Google ಡ್ರೈವ್‌ ಹೆಚ್ಚುವರಿ ಸೇವಾ ನಿಯಮಗಳು

ಜಾರಿಗೊಳ್ಳುವ ದಿನಾಂಕ: 31 ಮಾರ್ಚ್ 2020 (ಹಿಂದಿನ ಆವೃತ್ತಿಯನ್ನು ವೀಕ್ಷಿಸಿ)

Google ಡ್ರೈವ್ ಅನ್ನು ಬಳಸಲು, ನೀವು (1) Google ಸೇವಾ ನಿಯಮಗಳು, ಮತ್ತು (2) ಈ Google ಡ್ರೈವ್ ಹೆಚ್ಚುವರಿ ಸೇವಾ ನಿಯಮಗಳನ್ನು (“Google ಡ್ರೈವ್ ಹೆಚ್ಚುವರಿ ಸೇವಾ ನಿಯಮಗಳು”) ಒಪ್ಪಿಕೊಳ್ಳಬೇಕು.

ಈ ಪ್ರತಿಯೊಂದು ಡಾಕ್ಯುಮೆಂಟ್‌ಗಳನ್ನು ಎಚ್ಚರಿಕೆಯಿಂದ ಓದಿ. ಒಟ್ಟಾರೆ, ಈ ಡಾಕ್ಯುಮೆಂಟ್‌ಗಳನ್ನು “ನಿಯಮಗಳು”“ ಎಂದು ಕರೆಯಲಾಗುತ್ತದೆ. ನೀವು ನಮ್ಮ ಸೇವೆಗಳನ್ನು ಬಳಸುವಾಗ ನೀವು ನಮ್ಮಿಂದ ಏನನ್ನು ನಿರೀಕ್ಷಿಸಬಹುದು ಮತ್ತು ನಿಮ್ಮಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ ಎಂಬುದನ್ನು ಅವು ದೃಢಪಡಿಸುತ್ತವೆ.

ಇದು ಈ ನಿಯಮಗಳ ಒಂದು ಭಾಗವಲ್ಲದಿದ್ದರೂ, ನೀವು ಹೇಗೆ ನಿಮ್ಮ ಮಾಹಿತಿಯನ್ನು ಅಪ್‌ಡೇಟ್‌ ಮಾಡಬಹುದು, ನಿರ್ವಹಿಸಬಹುದು, ರಫ್ತು ಮಾಡಬಹುದು ಮತ್ತು ಅಳಿಸಬಹುದು ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ನಮ್ಮ ಗೌಪ್ಯತೆ ನೀತಿಯನ್ನು ಓದಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

1. ನಿಮ್ಮ ವಿಷಯ

ವಿಷಯವನ್ನು ಅಪ್‌ಲೋಡ್ ಮಾಡಲು, ಸಲ್ಲಿಸಲು, ಸಂಗ್ರಹಿಸಲು, ಕಳುಹಿಸಲು ಮತ್ತು ಸ್ವೀಕರಿಸಲು Google ಡ್ರೈವ್ ನಿಮಗೆ ಅನುಮತಿಸುತ್ತದೆ. Google ಸೇವಾ ನಿಯಮಗಳಲ್ಲಿ ವಿವರಿಸಿದಂತೆ, ನಿಮ್ಮ ವಿಷಯವು ನಿಮ್ಮದಾಗಿಯೇ ಉಳಿಯುತ್ತದೆ. ನಿಮ್ಮ ಡ್ರೈವ್ ಖಾತೆಯಲ್ಲಿ ನೀವು ಅಪ್‌ಲೋಡ್ ಮಾಡುವ, ಹಂಚಿಕೊಳ್ಳುವ ಅಥವಾ ಸಂಗ್ರಹಿಸುವ ಯಾವುದೇ ಪಠ್ಯ, ಡೇಟಾ, ಮಾಹಿತಿ ಮತ್ತು ಫೈಲ್‌ಗಳನ್ನು ಒಳಗೊಂಡಂತೆ ನಿಮ್ಮ ಯಾವುದೇ ವಿಷಯದಲ್ಲಿ ನಾವು ಮಾಲೀಕತ್ವವನ್ನು ಕ್ಲೈಮ್ ಮಾಡುವುದಿಲ್ಲ. Google ಸೇವಾ ನಿಯಮಗಳು, Google ಡ್ರೈವ್ ಸೇವೆಗಳನ್ನು ನಿರ್ವಹಿಸಲು ಮತ್ತು ಸುಧಾರಿಸಲು Google ಗೆ ಸೀಮಿತ ಉದ್ದೇಶದ ಪರವಾನಗಿಯೊಂದನ್ನು ನೀಡುತ್ತದೆ - ಆದ್ದರಿಂದ ನೀವು ಡಾಕ್ಯುಮೆಂಟ್ ಒಂದನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ನಿರ್ಧರಿಸಿದರೆ, ಅಥವಾ ಅದನ್ನು ಬೇರೆ ಸಾಧನದಲ್ಲಿ ತೆರೆಯಲು ಬಯಸಿದರೆ, ನಾವು ಆ ಕಾರ್ಯಾತ್ಮಕತೆಯನ್ನು ಒದಗಿಸಬಹುದು.

