ಎಂದರೆ, ಸಾಮಾನ್ಯವಾಗಿ ನೀವು ಒಂದು ಪುಟದ ಲಿಂಕ್ ಅನ್ನು ಕ್ಲಿಕ್ ಮಾಡುವಾಗ, ಗಮ್ಯ ವೆಬ್‌ಪುಟಕ್ಕೆ ವೆಬ್ ಬ್ರೌಸರ್ ರವಾನಿಸುವ ಮಾಹಿತಿ ಇದಾಗಿರುತ್ತದೆ. ಕೊನೆಯದಾಗಿ ಭೇಟಿ ನೀಡಿದ ಬ್ರೌಸರ್‌ನ URL ಅನ್ನು ರೆಫರರ್ URL ಹೊಂದಿರುತ್ತದೆ.
ವೈಯಕ್ತಿಕ ಮಾಹಿತಿ
ಇದು ನೀವು ನಮಗೆ ಒದಗಿಸುವ, ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸುವ ಮಾಹಿತಿಯಾಗಿರುತ್ತದೆ. ಅಂದರೆ, ನಿಮ್ಮ ಹೆಸರು, ಇಮೇಲ್ ವಿಳಾಸ ಅಥವಾ ಬಿಲ್ಲಿಂಗ್ ಮಾಹಿತಿ ಅಥವಾ ಇಂತಹ ಮಾಹಿತಿಗೆ Google, ಸೂಕ್ತವಾಗಿ ಲಿಂಕ್ ಮಾಡಬಹುದಾದ ಇತರ ಡೇಟಾ ಆಗಿರುತ್ತದೆ. ಉದಾಹರಣೆಗೆ, ನಿಮ್ಮ Google ಖಾತೆಯೊಂದಿಗೆ ನಾವು ಸಂಯೋಜಿಸುವ ಮಾಹಿತಿ.
ವೈಯುಕ್ತಿಕವಲ್ಲದ ಗುರುತಿಸಬಹುದಾದ ಮಾಹಿತಿ
ಇದು ವೈಯಕ್ತಿಕವಾಗಿ-ಗುರುತಿಸಬಹುದಾದ ಬಳಕೆದಾರನನ್ನು ಪ್ರತಿಬಿಂಬಿಸದಂತೆ ಅಥವಾ ಉಲ್ಲೇಖಿಸದಂತೆ ದಾಖಲಿಸಲಾಗುವ, ಬಳಕೆದಾರರ ಕುರಿತಾದ ಮಾಹಿತಿಯಾಗಿದೆ.
ಸರ್ವರ್ ಲಾಗ್‌ಗಳು
ಹೆಚ್ಚಿನ ವೆಬ್‌ಸೈಟ್‌ಗಳಂತೆ, ನಮ್ಮ ಸೈಟ್‌ಗಳನ್ನು ನೀವು ಭೇಟಿ ಮಾಡಿದಾಗ ನಮ್ಮ ಸರ್ವರ್‌ಗಳು ಪುಟದ ವಿನಂತಿಗಳನ್ನು ಸ್ವಯಂಚಾಲಿತವಾಗಿ ದಾಖಲಿಸುತ್ತದೆ. ಈ “ ಸರ್ವರ್ ಲಾಗ್‌ಗಳು” ಪ್ರಾತಿನಿಧಿಕವಾಗಿ ನಿಮ್ಮ ವೆಬ್ ವಿನಂತಿ, ಇಂಟರ್ನೆಟ್ ಪ್ರೊಟೋಕಾಲ್ ವಿಳಾಸ, ಬ್ರೌಸರ್ ಪ್ರಕಾರ, ಬ್ರೌಸರ್ ಭಾಷೆ, ನಿಮ್ಮ ವಿನಂತಿಯ ದಿನಾಂಕ ಮತ್ತು ಸಮಯವು ಸೇರಿದಂತೆ ಮತ್ತು ಒಂದು ಅಥವಾ ಹೆಚ್ಚಿನ ಕುಕೀಸ್ ನಿಮ್ಮ ಬ್ರೌಸರ್ ಅನ್ನು ಅನನ್ಯವಾಗಿ ಗುರುತಿಸಬಹುದಾಗಿದೆ.
