Gmail ಪ್ರೋಗ್ರಾಮ್ ನೀತಿಗಳು

ಕೆಳಗಿನ ಪ್ರೋಗ್ರಾಮ್ ನೀತಿಗಳು Gmail ಗೆ ಅನ್ವಯಿಸುತ್ತವೆ. ನೀತಿಗಳು, ಅದನ್ನು ಬಳಸುವ ಎಲ್ಲರಿಗೂ ಸಕಾರಾತ್ಮಕವಾದ ಅನುಭವವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ನೀವು ಒಬ್ಬ ಗ್ರಾಹಕರೊಂದಿಗೆ Gmail ಬಳಸಿದರೆ (ಉದಾ., @gmail.com) ಖಾತೆ, ಹೆಚ್ಚಿನ ಮಾಹಿತಿಗಾಗಿ Google ನ ಸೇವಾ ನಿಯಮಗಳನ್ನು ಸಹ ನೋಡಿ. ನೀವು ಕೆಲಸ, ಶಾಲೆ ಅಥವಾ ಬೇರೊಂದು ಸಂಸ್ಥೆಯ ಮೂಲಕ ಖಾತೆಯನ್ನು ಬಳಸುತ್ತಿದ್ದರೆ, Google ನೊಂದಿಗಿನ ನಿಮ್ಮ ಸಂಸ್ಥೆಯ ಒಪ್ಪಂದ ಅಥವಾ ಇತರ ನೀತಿಗಳನ್ನು ಆಧರಿಸಿ ನಿಯಮಗಳು ಅನ್ವಯವಾಗಬಹುದು. ನಿಮ್ಮ ನಿರ್ವಾಹಕರು ಹೆಚ್ಚಿನ ಮಾಹಿತಿಯನ್ನು ಒದಗಿಸಲು ಸಾಧ್ಯವಾಗಬಹುದು.

ಈ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ನಮ್ಮ ಸಾಮರ್ಥ್ಯಕ್ಕೆ ಕಂಟಕಪ್ರಾಯವಾಗಿರುವ ದುರುಪಯೋಗಗಳನ್ನು ನಾವು ನಿರ್ಬಂಧಿಸಬೇಕಾಗುತ್ತದೆ. ಈ ಗುರಿಯನ್ನು ಸಾಧಿಸುವುದಕ್ಕಾಗಿ ನಮಗೆ ಸಹಾಯ ಮಾಡಲು ಈ ಕೆಳಗಿನ ನೀತಿಗಳಿಗೆ ಬದ್ಧರಾಗಿರುವಂತೆ ನಾವು ಪ್ರತಿಯೊಬ್ಬರಲ್ಲಿಯೂ ವಿನಂತಿಸಿಕೊಳ್ಳುತ್ತೇವೆ. ಸಂಭಾವ್ಯ ನೀತಿ ಉಲ್ಲಂಘನೆಗಳ ಕುರಿತು ನಮಗೆ ಸೂಚನೆ ದೊರೆತ ನಂತರ, ನಾವು ವಿಷಯದ ಪರಿಶೀಲನೆ ನಡೆಸಿ, Google ಉತ್ಪನ್ನಗಳಿಗೆ ಬಳಕೆದಾರರ ಪ್ರವೇಶವನ್ನು ಮಿತಿಗೊಳಿಸುವುದು ಅಥವಾ ಕೊನೆಗೊಳಿಸುವುದನ್ನು ಒಳಗೊಂಡಂತೆ ಅವಶ್ಯವಿರುವ ಕ್ರಮ ಕೈಗೊಳ್ಳಬಹುದು. ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ ಮತ್ತು ಅದನ್ನು ತಪ್ಪು ಎಂದು ನೀವು ಭಾವಿಸಿದ್ದರೆ, ದಯವಿಟ್ಟು ಈ ಪುಟ.