ಇತರ Google ಡ್ರೈವ್ ಬಳಕೆದಾರರ ವಿಷಯದಲ್ಲಿ ಸಹಯೋಗ ಹೊಂದಲು, Google ಡ್ರೈವ್ ನಿಮಗೆ ಅನುಮತಿಸುತ್ತದೆ. ವಿಷಯ ಮತ್ತು ಅದರ ಬಳಕೆಯನ್ನು ನಿಯಂತ್ರಿಸುವವರು ವಿಷಯದ “ಮಾಲೀಕರಾಗಿರುತ್ತಾರೆ”.

Google ಡ್ರೈವ್‌ನಲ್ಲಿರುವ ಹಂಚಿಕೆ ಸೆಟ್ಟಿಂಗ್‌ಗಳು, Google ಡ್ರೈವ್‌ನಲ್ಲಿ ನಿಮ್ಮ ವಿಷಯದೊಂದಿಗೆ ಇತರರು ಏನು ಮಾಡಬಹುದು ಎಂಬುದನ್ನು ನಿಯಂತ್ರಿಸಲು ನಿಮಗೆ ಅನುಮತಿಸುತ್ತವೆ. ನಿಮ್ಮ ಫೈಲ್‌ಗಳ ಗೌಪ್ಯತೆ ಸೆಟ್ಟಿಂಗ್‌ಗಳು ಅವು ಇರುವ ಫೋಲ್ಡರ್ ಅಥವಾ ಡ್ರೈವ್ ಅನ್ನು ಅವಲಂಬಿಸಿರುತ್ತವೆ. ನಿಮ್ಮ ವೈಯಕ್ತಿಕ ಡ್ರೈವ್‌ನಲ್ಲಿನ ಫೈಲ್‌ಗಳನ್ನು ನೀವು ಹಂಚಿಕೊಳ್ಳಲು ನಿರ್ಧರಿಸುವವರೆಗೆ ಅವು ಖಾಸಗಿಯಾಗಿರುತ್ತವೆ. ನಿಮ್ಮ ವಿಷಯವನ್ನು ನೀವು ಹಂಚಿಕೊಳ್ಳಬಹುದು ಮತ್ತು ನಿಮ್ಮ ವಿಷಯದ ನಿಯಂತ್ರಣವನ್ನು ಇತರ ಬಳಕೆದಾರರಿಗೆ ವರ್ಗಾಯಿಸಬಹುದು. ಇತರರು ಹಂಚಿಕೊಂಡ ಫೋಲ್ಡರ್‌ಗಳು ಅಥವಾ ಡ್ರೈವ್‌ಗಳಲ್ಲಿ ನೀವು ರಚಿಸುವ ಅಥವಾ ಇರಿಸುವ ಫೈಲ್‌ಗಳು, ಹಂಚಿಕೆ ಸೆಟ್ಟಿಂಗ್‌ಗಳನ್ನು ಉತ್ತರಾಧಿಕಾರವಾಗಿ ಪಡೆಯುತ್ತವೆ ಮತ್ತು ಅವು ಇರುವ ಫೋಲ್ಡರ್ ಅಥವಾ ಡ್ರೈವ್‌ನ ಮಾಲೀಕತ್ವದ ಸೆಟ್ಟಿಂಗ್‌ಗಳನ್ನು ಉತ್ತರಾಧಿಕಾರವಾಗಿ ಪಡೆಯಬಹುದು. ನಮ್ಮ ಗೌಪ್ಯತೆ ನೀತಿಯಲ್ಲಿ ವಿವರಿಸಿದಂತಲ್ಲದೆ, ನಿಮ್ಮ ಫೈಲ್‌ಗಳು ಮತ್ತು ಡೇಟಾವನ್ನು ನಾವು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ.

ನಿಮ್ಮ ವಿಷಯವನ್ನು ನಾವು ಮಾರ್ಕೆಟಿಂಗ್ ಅಥವಾ ಪ್ರಚಾರದ ಅಭಿಯಾನಕ್ಕಾಗಿ ಬಳಸುವುದಿಲ್ಲ.

2. ಪ್ರೋಗ್ರಾಮ್ ನೀತಿಗಳು

ಇದು ಕಾನೂನುಬಾಹಿರವೇ ಅಥವಾ ನಮ್ಮ ಪ್ರೋಗ್ರಾಂ ನೀತಿಗಳನ್ನು, ಉಲ್ಲಂಘಿಸುತ್ತದೆಯೇ ಎಂದು ನಿರ್ಧರಿಸಲು ನಾವು ವಿಷಯವನ್ನು ಪರಿಶೀಲಿಸಬಹುದು ಮತ್ತು ನಮ್ಮ ನೀತಿಗಳು ಅಥವಾ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ನಾವು ಸಮಂಜಸವಾಗಿ ನಂಬುವ ವಿಷಯವನ್ನು ನಾವು ತೆಗೆದುಹಾಕಬಹುದು ಅಥವಾ ಪ್ರದರ್ಶಿಸಲು ನಿರಾಕರಿಸಬಹುದು. ಆದರೆ ನಾವು ವಿಷಯವನ್ನು ಪರಿಶೀಲಿಸುತ್ತೇವೆ ಎಂದು ಇದರ ಅರ್ಥವಲ್ಲ, ಆದ್ದರಿಂದ ನಾವು ಪರಿಶೀಲಿಸುತ್ತೇವೆ ಎಂದು ಭಾವಿಸಬೇಡಿ.