ಪರಿಚಯ

ಪ್ರಪಂಚದ ಮಾಹಿತಿಯನ್ನು ಆಯೋಜಿಸುವುದು ಹಾಗೂ ಅದನ್ನು ಜಾಗತಿಕವಾಗಿ ಲಭ್ಯವಾಗುವಂತೆ ಮಾಡುವುದು ಮತ್ತು ಉಪಯುಕ್ತವಾಗಿಸುವುದು Google ನ ಧ್ಯೇಯವಾಗಿದೆ. ಆ ಕಾರ್ಯಾಚರಣೆಯಲ್ಲಿ ಸ್ಥಳದ ಮಾಹಿತಿಯು ಪ್ರಮುಖ ಪಾತ್ರ ವಹಿಸುತ್ತದೆ. ಡ್ರೈವಿಂಗ್ ನಿರ್ದೇಶನಗಳನ್ನು ಒದಗಿಸುವುದು, ನಿಮ್ಮ ಹುಡುಕಾಟಗಳಲ್ಲಿ ನಿಮ್ಮ ಸಮೀಪದ ಸಂಗತಿಗಳು ಒಳಗೊಂಡಿವೆ ಎಂಬುದನ್ನು ಖಚಿತಪಡಿಸುವುದು, ಒಂದು ರೆಸ್ಟೋರೆಂಟ್ ಯಾವಾಗ ಜನಭರಿತವಾಗಿರುತ್ತದೆ ಎಂಬುದನ್ನು ನಿಮಗೆ ತೋರಿಸುವುದು, ಮುಂತಾದ ವಿಚಾರಗಳಲ್ಲಿ ಸ್ಥಳ ಮಾಹಿತಿಯು Google ನಾದ್ಯಂತ ನಿಮ್ಮ ಅನುಭವಗಳನ್ನು ಇನ್ನಷ್ಟು ಸೂಕ್ತ ಹಾಗೂ ಉಪಯುಕ್ತಗೊಳಿಸಬಹುದು.

ಸ್ಥಳ ಮಾಹಿತಿಯು, ಉತ್ಪನ್ನಕ್ಕೆ ಸಂಬಂಧಿಸಿದ ಕೆಲವೊಂದು ಪ್ರಮುಖ ಕಾರ್ಯಾಚರಣೆಗಳಲ್ಲಿಯೂ ನೆರವಾಗಬಹುದು. ಉದಾಹರಣೆಗೆ, ವೆಬ್‌ಸೈಟ್ ಅನ್ನು ಸರಿಯಾದ ಭಾಷೆಯಲ್ಲಿ ಒದಗಿಸುವುದು ಅಥವಾ Google ನ ಸೇವೆಗಳನ್ನು ಸುರಕ್ಷಿತವಾಗಿರಿಸುವುದಕ್ಕೆ ನೆರವಾಗುವುದು.

ನೀವು Google ನ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವಾಗ ಸ್ಥಳ ಮಾಹಿತಿ ಸೇರಿದಂತೆ ಡೇಟಾವನ್ನು ಹೇಗೆ ಬಳಸುತ್ತದೆ ಎಂಬುದನ್ನು Google ಗೌಪ್ಯತಾ ನೀತಿಯು ವಿವರಿಸುತ್ತದೆ. ಈ ಪುಟವು Google ನಿಂದ ಬಳಸಲಾದ ಸ್ಥಳ ಮಾಹಿತಿಯ ಕುರಿತು ಹಾಗೂ ಅದನ್ನು ಬಳಸಬಹುದಾದ ವಿಧಾನಗಳನ್ನು ನೀವು ಹೇಗೆ ನಿಯಂತ್ರಿಸಬಹುದು ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ಒದಗಿಸುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಕೆಲವು ಡೇಟಾ ನಿರ್ವಹಣಾ ಅಭ್ಯಾಸಗಳು ಭಿನ್ನವಾಗಿರಬಹುದು. ಮಕ್ಕಳಿಗಾಗಿ Family Link ಮೂಲಕ ನಿರ್ವಹಿಸಲಾದ Google ಖಾತೆಗಳು ಮತ್ತು ಪ್ರೊಫೈಲ್‌ಗಳಿಗಾಗಿ Google ನ ಗೌಪ್ಯತೆ ಸೂಚನೆ ಹಾಗೂ Google ನ ಹದಿಹರೆಯದವರ ಗೌಪ್ಯತಾ ಮಾರ್ಗದರ್ಶಿಯಲ್ಲಿ ಇನ್ನಷ್ಟು ತಿಳಿಯಿರಿ.

Google, ಸ್ಥಳದ ಮಾಹಿತಿಯನ್ನು ಹೇಗೆ ಬಳಸುತ್ತದೆ?

ಬಳಸಲಾಗುತ್ತಿರುವ ಸೇವೆ ಅಥವಾ ಫೀಚರ್, ಮತ್ತು ಜನರ ಸಾಧನ ಹಾಗೂ ಖಾತೆಯ ಸೆಟ್ಟಿಂಗ್‌ಗಳನ್ನು ಆಧರಿಸಿ, ಸ್ಥಳದ ಮಾಹಿತಿಯನ್ನು Google ಹೇಗೆ ಬಳಸುತ್ತದೆ ಎಂಬುದರಲ್ಲಿ ವ್ಯತ್ಯಾಸವಿರುತ್ತದೆ. Google, ಸ್ಥಳದ ಮಾಹಿತಿಯನ್ನು ಬಳಸಬಹುದಾದ ಕೆಲವು ಪ್ರಮುಖ ವಿಧಗಳು ಹೀಗಿವೆ.

ಅನುಭವಗಳನ್ನು ಉಪಯುಕ್ತವಾಗಿಸಲು

Google ಉತ್ಪನ್ನಗಳೊಂದಿಗೆ ಸಂವಹನ ನಡೆಸುವಾಗ, ಜನರಿಗೆ ಉಪಯುಕ್ತ ಸೇವೆಗಳನ್ನು ಒದಗಿಸಲು Google ಸ್ಥಳ ಮಾಹಿತಿಯನ್ನು ಬಳಸಬಹುದು ಅಥವಾ ಸೇವ್ ಮಾಡಬಹುದು, ಉದಾಹರಣೆಗೆ ಸ್ಥಳೀಯವಾಗಿ ಸಂಬಂಧಿತ ಮತ್ತು ವೇಗವಾದ ಹುಡುಕಾಟ ಫಲಿತಾಂಶಗಳನ್ನು ಜನರಿಗೆ ಒದಗಿಸುವುದು, ಆಗಾಗ್ಗೆ ದೈನಂದಿನ ಪ್ರಯಾಣಕ್ಕಾಗಿ ಟ್ರಾಫಿಕ್ ಮುನ್ನೋಟಗಳು ಮತ್ತು ವ್ಯಕ್ತಿಯ ಪರಿಸ್ಥಿತಿಯ ಆಧಾರದ ಮೇಲೆ ಸೂಕ್ತವಾದ ಶಿಫಾರಸುಗಳನ್ನು ಒದಗಿಸುವುದು. ಉದಾಹರಣೆಗೆ, ಚಲನಚಿತ್ರ ಪ್ರದರ್ಶನದ ಸಮಯವನ್ನು ಹುಡುಕುವ ಯಾರಾದರೂ ಬೇರೆ ನಗರದಲ್ಲಿ ನೋಡುವುದಕ್ಕಿಂತ ಹೆಚ್ಚಾಗಿ ಅವರ ನೆರೆಹೊರೆಯ ಚಿತ್ರಮಂದಿರಗಳಲ್ಲಿ ಚಲನಚಿತ್ರಗಳನ್ನು ನೋಡಲು ಬಯಸಬಹುದು. Google Maps ನಲ್ಲಿನ ಸ್ಥಳದ ಮಾಹಿತಿಯು ಜನರು ನಕ್ಷೆಯಲ್ಲಿ ತಮ್ಮ ಸ್ಥಳವನ್ನು ಹುಡುಕಲು ಮತ್ತು ಅವರು ಭೇಟಿ ನೀಡಲು ಬಯಸುವ ಸ್ಥಳಗಳಿಗೆ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.

ಜನರು ತಾವು ಹೋಗಿರುವ ಸ್ಥಳಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಸಹಾಯ ಮಾಡಲು

ಜನರು ತಮ್ಮ ಸಾಧನದೊಂದಿಗೆ ಹೋಗಿರುವ ಸ್ಥಳಗಳನ್ನು ನೆನಪಿಟ್ಟುಕೊಳ್ಳಲು ಟೈಮ್‌ಲೈನ್ ಅನ್ನು ಬಳಸಲು ಆಯ್ಕೆ ಮಾಡಬಹುದು. ಟೈಮ್‌ಲೈನ್ ಅನ್ನು ಬಳಸಲು, ಜನರು ಸ್ಥಳ ಇತಿಹಾಸವನ್ನು ಆನ್ ಮಾಡಬಹುದು, ಇದು Google ಖಾತೆಯ ಸೆಟ್ಟಿಂಗ್ ಆಗಿದ್ದು, ಇದು ಅವರು ಭೇಟಿ ನೀಡಿದ ಸ್ಥಳಗಳು ಮತ್ತು ಅವರು ಪ್ರಯಾಣಿಸಿದ ಮಾರ್ಗಗಳ ವೈಯಕ್ತಿಕ ನಕ್ಷೆಯನ್ನು ರಚಿಸುತ್ತದೆ. ನೀವು ಸ್ಥಳ ಇತಿಹಾಸವನ್ನು ಬಳಸಲು ಆಯ್ಕೆ ಮಾಡಿದರೆ, ನೀವು Google ಆ್ಯಪ್‌ಗಳನ್ನು ಅನ್ನು ತೆರೆದಿರದಿದ್ದರೂ ಸಹ ನಿಮ್ಮ ಸಾಧನದ ನಿಖರವಾದ ಸ್ಥಳಗಳನ್ನು ವೈಯಕ್ತಿಕ ನಕ್ಷೆಯಲ್ಲಿ ಸೇವ್ ಮಾಡಲಾಗುತ್ತದೆ. ಈ ಮಾಹಿತಿಯನ್ನು ಟೈಮ್‌ಲೈನ್‌ನಲ್ಲಿ ವೀಕ್ಷಿಸಬಹುದು ಮತ್ತು ಅಳಿಸಬಹುದು.

ವಿಷಯಗಳನ್ನು ವೇಗವಾಗಿ ಹುಡುಕಲು ಮತ್ತು ಹೆಚ್ಚು ಸಹಾಯಕವಾದ ಫಲಿತಾಂಶಗಳನ್ನು ಪಡೆಯುವುದಕ್ಕೆ ಜನರಿಗೆ ಸಹಾಯ ಮಾಡಲು

ಉದಾಹರಣೆಗೆ, ವೆಬ್ ಮತ್ತು ಆ್ಯಪ್‌ ಚಟುವಟಿಕೆ ಎಂಬುದು, ಜನರು Google ಸೇವೆಗಳಾದ್ಯಂತ ಸೈನ್ ಇನ್ ಮಾಡಿರುವಾಗ ತಮ್ಮ ಅನುಭವವನ್ನು ಹೆಚ್ಚು ವೈಯಕ್ತಿಕಗೊಳಿಸಲು ಸಾಧ್ಯವಾಗಿಸುವುದಕ್ಕಾಗಿ, ತಮ್ಮ ಚಟುವಟಿಕೆ ಡೇಟಾ ಮತ್ತು ಸ್ಥಳದಂತಹ ಸಂಬಂಧಿತ ಮಾಹಿತಿಯನ್ನು ಸೇವ್ ಮಾಡಲು ಅನುಮತಿಸುವ Google ಖಾತೆ ಸೆಟ್ಟಿಂಗ್ ಆಗಿದೆ. ಉದಾಹರಣೆಗೆ, ನೀವು ಈ ಹಿಂದೆ ಹುಡುಕಿದ, ಸಾಮಾನ್ಯ ಪ್ರದೇಶಕ್ಕೆ ಪ್ರಸ್ತುತವಾದ ಫಲಿತಾಂಶಗಳನ್ನು Search ತೋರಿಸಬಹುದು.

