ನಿಮ್ಮ ಸ್ಥಳ

ವಿಷಯಕ್ಕೆ ಹೋಗಿ

Google ನಲ್ಲಿ ಹಂಚಿಕೊಳ್ಳಲಾಗುತ್ತಿದೆ

ವಿಷಯಕ್ಕೆ ಹೋಗಿ

ಡೇಟಾ ಮತ್ತು ವೈಯಕ್ತಿಕಗೊಳಿಸುವಿಕೆ

ವಿಷಯಕ್ಕೆ ಹೋಗಿ

ಇದು ನಿಮ್ಮ ನಿಯಂತ್ರಣದಲ್ಲಿದೆ

ವಿಷಯಕ್ಕೆ ಹೋಗಿ

ನಿಮ್ಮ ಸ್ಥಳ

Google ನನ್ನ ಸ್ಥಳವನ್ನು ತಿಳಿದಿದೆಯೇ?

ನೀವು ಇಂಟರ್ನೆಟ್ ಅನ್ನು ಬಳಸುವಾಗ, ಆ್ಯಪ್‌ಗಳು ಮತ್ತು ಸೈಟ್‌ಗಳು ನೀವು ಎಲ್ಲಿರುವಿರಿ ಎಂಬುದನ್ನು ಅಂದಾಜು ಮಾಡುತ್ತವೆ ಮತ್ತು ಇದು Google ಗೆ ಸಹ ಅನ್ವಯಿಸುತ್ತದೆ. ನಿಮ್ಮ ಸಾಧನ ಸೆಟ್ಟಿಂಗ್‌ಗಳನ್ನು ಆಧರಿಸಿ Google ನಿಮ್ಮ ನಿಖರವಾದ ಸ್ಥಳವನ್ನು ಸಹ ತಿಳಿದುಕೊಳ್ಳಬಹುದು. (ನನ್ನ ಸ್ಥಳ ಎಷ್ಟು ನಿಖರವಾಗಿದೆ? ಎಂಬುದನ್ನು ನೋಡಿ)

ನೀವು Search, Maps ಅಥವಾ Google Assistant ಬಳಸಿ Google ನಲ್ಲಿ ಹುಡುಕಾಟ ಮಾಡಿದಾಗ, ನಿಮಗೆ ಇನ್ನಷ್ಟು ಸಹಾಯವಾಗುವ ಫಲಿತಾಂಶಗಳನ್ನು ನೀಡಲು ನಿಮ್ಮ ಪ್ರಸ್ತುತ ಸ್ಥಳವನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ, ನೀವು ರೆಸ್ಟೋರೆಂಟ್‌ಗಳಿಗಾಗಿ ಹುಡುಕಿದರೆ, ನೀವಿರುವ ಸ್ಥಳದ ಸಮೀಪದಲ್ಲಿನ ರೆಸ್ಟೋರೆಂಟ್‌ಗಳು ಬಹುಶಃ ಹೆಚ್ಚು ಉಪಯುಕ್ತ ಫಲಿತಾಂಶಗಳಾಗಿರಬಹುದು.

ನಿಮ್ಮ ಸ್ಥಳವನ್ನು ನೀವು ಹೇಗೆ ನಿರ್ವಹಿಸಬಹುದು ಎಂಬುದನ್ನು ನೋಡಿ

ಸ್ಥಳವನ್ನು ನಾನು ಹೇಗೆ ಆನ್ ಅಥವಾ ಆಫ್ ಮಾಡಬಹುದು?

ನೀವು Google ನಲ್ಲಿ ಹುಡುಕಾಟ ಮಾಡಿದಾಗ, ನೀವು ಯಾವ ಸಾಮಾನ್ಯ ಪ್ರದೇಶದಿಂದ ಹುಡುಕುತ್ತಿರುವಿರಿ ಎಂಬುದನ್ನು Google ಯಾವಾಗಲೂ ಅಂದಾಜು ಮಾಡುತ್ತದೆ. ನೀವು ಬಳಸುವ, ಇಂಟರ್ನೆಟ್‌ಗೆ ಸಂಪರ್ಕಿಸುವ ಯಾವುದೇ ಆ್ಯಪ್ ಅಥವಾ ವೆಬ್‌ಸೈಟ್‌ನಂತೆಯೇ Google ಸಹ, ನಿಮ್ಮ ಸಾಧನದ IP ವಿಳಾಸವನ್ನು ಆಧರಿಸಿ ನಿಮ್ಮ ಸ್ಥಳವನ್ನು ಅಂದಾಜು ಮಾಡುತ್ತದೆ. ಇನ್ನಷ್ಟು ತಿಳಿಯಲು ನಾನು ಎಲ್ಲಿದ್ದೇನೆ ಎಂಬುದು Google ಗೆ ಹೇಗೆ ತಿಳಿಯುತ್ತದೆ? ಎಂಬುದನ್ನು ನೋಡಿ.