“ಕಾರುಗಳು” ಎಂದು ಹುಡುಕಾಟ ನಡೆಸಿದಾಗ ಸೃಷ್ಟಿಯಾಗುವ ಸಾಮಾನ್ಯ ಲಾಗ್ ನಮೂದು ಹೀಗಿರುತ್ತದೆ:
123.45.67.89 - 25/Mar/2003 10:15:32 -
http://www.google.com/search?q=cars -
Chrome 112; OS X 10.15.7 -
740674ce2123e969
123.45.67.89
ಇದು ಬಳಕೆದಾರನ ISP ಯು ಬಳಕೆದಾರನಿಗೆ ನಿಗದಿಪಡಿಸುವ ಇಂಟರ್ನೆಟ್ ಪ್ರೊಟೊಕಾಲ್ ವಿಳಾಸವಾಗಿರುತ್ತದೆ. ಬಳಕೆದಾರನ ಸೇವೆಯನ್ನು ಆಧರಿಸಿ, ಅವರು ಪ್ರತಿ ಬಾರಿ ಇಂಟರ್ನೆಟ್‍ಗೆ ಸಂಪರ್ಕಿಸಿದಾಗಲೂ ಅವರ ಸೇವಾ ಪೂರೈಕೆದಾರರು ಬಳಕೆದಾರರಿಗೆ ವಿಭಿನ್ನ ವಿಳಾಸವನ್ನು ನಿಗದಿಪಡಿಸಬಹುದು.25/Mar/2003 10:15:32
ಇದು ಪ್ರಶ್ನೆಯ ದಿನಾಂಕ ಮತ್ತು ಸಮಯವಾಗಿರುತ್ತದೆ.http://www.google.com/search?q=cars
ಇದು ಹುಡುಕಾಟದ ಪ್ರಶ್ನೆಯನ್ನು ಒಳಗೊಂಡಿರುವ, ವಿನಂತಿಸಿದ URL ಆಗಿರುತ್ತದೆ.Chrome 112; OS X 10.15.7
ಇದು ಬಳಸಲಾಗುತ್ತಿರುವ ಬ್ರೌಸರ್ ಮತ್ತು ಆಪರೇಟಿಂಗ್ ಸಿಸ್ಟಂ ಆಗಿರುತ್ತದೆ.740674ce2123a969
ಇದು, ಈ ನಿರ್ದಿಷ್ಟ ಕಂಪ್ಯೂಟರ್ ಮೊದಲ ಬಾರಿ Google ಗೆ ಭೇಟಿ ನೀಡಿದಾಗ, ಅದಕ್ಕೆ ನಿಗದಿಪಡಿಸಿದ ಅನನ್ಯ ಕುಕೀ ಐಡಿಯಾಗಿರುತ್ತದೆ. (ಕುಕೀಗಳನ್ನು ಬಳಕೆದಾರರು ಅಳಿಸಬಹುದು. Google ಗೆ ಭೇಟಿ ನೀಡಿದ ಬಳಿಕ, ಬಳಕೆದಾರರು ಕಂಪ್ಯೂಟರ್‌ನಿಂದ ಕುಕೀಯನ್ನು ಅಳಿಸಿದ್ದರೆ, ಅವರು ಆ ನಿರ್ದಿಷ್ಟ ಸಾಧನದಿಂದ ಮುಂದಿನ ಬಾರಿ Google ಗೆ ಭೇಟಿ ನೀಡಿದಾಗ, ಅವರ ಸಾಧನಕ್ಕೆ ನಿಗದಿಪಡಿಸಿದ ಅನನ್ಯ ಕುಕೀ ಐಡಿ ಇದಾಗಿರುತ್ತದೆ).
ಸಾಧನ
ಸಾಧನವು ಕಂಪ್ಯೂಟರ್ ಆಗಿದ್ದು, Google ಸೇವೆಗಳಿಗೆ ಪ್ರವೇಶಿಸಲು ಅದನ್ನು ಬಳಸಬಹುದಾಗಿರುತ್ತದೆ. ಉದಾಹರಣೆಗೆ, ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್ ಸ್ಪೀಕರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಸಾಧನಗಳೆಂದು ಪರಿಗಣಿಸಲಾಗುತ್ತದೆ.