ದಲ್ಲಿನ ಸೂಚನೆಗಳನ್ನು ಅನುಸರಿಸಿ. ಸಂಗ್ರಹಣೆ ಕೋಟಾ ಮಿತಿಗಳನ್ನು ಮೀರಿರುವ ಖಾತೆಗಳ ಮೇಲೆ ನಾವು ಕ್ರಮ ಕೈಗೊಳ್ಳಬಹುದು. ಉದಾಹರಣೆಗೆ, ನೀವು ಸಂಗ್ರಹಣೆ ಕೋಟಾವನ್ನು ಮೀರಿದ್ದರೆ ಸಂದೇಶಗಳನ್ನು ಕಳುಹಿಸುವುದನ್ನು ಅಥವಾ ಸ್ವೀಕರಿಸುವುದನ್ನು ನಾವು ನಿಷೇಧಿಸಬಹುದು. ನಿಮ್ಮ ಸಂಗ್ರಹಣೆಯನ್ನು ಕಡಿಮೆ ಮಾಡಲು ನೀವು ವಿಫಲವಾದರೆ ಅಥವಾ ಸಾಕಷ್ಟು ಹೆಚ್ಚುವರಿ ಸಂಗ್ರಹಣೆಯನ್ನು ಪಡೆದುಕೊಳ್ಳಲು ವಿಫಲರಾದರೆ, ನಿಮ್ಮ ಖಾತೆಯಿಂದ ನಾವು ವಿಷಯವನ್ನು ಅಳಿಸಬಹುದು. ಸಂಗ್ರಹಣೆ ಕೋಟಾಗಳ ಕುರಿತು ಇಲ್ಲಿ.

ಇನ್ನಷ್ಟು ಓದಿ. ಈ ನೀತಿಗಳು ಬದಲಾಗಬಹುದಾದ್ದರಿಂದ ಕಾಲಕಾಲಕ್ಕೆ ಪರಿಶೀಲಿಸುವುದನ್ನು ಮರೆಯದಿರಿ.

ದುರುಪಯೋಗ ವರದಿಮಾಡಿ

ಒಂದು ಖಾತೆಯು ನಮ್ಮ ಪ್ರೋಗ್ರಾಮ್ ನೀತಿಗಳನ್ನು ಉಲ್ಲಂಘಿಸಿದೆ ಎಂದು ನೀವು ಭಾವಿಸಿದರೆ, ಅದನ್ನು ವರದಿ ಮಾಡಲು ಬಹುಸಂಖ್ಯೆಯ ಮಾರ್ಗಗಳಿವೆ:

  • ಸಾಮಾನ್ಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಈ ಫಾರ್ಮ್
  • ಅನ್ನು ಬಳಸಿ
  • ಮಕ್ಕಳ ಪ್ರಚೋದನೆಗೆ ಸಂಬಂಧಿಸಿದಂತೆ ಈ ಫಾರ್ಮ್
  • ಅನ್ನು ಬಳಸಿ
  • ಕೃತಿಸ್ವಾಮ್ಯ ಉಲ್ಲಂಘನೆಗಳಿಗಾಗಿ ಈ ಫಾರ್ಮ್
  • ಅನ್ನು ಬಳಸಿ

ಆಕ್ಷೇಪಾರ್ಹ ನಡವಳಿಕೆಯನ್ನು ನಾವು ಹೇಗೆ ವಿವರಿಸಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕೆಳಗಿನ ನೀತಿಗಳನ್ನು ಓದಲು ಮರೆಯದಿರಿ. ನಮ್ಮ ನೀತಿಗಳನ್ನು ಉಲ್ಲಂಘಿಸುವ ಖಾತೆಗಳನ್ನು Google ನಿರ್ದಾಕ್ಷಿಣ್ಯವಾಗಿ ನಿಷ್ಕ್ರಿಯಗೊಳಿಸುತ್ತದೆ. ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ ಮತ್ತು ಅದನ್ನು ತಪ್ಪು ಎಂದು ನೀವು ಭಾವಿಸಿದ್ದರೆ, ದಯವಿಟ್ಟು ಈ ಪುಟದಲ್ಲಿನ ಸೂಚನೆಗಳನ್ನು ಅನುಸರಿಸಿ.