ನೀವು Google ಅನ್ನು ಬಳಸುವಾಗ ನಿಮ್ಮ ನಿಖರವಾದ ಸ್ಥಳವನ್ನು ಕಳುಹಿಸಬೇಕೆ ಎಂಬುದಕ್ಕೆ, ಪ್ರತ್ಯೇಕ ಆ್ಯಪ್‌ಗಳು, ಸೈಟ್‌ಗಳು ಮತ್ತು ನಿಮ್ಮ ಸಾಧನಕ್ಕಾಗಿ ಸ್ಥಳ ಅನುಮತಿಯನ್ನು ನೀವು ಆನ್ ಅಥವಾ ಆಫ್ ಮಾಡಬಹುದು.

ಒಂದು ವೇಳೆ ನೀವು ಮನೆ ಅಥವಾ ಕೆಲಸದ ಸ್ಥಳಗಳನ್ನು ಹೊಂದಿಸಿದರೆ ಮತ್ತು ನೀವು ಮನೆ ಅಥವಾ ಕೆಲಸದ ಸ್ಥಳದಲ್ಲಿರುವಿರೇ ಎಂಬುದನ್ನು Google ಅಂದಾಜು ಮಾಡಿದರೆ, ನಂತರ ನಿಮ್ಮ ಹುಡುಕಾಟಕ್ಕಾಗಿ ನಿಖರವಾದ ವಿಳಾಸವನ್ನು ಬಳಸಲಾಗುತ್ತದೆ.

ನನ್ನ ಸ್ಥಳ ಎಷ್ಟು ನಿಖರವಾಗಿದೆ?

ನಿಮ್ಮ ಸಾಮಾನ್ಯ ಪ್ರದೇಶ

ನೀವು Google ನಲ್ಲಿ ಹುಡುಕಾಟ ಮಾಡಿದಾಗ, ನೀವು ಯಾವ ಸಾಮಾನ್ಯ ಪ್ರದೇಶದಿಂದ ಹುಡುಕುತ್ತಿರುವಿರಿ ಎಂಬುದನ್ನು Google ಯಾವಾಗಲೂ ಅಂದಾಜು ಮಾಡುತ್ತದೆ. ಈ ರೀತಿಯಲ್ಲಿ Google ನಿಮಗೆ ಸೂಕ್ತವಾದ ಫಲಿತಾಂಶಗಳನ್ನು ನೀಡಬಹುದು ಮತ್ತು ಹೊಸ ನಗರದಿಂದ ಸೈನ್ ಇನ್ ಮಾಡುವಂತಹ ಅಸಹಜ ಚಟುವಟಿಕೆಯನ್ನು ಪತ್ತೆಹಚ್ಚುವ ಮೂಲಕ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಬಹುದು.

ಸಾಮಾನ್ಯ ಪ್ರದೇಶವು 3 ಚದರ ಕಿ.ಮೀ ಗಿಂತಲೂ ದೊಡ್ಡದಾಗಿರುತ್ತದೆ ಮತ್ತು ಅದು ಕನಿಷ್ಠ 1,000 ಬಳಕೆದಾರರನ್ನು ಹೊಂದಿರುವುದರಿಂದ ನಿಮ್ಮ ಹುಡುಕಾಟದ ಸಾಮಾನ್ಯ ಪ್ರದೇಶವು ನಿಮ್ಮನ್ನು ಗುರುತಿಸುವುದಿಲ್ಲ, ಅದು ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ನಿಮ್ಮ ನಿಖರವಾದ ಸ್ಥಳ