ಹೆಚ್ಚು ಪ್ರಸ್ತುತವಾದ ಆ್ಯಡ್‌ಗಳನ್ನು ತೋರಿಸಲು

ನಿಮ್ಮ ಸ್ಥಳದ ಮಾಹಿತಿಯು, ನಿಮಗೆ ಇನ್ನಷ್ಟು ಪ್ರಸ್ತುತವಾದ ಆ್ಯಡ್‌ಗಳನ್ನು ತೋರಿಸಲು Google ಗೆ ಸಹಾಯ ಮಾಡಬಹುದು. "ನನ್ನ ಸಮೀಪದಲ್ಲಿರುವ ಶೂ ಸ್ಟೋರ್‌ಗಳು" ಎಂಬಂತಹ ಏನನ್ನಾದರೂ ನೀವು ಹುಡುಕಿದಾಗ, ನಿಮ್ಮ ಸಮೀಪದ ಶೂ ಸ್ಟೋರ್‌ಗಳಿಗೆ ಸಂಬಂಧಿಸಿದ ಆ್ಯಡ್‌ಗಳನ್ನು ನಿಮಗೆ ತೋರಿಸಲು ಸ್ಥಳದ ಮಾಹಿತಿಯನ್ನು ಬಳಸಬಹುದಾಗಿದೆ. ಅಥವಾ, ನೀವು ಪೆಟ್ ಇನ್ಶೂರೆನ್ಸ್ ಕುರಿತು ಹುಡುಕಾಟ ನಡೆಸುತ್ತಿದ್ದೀರಿ ಅಂದುಕೊಳ್ಳೋಣ, ಆಗ ಜಾಹೀರಾತುದಾರರು ನಿಮಗೆ ಬೇರೆ ಬೇರೆ ಪ್ರದೇಶಗಳಲ್ಲಿ ದೊರೆಯುವ ಬೇರೆ ಬೇರೆ ಸೌಲಭ್ಯಗಳನ್ನು ತೋರಿಸಬಹುದು. ಆ್ಯಡ್‌ಗಳನ್ನು ತೋರಿಸಲು ಸ್ಥಳದ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಅನುಭವಗಳನ್ನು ಹೆಚ್ಚು ಸುರಕ್ಷಿತವಾಗಿಸಲು

ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಕೆಲವು ಮೂಲಭೂತ ಸೇವೆಗಳನ್ನು ಒದಗಿಸಲು Google ನಿಮ್ಮ ಸ್ಥಳದ ಮಾಹಿತಿಯನ್ನು ಬಳಸುತ್ತದೆ, ಉದಾಹರಣೆಗೆ ಅಸಾಮಾನ್ಯ ಚಟುವಟಿಕೆಯನ್ನು ಪತ್ತೆಹಚ್ಚುವುದು ಅಥವಾ ನೀವು ಹೊಸ ನಗರದಿಂದ ಸೈನ್-ಇನ್ ಮಾಡಿದಾಗ ಪತ್ತೆ ಮಾಡುವುದು.

ಅನಾಮಧೇಯ ಸಮುದಾಯ ಟ್ರೆಂಡ್‌ಗಳು, ಅಂದಾಜುಗಳನ್ನು ತೋರಿಸಲು ಮತ್ತು ಸಂಶೋಧನೆಗಾಗಿ

ಸಂಶೋಧನೆಗಾಗಿ ಮತ್ತು ಸಮುದಾಯದ ಟ್ರೆಂಡ್‌ಗಳನ್ನು ತೋರಿಸಲು Google ಕೂಡ ಒಟ್ಟುಗೂಡಿಸಿದ, ಅನಾಮಧೇಯ ಸ್ಥಳ ಮಾಹಿತಿಯನ್ನು ಬಳಸುತ್ತದೆ.

ಸ್ಥಳದ ಮಾಹಿತಿಯನ್ನು ಬಳಸುವ ಇನ್ನಷ್ಟು ವಿಧಗಳನ್ನು ನೋಡಲು, Google ಗೌಪ್ಯತೆ ನೀತಿಯನ್ನು ನೋಡಿ.

ನನ್ನ Android ಸಾಧನ ಮತ್ತು ಆ್ಯಪ್‌ಗಳಲ್ಲಿ ಸ್ಥಳ ಹೇಗೆ ಕೆಲಸ ಮಾಡುತ್ತದೆ?

ನಿಮ್ಮ ಸಾಧನದ ಸ್ಥಳವನ್ನು ಬಳಸಿಕೊಂಡು ನೀವು, ಸ್ಥಳೀಯ ಹುಡುಕಾಟ ಫಲಿತಾಂಶಗಳು, ಪ್ರತಿನಿತ್ಯದ ಪ್ರಯಾಣಕ್ಕಾಗಿ ಮುನ್ನೋಟಗಳನ್ನು ಪಡೆಯಬಹುದು ಮತ್ತು ಸಮೀಪದಲ್ಲಿರುವ ರೆಸ್ಟೋರೆಂಟ್‌ಗಳನ್ನು ಹುಡುಕಬಹುದು. ನಿಮ್ಮ ಸಾಧನದಲ್ಲಿನ ಸ್ಥಾನ ಸೇವೆಗಳು ಸ್ಥಳವನ್ನು ಅಂದಾಜಿಸುತ್ತವೆಯೇ, ಮತ್ತು ನಿಮ್ಮ ಸಾಧನದಲ್ಲಿರುವ ಆ್ಯಪ್‌ಗಳು ಹಾಗೂ ಸೇವೆಗಳು ಸಾಧನದ ಸ್ಥಳವನ್ನು ಬಳಸಬಹುದೇ ಮತ್ತು ಹೇಗೆ ಬಳಸಬಹುದು ಎಂಬುದನ್ನು ನಿಯಂತ್ರಿಸಲು, ನಿಮ್ಮ ಮೊಬೈಲ್ ಫೋನ್‌ಗಳು ಅಥವಾ ಟ್ಯಾಬ್ಲೆಟ್‌ಗಳಿಗಾಗಿ Android ಸಾಧನದ ಸೆಟ್ಟಿಂಗ್‌ಗಳು ನಿಮಗೆ ಅವಕಾಶ ನೀಡುತ್ತವೆ.

ಸಾಧನ ಸ್ಥಳದ ಆ್ಯಪ್‌ಗಳ ಬಳಕೆಯನ್ನು ನೀವು ಹೇಗೆ ನಿಯಂತ್ರಿಸಬಹುದು ಎಂಬುದು

ಸಾಧನದ ಸ್ಥಳವನ್ನು ಬಳಸಲು ಯಾವ ಆ್ಯಪ್‌ಗಳಿಗೆ ಅನುಮತಿಯಿದೆ ಎಂಬುದನ್ನು, ನಿಮ್ಮ Android ಸಾಧನದ ಸೆಟ್ಟಿಂಗ್‌ಗಳಲ್ಲಿ ನೀವು ನಿಯಂತ್ರಿಸಬಹುದು. ಆ್ಯಪ್, ನಿಖರವಾದ ಸ್ಥಳವನ್ನು ಆ್ಯಕ್ಸೆಸ್ ಮಾಡಬಹುದೇ ಅಥವಾ ಅಂದಾಜು ಸ್ಥಳವನ್ನು ಆ್ಯಕ್ಸೆಸ್ ಮಾಡಬಹುದೇ ಎಂಬುದನ್ನು ಆಯ್ಕೆ ಮಾಡಲು, ಸೆಟ್ಟಿಂಗ್‌ಗಳಲ್ಲಿ ನಿಮಗೆ ನಿಯಂತ್ರಣಗಳು ಲಭ್ಯವಿವೆ. ಆ್ಯಪ್, ಸಾಧನದ ಸ್ಥಳವನ್ನು ಯಾವಾಗ ಬೇಕಾದರೂ ಆ್ಯಕ್ಸೆಸ್ ಮಾಡಬಹುದೇ ಅಥವಾ ಆ್ಯಪ್ ಬಳಕೆಯಲ್ಲಿರುವಾಗ ಮಾತ್ರ ಆ್ಯಕ್ಸೆಸ್ ಮಾಡಬಹುದೇ, ಆ್ಯಪ್ ಪ್ರತಿ ಬಾರಿ ಅನುಮತಿ ಕೇಳಬೇಕೇ, ಅಥವಾ ಎಂದೂ ಅನುಮತಿ ಕೇಳುವ ಅಗತ್ಯವಿಲ್ಲವೇ ಎಂಬುದನ್ನು ನಿರ್ಧರಿಸಲು ನಿಮಗೆ ಅನುವು ಮಾಡಿಕೊಡುವಂತಹ ನಿಯಂತ್ರಣಗಳನ್ನು ನಾವು ಸೇರಿಸಿದ್ದೇವೆ. ಈ ಸೆಟ್ಟಿಂಗ್‌ಗಳು ಹಾಗೂ ನಿಯಂತ್ರಣಗಳು, ನಿಮ್ಮ ಸಾಧನವು ಯಾವ Android ಆವೃತ್ತಿಯಲ್ಲಿ ರನ್ ಆಗುತ್ತಿದೆ ಎಂಬುದನ್ನು ಅವಲಂಬಿಸಿರುತ್ತವೆ. ಇನ್ನಷ್ಟು ತಿಳಿಯಿರಿ.

ಸಾಧನದ ಸ್ಥಳವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು

ನಿಮ್ಮ ಸಾಧನದ ಸೆಟ್ಟಿಂಗ್‌ಗಳನ್ನು ಅವಲಂಬಿಸಿ, GPS, ಸೆನ್ಸರ್‌ಗಳು (ಉದಾಹರಣೆಗೆ ವೇಗೋತ್ಕರ್ಷಕ ಮಾಪಕ, ಗೈರೊಸ್ಕೋಪ್, ಮ್ಯಾಗ್ನೆಟೊಮೀಟರ್ ಮತ್ತು ಬ್ಯಾರೋಮೀಟರ್), ಮೊಬೈಲ್ ನೆಟ್‌ವರ್ಕ್ ಸಿಗ್ನಲ್‌ಗಳು ಹಾಗೂ ವೈ-ಫೈ ಸಿಗ್ನಲ್‌ಗಳು ಸೇರಿದಂತೆ ವಿವಿಧ ಇನ್‌ಪುಟ್‌ಗಳನ್ನು ಬಳಸಿ Android ಸಾಧನಗಳು ಸ್ಥಳವನ್ನು ಅಂದಾಜಿಸುತ್ತವೆ. ಸಾಧ್ಯವಾದಷ್ಟು ನಿಖರವಾದ ಸ್ಥಳವನ್ನು ಅಂದಾಜಿಸಲು ಈ ಇನ್‌ಪುಟ್‌ಗಳನ್ನು ಬಳಸಬಹುದು, ಮತ್ತು ಅಗತ್ಯ ಅನುಮತಿಗಳನ್ನು ಹೊಂದಿರುವ, ಸಾಧನದಲ್ಲಿನ ಆ್ಯಪ್‌ಗಳು ಹಾಗೂ ಸೇವೆಗಳಿಗೆ ಈ ಸ್ಥಳದ ಮಾಹಿತಿಯನ್ನು ಒದಗಿಸಲಾಗುತ್ತದೆ. ನಿಮ್ಮ Android ಸಾಧನದ ಸ್ಥಾನ ಸೆಟ್ಟಿಂಗ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಹೆಚ್ಚು ನಿಬಿಡವಾದ ಪಟ್ಟಣ ಪ್ರದೇಶಗಳಲ್ಲಿ ಅಥವಾ ಒಳಾಂಗಣದಲ್ಲಿರುವಾಗಲೂ ಸೇರಿದಂತೆ, ವಿಶೇಷವಾಗಿ GPS ಸಿಗ್ನಲ್‌ಗಳು ಲಭ್ಯವಿಲ್ಲದ ಅಥವಾ ನಿಖರವಾಗಿರದ ಪರಿಸರದಲ್ಲಿ, ಸಾಧನದ ಸ್ಥಳವನ್ನು ಅಂದಾಜಿಸಲು ಮೊಬೈಲ್ ಮತ್ತು ವೈ-ಫೈ ನೆಟ್‌ವರ್ಕ್ ಸಿಗ್ನಲ್‌ಗಳು Android ಗೆ ಸಹಾಯ ಮಾಡಬಲ್ಲವು. Google ಸ್ಥಳ ನಿಖರತೆ (GLA, ಇದನ್ನು Google ಸ್ಥಳ ಸೇವೆಗಳು ಎಂದೂ ಕರೆಯಲಾಗುತ್ತದೆ) ಎಂಬುದು, ಸ್ಥಳದ ಕುರಿತಾಗಿ ಸಾಧನದ ಅಂದಾಜನ್ನು ಸುಧಾರಿಸಲು ಈ ಸಿಗ್ನಲ್‌ಗಳನ್ನು ಬಳಸುವ Google ಸೇವೆಯಾಗಿದೆ.

ಈ ಹೆಚ್ಚು ನಿಖರವಾದ ಸ್ಥಳವನ್ನು ಒದಗಿಸುವುದಕ್ಕಾಗಿ, GLA ಆನ್ ಆಗಿದ್ದಾಗ, ಅದು ನಿಮ್ಮ Android ಸಾಧನದಿಂದ GPS ಮತ್ತು ವೈ-ಫೈ ಆ್ಯಕ್ಸೆಸ್ ಪಾಯಿಂಟ್‌ಗಳ ಮಾಹಿತಿ, ಮೊಬೈಲ್ ನೆಟ್‌ವರ್ಕ್‌ಗಳು ಹಾಗೂ ಸಾಧನದ ಸೆನ್ಸರ್‌ಗಳು ಒಳಗೊಂಡಂತೆ ಸ್ಥಳದ ಮಾಹಿತಿಯನ್ನು ನಿಯಮಿತವಾಗಿ ಸಂಗ್ರಹಿಸುತ್ತದೆ— ಇದಕ್ಕಾಗಿ, ಯಾವುದೇ ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿರದ ತಾತ್ಕಾಲಿಕ, ರೊಟೇಟಿಂಗ್ ಡಿವೈಸ್ ಐಡೆಂಟಿಫೈಯರ್ ಅನ್ನು ಬಳಸಲಾಗುತ್ತದೆ. ವೈ-ಫೈ ಆ್ಯಕ್ಸೆಸ್ ಪಾಯಿಂಟ್‌ಗಳು ಮತ್ತು ಮೊಬೈಲ್ ನೆಟ್‌ವರ್ಕ್ ಟವರ್‌ಗಳ, ಕ್ರೌಡ್‌ಸೋರ್ಸ್ ಮಾಡಿದ ನಕ್ಷೆಗಳನ್ನು ನಿರ್ಮಿಸುವುದರ ಮೂಲಕವೂ ಸೇರಿದಂತೆ, ಸ್ಥಳದ ನಿಖರತೆಯನ್ನು ಸುಧಾರಿಸಲು ಮತ್ತು ಸ್ಥಳ-ಆಧಾರಿತ ಸೇವೆಗಳನ್ನು ಒದಗಿಸಲು GLA ಈ ಮಾಹಿತಿಯನ್ನು ಬಳಸುತ್ತದೆ.