ಖಾತೆ ನಿಷ್ಕ್ರಿಯತೆ

ಸಕ್ರಿಯವಾಗಿ ಉಳಿದುಕೊಳ್ಳಲು ಉತ್ಪನ್ನವನ್ನು ಬಳಸಿ. ಉತ್ಪನ್ನವನ್ನು ಅಥವಾ ಅದರ ವಿಷಯವನ್ನು ಕನಿಷ್ಟ ಪ್ರತಿ 2 ವರ್ಷಗಳಿಗೆ ಪ್ರವೇಶಿಸುವುದನ್ನು ಚಟುವಟಿಕೆಯು ಒಳಗೊಂಡಿದೆ. ನಾವು ನಿಷ್ಕ್ರಿಯ ಖಾತೆಗಳ ಮೇಲೆ ಕ್ರಮ ಕೈಗೊಳ್ಳಬಹುದು, ಅದು ಉತ್ಪನ್ನದಿಂದ ನಿಮ್ಮ ಸಂದೇಶಗಳನ್ನು ಅಳಿಸುವುದನ್ನು ಒಳಗೊಂಡಿರಬಹುದು. ಇಲ್ಲಿ ಇನ್ನಷ್ಟು ಓದಿ.

ಸ್ಪ್ಯಾಮ್ ಮತ್ತು ದೊಡ್ಡ ಪ್ರಮಾಣದ ಮೇಲ್‌

ಇತರರಿಗೆ ಸ್ಪ್ಯಾಮ್ ಹಂಚಲು ಅಥವಾ ಅನಪೇಕ್ಷಿತ ವಾಣಿಜ್ಯ ಮೇಲ್‌ ಕಳುಹಿಸಲು Gmail ಅನ್ನು ಬಳಸಬೇಡಿ.

CAN-SPAM ಕಾಯ್ದೆ ಅಥವಾ ಇತರ ಸ್ಪ್ಯಾಮ್‌ ವಿರೋಧಿ ಕಾನೂನುಗಳನ್ನು ಉಲ್ಲಂಘಿಸಿ ಇಮೇಲ್‌ ಕಳುಹಿಸಲು; ಮುಕ್ತವಾಗಿ, ಥರ್ಡ್ ಪಾರ್ಟಿ ಸರ್ವರ್‌ಗಳ ಮೂಲಕ ಅನಧಿಕೃತ ಮೇಲ್ ಕಳುಹಿಸಲು; ಅಥವಾ ಯಾವುದೇ ವ್ಯಕ್ತಿಯ ಸಮ್ಮತಿ ಇಲ್ಲದೆಯೇ ಅವರ ಇಮೇಲ್‌ ವಿಳಾಸಗಳನ್ನು ವಿತರಿಸಲು Gmail ಬಳಸುವುದಕ್ಕೆ ನಿಮಗೆ ಅನುಮತಿಸಲಾಗುವುದಿಲ್ಲ.

ಇಮೇಲ್‌ಗಳನ್ನು ಕಳುಹಿಸಲು, ಅಳಿಸಲು ಅಥವಾ ಫಿಲ್ಟರ್ ಮಾಡಲು, ಬಳಕೆದಾರರನ್ನು ವಂಚಿಸುವ ಅಥವಾ ದಾರಿ ತಪ್ಪಿಸುವ ರೀತಿಯಲ್ಲಿ Gmail ಇಂಟರ್‌ಫೇಸ್ ಅನ್ನು ಸ್ವಯಂಚಾಲಿತವಾಗಿಸಲು ನಿಮಗೆ ಅನುಮತಿಸಲಾಗುವುದಿಲ್ಲ.

ನಿಮ್ಮ “ಅನಪೇಕ್ಷಿತ” ಅಥವಾ "ಅನಗತ್ಯ" ಮೇಲ್‌ನ ವ್ಯಾಖ್ಯಾನವು ನಿಮ್ಮ ಇಮೇಲ್ ಸ್ವೀಕೃತದಾರರ ಗ್ರಹಿಕೆಗೆ ಭಿನ್ನವಾಗಿರಬಹುದು ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ಈ ಮೊದಲು ನಿಮ್ಮಿಂದ ಇಮೇಲ್‌ಗಳನ್ನು ಸ್ವೀಕರಿಸಲು ಸ್ವೀಕೃತದಾರರು ಆಯ್ಕೆಗೊಂಡಿದ್ದರೂ ಕೂಡಾ, ದೊಡ್ಡ ಪ್ರಮಾಣದ ಸ್ವೀಕೃತದಾರರಿಗೆ ಇಮೇಲ್‌ ಕಳುಹಿಸುವಾಗ ಹೆಚ್ಚಿನ ಎಚ್ಚರಿಕೆ ಇರಲಿ. Gmail ಬಳಕೆದಾರರು ಇಮೇಲ್‌ಗಳನ್ನು ಸ್ಪ್ಯಾಮ್‌‌ ಎಂದು ಗುರುತಿಸಿದಾಗ, ಇದು ನಮ್ಮ ದುರುಪಯೋಗ ವಿರೋಧಿ ವ್ಯವಸ್ಥೆಯು ನೀವು ಭವಿಷ್ಯದಲ್ಲಿ ಕಳುಹಿಸುವ ಸಂದೇಶಗಳನ್ನು ಕೂಡ ಸ್ಪ್ಯಾಮ್ ವರ್ಗಕ್ಕೆ ಸೇರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಬಹು Gmail ಖಾತೆಗಳ ರಚನೆ ಮತ್ತು ಬಳಕೆ