ನೀವು ಅನುಮತಿ ನೀಡಿದರೆ, Google ನಿಮ್ಮ ನಿಖರವಾದ ಸ್ಥಳವನ್ನು ಬಳಸುತ್ತದೆ. ಉದಾಹರಣೆಗೆ, “ನನ್ನ ಸಮೀಪದಲ್ಲಿರುವ ಐಸ್ ಕ್ರೀಮ್”ನಂತಹ ಹುಡುಕಾಟಗಳಿಗೆ ಅಥವಾ ಸ್ಟೋರ್‌ವೊಂದಕ್ಕೆ ತೆರಳಲು ತಿರುವಿನಿಂದ ತಿರುವಿಗೆ ನಡಿಗೆ ಮಾರ್ಗಗಳು, ಇಂತಹ ಹುಡುಕಾಟಗಳಿಗೆ ಅತ್ಯಂತ ಸೂಕ್ತವಾದ ಫಲಿತಾಂಶಗಳನ್ನು ನೀಡಲು Google ಗೆ ನಿಮ್ಮ ನಿಖರವಾದ ಸ್ಥಳದ ಅಗತ್ಯವಿದೆ.

ನಿಖರವಾಗಿ ನೀವು ಎಲ್ಲಿರುವಿರಿ ಎಂಬುದು ನಿಖರವಾದ ಸ್ಥಳದ ಅರ್ಥ, ಅಂದರೆ ಒಂದು ನಿರ್ದಿಷ್ಟವಾದ ವಿಳಾಸದಂತಹುದು.

Google ಗೆ ನನ್ನ ಸ್ಥಳ ಹೇಗೆ ತಿಳಿದಿದೆ?

ನಿಮ್ಮ ಸ್ಥಳವು ವಿವಿಧ ಮೂಲಗಳಿಂದ ಬರುತ್ತದೆ, ನೀವು ಎಲ್ಲಿರುವಿರಿ ಎಂಬುದನ್ನು ಅಂದಾಜು ಮಾಡಲು ಅವುಗಳನ್ನು ಒಟ್ಟುಗೂಡಿಸಿ ಬಳಸಲಾಗುತ್ತದೆ.

ನಿಮ್ಮ ಸಾಧನದ IP ವಿಳಾಸ

IP ವಿಳಾಸಗಳನ್ನು ಸ್ಥೂಲವಾಗಿ ಭೌಗೋಳಿಕ ನೆಲೆಯಲ್ಲಿ ನಿಯೋಜಿಸಲಾಗುತ್ತದೆ, ಫೋನ್ ಸಂಖ್ಯೆಯ ಪ್ರದೇಶ ಕೋಡ್‌ಗಳು ಇದ್ದಂತೆಯೇ ಇವುಗಳು ಕೂಡ. google.com ಅನ್ನು ಒಳಗೊಂಡಂತೆ ನೀವು ಬಳಸುವ ಯಾವುದೇ ಆ್ಯಪ್ ಅಥವಾ ವೆಬ್‌ಸೈಟ್, ನಿಮ್ಮ IP ವಿಳಾಸದಿಂದಾಗಿ ನೀವು ಇರುವ ಸಾಮಾನ್ಯ ಪ್ರದೇಶವನ್ನು ಅಂದಾಜು ಮಾಡಬಹುದು. ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರು ನಿಮ್ಮ ಸಾಧನದ IP ವಿಳಾಸವನ್ನು ನಿಯೋಜಿಸಿದ್ದಾರೆ ಮತ್ತು ಇಂಟರ್ನೆಟ್ ಬಳಸಲು ಇದು ಅಗತ್ಯವಾಗಿದೆ.

ನಿಮ್ಮ ಸಾಧನದ ಸ್ಥಳ

ನಿಮ್ಮ ಸಾಧನದ ಸ್ಥಳವನ್ನು ಬಳಸಲು ನೀವು Google ಆ್ಯಪ್ ಅಥವಾ ಸೈಟ್‌ಗೆ ಅನುಮತಿ ನೀಡಿದರೆ, ನೀವು ಎಲ್ಲಿರುವಿರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಆ ಮಾಹಿತಿಯನ್ನು ಬಳಸಬಹುದು. ಬಹುತೇಕ ಎಲ್ಲಾ ಸಾಧನಗಳು, ಸಾಮಾನ್ಯವಾಗಿ ಸೆಟ್ಟಿಂಗ್‌ಗಳಲ್ಲಿ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಸ್ಥಾನ ಸೆಟ್ಟಿಂಗ್‌ಗಳನ್ನು ನಿರ್ಮಿಸಲಾಗಿರುತ್ತದೆ.