ನಿಮ್ಮ Android ಸಾಧನದ ಸ್ಥಾನ ಸೆಟ್ಟಿಂಗ್‌ಗಳಲ್ಲಿ ನೀವು GLA ಅನ್ನು ಯಾವಾಗ ಬೇಕಾದರೂ ಆಫ್ ಮಾಡಬಹುದು. GLA ಅನ್ನು ಆಫ್ ಮಾಡಿದರೂ ಸಹ, ನಿಮ್ಮ Android ಸಾಧನದ ಸ್ಥಳ ಕೆಲಸ ಮಾಡುತ್ತದೆ, ಮತ್ತು ಸಾಧನದ ಸ್ಥಳವನ್ನು ಅಂದಾಜಿಸುವುದಕ್ಕಾಗಿ ಸಾಧನವು ಕೇವಲ GPS ಹಾಗೂ ಸಾಧನದ ಸೆನ್ಸರ್‌ಗಳನ್ನು ಅವಲಂಬಿಸುತ್ತದೆ.

Google ನನ್ನ ಸ್ಥಳವನ್ನು ಹೇಗೆ ಕಂಡುಹಿಡಿಯುತ್ತದೆ?

ನೀವು ಬಳಸುತ್ತಿರುವ ಉತ್ಪನ್ನಗಳು ಮತ್ತು ಆಯ್ಕೆ ಮಾಡುವ ಸೆಟ್ಟಿಂಗ್‌ಗಳನ್ನು ಆಧರಿಸಿ, ನೀವು ಬಳಸುವ ಕೆಲವೊಂದು ಸೇವೆಗಳು ಹಾಗೂ ಉತ್ಪನ್ನಗಳನ್ನು ಮತ್ತಷ್ಟು ಉಪಯುಕ್ತಗೊಳಿಸುವುದಕ್ಕಾಗಿ Google ವಿವಿಧ ರೀತಿಯ ಸ್ಥಳ ಮಾಹಿತಿಯನ್ನು ಬಳಸಬಹುದು.

ಈ ಸ್ಥಳ ಮಾಹಿತಿಯು ನೈಜ-ಸಮಯದ ಸಿಗ್ನಲ್‌ಗಳಿಂದ, ಉದಾಹರಣೆಗೆ ನಿಮ್ಮ IP ವಿಳಾಸ ಅಥವಾ ನಿಮ್ಮ ಸಾಧನದಿಂದ, ಮತ್ತು Google ಸೈಟ್‌ಗಳು ಹಾಗೂ ಸೇವೆಗಳಲ್ಲಿ ನೀವು ಸೇವ್ ಮಾಡಿದ ಚಟುವಟಿಕೆಯಿಂದ ಬರಬಹುದು. ನಿಮ್ಮ ಸ್ಥಳದ ಕುರಿತಾಗಿ Google ಮಾಹಿತಿ ಪಡೆದುಕೊಳ್ಳಬಹುದಾದ ಮುಖ್ಯ ವಿಧಗಳು ಹೀಗಿವೆ.

ನಿಮ್ಮ IP ವಿಳಾಸದಿಂದ

ಇಂಟರ್ನೆಟ್ ಪ್ರೋಟೋಕಾಲ್ ವಿಳಾಸ ಎಂದೂ ಕರೆಯಲಾಗುವ IP ವಿಳಾಸವು ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರು ನಿಮ್ಮ ಕಂಪ್ಯೂಟರ್ ಅಥವಾ ಸಾಧನಕ್ಕೆ ನಿಯೋಜಿಸಲಾದ ಸಂಖ್ಯೆಯಾಗಿದೆ. ನಿಮ್ಮ ಸಾಧನಗಳು ಮತ್ತು ನೀವು ಬಳಸುವ ವೆಬ್‌ಸೈಟ್‌ಗಳು ಹಾಗೂ ಸೇವೆಗಳ ನಡುವಿನ ಕನೆಕ್ಷನ್ ಅನ್ನು ಮಾಡಲು IP ವಿಳಾಸಗಳನ್ನು ಬಳಸಲಾಗುತ್ತದೆ.

ಇತರ ಅನೇಕ ಇಂಟರ್ನೆಟ್ ಸೇವೆಗಳ ಹಾಗೆ —ಸೂಕ್ತ ಫಲಿತಾಂಶಗಳನ್ನು ಒದಗಿಸಲು, ಉದಾಹರಣೆಗೆ, ಸಮಯ ಎಷ್ಟಾಯಿತೆಂದು ಕೇಳಿ ಯಾರಾದರೂ ಹುಡುಕಾಟ ನಡೆಸಿದಾಗ, ಅಥವಾ ಹೊಸ ನಗರದಿಂದ ಸೈನ್ ಇನ್ ಮಾಡಿರುವುದರ ಹಾಗೆ ಅಸಹಜ ಚಟುವಟಿಕೆಯನ್ನು ಗುರುತಿಸುವ ಮೂಲಕ ನಿಮ್ಮ ಖಾತೆಯನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವಂತಹ ಪ್ರಾಥಮಿಕ ಸೇವೆಗಳನ್ನು ಒದಗಿಸಲು, ನೀವು ಇರುವ ಸಾಮಾನ್ಯ ಪ್ರದೇಶದ ಕುರಿತಾದ ಮಾಹಿತಿಯನ್ನು Google ಬಳಸಬಹುದು.

ನೆನಪಿಡಿ: ಇಂಟರ್ನೆಟ್ ಟ್ರಾಫಿಕ್ ಅನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧನಗಳಿಗೆ IP ವಿಳಾಸ ಬೇಕಾಗುತ್ತದೆ. IP ವಿಳಾಸಗಳನ್ನು ಸ್ಥೂಲವಾಗಿ ಭೌಗೋಳಿಕ ನೆಲೆಯಲ್ಲಿ ನಿಯೋಜಿಸಲಾಗುತ್ತದೆ. ಇದರ ಅರ್ಥ, ನೀವು ಬಳಸುವ ಯಾವುದೇ ಆ್ಯಪ್‌ಗಳು, ಸೇವೆಗಳು ಅಥವಾ google.com ಸೇರಿದಂತೆ ವೆಬ್‌ಸೈಟ್‌ಗಳು, ನಿಮ್ಮ IP ವಿಳಾಸದ ಮೂಲಕ ನಿಮ್ಮ ಸಾಮಾನ್ಯ ಪ್ರದೇಶ ಯಾವುದೆಂದು ತಿಳಿದುಕೊಳ್ಳಬಹುದು ಮತ್ತು ಅದರ ಕುರಿತಾದ ಕೆಲವೊಂದು ಮಾಹಿತಿಯನ್ನು ಬಳಸಬಹುದು.

ನಿಮ್ಮ ಸೇವ್ ಮಾಡಿದ ಚಟುವಟಿಕೆಯಿಂದ

ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಿದ್ದರೆ ಮತ್ತು ವೆಬ್ ಮತ್ತು ಆ್ಯಪ್‌ ಚಟುವಟಿಕೆಯನ್ನು ಆನ್ ಮಾಡಿದ್ದರೆ, Google ಸೈಟ್‌ಗಳು, ಆ್ಯಪ್‌ಗಳು ಮತ್ತು ಸೇವೆಗಳಲ್ಲಿನ ನಿಮ್ಮ ಚಟುವಟಿಕೆ ಡೇಟಾವನ್ನು ನಿಮ್ಮ ಖಾತೆಯ ವೆಬ್ ಮತ್ತು ಆ್ಯಪ್‌ ಚಟುವಟಿಕೆಯಲ್ಲಿ ಸೇವ್ ಮಾಡಬಹುದು. ಕೆಲವು ಚಟುವಟಿಕೆಗಳು Google ಸೇವೆಗಳನ್ನು ಬಳಸುವಾಗ ನೀವು ಇದ್ದ ಸಾಮಾನ್ಯ ಪ್ರದೇಶದ ಮಾಹಿತಿಯನ್ನು ಒಳಗೊಂಡಿರಬಹುದು. ಸಾಮಾನ್ಯ ಪ್ರದೇಶವನ್ನು ಬಳಸಿಕೊಂಡು ನೀವು ಏನನ್ನಾದರೂ ಹುಡುಕಿದಾಗ, ನಿಮ್ಮ ಹುಡುಕಾಟವು ಕನಿಷ್ಠ 3 ಚದರ ಕಿ.ಮೀ ಪ್ರದೇಶವನ್ನು ಬಳಸುತ್ತದೆ ಅಥವಾ ಆ ಪ್ರದೇಶವು ಕನಿಷ್ಠ 1,000 ಜನರನ್ನು ಪ್ರತಿನಿಧಿಸುವ ಸ್ಥಳಗಳಿಗೆ ವಿಸ್ತರಿಸುತ್ತದೆ. ಇದು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಕೆಲವು ಸಂದರ್ಭಗಳಲ್ಲಿ, ನಿಮ್ಮ ಹುಡುಕಾಟಕ್ಕೆ ಸಂಬಂಧಿಸಿದ ಸ್ಥಳಗಳನ್ನು ಅಂದಾಜು ಮಾಡಲು ನೀವು ಹಿಂದೆ ಹುಡುಕಿದ ಪ್ರದೇಶಗಳನ್ನು ಬಳಸಬಹುದು. ಉದಾಹರಣೆಗೆ, ನೀವು ಚೆಲ್ಸೀದಲ್ಲಿ ಕಾಫಿ ಶಾಪ್‌ಗಳಿಗಾಗಿ ಹುಡುಕಿದರೆ, ಭವಿಷ್ಯದಲ್ಲಿ ಮಾಡುವ ಹುಡುಕಾಟಗಳಲ್ಲಿ ಚೆಲ್ಸೀ ಕುರಿತು Google ಫಲಿತಾಂಶಗಳನ್ನು ತೋರಿಸಬಹುದು.

ನಿಮ್ಮ ವೆಬ್ ಮತ್ತು ಆ್ಯಪ್‌ ಚಟುವಟಿಕೆಯನ್ನು ನೀವು ನನ್ನ ಚಟುವಟಿಕೆಯಲ್ಲಿ ವೀಕ್ಷಿಸಬಹುದು ಮತ್ತು ನಿಯಂತ್ರಿಸಬಹುದು.

ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಿಲ್ಲ ಎಂದಾದರೆ, ಹೆಚ್ಚು ಪ್ರಸ್ತುತವಾದ ಫಲಿತಾಂಶಗಳು ಹಾಗೂ ಶಿಫಾರಸುಗಳನ್ನು ಒದಗಿಸಲು ಸಹಾಯ ಮಾಡುವುದಕ್ಕಾಗಿ, ನೀವು ಬಳಸುತ್ತಿರುವ ಸಾಧನದಲ್ಲಿನ ಈ ಹಿಂದಿನ ಹುಡುಕಾಟಗಳಿಂದ ಪಡೆದ ಕೆಲವೊಂದು ಸ್ಥಳ ಮಾಹಿತಿಯನ್ನು Google ಸಂಗ್ರಹಣೆ ಮಾಡಬಹುದು. ನೀವು Search ಕಸ್ಟಮೈಸ್ ಮಾಡುವಿಕೆಯನ್ನು ಆಫ್ ಮಾಡಿದರೆ, ನಿಮ್ಮ ಸ್ಥಳವನ್ನು ಅಂದಾಜಿಸುವುದಕ್ಕಾಗಿ Google, ಈ ಹಿಂದಿನ ಹುಡುಕಾಟ ಚಟುವಟಿಕೆಯನ್ನು ಬಳಸುವುದಿಲ್ಲ. ಖಾಸಗಿಯಾಗಿ ಹುಡುಕಾಟ ನಡೆಸುವುದು ಮತ್ತು ಬ್ರೌಸ್ ಮಾಡುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ನೀವು ಸೇವ್ ಮಾಡಿದ ಮನೆ ಅಥವಾ ಕೆಲಸದ ಸ್ಥಳಗಳಿಂದ

ನಿಮ್ಮ ಮನೆ ಅಥವಾ ಕಚೇರಿಯಂತಹ ನಿಮಗೆ ಮುಖ್ಯವಾದ ಸ್ಥಳಗಳನ್ನು ನಿಮ್ಮ Google ಖಾತೆಗೆ ಸೇವ್ ಮಾಡಲು ನೀವು ಆಯ್ಕೆ ಮಾಡಬಹುದು. ನಿಮ್ಮ ಮನೆ ಅಥವಾ ಕಚೇರಿಯ ವಿಳಾಸಗಳನ್ನು ನೀವು ಸೆಟ್ ಮಾಡಿದರೆ, ಕೆಲಸಗಳನ್ನು ಇನ್ನಷ್ಟು ಸುಲಭವಾಗಿ ಮಾಡುವುದಕ್ಕೆ ನಿಮಗೆ ನೆರವಾಗಲು ಅವುಗಳನ್ನು ಬಳಸಬಹುದು, ಉದಾಹರಣೆಗೆ ಮಾರ್ಗ ನಿರ್ದೇಶನಗಳನ್ನು ಪಡೆಯುವುದು ಅಥವಾ ನಿಮ್ಮ ಮನೆ ಅಥವಾ ಕಚೇರಿಯ ಸಮೀಪವಿರುವ ವಿಷಯಗಳಿಗೆ ಸಂಬಂಧಿಸಿದ ಫಲಿತಾಂಶಗಳನ್ನು ಹುಡುಕುವುದು ಹಾಗೂ ಇನ್ನಷ್ಟು ಉಪಯುಕ್ತವಾದ ಆ್ಯಡ್‌ಗಳನ್ನು ನಿಮಗೆ ತೋರಿಸಲು.