Google ನೀತಿಗಳನ್ನು ದುರುಪಯೋಗ ಮಾಡಲು, Gmail ಖಾತೆಯ ಮಿತಿಗಳನ್ನು ಮೀರಲು, ಫಿಲ್ಟರ್‌ಗಳನ್ನು ವಂಚಿಸಲು ಅಥವಾ ನಿಮ್ಮ ಖಾತೆಯಲ್ಲಿನ ನಿರ್ಬಂಧಗಳನ್ನು ನಾಶಗೊಳಿಸಲು ಬಹು ಖಾತೆಗಳನ್ನು ರಚಿಸಬೇಡಿ ಅಥವಾ ಬಳಸಬೇಡಿ. (ಉದಾಹರಣೆಗೆ, ದುರುಪಯೋಗದ ಕಾರಣದಿಂದಾಗಿ ಬೇರೆ ಬಳಕೆದಾರರ ಮೂಲಕ ನೀವು ನಿರ್ಬಂಧಿಸಲ್ಪಟ್ಟಿದ್ದರೆ ಅಥವಾ ನಿಮ್ಮ Gmail ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರೆ, ಅಂತಹುದೇ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಬದಲಿ ಖಾತೆಯನ್ನು ರಚಿಸಬೇಡಿ.)

Gmail ಖಾತೆಯನ್ನು ಸ್ವಯಂಚಾಲಿತವಾಗಿ ರಚಿಸಲು ನಿಮಗೆ ಅನುಮತಿ ಇರುವುದಿಲ್ಲ. ಅಂದರೆ ಖರೀದಿ, ಮಾರಾಟ, ಟ್ರೇಡ್‌ ಅಥವಾ ಇತರರಿಗೆ Gmail ಖಾತೆಗಳ ಮರು ಮಾರಾಟ ಮಾಡುವಂತಿಲ್ಲ.

ಮಾಲ್‌ವೇರ್‌

ವೈರಸ್‌ಗಳು, ಮಾಲ್‌ವೇರ್‌ಗಳು, ವರ್ಮ್‌ಗಳು, ದೋಷಗಳು, ಟ್ರೋಜನ್ ಹಾರ್ಸ್‌ಗಳು, ದೋಷಪೂರಿತ ಫೈಲ್‌ಗಳು ಅಥವಾ ವಂಚನೀಯ ಸ್ವಭಾವದ ಯಾವುದೇ ಇತರ ಐಟಂಗಳನ್ನು ಉದ್ದೇಶಪೂರ್ವಕವಾಗಿ ರವಾನಿಸಲು Gmail ಬಳಸಬೇಡಿ. ಹೆಚ್ಚುವರಿಯಾಗಿ, ನೆಟ್‌ವರ್ಕ್‌ಗಳು, ಸರ್ವರ್‌ಗಳ ಕಾರ್ಯಾಚರಣೆಯ ಮೂಲಕ ಹಾನಿಮಾಡುವ ಅಥವಾ ಹಸ್ತಕ್ಷೇಪ ಮಾಡುವ ಅಥವಾ Google ಅಥವಾ ಇತರರಿಗೆ ಸೇರಿದ ಇತರ ಮೂಲಸೌಕರ್ಯಗಳ ವಿಷಯವನ್ನು ವಿತರಿಸಬೇಡಿ.