Google ನಲ್ಲಿನ ನಿಮ್ಮ ಚಟುವಟಿಕೆ

ನಿಮ್ಮ ಹಿಂದಿನ Google ಹುಡುಕಾಟಗಳನ್ನು ಆಧರಿಸಿ Google ನೀವು ಇರುವ ಸಾಮಾನ್ಯ ಪ್ರದೇಶವನ್ನು ಅಂದಾಜು ಮಾಡಬಹುದು. ಉದಾಹರಣೆಗೆ, ನೀವು ಮುಂಬೈನಲ್ಲಿ ಆಗಾಗ ಪಿಜ್ಜಾಗಾಗಿ ಹುಡುಕುತ್ತಿದ್ದರೆ, ಸಹಜವಾಗಿಯೇ ನೀವು ಮುಂಬೈನಲ್ಲಿ ಫಲಿತಾಂಶಗಳನ್ನು ನೋಡಲು ಬಯಸುವಿರಿ.

ನಿಮ್ಮ ಲೇಬಲ್ ಮಾಡಿದ ಸ್ಥಳಗಳು

ನಿಮ್ಮ ಮನೆ ಅಥವಾ ಕೆಲಸದ ಸ್ಥಳವನ್ನು ಹೊಂದಿಸಿದರೆ, ನೀವು ಎಲ್ಲಿರುವಿರಿ ಎಂಬುದನ್ನು ಅಂದಾಜು ಮಾಡಲು Google ಅವುಗಳನ್ನು ಬಳಸಬಹುದು. ಉದಾಹರಣೆಗೆ, ಒಂದು ವೇಳೆ ನಿಮ್ಮ ಮನೆ ವಿಳಾಸವನ್ನು ಹೊಂದಿಸಿದರೆ, ಮತ್ತು ನಿಮ್ಮ IP ವಿಳಾಸ, ಹಿಂದಿನ ಚಟುವಟಿಕೆ ಅಥವಾ ಸ್ಥಳ ಮಾಹಿತಿಯ ಇತರ ಮೂಲಗಳು ನೀವು ಮನೆಯ ಹತ್ತಿರ ಇರಬಹುದು ಎಂದು ಸೂಚಿಸುತ್ತವೆ, ನಂತರ ನೀವು ಎಲ್ಲಿರುವಿರಿ ಎಂಬುದನ್ನು ಅಂದಾಜು ಮಾಡಲು ನಾವು ನಿಮ್ಮ ಮನೆಯ ಸ್ಥಳವನ್ನು ಬಳಸುತ್ತೇವೆ.

ನನ್ನ ಸ್ಥಳವನ್ನು ಯಾರು ನೋಡಬಹುದು?

ಇದು ನಿಮಗೆ ಬಿಟ್ಟ ವಿಷಯ. ನೀವು Google ಸ್ಥಳ ಹಂಚಿಕೊಳ್ಳುವಿಕೆಯನ್ನು ಬಳಸಿದರೆ, Google ಆ್ಯಪ್‌ಗಳು ಮತ್ತು ಸೈಟ್‌ಗಳಾದ್ಯಂತ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ನಿಮ್ಮ ನೈಜ ಸಮಯದ ಸ್ಥಳವನ್ನು ಹಂಚಿಕೊಳ್ಳಬಹುದು.