ನಿಮ್ಮ ಮನೆ ಅಥವಾ ಕೆಲಸದ ಸ್ಥಳಗಳನ್ನು ನೀವು ಯಾವಾಗ ಬೇಕಾದರೂ ನಿಮ್ಮ Google ಖಾತೆಯಲ್ಲಿ ಎಡಿಟ್ ಮಾಡಬಹುದು ಅಥವಾ ಅಳಿಸಬಹುದು.

ನಿಮ್ಮ ಸಾಧನದಿಂದ

Google ಆ್ಯಪ್‌ಗಳು ನಿಮ್ಮ ಸಾಧನದಿಂದ ಸ್ಥಳವನ್ನು ಹೇಗೆ ಬಳಸುತ್ತವೆ ಎಂಬುದು

Search ಹಾಗೂ Maps ನಂತಹ Google ನ ಆ್ಯಪ್‌ಗಳು ಸೇರಿದಂತೆ, ಆ್ಯಪ್‌ಗಳಿಗೆ ನಿಮ್ಮ ನಿಖರವಾದ ಸ್ಥಾನ ಲಭ್ಯವಿದೆಯೇ ಎಂಬುದನ್ನು ನಿಯಂತ್ರಿಸಲು ನೀವು ಬಳಸಬಹುದಾದ ಸೆಟ್ಟಿಂಗ್‌ಗಳು ಅಥವಾ ಅನುಮತಿಗಳನ್ನು ಸಾಧನಗಳು ಹೊಂದಿರುತ್ತವೆ. ನಿಮಗೆ ನಿರ್ದೇಶನಗಳನ್ನು ಒದಗಿಸಲು ಅಥವಾ ಸಮೀಪದ, ಉಪಯುಕ್ತ ಹುಡುಕಾಟ ಫಲಿತಾಂಶಗಳನ್ನು ಪಡೆದುಕೊಳ್ಳಲು ಸಹಾಯ ಮಾಡುವುದಕ್ಕಾಗಿ Google Maps ನಂತಹ ಆ್ಯಪ್‌ಗಳಲ್ಲಿ ಈ ರೀತಿಯ ನಿಖರವಾದ ಸ್ಥಾನ ಉಪಯುಕ್ತವಾಗಿದೆ. ಉದಾಹರಣೆಗೆ, ನಿಖರವಾದ ಸ್ಥಾನ ಸೆಟ್ಟಿಂಗ್‌ಗಳು ಅಥವಾ ಅನುಮತಿಗಳು ಆನ್ ಆಗಿದ್ದಾಗ, ಸ್ಥಳೀಯ ಸ್ಥಳಗಳು ಮತ್ತು ಹವಾಮಾನದ ಮಾಹಿತಿಯ ಹಾಗೆ ಹೆಚ್ಚು ಪ್ರಸ್ತುತವಾದ ಹುಡುಕಾಟ ಫಲಿತಾಂಶಗಳನ್ನು ನೀವು ಪಡೆಯುವಿರಿ.

iOS ಮತ್ತು Android ಎರಡೂ ಆ್ಯಪ್ ಸ್ಥಳ ಅನುಮತಿಗಳಿಗಾಗಿ ಸೆಟ್ಟಿಂಗ್‌ಗಳನ್ನು ಹೊಂದಿದ್ದು, ನೀವು ಅವುಗಳನ್ನು ಆನ್ ಅಥವಾ ಆಫ್ ಮಾಡಬಹುದಾಗಿದೆ. ಸ್ಥಳ-ಆಧಾರಿತ ಫೀಚರ್‌ಗಳು ಮತ್ತು ಸೇವೆಗಳನ್ನು ಒದಗಿಸಲು ನಿಮ್ಮ ಸ್ಥಳವನ್ನು ಬಳಸಲು ನೀವು ಆ್ಯಪ್‌ಗಳಿಗೆ ಅವಕಾಶ ನೀಡಬಹುದು. ನೆನಪಿಡಿ, ಕೆಲವೊಮ್ಮೆ ಆ್ಯಪ್‌ಗಳಿಗೆ ನಿಮ್ಮ ನಿಖರವಾದ ಸ್ಥಳವನ್ನು ತಾತ್ಕಾಲಿಕವಾಗಿ ಸಂಗ್ರಹಿಸುವ ಅಗತ್ಯವಿರುತ್ತಿದ್ದು, ಇದರಿಂದ ಅವು ನಿಮಗೆ ಸಹಾಯಕವಾದ ಫಲಿತಾಂಶಗಳನ್ನು ತ್ವರಿತವಾಗಿ ನೀಡಬಹುದು ಅಥವಾ ಸ್ಥಳವನ್ನು ಪದೇಪದೇ ಅಪ್‌ಡೇಟ್‌ ಮಾಡುವ ಅಗತ್ಯವನ್ನು ತಪ್ಪಿಸುವ ಮೂಲಕ ಬ್ಯಾಟರಿಯನ್ನು ಉಳಿಸಬಹುದು.

ಕೆಲವು ಆ್ಯಪ್‌ಗಳಲ್ಲಿ "Find My Device" ಅಥವಾ "ಸ್ಥಳ ಹಂಚಿಕೆ" ಎಂಬಂತಹ ಕೆಲವು ಫೀಚರ್‌ಗಳನ್ನು ಬಳಸಲು ನೀವು ಬಯಸಿದರೆ, ಹಿನ್ನೆಲೆಯಲ್ಲಿ ರನ್ ಆಗಲು ನಿಮ್ಮ ಸಾಧನದ ಸ್ಥಳಕ್ಕೆ ಆ್ಯಕ್ಸೆಸ್ ಅಗತ್ಯವಿರುತ್ತದೆ.

ನಿಮ್ಮ Android ಸಾಧನದಲ್ಲಿ, ಸ್ಥಳ ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತು ನಿಖರವಾದ ಮಾಹಿತಿಗಾಗಿ, ಇಲ್ಲಿ ನೋಡಿ.

ನನ್ನ Google ಖಾತೆಯಲ್ಲಿ ಸ್ಥಳ ಇತಿಹಾಸ ಹಾಗೂ ವೆಬ್ ಮತ್ತು ಆ್ಯಪ್‌ ಚಟುವಟಿಕೆಯನ್ನು ಹೇಗೆ ಸೇವ್ ಮಾಡಲಾಗುತ್ತದೆ?

ಮುಂಬರುವ ತಿಂಗಳುಗಳಲ್ಲಿ ಸ್ಥಳ ಇತಿಹಾಸ ಸೆಟ್ಟಿಂಗ್ ಬದಲಾಗುತ್ತದೆ, ಇದು 2024 ರಲ್ಲೂ ಮುಂದುವರಿಯುತ್ತದೆ. ಪ್ರಸ್ತುತ ಸ್ಥಳ ಇತಿಹಾಸದ ಬಳಕೆದಾರರಿಗೆ ಈ ಬದಲಾವಣೆಯು ಅವರ ಖಾತೆಯ ಮೇಲೆ ಪರಿಣಾಮ ಬೀರಿದಾಗ ಸೂಚನೆ ನೀಡಲಾಗುತ್ತಿದೆ, ಸೂಚನೆ ದೊರೆತ ಬಳಿಕ, ಅವರ ಖಾತೆ ಮತ್ತು ಆ್ಯಪ್ ಸೆಟ್ಟಿಂಗ್‌ಗಳಲ್ಲಿ ಟೈಮ್‌ಲೈನ್ ಎಂಬ ಹೆಸರು ಅವರಿಗೆ ಕಾಣಿಸಲಾರಂಭಿಸುತ್ತದೆ. ಟೈಮ್‌ಲೈನ್ ಅನ್ನು ನೇರವಾಗಿ ಆನ್ ಮಾಡಿದ ಬಳಕೆದಾರರು ಸೇರಿದಂತೆ ಈಗಾಗಲೇ ಟೈಮ್‌ಲೈನ್ ಅನ್ನು ಬಳಸುವವರಿಗೆ ಸಂಬಂಧಿಸಿದಂತೆ, ಈ ಪುಟದಲ್ಲಿ ಒದಗಿಸಲಾಗಿರುವ ಸ್ಥಳ ಇತಿಹಾಸದಲ್ಲಿನ ಸ್ಥಳದ ಡೇಟಾದ ಕುರಿತಾದ ಮಾಹಿತಿಯು ಅವರ ಟೈಮ್‌ಲೈನ್‌ನ ಬಳಕೆಗೆ ಅನ್ವಯಿಸುತ್ತದೆ. ಇನ್ನಷ್ಟು ತಿಳಿಯಿರಿ.

ಸ್ಥಳ ಇತಿಹಾಸ ಹಾಗೂ ವೆಬ್ ಮತ್ತು ಆ್ಯಪ್‌ ಚಟುವಟಿಕೆ

ಸ್ಥಳ ಇತಿಹಾಸ ಹಾಗೂ ವೆಬ್ ಮತ್ತು ಆ್ಯಪ್‌ ಚಟುವಟಿಕೆಗಳು, ಸ್ಥಳವನ್ನು ಬಳಸುವ Google ಖಾತೆ ಸೆಟ್ಟಿಂಗ್‌ಗಳಾಗಿವೆ. ಪ್ರತಿಯೊಂದರ ಸ್ಥೂಲನೋಟ ಇಲ್ಲಿದೆ. ನೆನಪಿಡಿ, ಇತರ ಫೀಚರ್‌ಗಳು ಅಥವಾ ಉತ್ಪನ್ನಗಳು ಸಹ ಸ್ಥಳದ ಮಾಹಿತಿಯನ್ನು ಸಂಗ್ರಹಿಸಬಹುದು ಅಥವಾ ಸಂಗ್ರಹಣೆ ಮಾಡಬಹುದು.

ಸ್ಥಳ ಇತಿಹಾಸ

ನೀವು ಸ್ಥಳ ಇತಿಹಾಸವನ್ನು ಆನ್ ಮಾಡಿದರೆ, ನೀವು ಭೇಟಿ ನೀಡಿದ ಸ್ಥಳಗಳು ಮತ್ತು ನೀವು ಪ್ರಯಾಣಿಸಿದ ಮಾರ್ಗಗಳು ಮತ್ತು ಪ್ರವಾಸಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಸಹಾಯ ಮಾಡುವ ವೈಯಕ್ತಿಕ ನಕ್ಷೆಯನ್ನು ಹೊಂದಿರುವ ಟೈಮ್‌ಲೈನ್ ಅನ್ನು ಇದು ರಚಿಸುತ್ತದೆ.

ಡೀಫಾಲ್ಟ್ ಆಗಿ, ಸ್ಥಳ ಇತಿಹಾಸ ಆಫ್ ಆಗಿರುತ್ತದೆ. ನೀವು ಸ್ಥಳ ಇತಿಹಾಸವನ್ನು ಆನ್ ಮಾಡಿದರೆ, ಸ್ಥಳ ವರದಿ ಮಾಡುವಿಕೆ ಸೆಟ್ಟಿಂಗ್ ಅನ್ನು ಆನ್ ಆಗಿ ಇರಿಸಿರುವ ಪ್ರತಿಯೊಂದು ಅರ್ಹ ಮೊಬೈಲ್ ಸಾಧನಕ್ಕಾಗಿ ನಿಮ್ಮ ಸಾಧನದ ನಿಖರವಾದ ಸ್ಥಳವನ್ನು ನಿಯಮಿತವಾಗಿ ಸೇವ್ ಮಾಡಲಾಗುತ್ತದೆ. Google ಆ್ಯಪ್‌ಗಳನ್ನು ಬಳಸದಿದ್ದಾಗಲೂ ಸಹ, ನಿಮ್ಮ ಟೈಮ್‍ಲೈನ್ ಅನ್ನು ನಿರ್ಮಿಸಲು ಈ ಸಾಧನದ ಸ್ಥಳಗಳನ್ನು ಬಳಸಲಾಗುತ್ತದೆ.

Google ಅನುಭವಗಳನ್ನು ಎಲ್ಲರಿಗಾಗಿ ಇನ್ನಷ್ಟು ಉಪಯುಕ್ತವಾಗಿಸಲು, ಸ್ಥಳ ಇತಿಹಾಸವನ್ನು ಈ ಕೆಳಗಿನವುಗಳಿಗಾಗಿ ಬಳಸಬಹುದು

  • ಅನಾಮಧೇಯಗೊಳಿಸಿದ ಸ್ಥಳ ಮಾಹಿತಿಯನ್ನು ಆಧರಿಸಿ, ಜನದಟ್ಟಣೆಯ ಸಮಯಗಳು ಮತ್ತು ಪರಿಸರದ ಒಳನೋಟಗಳಂತಹ ಮಾಹಿತಿಯನ್ನು ತೋರಿಸಲು
  • ವಂಚನೆ ಮತ್ತು ದುರುಪಯೋಗವನ್ನು ಪತ್ತೆಹಚ್ಚಲು ಹಾಗೂ ತಡೆಗಟ್ಟಲು
  • ಜಾಹೀರಾತು ಉತ್ಪನ್ನಗಳು ಸೇರಿದಂತೆ Google ಸೇವೆಗಳನ್ನು ಸುಧಾರಿಸಲು ಹಾಗೂ ಅಭಿವೃದ್ಧಿಪಡಿಸಲು

ಜಾಹೀರಾತಿನ ಕಾರಣದಿಂದಾಗಿ ಜನರು ತಮ್ಮ ಸ್ಟೋರ್‌ಗಳಿಗೆ ಭೇಟಿ ನೀಡುವ ಸಾಧ್ಯತೆಯನ್ನು ಅಂದಾಜು ಮಾಡುವುದಕ್ಕೆ ಸ್ಥಳ ಇತಿಹಾಸವು ವ್ಯಾಪಾರಗಳಿಗೆ ಸಹಾಯ ಮಾಡುತ್ತದೆ.