ವಂಚನೆ, ಫಿಶಿಂಗ್ ಮತ್ತು ಇತರ ವಂಚನೀಯ ಸ್ವಭಾವಗಳು

ನೀವು ಬೇರೆ ಬಳಕೆದಾರರ ಸ್ಪಷ್ಟ ಅನುಮತಿ ಇಲ್ಲದೆಯೇ ಅವರ Gmail ಖಾತೆಯನ್ನು ಪ್ರವೇಶಿಸಲು ಸಾಧ್ಯವಿಲ್ಲ.

ಫಿಶಿಂಗ್‌ಗೆ Gmail ಬಳಸಬೇಡಿ. ಪಾಸ್‌ವರ್ಡ್‌ಗಳು, ಹಣಕಾಸು ವಿವರಗಳು ಮತ್ತು ಸಾಮಾಜಿಕ ಭದ್ರತಾ ಸಂಖ್ಯೆಗಳನ್ನು ಒಳಗೊಂಡ ಆದರೆ ಅಷ್ಟಕ್ಕೇ ಸೀಮಿತವಲ್ಲದ ಸೂಕ್ಷ್ಮ ಡೇಟಾವನ್ನು ವಿನಂತಿಸುವುದು ಮತ್ತು ಸಂಗ್ರಹಿಸುವುದರಿಂದ ದೂರವಿರಿ.

ಸುಳ್ಳು ನೆಪಗಳ ಸಹಾಯದಿಂದ ತಮ್ಮ ಮಾಹಿತಿ ಹಂಚಿಕೊಳ್ಳುವಂತೆ ಇತರ ಬಳಕೆದಾರರನ್ನು ವಂಚಿಸಲು ಅಥವಾ ಅವರ ದಾರಿ ತಪ್ಪಿಸಲು ಸಂದೇಶಗಳನ್ನು ಕಳುಹಿಸಬೇಡಿ. ಮೋಸ ಮಾಡಲು ಅಥವಾ ದಾರಿ ತಪ್ಪಿಸಲು ಬೇರೊಬ್ಬ ವ್ಯಕ್ತಿ, ಕಂಪನಿ ಅಥವಾ ಘಟಕದ ಹಾಗೆ ಸೋಗು ಹಾಕುವುದನ್ನು ಇದು ಒಳಗೊಂಡಿದೆ.

ಮಕ್ಕಳ ಸುರಕ್ಷತೆ

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ Google ನಿರ್ದಾಕ್ಷಿಣ್ಯ ನೀತಿಯನ್ನು ಹೊಂದಿದೆ. ಈ ರೀತಿಯ ವಿಷಯದ ಕುರಿತು ನಮಗೆ ತಿಳಿದುಬಂದರೆ, ಕಾಣೆಯಾದ ಮತ್ತು ಶೋಷಣೆಗೊಳಗಾದ ಮಕ್ಕಳ ರಾಷ್ಟ್ರೀಯ ಕೇಂದ್ರಕ್ಕೆ ನಾವು ದೂರು ನೀಡುವುದು ಒಳಗೊಂಡಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಅಂತಹ ಚಟುವಟಿಕೆಯಲ್ಲಿ ತೊಡಗಿರುವ Google ಖಾತೆಗಳ ವಿರುದ್ಧ ವಜಾಗೊಳಿಸುವುದು ಸೇರಿದಂತೆ, ಶಿಸ್ತು ಕ್ರಮ ಕೈಗೊಳ್ಳಬಹುದು.

Gmail ಬಳಸಿ ಮಕ್ಕಳ ಪ್ರಚೋದನೆ ಮಾಡುವುದನ್ನು Google ನಿಷೇಧಿಸುತ್ತದೆ, ಮಕ್ಕಳ ಪ್ರಚೋದನೆಯನ್ನು ಲೈಂಗಿಕ ಕಿರುಕುಳ, ಕಳ್ಳಸಾಗಣೆ ಅಥವಾ ಇತರ ಶೋಷಣೆಯ ಮೂಲಕ ಮಕ್ಕಳ ಪ್ರತಿಬಂಧಕ ಶಕ್ತಿಯನ್ನು ಕಡಿಮೆ ಮಾಡಲು ಮಗುವಿನೊಂದಿಗೆ ಸಂಪರ್ಕವನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಕ್ರಿಯೆಗಳ ಒಂದು ಸೆಟ್ ಎಂದು ವಿವರಿಸಲಾಗಿದೆ.