ನಿಮ್ಮ ಸ್ಥಳವನ್ನು ಹಂಚಿಕೊಳ್ಳುತ್ತಿರುವಿರೇ ಎಂಬುದನ್ನು ಪರೀಕ್ಷಿಸಿ

ಡಿಫಾಲ್ಟ್ ಆಗಿ ಸ್ಥಳ ಹಂಚಿಕೆಯು ಆಫ್ ಆಗಿದೆ. ನಿಮ್ಮ ನೈಜ ಸಮಯದ ಸ್ಥಳವನ್ನು ಹಂಚಿಕೊಳ್ಳಲು ನೀವು ಬಯಸಿದರೆ, ಯಾರೊಂದಿಗೆ ಮತ್ತು ಎಲ್ಲಿಯವರೆಗೆ ಹಂಚಿಕೊಳ್ಳಲು ಬಯಸುವಿರಿ ಎಂಬುದನ್ನು ಆಯ್ಕೆ ಮಾಡಬೇಕು ಮತ್ತು ಖಚಿತಪಡಿಸಬೇಕು. ನಿಮ್ಮ ಸ್ಥಳ ಹಂಚಿಕೊಳ್ಳುವಿಕೆಯನ್ನು ಯಾವ ಸಮಯದಲ್ಲಾದರೂ ನೀವು ನಿಲ್ಲಿಸಬಹುದು.

ನಿಮ್ಮ ನೈಜ ಸಮಯದ ಸ್ಥಳವನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ನೋಡಿ.

ಡೇಟಾ ಮತ್ತು ವೈಯಕ್ತಿಕಗೊಳಿಸುವಿಕೆ

ನನ್ನ ಬಗೆಗಿನ ಯಾವ ಡೇಟಾವನ್ನು Google ಸಂಗ್ರಹಿಸುತ್ತದೆ?

ನೀವು Google ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ಬಳಸಿದಾಗ, ನಿಮಗೆ ಒದಗಿಸಬೇಕಾದ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ, ಅವು ನಿಮಗೆ ಇನ್ನಷ್ಟು ಸಹಕಾರಿಯಾಗುವಂತೆ ಮಾಡುತ್ತೇವೆ, ಮತ್ತು Google ಏಕೆ ಡೇಟಾ ಸಂಗ್ರಹಿಸುತ್ತದೆ? ಇದರಲ್ಲಿ ವಿವರಿಸಿದಂತೆ ಇತರ ಕಾರಣಗಳಿಗಾಗಿ ಸಂಗ್ರಹಿಸುತ್ತೇವೆ.

ನಿಮ್ಮ ಸೆಟ್ಟಿಂಗ್‌ಗಳ ಮೂಲಕ, ನಾವು ಸಂಗ್ರಹಿಸುವ ಡೇಟಾವನ್ನು ಮತ್ತು ಆ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನೀವು ಮಿತಿಗೊಳಿಸಬಹುದು. ಉದಾಹರಣೆಗೆ, ನಿಮ್ಮ YouTube ಇತಿಹಾಸವನ್ನು ನಿಮ್ಮ Google ಖಾತೆಯಲ್ಲಿ ನಾವು ಉಳಿಸಬಾರದು ಎಂದು ನೀವು ಬಯಸಿದರೆ, ನೀವು YouTube ಇತಿಹಾಸವನ್ನು ಆಫ್ ಮಾಡಬಹುದು. Google ಏನನ್ನು ಉಳಿಸುತ್ತದೆ ಎಂಬುದನ್ನು ನಾನು ಹೇಗೆ ನಿರ್ಧರಿಸಬಹುದು? ಎಂಬುದನ್ನು ನೋಡಿ

ಡೇಟಾ ಎಂದರೇನು?

ನೀವು ನಮಗೆ ಒದಗಿಸುವ, ನಿಮ್ಮನ್ನು ವೈಯಕ್ತಿಕವಾಗಿ ಗುರುತಿಸುವ ವಿಷಯಗಳಾದ ನಿಮ್ಮ ಹೆಸರು ಅಥವಾ ಇಮೇಲ್ ವಿಳಾಸದಂತಹವುಗಳನ್ನು ನಿಮ್ಮ ವೈಯಕ್ತಿಕ ಮಾಹಿತಿಯು ಒಳಗೊಂಡಿರುತ್ತದೆ. Google ನಿಂದ ನಿಮಗೆ ಸಮಂಜಸವಾಗಿ ಲಿಂಕ್ ಆಗಿರಬಹುದಾದ ಇತರ ಡೇಟಾವನ್ನು ಸಹ ಇದು ಒಳಗೊಂಡಿರುತ್ತದೆ, ಉದಾಹರಣೆಗೆ, ನಿಮ್ಮ Google ಖಾತೆಯಲ್ಲಿ ನಿಮ್ಮೊಂದಿಗೆ ನಾವು ಸಂಯೋಜಿಸುವ ಮಾಹಿತಿ.