ನಿಮ್ಮ ಟೈಮ್‌ಲೈನ್‌ನಲ್ಲಿ ಸೇವ್ ಮಾಡಿರುವ ಮಾಹಿತಿಯನ್ನು ನೀವು ಯಾವಾಗ ಬೇಕಾದರೂ ಪರಿಶೀಲಿಸಬಹುದು, ಎಡಿಟ್ ಮಾಡಬಹುದು ಮತ್ತು ಅಳಿಸಬಹುದು. ನೀವು ಸ್ಥಳ ಇತಿಹಾಸವನ್ನು ಆನ್ ಮಾಡಿದ್ದೀರಾ ಎಂದು ನೋಡಲು, ನಿಮ್ಮ ಚಟುವಟಿಕೆ ನಿಯಂತ್ರಣಗಳಿಗೆ ಭೇಟಿ ನೀಡಿ. ಇಲ್ಲಿ, ನಿಮ್ಮ ಸ್ಥಳ ಇತಿಹಾಸ ಸೆಟ್ಟಿಂಗ್‌ಗಳನ್ನು ನೀವು ನಿಯಂತ್ರಿಸಬಹುದು ಮತ್ತು ಯಾವ ಸಾಧನಗಳು ತಮ್ಮ ಸ್ಥಳದ ಮಾಹಿತಿ ಕುರಿತು ವರದಿಮಾಡುತ್ತಿವೆ ಎಂಬುದನ್ನು ನಿಯಂತ್ರಿಸಬಹುದು.

ಸ್ಥಳ ಇತಿಹಾಸದ ಸೆಟ್ಟಿಂಗ್‌ನ ಭಾಗವಾಗಿ ನಿಮ್ಮ ನಿಖರವಾದ ಸ್ಥಾನವನ್ನು ಎಷ್ಟು ಬಾರಿ ಸಂಗ್ರಹಿಸಲಾಗುತ್ತದೆ ಎಂಬುದರಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ, ನೀವು Google Maps ನಲ್ಲಿ ನ್ಯಾವಿಗೇಶನ್ ಅನ್ನು ಬಳಸುತ್ತಿದ್ದರೆ, ಪ್ರತಿ ನಿಮಿಷಕ್ಕೆ ಹಲವು ಬಾರಿ ಅದನ್ನು ಸಂಗ್ರಹಿಸಬಹುದು. ಆದರೆ ನಿಮ್ಮ ಫೋನ್ ಅನ್ನು ನೀವು ಸಕ್ರಿಯವಾಗಿ ಬಳಸುತ್ತಿಲ್ಲ ಎಂದಾದರೆ, ಪ್ರತಿ ಕೆಲವು ಗಂಟೆಗಳಿಗೊಮ್ಮೆ ಸಂಗ್ರಹಿಸಬಹುದು.

ಸ್ಥಳ ಇತಿಹಾಸದ ಡೇಟಾವನ್ನು ಎಷ್ಟು ಸಮಯದವರೆಗೆ ಸೇವ್ ಮಾಡಿಕೊಳ್ಳಲಾಗುತ್ತದೆ ಎಂಬುದು ನಿಮ್ಮ ಸೆಟ್ಟಿಂಗ್‌ಗಳ ಮೇಲೆ ಆಧರಿಸಿರುತ್ತದೆ—3, 18 ಅಥವಾ 36 ತಿಂಗಳ ನಂತರ ಡೇಟಾವನ್ನು ಸ್ವಯಂಚಾಲಿತವಾಗಿ ಅಳಿಸಲು ಅಥವಾ ನೀವು ಅದನ್ನು ಅಳಿಸುವವರೆಗೆ ಡೇಟಾವನ್ನು ಇರಿಸಿಕೊಳ್ಳಲು ನೀವು ಆಯ್ಕೆ ಮಾಡಬಹುದು.

ನೆನಪಿನಲ್ಲಿಡಿ

ನೀವು ಸ್ಥಳ ಇತಿಹಾಸವನ್ನು ಆಫ್ ಮಾಡಿದರೆ

  • ನೀವು ಸೇವ್ ಮಾಡಿದ ಯಾವುದೇ ಹಿಂದಿನ ಸ್ಥಳ ಇತಿಹಾಸ ಡೇಟಾವನ್ನು ನೀವು ಅಳಿಸುವವರೆಗೂ Google ಸಂಗ್ರಹಿಸುವುದನ್ನು ಮುಂದುವರಿಸುತ್ತದೆ ಅಥವಾ ನಿಮ್ಮ ಸ್ವಯಂ-ಅಳಿಸುವಿಕೆಯ ಸೆಟ್ಟಿಂಗ್‌ಗಳ ಭಾಗವಾಗಿ ನೀವು ಆಯ್ಕೆಮಾಡಿದ ಅವಧಿಯ ನಂತರ ಅದನ್ನು ಅಳಿಸಲಾಗುತ್ತದೆ.
  • ಸ್ಥಳ ಇತಿಹಾಸವನ್ನು ಆಫ್ ಮಾಡುವುದರಿಂದ ವೆಬ್ ಮತ್ತು ಆ್ಯಪ್‌ ಚಟುವಟಿಕೆ ಅಥವಾ ಇತರ Google ಉತ್ಪನ್ನಗಳು ಹೇಗೆ ಸ್ಥಳ ಮಾಹಿತಿಯನ್ನು ಸೇವ್ ಮಾಡುತ್ತವೆ ಅಥವಾ ಬಳಸುತ್ತವೆ ಎಂಬುದರ ಮೇಲೆ ಪರಿಣಾಮ ಬೀರುವುದಿಲ್ಲ, ಉದಾಹರಣೆಗೆ ನಿಮ್ಮ IP ವಿಳಾಸವನ್ನು ಆಧರಿಸಿರುವುದು. ಸ್ಥಳ ಮಾಹಿತಿಯನ್ನು ಸೇವ್ ಮಾಡುವ ಇತರ ಸೆಟ್ಟಿಂಗ್‌ಗಳೂ ನಿಮ್ಮ ಬಳಿ ಇರಬಹುದು.

ನೀವು ಸ್ಥಳ ಇತಿಹಾಸವನ್ನು ಆನ್ ಮಾಡಿದ್ದೀರಾ ಎಂದು ನೋಡಲು, ನಿಮ್ಮ ಚಟುವಟಿಕೆ ನಿಯಂತ್ರಣಗಳಿಗೆ ಭೇಟಿ ನೀಡಿ. ಇನ್ನಷ್ಟು ತಿಳಿಯಿರಿ.

ವೆಬ್ - ಆ್ಯಪ್‌ ಚಟುವಟಿಕೆ

Maps, Search ಹಾಗೂ ಇತರ Google ಸೇವೆಗಳಾದ್ಯಂತ ನಿಮ್ಮ ಅನುಭವವನ್ನು ಹೆಚ್ಚು ವೈಯಕ್ತೀಕರಿಸಲು ವೆಬ್ ಮತ್ತು ಆ್ಯಪ್ ಚಟುವಟಿಕೆಯ ಡೇಟಾವನ್ನು ಬಳಸಲಾಗುತ್ತದೆ. ನಿಮ್ಮ ಜಾಹೀರಾತುಗಳ ಸೆಟ್ಟಿಂಗ್‌ಗಳನ್ನು ಆಧರಿಸಿ, ನಿಮಗೆ ಹೆಚ್ಚು ಸಂಬಂಧಿತ ಜಾಹೀರಾತುಗಳನ್ನು ತೋರಿಸಲು ಸಹ ಇದನ್ನು ಬಳಸಬಹುದು. ನಿಮ್ಮ ಖಾತೆಗೆ ನೀವು ಎಲ್ಲಿ ಸೈನ್ ಇನ್ ಮಾಡಿದರೂ, ವೆಬ್ ಮತ್ತು ಆ್ಯಪ್‌ ಚಟುವಟಿಕೆಯು ನಿಮ್ಮ ಸಾಧನಗಳಾದ್ಯಂತ ಕಾರ್ಯನಿರ್ವಹಿಸುತ್ತದೆ.

ವೆಬ್ ಮತ್ತು ಆ್ಯಪ್‌ ಚಟುವಟಿಕೆಯನ್ನು ಆನ್ ಮಾಡಿದಾಗ, ನೀವು Google ಸೇವೆಗಳಾದ್ಯಂತ ನಡೆಸುವ ಚಟುವಟಿಕೆಗಳ ಕುರಿತಾದ ಡೇಟಾವನ್ನು Google ನಿಮ್ಮ ಖಾತೆಯ ವೆಬ್ ಮತ್ತು ಆ್ಯಪ್‌ ಚಟುವಟಿಕೆಯಲ್ಲಿ ಸೇವ್ ಮಾಡುತ್ತದೆ. ಇದು ನೀವು Google ಸೇವೆಯೊಂದನ್ನು ಬಳಸಿದ ಸಾಮಾನ್ಯ ಪ್ರದೇಶದಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ.

ಉದಾಹರಣೆಗೆ, ನೀವು ಹವಾಮಾನ ಮಾಹಿತಿಯನ್ನು ಹುಡುಕಿದರೆ, ಮತ್ತು ನಿಮ್ಮ ಸಾಧನದಿಂದ ಕಳುಹಿಸಿದ ಸ್ಥಳಕ್ಕಾಗಿ ಫಲಿತಾಂಶಗಳನ್ನು ಪಡೆದುಕೊಂಡರೆ, ನೀವು ಹುಡುಕಿದಾಗ ನಿಮ್ಮ ಸಾಧನವು ಇದ್ದ ಸಾಮಾನ್ಯ ಪ್ರದೇಶವನ್ನು ಒಳಗೊಂಡಂತೆ ಈ ಚಟುವಟಿಕೆಯನ್ನು ನಿಮ್ಮ ವೆಬ್ ಮತ್ತು ಆ್ಯಪ್‌ ಚಟುವಟಿಕೆಯಲ್ಲಿ ಸೇವ್ ಮಾಡಲಾಗುತ್ತದೆ. ನಿಮ್ಮ ಸಾಧನವು ಕಳುಹಿಸಿದ ನಿಖರವಾದ ಸ್ಥಾನವನ್ನು ಸಂಗ್ರಹಣೆ ಮಾಡಲಾಗುವುದಿಲ್ಲ, ಕೇವಲ ಆ ಸ್ಥಳದ ಸಾಮಾನ್ಯ ಪ್ರದೇಶವನ್ನು ಮಾತ್ರ ಸಂಗ್ರಹಣೆ ಮಾಡಲಾಗುತ್ತದೆ. ಭವಿಷ್ಯದ ಹುಡುಕಾಟದಲ್ಲಿ ಹೆಚ್ಚು ಪ್ರಸ್ತುತವಾದ ಸ್ಥಳವನ್ನು Google ತೀರ್ಮಾನಿಸಲು ಸಹಾಯ ಮಾಡುವುದಕ್ಕಾಗಿ ಬಳಸಬಹುದಾದ, ಸೇವ್ ಮಾಡಲಾದ ಸ್ಥಳವು, IP ವಿಳಾಸದಿಂದ ಅಥವಾ ನಿಮ್ಮ ಸಾಧನದಿಂದ ಬರಬಹುದು. ಸೇವ್ ಮಾಡಲಾದ ಈ ಸ್ಥಳವನ್ನು 30 ದಿನಗಳ ಬಳಿಕ ನಿಮ್ಮ ವೆಬ್ ಮತ್ತು ಆ್ಯಪ್‌ ಚಟುವಟಿಕೆಯಿಂದ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.

ವೆಬ್ ಮತ್ತು ಆ್ಯಪ್‌ ಚಟುವಟಿಕೆ ಡೇಟಾವು ನಿಮಗೆ ಸಂಬಂಧಿಸಿದ ಸಾಮಾನ್ಯ ಪ್ರದೇಶಗಳ ಕುರಿತು ಅರ್ಥಮಾಡಿಕೊಳ್ಳಲು ಮತ್ತು ನೀವು ಹುಡುಕಾಟದಂತಹ ಕ್ರಿಯೆಗಳನ್ನು ಮಾಡುವಾಗ ಆ ಪ್ರದೇಶಗಳಿಗೆ ಫಲಿತಾಂಶಗಳನ್ನು ಸೇರಿಸಲು Google ಗೆ ಸಹಾಯ ಮಾಡುತ್ತದೆ.