ಸೂಕ್ಷ್ಮವಾದ ವೈಯುಕ್ತಿಕ ಮಾಹಿತಿ
ಇದು ಗೌಪ್ಯತಾ ವೈದ್ಯಕೀಯ ಅಂಶಗಳು, ಜನಾಂಗ ಅಥವಾ ಜನಾಂಗೀಯ ಮೂಲಗಳು, ರಾಜಕೀಯ ಅಥವಾ ಧಾರ್ಮಿಕತೆಯ ನಂಬಿಕೆಗಳು ಅಥವಾ ಲೈಂಗಿಕತೆಗೆ ಸಂಬಂಧಿಸಿದ ವೈಯುಕ್ತಿಕ ಮಾಹಿತಿಯ ನಿರ್ದಿಷ್ಟ ವರ್ಗವಾಗಿದೆ.
Google ಖಾತೆ
Google ಖಾತೆಗೆ ಸೈನ್ ಅಪ್ ಮಾಡುವ ಮೂಲಕ ಮತ್ತು ಕೆಲವು ವೈಯಕ್ತಿಕ ಮಾಹಿತಿಯನ್ನು (ಸಾಮಾನ್ಯವಾಗಿ ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಪಾಸ್‍ವರ್ಡ್) ನಮಗೆ ಒದಗಿಸುವ ಮೂಲಕ ನಮ್ಮ ಕೆಲವು ಸೇವೆಗಳಿಗೆ ನೀವು ಪ್ರವೇಶ ಪಡೆಯಬಹುದು. ನೀವು Google ಸೇವೆಗಳಿಗೆ ಪ್ರವೇಶಿಸುವಾಗ ನಿಮ್ಮ ಗುರುತನ್ನು ಪ್ರಮಾಣೀಕರಿಸುವುದಕ್ಕಾಗಿ ಮತ್ತು ನಿಮ್ಮ ಖಾತೆಗೆ ಇತರರು ಅನಧಿಕೃತವಾಗಿ ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಈ ಖಾತೆ ಮಾಹಿತಿಯನ್ನು ಬಳಸಲಾಗುತ್ತದೆ. ನಿಮ್ಮ Google ಖಾತೆ ಸೆಟ್ಟಿಂಗ್‌ಗಳ ಮೂಲಕ ನಿಮ್ಮ ಖಾತೆಯನ್ನು ನೀವು ಯಾವಾಗ ಬೇಕಾದರೂ ಎಡಿಟ್ ಮಾಡಬಹುದು ಅಥವಾ ಅಳಿಸಬಹುದು.
IP ವಿಳಾಸ
ಇಂಟರ್ನೆಟ್‌ಗೆ ಕನೆಕ್ಟ್ ಮಾಡಲಾದ ಪ್ರತಿ ಸಾಧನಕ್ಕೂ ಒಂದು ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ. ಅದನ್ನು ಇಂಟರ್ನೆಟ್ ಪ್ರೊಟೋಕಾಲ್ (IP) ವಿಳಾಸ ಎಂದು ಕರೆಯುತ್ತಾರೆ. ಈ ಸಂಖ್ಯೆಗಳನ್ನು ಸಾಮಾನ್ಯವಾಗಿ ಭೌಗೋಳಿಕ ವಿಭಾಗಗಳ ಆಧಾರದಲ್ಲಿ ನಿಗದಿಪಡಿಸಲಾಗಿರುತ್ತದೆ. ಇಂಟರ್ನೆಟ್‌ಗೆ ಕನೆಕ್ಟ್ ಆಗುವ ಸಾಧನದ ಸ್ಥಳವನ್ನು ಗುರುತಿಸಲು ಸಾಮಾನ್ಯವಾಗಿ IP ವಿಳಾಸವನ್ನು ಬಳಸಲಾಗುತ್ತದೆ. ಸ್ಥಳ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.