ನಿಮ್ಮ ವೈಯಕ್ತಿಕ ಮಾಹಿತಿಯು ಎರಡು ಪ್ರಕಾರದ ವಿಷಯಗಳನ್ನು ಒಳಗೊಂಡಿದೆ:

ನೀವು ಒದಗಿಸುವ ಅಥವಾ ರಚಿಸುವ ವಿಷಯಗಳು

ನೀವು Google ಖಾತೆಯನ್ನು ರಚಿಸಿದಾಗ, ನಿಮ್ಮ ಹೆಸರು ಮತ್ತು ಪಾಸ್‌ವರ್ಡ್‌ನಂತಹ ವೈಯಕ್ತಿಕ ಮಾಹಿತಿಯನ್ನು ನೀವು ನಮಗೆ ಒದಗಿಸಿರುತ್ತೀರಿ.

ನೀವು ರಚಿಸುವ ವಿಷಯ, ಅಪ್‌ಲೋಡ್ ಮಾಡುವ ಅಥವಾ ಇತರರಿಂದ ಸ್ವೀಕರಿಸುವ ಇಮೇಲ್ ಸಂದೇಶಗಳು ಮತ್ತು ಫೋಟೋಗಳಂತಹವುಗಳನ್ನು ಸಹ ನೀವು ಉಳಿಸಬಹುದು.

Google ನಲ್ಲಿ ನೀವು ಮಾಡುವಂತಹವು

ಅತ್ಯುತ್ತಮ ಅನುಭವವನ್ನು ಒದಗಿಸಲು, ನೀವು ಹುಡುಕುವ ಪದಗಳು ಮತ್ತು ನೀವು ವೀಕ್ಷಿಸುವ ವೀಡಿಯೊಗಳು, ಯಾರೊಂದಿಗೆ ನೀವು ಸಂವಹನ ನಡೆಸುವಿರಿ ಅಥವಾ ವಿಷಯ ಹಂಚಿಕೊಳ್ಳುವಿರಿ, ಹಾಗೂ ನಿಮ್ಮ Chrome ಬ್ರೌಸಿಂಗ್ ಇತಿಹಾಸಗಳನ್ನು ಒಳಗೊಂಡಂತೆ ನಮ್ಮ ಸೇವೆಗಳಲ್ಲಿನ ನಿಮ್ಮ ಚಟುವಟಿಕೆಯ ಕುರಿತು ನಾವು ಮಾಹಿತಿಯನ್ನು ಸಂಗ್ರಹಿಸುತ್ತೇವೆ.

Google ಸೇವೆಗಳಿಗೆ ಪ್ರವೇಶಪಡೆಯಲು ನೀವು ಬಳಸುವ ಆ್ಯಪ್‌ಗಳು, ಬ್ರೌಸರ್‌ಗಳು ಮತ್ತು ಸಾಧನಗಳ ಕುರಿತು ನಾವು ಮಾಹಿತಿ ಸಂಗ್ರಹಿಸುತ್ತೇವೆ, ಇದು ನಿಮ್ಮ ಸಾಧನದ ಬ್ಯಾಟರಿ ಕಡಿಮೆ ಇದ್ದಾಗ, ನಿಮ್ಮ ಸ್ಕ್ರೀನ್ ಅನ್ನು ಮಂಕಾಗಿಸುವಂತಹ ವೈಶಿಷ್ಟ್ಯಗಳನ್ನು ಒದಗಿಸಲು ನಮಗೆ ಸಹಾಯ ಮಾಡುತ್ತದೆ.

ನೀವು ತಿರುವಿನಿಂದ ತಿರುವಿಗೆ ಮಾರ್ಗ ನಿರ್ದೇಶನಗಳಂತಹ ವೈಶಿಷ್ಟ್ಯಗಳನ್ನು ಬಳಸಿದಾಗ, ನಿಮ್ಮ ಸ್ಥಳವನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಹೆಚ್ಚಿನ ಮಾಹಿತಿಗೆ, ಸ್ಥಳ ವಿಭಾಗವನ್ನು ನೋಡಿ.

Google ಏಕೆ ಡೇಟಾವನ್ನು ಸಂಗ್ರಹಿಸುತ್ತದೆ?