ನಿಮ್ಮ ಚಟುವಟಿಕೆ ನಿಯಂತ್ರಣಗಳಿಗೆ ಭೇಟಿ ನೀಡುವ ಮೂಲಕ, ನಿಮ್ಮ ವೆಬ್ ಮತ್ತು ಆ್ಯಪ್‌ ಚಟುವಟಿಕೆಯಲ್ಲಿ ಸೇವ್ ಮಾಡಲಾದ ಸ್ಥಳ ಮತ್ತು ಇತರ ಮಾಹಿತಿಯನ್ನು ನೀವು ಪರಿಶೀಲಿಸಬಹುದು ಮತ್ತು ಅಳಿಸಬಹುದು ಅಥವಾ ಅದನ್ನು ಆಫ್ ಮಾಡಬಹುದು. ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ಆಫ್ ಮಾಡಿದರೆ, ನಿಮ್ಮ ಭವಿಷ್ಯದ ಚಟುವಟಿಕೆಯ ಡೇಟಾವನ್ನು ಸೇವ್ ಮಾಡುವುದನ್ನು ನಿಲ್ಲಿಸಲಾಗುತ್ತದೆ.

ನೆನಪಿನಲ್ಲಿಡಿ

ನೀವು ವೆಬ್ ಮತ್ತು ಆ್ಯಪ್‌ ಚಟುವಟಿಕೆಯನ್ನು ಆಫ್ ಮಾಡಿದಾಗ

  • ನೀವು ಇನ್ನೂ ಸೇವ್ ಮಾಡಿದ ಚಟುವಟಿಕೆಯನ್ನು ಹೊಂದಿರಬಹುದು ಮತ್ತು ನೀವು ಅದನ್ನು ಅಳಿಸುವವರೆಗೆ ನಾವು ಅದರ ಕುರಿತ ಡೇಟಾ ಬಳಕೆಯನ್ನು ಮುಂದುವರಿಸಬಹುದು. ನೀವು ಇದನ್ನು ಯಾವಾಗ ಬೇಕಾದರೂ ಅಳಿಸಬಹುದು. ಸೇವ್ ಮಾಡಿದ ನಿಮ್ಮ ಸ್ಥಳ ಮಾಹಿತಿಯನ್ನು 30 ದಿನಗಳ ನಂತರವೂ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.
  • ವೆಬ್ ಮತ್ತು ಆ್ಯಪ್‌ ಚಟುವಟಿಕೆಯನ್ನು ಆಫ್ ಮಾಡುವುದರಿಂದ ಸ್ಥಳ ಮಾಹಿತಿಯನ್ನು ಸೇವ್ ಮಾಡುವ ವಿಧಾನ ಅಥವಾ ಸ್ಥಳ ಇತಿಹಾಸದಂತಹ ಇತರ ಸೆಟ್ಟಿಂಗ್‌ಗಳನ್ನು ಬಳಸಲಾಗುವ ವಿಧಾನದ ಮೇಲೆ ಪರಿಣಾಮ ಬೀರುವುದಿಲ್ಲ. IP ವಿಳಾಸ ಸೇರಿದಂತೆ ಇತರ ಸೆಟ್ಟಿಂಗ್‌ಗಳ ಭಾಗವಾಗಿ ನೀವು ಈಗಲೂ ಇತರ ರೀತಿಯ ಸ್ಥಳ ಮಾಹಿತಿಯನ್ನು ಸೇವ್ ಮಾಡಿರಬಹುದು.

ನೀವು ವೆಬ್ ಮತ್ತು ಆ್ಯಪ್ ಚಟುವಟಿಕೆಯನ್ನು ಆನ್ ಮಾಡಿದ್ದೀರಾ ಎಂಬುದನ್ನು ನೋಡಲು, ನಿಮ್ಮ ಚಟುವಟಿಕೆ ನಿಯಂತ್ರಣಗಳಿಗೆ ಭೇಟಿ ನೀಡಿ. ಇನ್ನಷ್ಟು ತಿಳಿಯಿರಿ

ಸ್ಯೂಡೋನಿಮೈಸ್ ಮಾಡಲಾದ ಅಥವಾ ಅನಾಮಧೇಯವಾದ ಸ್ಥಳದ ಮಾಹಿತಿಯನ್ನು Google ಹೇಗೆ ಬಳಸುತ್ತದೆ?

ಜನರ ಖಾಸಗಿತನವನ್ನು ವರ್ಧಿಸಲು ಸಹಾಯ ಮಾಡುವುದಕ್ಕಾಗಿ Google, ಅನಾಮಧೇಯಗೊಳಿಸಿದ ಮತ್ತು ಸ್ಯೂಡೋನಿಮೈಸ್ ಮಾಡಿದ ಸ್ಥಳದ ಮಾಹಿತಿಯನ್ನು ಬಳಸುತ್ತದೆ. ಅನಾಮಧೇಯಗೊಳಿಸಿದ ಮಾಹಿತಿಯನ್ನು ಸಾಮಾನ್ಯವಾಗಿ ಯಾವುದೇ ವ್ಯಕ್ತಿಗೆ ಸಂಬಂಧಿಸಲು ಸಾಧ್ಯವಾಗುವುದಿಲ್ಲ. ಸ್ಯೂಡೋನಿಮೈಸ್ ಮಾಡಲಾದ ಮಾಹಿತಿಯು, ವ್ಯಕ್ತಿಯ ಖಾತೆ, ಹೆಸರು ಅಥವಾ ಇಮೇಲ್ ವಿಳಾಸದಂತಹ ಹೆಚ್ಚು ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯ ಬದಲಿಗೆ ಸಂಖ್ಯೆಗಳ ಸರಣಿಯಂತಹ ಅನನ್ಯ ಗುರುತಿಸುವಿಕೆಯೊಂದಿಗೆ ಸಂಬಂಧಿಸಿರುತ್ತದೆ. ಅನಾಮಧೇಯಗೊಳಿಸಿದ ಮತ್ತು ಸ್ಯೂಡೋನಿಮೈಸ್ ಮಾಡಿದ ಮಾಹಿತಿಯನ್ನು Google ತನ್ನ ಉತ್ಪನ್ನಗಳಲ್ಲಿ ಮತ್ತು ಸೇವೆಗಳಲ್ಲಿ ಜಾಹೀರಾತು ನೀಡುವಿಕೆ ಅಥವಾ ಟ್ರೆಂಡ್‌ಗಳಂತಹ ಉದ್ದೇಶಗಳಿಗಾಗಿ ಬಳಸಬಹುದು.

ಬಳಕೆದಾರರು ಸ್ಥಳ ಮಾಹಿತಿಗೆ ಲಿಂಕ್ ಮಾಡಲಾದ ಕೆಲವು ಸ್ಯೂಡೋನಿಮಸ್ ಐಡೆಂಟಿಫೈಯರ್‌ಗಳನ್ನು ರೀಸೆಟ್ ಮಾಡಲು ಸಾಧ್ಯವಾಗಬಹುದು. ಉದಾಹರಣೆಗೆ, ಜನರು ತಮ್ಮ Android ಸಾಧನಗಳಲ್ಲಿ ಜಾಹೀರಾತು ಐಡಿಗಳನ್ನು ರೀಸೆಟ್ ಮಾಡುವ ಮೂಲಕ ಕೆಲವು ಸ್ಯೂಡೋನಿಮಸ್ ಐಡೆಂಟಿಫೈಯರ್‌ಗಳನ್ನು ರೀಸೆಟ್ ಮಾಡಬಹುದು. ಹೆಚ್ಚುವರಿಯಾಗಿ, GLA ಸೇರಿದಂತೆ ಬಳಕೆದಾರರ ಗೌಪ್ಯತೆಯನ್ನು ವರ್ಧಿಸಲು ಕೆಲವು ಸ್ಯೂಡೋನಿಮಸ್ ಐಡೆಂಟಿಫೈಯರ್‌ಗಳನ್ನು Google ಸ್ವಯಂಚಾಲಿತವಾಗಿ ರೀಸೆಟ್ ಮಾಡುತ್ತದೆ, ಇದು ಸ್ಥಳ-ಆಧಾರಿತ ಸೇವೆಗಳು ಮತ್ತು ತಮ್ಮ ಸಾಧನಗಳಲ್ಲಿನ ನಿಖರತೆಯನ್ನು ಸುಧಾರಿಸಲು ಸಾಧನ ಸೆಟ್ಟಿಂಗ್‌ಗಳನ್ನು ನಿಯಂತ್ರಿಸಲು ಬಳಕೆದಾರರನ್ನು ಅನುಮತಿಸುತ್ತದೆ.

ಇದಲ್ಲದೆ, Google ಅನಾಮಧೇಯಗೊಳಿಸಿದ ಸ್ಥಳ ಮಾಹಿತಿಯನ್ನು ಬಳಸಬಹುದು. ಉದಾಹರಣೆಗೆ, ಜನರು Google Maps ನಲ್ಲಿ ರೆಸ್ಟೋರೆಂಟ್ ಅಥವಾ ಪಾರ್ಕ್‌ನಂತಹ ಸ್ಥಳಗಳನ್ನು ಟ್ಯಾಪ್ ಮಾಡಬಹುದು ಮತ್ತು ಒಂದು ಪ್ರದೇಶದಲ್ಲಿ ಆ ಸ್ಥಳಗಳಿಂದ ಟ್ರೆಂಡ್‌ಗಳನ್ನು ನೋಡಬಹುದು. ಟ್ರೆಂಡ್‌ಗಳನ್ನು ನಿರ್ಮಿಸಲು ಬಳಸಲಾಗುವ, ಜನದಟ್ಟಣೆಯ ಸಮಯಗಳಂತಹ ಸ್ಥಳ ಮಾಹಿತಿಯನ್ನು ಬಳಸಿಕೊಂಡು, ವ್ಯಕ್ತಿಯನ್ನು ಗುರುತಿಸಲು ಸಾಧ್ಯವಿಲ್ಲ. ನಿಖರವಾದ ಮತ್ತು ಅನಾಮಧೇಯಗೊಳಿಸಿದ ವ್ಯಾಪಾರ ಮಾಹಿತಿಯನ್ನು ಒದಗಿಸಲು Google ನ ಬಳಿ ಸಾಕಷ್ಟು ಮಾಹಿತಿ ಇಲ್ಲದಿದ್ದರೆ, ಅದು Google ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

Search ಕಸ್ಟಮೈಸೇಶನ್‌ಗಳು, YouTube ಸೆಟ್ಟಿಂಗ್‌ಗಳು ಮತ್ತು ಜಾಹೀರಾತು ಸೆಟ್ಟಿಂಗ್‌ಗಳು ಸೇರಿದಂತೆ ತಮ್ಮ ಬ್ರೌಸರ್ ಅಥವಾ ಸಾಧನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿರ್ವಹಿಸಲು ಸೈನ್-ಔಟ್ ಮಾಡಿದ ಬಳಕೆದಾರರಿಗೆ Google ಇತರ ಮಾರ್ಗಗಳನ್ನು ಒದಗಿಸುತ್ತದೆ. ಇನ್ನಷ್ಟು ತಿಳಿಯಿರಿ

ಸ್ಥಳ ಮಾಹಿತಿಯನ್ನು Google ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಕುರಿತು Google ಗೌಪ್ಯತಾ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ. ಸಂಗ್ರಹಿಸಿದ ಡೇಟಾವನ್ನು Google ಹೇಗೆ ಇರಿಸಿಕೊಳ್ಳುತ್ತದೆ ಮತ್ತು ಡೇಟಾವನ್ನು Google ಹೇಗೆ ಅನಾಮಧೇಯಗೊಳಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಸ್ಥಳ ಮಾಹಿತಿಯನ್ನು Google ಎಷ್ಟು ಸಮಯದವರೆಗೆ ಉಳಿಸಿಟ್ಟುಕೊಳ್ಳುತ್ತದೆ?

Google ನಿಂದ ಸಂಗ್ರಹಿಸಲಾದ ಸ್ಥಳ ಮಾಹಿತಿ ಸೇರಿದಂತೆ ಬಳಕೆದಾರರ ಡೇಟಾವನ್ನು ನಮ್ಮ ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುವ ಅಭ್ಯಾಸಗಳನ್ನು Google ಗೌಪ್ಯತಾ ನೀತಿ ವಿವರಿಸುತ್ತದೆ. ಸ್ಥಳದ ಮಾಹಿತಿಯು ಯಾವುದಕ್ಕೆ ಸಂಬಂಧಿಸಿದೆ, ಅದನ್ನು ನಾವು ಹೇಗೆ ಬಳಸುತ್ತೇವೆ ಮತ್ತು ಜನರು ತಮ್ಮ ಸೆಟ್ಟಿಂಗ್‌ಗಳನ್ನು ಹೇಗೆ ಕಾನ್ಫಿಗರ್ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ವಿವಿಧ ಅವಧಿಗಳಿಗೆ ಸಂಗ್ರಹಿಸಲಾಗುತ್ತದೆ.