ಮಗುವಿಗೆ ಅಪಾಯವಿದೆ ಅಥವಾ ದುರುಪಯೋಗ, ಶೋಷಣೆ ಹಾಗೂ ಕಳ್ಳಸಾಗಣೆಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ತಕ್ಷಣ ನಿಮ್ಮ ಸ್ಥಳೀಯ ಕಾನೂನು ಜಾರಿಗೊಳಿಸುವವರನ್ನು ಸಂಪರ್ಕಿಸಿ.

ನೀವು ಈಗಾಗಲೇ ಕಾನೂನು ಜಾರಿಗೊಳಿಸುವ ವರದಿಯನ್ನು ಮಾಡಿದ್ದರೆ ಮತ್ತು ಇನ್ನೂ ಸಹಾಯದ ಅಗತ್ಯವಿದ್ದರೆ ಅಥವಾ Gmail ಬಳಸಿಕೊಂಡು ಮಗುವು ಅಪಾಯಕ್ಕೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಈ ವರ್ತನೆಯ ಕುರಿತು ಈ ಫಾರ್ಮ್ ಬಳಸಿಕೊಂಡು ನೀವು Google ಗೆ ವರದಿ ಮಾಡಬಹುದು. ನಿಮ್ಮನ್ನು Gmail ಮೂಲಕ ಸಂಪರ್ಕಿಸಬಾರದು ಎಂದು ನೀವು ಬಯಸುವ ಯಾವುದೇ ವ್ಯಕ್ತಿಯನ್ನು ಯಾವಾಗಲೂ ನಿರ್ಬಂಧಿಸಬಹುದು ಎಂಬುದನ್ನು ನೆನಪಿಡಿ.

ಕೃತಿಸ್ವಾಮ್ಯ

ಕೃತಿಸ್ವಾಮ್ಯ ಕಾನೂನುಗಳನ್ನು ಗೌರವಿಸಿ. ಕೃತಿಸ್ವಾಮ್ಯ, ಟ್ರೇಡ್‌ಮಾರ್ಕ್, ವ್ಯಾಪಾರ ರಹಸ್ಯ ಅಥವಾ ಇತರ ಮಾಲೀಕತ್ವದ ಹಕ್ಕುಗಳು ಸೇರಿದಂತೆ ಇತರರ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಬೇಡಿ. ಬೌದ್ಧಿಕ ಆಸ್ತಿ ಹಕ್ಕುಗಳ ಉಲ್ಲಂಘನೆಯನ್ನು ಪ್ರೋತ್ಸಾಹಿಸಲು ಅಥವಾ ಇತರರನ್ನು ಪ್ರೇರೇಪಿಸಲು ಸಹ ನಿಮಗೆ ಅನುಮತಿಸಲಾಗುವುದಿಲ್ಲ. ಕೃತಿಸ್ವಾಮ್ಯ ಉಲ್ಲಂಘನೆ ಕುರಿತು ನೀವು ಈ ಫಾರ್ಮ್ ಬಳಸಿಕೊಂಡು Google ಗೆ ವರದಿ ಮಾಡಬಹುದು.

ಕಿರುಕುಳ

ಇತರರಿಗೆ ಕಿರುಕುಳ ನೀಡಲು, ಹೆದರಿಸಲು ಅಥವಾ ಬೆದರಿಸಲು Gmail ಬಳಸಬೇಡಿ. ಯಾರಾದರೂ ಈ ಉದ್ದೇಶಗಳಿಗೆ Gmail ಬಳಸುವುದು ಕಂಡುಬಂದರೆ ಅವರ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.

ಅಕ್ರಮ ಚಟುವಟಿಕೆ

ಕಾನೂನುಬದ್ಧವಾಗಿ ಇರಿಸಿ. ಪ್ರಚಾರ ಮಾಡಲು ಅಥವಾ ಸಂಘಟಿಸಲು ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು Gmail ಬಳಸಬೇಡಿ.