ಕೆಲವೊಂದು ಸ್ಥಳ ಮಾಹಿತಿಯನ್ನು ನೀವು ಅಳಿಸುವವರೆಗೆ ನಿಮ್ಮ Google ಖಾತೆಯಲ್ಲಿ ಸೇವ್ ಮಾಡಲಾಗುತ್ತದೆ

  • ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುವುದು ಮತ್ತು ಅಳಿಸುವುದನ್ನು ನಿಯಂತ್ರಿಸುವುದು: ಸ್ಥಳ ಇತಿಹಾಸ ಮತ್ತು ವೆಬ್ ಮತ್ತು ಆ್ಯಪ್‌ ಚಟುವಟಿಕೆಗಳೆರಡೂ ಸ್ವಯಂ-ಅಳಿಸುವಿಕೆಯ ಆಯ್ಕೆಗಳನ್ನು ಹೊಂದಿದ್ದು ಅದು 3, 18, ಅಥವಾ 36 ತಿಂಗಳ ನಂತರ ಸ್ವಯಂಚಾಲಿತವಾಗಿ ಡೇಟಾವನ್ನು ಅಳಿಸಲು ನಿಮಗೆ ಅನುಮತಿಸುತ್ತದೆ. ಟೈಮ್‌ಲೈನ್ ಮತ್ತು ನನ್ನ ಚಟುವಟಿಕೆಗೆ ಭೇಟಿ ನೀಡುವ ಮೂಲಕ ನೀವು ಈ ಡೇಟಾವನ್ನು ಸಹ ವೀಕ್ಷಿಸಬಹುದು ಮತ್ತು ನೀವು ಬಯಸಿದರೆ ನಿರ್ದಿಷ್ಟ ಚಟುವಟಿಕೆಗಳು ಅಥವಾ ಬೃಹತ್-ಪ್ರಮಾಣದ ಡೇಟಾವನ್ನು ಅಳಿಸಬಹುದು. ನೀವು ಯಾವಾಗಲೂ ಈ ಸೆಟ್ಟಿಂಗ್‌ಗಳನ್ನು ಮಾರ್ಪಡಿಸಬಹುದು ಅಥವಾ ನಿಮ್ಮ ಸ್ವಯಂ ಅಳಿಸುವಿಕೆ ಆಯ್ಕೆಯನ್ನು ಬದಲಾಯಿಸಬಹುದು.
  • ಸ್ಥಳ ಮಾಹಿತಿಯನ್ನು ಸೇವ್ ಮಾಡುವುದು: Google ಉತ್ಪನ್ನ ಅಥವಾ ಸೇವೆಯನ್ನು ಆಧರಿಸಿ, ಸ್ಥಳ ಮಾಹಿತಿಯನ್ನು ನಿಮ್ಮ Google ಖಾತೆಯಲ್ಲಿ ಸೇವ್ ಮಾಡಬಹುದು. ಉದಾಹರಣೆಗೆ, ನೀವು Photos ನಲ್ಲಿ ಸ್ಥಳಗಳನ್ನು ಟ್ಯಾಗ್ ಮಾಡಬಹುದು, ಅಥವಾ Maps ನಲ್ಲಿ ಮನೆ ಅಥವಾ ಕೆಲಸದ ವಿಳಾಸವನ್ನು ಸೇರಿಸಬಹುದು. ಈ ಸ್ಥಳದ ಮಾಹಿತಿಯನ್ನು ನೀವು ಅಳಿಸಬಹುದು.

ನೀವು ಡೇಟಾವನ್ನು ಅಳಿಸಿದಾಗ, ಅದನ್ನು ನಿಮ್ಮ ಖಾತೆಯಿಂದ ಸುರಕ್ಷಿತವಾಗಿ ಮತ್ತು ಸಂಪೂರ್ಣವಾಗಿ ತೆಗೆದುಹಾಕುವ ನೀತಿಯನ್ನು Google ಅನುಸರಿಸುತ್ತದೆ, ಆದ್ದರಿಂದ ಡೇಟಾವನ್ನು ಎಂದಿಗೂ ರಿಕವರಿ ಮಾಡಲು ಸಾಧ್ಯವಾಗುವುದಿಲ್ಲ. ಮೊದಲಿಗೆ, ನೀವು ಅಳಿಸುವ ಚಟುವಟಿಕೆಯನ್ನು ವೀಕ್ಷಣೆಯಿಂದ ತೆಗೆದುಹಾಕಲಾಗುತ್ತದೆ ಹಾಗೂ ನಿಮ್ಮ Google ಅನುಭವವನ್ನು ವೈಯಕ್ತೀಕರಿಸಲು ಅದನ್ನು ಇನ್ನು ಮುಂದೆ ಬಳಸುವುದಿಲ್ಲ. ನಂತರ, Google ಸಂಗ್ರಹಣೆ ಸಿಸ್ಟಂಗಳಲ್ಲಿರುವ ಡೇಟಾವನ್ನು ಸುರಕ್ಷಿತವಾಗಿ ಮತ್ತು ಸಂಪೂರ್ಣವಾಗಿ ಅಳಿಸಲು ವಿನ್ಯಾಸಗೊಳಿಸಲಾದ ಪ್ರಕ್ರಿಯೆಯನ್ನು Google ಪ್ರಾರಂಭಿಸುತ್ತದೆ. ಸಂಗ್ರಹಿಸಿದ ಡೇಟಾವನ್ನು Google ಹೇಗೆ ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನಿರ್ದಿಷ್ಟ ಸಮಯದ ನಂತರ ಅವಧಿ ಮುಗಿಯುವ ಮಾಹಿತಿ

ಇತರ ಸ್ಥಳ ಮಾಹಿತಿಗಾಗಿ, Google ಡೇಟಾವನ್ನು ಹೇಗೆ ಉಳಿಸಿಕೊಳ್ಳುತ್ತದೆ ಎಂಬಲ್ಲಿ ವಿವರಿಸಿದ ಹಾಗೆ, ಡೇಟಾವನ್ನು ಹಸ್ತಚಾಲಿತವಾಗಿ ಅಳಿಸುವ ಬದಲಿಗೆ, ಅದನ್ನು ಅಳಿಸುವ ಮೊದಲು Google, ನಿಗದಿತ ಅವಧಿಯವರೆಗೆ ಡೇಟಾವನ್ನು ಸಂಗ್ರಹಣೆ ಮಾಡುವ ಸಂದರ್ಭಗಳಿರುತ್ತವೆ. ಅದನ್ನು ಸುರಕ್ಷಿತವಾಗಿ ಮತ್ತು ಸಂಪೂರ್ಣವಾಗಿ ಅಳಿಸಲು ಬೇಕಾದ ಸಮಯವು, ಡೇಟಾದ ಪ್ರಕಾರವನ್ನು ಆಧರಿಸಿರುತ್ತದೆ, ಉದಾಹರಣೆಗೆ:

  • Google, 9 ತಿಂಗಳ ಬಳಿಕ IP ವಿಳಾಸದ ಭಾಗವನ್ನು ತೆಗೆದುಹಾಕುವ ಮೂಲಕ ಮತ್ತು 18 ತಿಂಗಳ ಬಳಿಕ ಕುಕೀ ಮಾಹಿತಿಯನ್ನು ತೆಗೆದುಹಾಕುವ ಮೂಲಕ ಸರ್ವರ್ ಲಾಗ್‌ಗಳಲ್ಲಿನ ಜಾಹೀರಾತು ನೀಡುವಿಕೆ ಡೇಟಾವನ್ನು ಅನಾಮಧೇಯಗೊಳಿಸುತ್ತದೆ.
  • 30 ದಿನಗಳ ನಂತರ ನಿಮ್ಮ ವೆಬ್ ಮತ್ತು ಆ್ಯಪ್‌ ಚಟುವಟಿಕೆಯಿಂದ IP-ಆಧಾರಿತ ಸ್ಥಳ ಮತ್ತು ಸಾಧನದ ಸ್ಥಳದ ಡೇಟಾವನ್ನು Google ಅಳಿಸುತ್ತದೆ.

ಸೀಮಿತ ಉದ್ದೇಶಗಳಿಗಾಗಿ ವಿಸ್ತರಿತ ಸಮಯಾವಧಿಯವರೆಗೆ ಉಳಿಸಿಕೊಳ್ಳುವ ಮಾಹಿತಿ

Google ಗೌಪ್ಯತೆ ನೀತಿಯಲ್ಲಿ ವಿವರಿಸಿದ ಹಾಗೆ, “ಕಾನೂನುಬದ್ಧ ವ್ಯಾಪಾರಕ್ಕಾಗಿ ಅಥವಾ ಭದ್ರತೆಗಾಗಿ, ವಂಚನೆ ಮತ್ತು ದುರುಪಯೋಗ ತಡೆಗಟ್ಟುವಿಕೆಯಂತಹ ಕಾನೂನು ಉದ್ದೇಶಗಳಿಗಾಗಿ ಅಥವಾ ಹಣಕಾಸಿನ ರೆಕಾರ್ಡ್‌ಗಳನ್ನು ಇರಿಸಿಕೊಳ್ಳುವುದಕ್ಕಾಗಿ ಅಗತ್ಯವಿದ್ದಾಗ, ಕೆಲವು ಡೇಟಾವನ್ನು ನಿಗದಿತ ಅವಧಿಗಿಂತ ಹೆಚ್ಚು ಸಮಯದವರೆಗೆ ನಾವು ಉಳಿಸಿಕೊಳ್ಳುತ್ತೇವೆ.” ನಮ್ಮ, ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುವ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ

ಆ್ಯಡ್‌ಗಳಿಗಾಗಿ ಸ್ಥಳ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ?

ನಿಮಗೆ ಹೆಚ್ಚು ಪ್ರಸ್ತುತವಾದ ಆ್ಯಡ್‌ಗಳನ್ನು ತೋರಿಸಲು ಸಹಾಯ ಮಾಡಲು

ನೀವು ನೋಡುವ ಆ್ಯಡ್‌ಗಳು ನಿಮ್ಮ ಸ್ಥಳದ ಮಾಹಿತಿಯನ್ನು ಆಧರಿಸಿರಬಹುದು. ಸಾಮಾನ್ಯವಾಗಿ, Google ನಲ್ಲಿ ಆ್ಯಡ್‌ಗಳು ಯಾವ ಉತ್ಪನ್ನಗಳಲ್ಲಿ ಕಾಣಿಸಿಕೊಳ್ಳುತ್ತವೆಯೋ, ಆ ಉತ್ಪನ್ನಗಳು ಬಳಸುವ ಪ್ರಕಾರದ ಸ್ಥಳದ ಮಾಹಿತಿಯನ್ನೇ ಆ್ಯಡ್‌ಗಳು ಸಹ ಬಳಸುತ್ತವೆ. ಉದಾಹರಣೆಗೆ, ನಿಮ್ಮ ಸೆಟ್ಟಿಂಗ್‌ಗಳನ್ನು ಆಧರಿಸಿ, Search ಮತ್ತು ಇತರ Google ಮೇಲ್ಮೈಗಳಲ್ಲಿ ಕಾಣಿಸುವ ಆ್ಯಡ್‌ಗಳು ನಿಮ್ಮ ಸಾಧನದ ಸ್ಥಳ, ನಿಮ್ಮ IP ವಿಳಾಸ, ಹಿಂದಿನ ಚಟುವಟಿಕೆ ಅಥವಾ ನಿಮ್ಮ Google ಖಾತೆಯ ಮೂಲಕ ನಿಮ್ಮ ಮನೆ ಮತ್ತು ಕೆಲಸದ ಸ್ಥಳಗಳನ್ನು ಆಧರಿಸಿರಬಹುದು. ಹೆಚ್ಚುವರಿಯಾಗಿ, ನಿಮ್ಮ ದೇಶ ಅಥವಾ ನೀವು ಆಸಕ್ತಿ ಹೊಂದಿರುವ ಸಾಮಾನ್ಯ ಪ್ರದೇಶವನ್ನು ಅಂದಾಜು ಮಾಡಲು ಮೆಟಾಡೇಟಾ (ಉದಾ., ಬ್ರೌಸರ್ ಸಮಯವಲಯ, ಡೊಮೇನ್, ಪುಟದ ಕಂಟೆಂಟ್‌, ಬ್ರೌಸರ್ ಪ್ರಕಾರ, ಪುಟದ ಭಾಷೆ) ಅನ್ನು ಬಳಸಬಹುದು. ನಿಮ್ಮ IP ವಿಳಾಸ, VPN, ಪ್ರಾಕ್ಸಿ ಸರ್ವೀಸ್ ಅಥವಾ ಇತರ ನೆಟ್‌ವರ್ಕ್ ಮಾಹಿತಿಯಿಂದ ನಾವು ಪಡೆಯುವ ಸ್ಥಳದ ಸಿಗ್ನಲ್‌ಗಳ ಜೊತೆಗೆ ನಾವು ಈ ಮೆಟಾಡೇಟಾವನ್ನು ಅವಲಂಬಿಸಬಹುದು.

ಸ್ಥಳ ಮಾಹಿತಿಯನ್ನು ಬಳಸುವುದರಿಂದ ನೀವು ವಾಸಿಸುವ ಪ್ರದೇಶಕ್ಕೆ ಅಥವಾ ನಿಮಗೆ ಸಂಬಂಧಿಸಿದ ಪ್ರದೇಶಗಳಿಗೆ ಅನುಗುಣವಾಗಿ ನೀವು ನೋಡುವ ಜಾಹೀರಾತುಗಳನ್ನು ಪ್ರಸ್ತುತಪಡಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ನಿಮ್ಮ ಸಾಧನದ ಸ್ಥಳ ಸೆಟ್ಟಿಂಗ್ ಆನ್ ಆಗಿದ್ದರೆ ಮತ್ತು ನಿಮ್ಮ ಸಮೀಪದಲ್ಲಿರುವ ರೆಸ್ಟೋರೆಂಟ್‌ಗಳಿಗಾಗಿ ನೀವು Google ನಲ್ಲಿ ಹುಡುಕಿದರೆ, ನಿಮ್ಮ ಸಮೀಪದ ರೆಸ್ಟೋರೆಂಟ್‌ಗಳ ಕುರಿತು ನಿಮಗೆ ಜಾಹೀರಾತುಗಳನ್ನು ತೋರಿಸಲು ನಿಮ್ಮ ಪ್ರಸ್ತುತ ಸಾಧನದ ಸ್ಥಳ ಮಾಹಿತಿಯನ್ನು ಬಳಸಬಹುದು. Google ನಲ್ಲಿನ ಜಾಹೀರಾತುಗಳ ಭಾಗವಾಗಿ, ಸಮೀಪದಲ್ಲಿರುವ ವ್ಯಾಪಾರಗಳಿಗೆ ಅಂತರವನ್ನು ತೋರಿಸಲು ನಿಮ್ಮ ಸ್ಥಳವನ್ನು ಸಹ ಬಳಸಬಹುದು.

ನಿಮಗೆ ಹೆಚ್ಚು ಉಪಯುಕ್ತವಾದ ಆ್ಯಡ್‌ಗಳನ್ನು ತೋರಿಸುವುದಕ್ಕಾಗಿ, Google ನಿಮ್ಮ ಹಿಂದಿನ ಬ್ರೌಸಿಂಗ್ ಅಥವಾ ಆ್ಯಪ್‌ನ ಚಟುವಟಿಕೆ (ಉದಾಹರಣೆಗೆ ನಿಮ್ಮ ಹುಡುಕಾಟಗಳು, ವೆಬ್‌ಸೈಟ್ ಭೇಟಿಗಳು ಅಥವಾ ನೀವು YouTube ನಲ್ಲಿ ವೀಕ್ಷಿಸಿದ ವೀಡಿಯೊಗಳು) ಮತ್ತು ವೆಬ್ ಮತ್ತು ಆ್ಯಪ್‌ ಚಟುವಟಿಕೆ ಸೆಟ್ಟಿಂಗ್‌ನ ಭಾಗವಾಗಿ ಸೇವ್ ಮಾಡಲಾದ ಸಾಮಾನ್ಯ ಪ್ರದೇಶಗಳನ್ನು ಸಹ ಬಳಸಬಹುದು. ಉದಾಹರಣೆಗೆ ನೀವು ಸಮೀಪದಲ್ಲಿ ಹಾಲನ್ನು ಎಲ್ಲಿಂದ ಖರೀದಿಸಬಹುದು ಎಂದು Google ನಲ್ಲಿ ಹುಡುಕಾಟ ನಡೆಸಿದರೆ, ಬಸ್ ಅಥವಾ ರೈಲಿಗಾಗಿ ಕಾಯುವಾಗ ನೀವು Google Search ಅನ್ನು ಆಗಾಗ ಬ್ರೌಸ್ ಮಾಡುವ ಸಾಮಾನ್ಯ ಪ್ರದೇಶದಲ್ಲಿನ ದಿನಸಿ ಅಂಗಡಿಗಳ ಆ್ಯಡ್‌ಗಳನ್ನು ನೀವು ನೋಡಬಹುದು.

ಜಾಹೀರಾತುದಾರರು ತಮ್ಮ ವ್ಯಾಪಾರದ ಸುತ್ತಮುತ್ತಲಿನ ದೇಶಗಳು, ನಗರಗಳು ಅಥವಾ ಪ್ರದೇಶಗಳಂತಹ ಸಾಮಾನ್ಯ ಪ್ರದೇಶಗಳಲ್ಲಿ ಪ್ರದರ್ಶಿಸಲು ಮಾತ್ರವೇ ಜಾಹೀರಾತುಗಳನ್ನು ಕೇಂದ್ರೀಕರಿಸಬಹುದು.

ನಮ್ಮ Display Network ಕುರಿತು ಹೆಚ್ಚಿನ ಮಾಹಿತಿಗಾಗಿ, ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.

ಕಾರ್ಯಕ್ಷಮತೆಯನ್ನು ಮಾಪನ ಮಾಡಲು ಜಾಹೀರಾತುದಾರರಿಗೆ ಸಹಾಯ ಮಾಡಲು

Google ಸೇವೆಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ವಿಶ್ಲೇಷಣೆ ಮತ್ತು ಮಾಪನ ಉದ್ದೇಶಗಳಿಗಾಗಿ ಸ್ಥಳ ಮಾಹಿತಿಯನ್ನು Google ಬಳಸಬಹುದು. ಉದಾಹರಣೆಗೆ, ನೀವು ಸ್ಥಳ ಇತಿಹಾಸವನ್ನು ಆನ್ ಮಾಡಲು ಆಯ್ಕೆ ಮಾಡಿದರೆ, ಆನ್‌ಲೈನ್ ಜಾಹೀರಾತಿನ ಪರಿಣಾಮವಾಗಿ ಜನರು ತಮ್ಮ ಸ್ಟೋರ್‌ಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆಯೇ ಎಂದು ಜಾಹೀರಾತುದಾರರಿಗೆ ಅಂದಾಜು ಮಾಡುವುದಕ್ಕೆ ಸಹಾಯ ಮಾಡಲು Google ಈ ಡೇಟಾವನ್ನು ಬಳಸುತ್ತದೆ. ಅನಾಮಧೇಯಗೊಳಿಸಿದ ಅಂದಾಜುಗಳನ್ನು ಮಾತ್ರ ಜಾಹೀರಾತುದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ, ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಲಾಗುವುದಿಲ್ಲ ಈ ಉದ್ದೇಶಕ್ಕಾಗಿ, Google ಜಾಹೀರಾತು ಕ್ಲಿಕ್‌ಗಳಂತಹ ನಿಮ್ಮ ಆನ್‌ಲೈನ್ ಚಟುವಟಿಕೆ ಡೇಟಾವನ್ನು ಜಾಹೀರಾತುದಾರರ ಸ್ಟೋರ್‌ಗಳಿಗೆ ಸಂಬಂಧಿಸಿದ ಸ್ಥಳ ಇತಿಹಾಸದ ಡೇಟಾದೊಂದಿಗೆ ಸಂಯೋಜಿಸುತ್ತದೆ. ನಿಮ್ಮ ಸ್ಥಳ ಇತಿಹಾಸವನ್ನು ಜಾಹೀರಾತುದಾರರೊಂದಿಗೆ ಹಂಚಿಕೊಂಡಿಲ್ಲ.

Google ನ ಉತ್ಪನ್ನಗಳು ಹಾಗೂ ಸೇವೆಗಳನ್ನು ಸುಧಾರಿಸಲು

Google ತನ್ನ ಜಾಹೀರಾತುಗಳ ಉತ್ಪನ್ನಗಳನ್ನು ಸುಧಾರಿಸಲು ಸ್ಥಳ ಮಾಹಿತಿಯನ್ನು ಸಹ ಬಳಸುತ್ತದೆ. ಉದಾಹರಣೆಗೆ, ನಿಮ್ಮ ಖಾತೆಯಲ್ಲಿ ಸೇವ್ ಮಾಡಲಾದ ಸಂಬಂಧಿತ ಚಟುವಟಿಕೆಯ ಸಾಮಾನ್ಯ ಪ್ರದೇಶವನ್ನು ಒಳಗೊಂಡಂತೆ ನೀವು ಸಂವಹನ ನಡೆಸುವ ಜಾಹೀರಾತುಗಳ ಡೇಟಾವನ್ನು ಒಟ್ಟುಗೂಡಿಸಬಹುದು ಮತ್ತು ಸ್ಮಾರ್ಟ್ ಬಿಡ್ಡಿಂಗ್ ಪರಿಕರಗಳನ್ನು ಸುಧಾರಿಸುವ ಯಂತ್ರ ಕಲಿಕೆ ಮಾದರಿಗಳಲ್ಲಿ ಬಳಸಬಹುದು. ನಿಮ್ಮ ಖಾತೆಯ ಡೇಟಾವನ್ನು ಜಾಹೀರಾತುದಾರರೊಂದಿಗೆ ಹಂಚಿಕೊಂಡಿಲ್ಲ.

ಆ್ಯಡ್‌ಗಳನ್ನು ತೋರಿಸಲು ನನ್ನ ಸ್ಥಳದ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಾನು ಹೇಗೆ ನಿಯಂತ್ರಿಸಬಹುದು?

ನನ್ನ ಆ್ಯಡ್ ಕೇಂದ್ರದಲ್ಲಿ ನೀವು Google ಬಳಸಿದ ಪ್ರದೇಶಗಳು ನಿಯಂತ್ರಣವನ್ನು ಆ್ಯಕ್ಸೆಸ್ ಮಾಡುವ ಮೂಲಕ, ನೀವು ನೋಡುವ ಆ್ಯಡ್‌ಗಳ ಮೇಲೆ ಪ್ರಭಾವ ಬೀರಲು ನೀವು ಹಿಂದೆ Google ಸೈಟ್‌ಗಳು ಮತ್ತು ಆ್ಯಪ್‌ಗಳನ್ನು ಬಳಸಿದ ನಿಮ್ಮ ಸಾಮಾನ್ಯ ಪ್ರದೇಶಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೀವು ನಿಯಂತ್ರಿಸಬಹುದು.

ನೀವು Google ಅನ್ನು ಬಳಸಿರುವ ಪ್ರದೇಶಗಳು ಆನ್ ಆಗಿದ್ದಾಗ

ನೀವು ಜಾಹೀರಾತುಗಳ ವೈಯಕ್ತೀಕರಣ ಮತ್ತು ನೀವು Google ಅನ್ನು ಬಳಸಿದ ಪ್ರದೇಶಗಳನ್ನು ಆನ್ ಮಾಡಿದಾಗ, ನಿಮ್ಮ ಜಾಹೀರಾತುಗಳನ್ನು ವೈಯಕ್ತೀಕರಿಸಲು ನೀವು Google ಸೈಟ್‌ಗಳು ಮತ್ತು ಆ್ಯಪ್‌ಗಳನ್ನು ಬಳಸುವ ಸಾಮಾನ್ಯ ಪ್ರದೇಶಗಳಿಗೆ ಸಂಬಂಧಿಸಿದ ನಿಮ್ಮ ವೆಬ್ ಮತ್ತು ಆ್ಯಪ್‌ ಚಟುವಟಿಕೆಯಲ್ಲಿ ಸೇವ್ ಮಾಡಲಾದ ಡೇಟಾವನ್ನು Google ಬಳಸುತ್ತದೆ.

ನೀವು Google ಅನ್ನು ಬಳಸಿರುವ ಪ್ರದೇಶಗಳು ಆಫ್ ಆಗಿದ್ದಾಗ

ಆ್ಯಡ್‌ಗಳ ವೈಯಕ್ತೀಕರಣ ಅಥವಾ ನೀವು Google ಅನ್ನು ಬಳಸಿರುವ ಪ್ರದೇಶಗಳು ಆಫ್ ಆಗಿದ್ದಾಗ, ನಿಮ್ಮ ಆ್ಯಡ್‌ಗಳನ್ನು ವೈಯಕ್ತೀಕರಿಸುವುದಕ್ಕಾಗಿ ನೀವು Google Sites ಅನ್ನು ಬಳಸಿದ ಸಾಮಾನ್ಯ ಪ್ರದೇಶಗಳಿಗೆ ಸಂಬಂಧಿಸಿದಂತೆ ನಿಮ್ಮ ವೆಬ್ ಮತ್ತು ಆ್ಯಪ್ ಚಟುವಟಿಕೆಯಲ್ಲಿ ಸೇವ್ ಮಾಡಲಾದ ಡೇಟಾವನ್ನು Google ಬಳಸುವುದಿಲ್ಲ. ನೀವು Google ಅನ್ನು ಬಳಸಿರುವ ಪ್ರದೇಶಗಳು ಆಫ್ ಆಗಿದ್ದಾಗಲೂ, ನಿಮ್ಮ ಪ್ರಸ್ತುತ ಸ್ಥಳ, ಮತ್ತು ನಿಮ್ಮ Google ಖಾತೆಯಲ್ಲಿ ನಿಮ್ಮ ಮನೆ ಮತ್ತು ಕೆಲಸದ ಸ್ಥಳ ಎಂದು ನೀವು ಸೆಟ್ ಮಾಡಿರುವ ಸ್ಥಳಗಳನ್ನು ಆಧರಿಸಿಯೂ ನೀವು ಆ್ಯಡ್‌ಗಳನ್ನು ನೋಡಬಹುದು.

ಇದಲ್ಲದೆ, ನೀವು ಸೈನ್-ಔಟ್ ಮಾಡಿದ್ದರೆ, ನಿಮ್ಮ ಸಾಧನ ಮತ್ತು ಆ್ಯಪ್ ಸೆಟ್ಟಿಂಗ್‌ಗಳನ್ನು ಆಧರಿಸಿ, ನಿಮಗೆ ಆ್ಯಡ್‌ಗಳನ್ನು ತೋರಿಸುವುದಕ್ಕಾಗಿ Google ನಿಮ್ಮ IP ವಿಳಾಸದಿಂದ ಅಥವಾ ನಿಮ್ಮ ಸಾಧನದಿಂದಲೂ ನಿಮ್ಮ ಪ್ರಸ್ತುತ ಸ್ಥಳವನ್ನು ಬಳಸಬಹುದು.

ನೀವು ಸೈನ್ ಔಟ್ ಮಾಡಿರುವಾಗ, ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಆನ್ ಮತ್ತು ಆಫ್ ಮಾಡುವುದು ಹೇಗೆ ಎಂಬ ಕುರಿತು ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ನೋಡಿ.

Google Apps
ಪ್ರಮುಖ ಮೆನು