ನಮ್ಮ ಸೇವೆಗಳನ್ನು ಒದಗಿಸಲು, ಅವುಗಳನ್ನು ನಿಮಗೆ ಇನ್ನಷ್ಟು ಸಹಕಾರಿಯಾಗಿಸಲು ಮತ್ತು 'ನಾವು ಡೇಟಾವನ್ನು ಬಳಸುವ ವಿಧಾನಗಳಲ್ಲಿ' ವಿವರಿಸಿರುವ ಇತರ ಕಾರಣಗಳಿಗಾಗಿ ನಮಗೆ ಬೇಕಾದ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.

ಉದಾಹರಣೆಗೆ, ನೀವು ಎಲ್ಲಿಗೆ ಹೊರಟಿರುವಿರೋ ಅಲ್ಲಿಗೆ ತಲುಪಲು Google Maps, ಟ್ರಾಫಿಕ್ ಅನ್ನು ತಪ್ಪಿಸಿ, ನಿಮಗೆ ಸಹಾಯ ಮಾಡಬಹುದು. ಏಕೆಂದರೆ ಅದು ನೀವು ಎಲ್ಲಿರುವಿರಿ ಎಂಬುದರ ಕುರಿತ ಮಾಹಿತಿಯನ್ನು (ನಿಮ್ಮ ಡೇಟಾ) ಸಾರ್ವಜನಿಕ ಡೇಟಾದೊಂದಿಗೆ ಸಂಯೋಜಿಸುತ್ತದೆ (ನಕ್ಷೆಗಳು ಮತ್ತು ಸಾರ್ವಜನಿಕ ಸ್ಥಳಗಳ ಕುರಿತ ಮಾಹಿತಿ).

ನಾವು ಡೇಟಾವನ್ನು ಬಳಸುವ ವಿಧಾನಗಳು

ನಮ್ಮ ಸೇವೆಗಳನ್ನು ಒದಗಿಸಲು

ನೀವು ಹುಡುಕುವ ಪದಗಳ ಕುರಿತು ಫಲಿತಾಂಶಗಳನ್ನು ನೀಡುವುದಕ್ಕಾಗಿ, ಆ ಪದಗಳನ್ನು ಪ್ರಕ್ರಿಯೆಗೊಳಿಸುವಂತಹ ಸೇವೆಗಳನ್ನು ಒದಗಿಸಲು ನಾವು ಡೇಟಾವನ್ನು ಬಳಸುತ್ತೇವೆ.

ನಮ್ಮ ಸೇವೆಗಳನ್ನು ನಿರ್ವಹಿಸುವುದು ಮತ್ತು ಸುಧಾರಿಸುವುದು

ನಮ್ಮ ಸೇವೆಗಳನ್ನು ನಿರ್ವಹಿಸಲು ಮತ್ತು ಸುಧಾರಿಸಲು ಡೇಟಾ ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ಸೇವೆ ಸ್ಥಗಿತಗೊಂಡಿರುವುದನ್ನು ನಾವು ಟ್ರ್ಯಾಕ್ ಮಾಡಬಹುದು. ಮತ್ತು ಜನರು ಹೆಚ್ಚಾಗಿ ಯಾವ ಹುಡುಕಾಟ ಪದಗಳನ್ನು ತಪ್ಪಾಗಿ ಬರೆಯುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಂಡರೆ ನಮ್ಮ ಎಲ್ಲಾ ಸೇವೆಗಳಾದ್ಯಂತ ಕಾಗುಣಿತ ಪರೀಕ್ಷೆಯ ವೈಶಿಷ್ಟ್ಯವನ್ನು ಸುಧಾರಿಸಲು ಸಾಧ್ಯವಾಗುತ್ತದೆ.

ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು

ಹೊಸ ಸೇವೆಗಳನ್ನು ಅಭಿವೃದ್ಧಿಪಡಿಸಲು ಡೇಟಾ ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, Google ನ ಮೊದಲ ಫೋಟೋಗಳ ಆ್ಯಪ್, Picasa ದಲ್ಲಿ ಜನರು ತಮ್ಮ ಫೋಟೋಗಳನ್ನು ಹೇಗೆ ವ್ಯವಸ್ಥಿತಗೊಳಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಂಡ ಕಾರಣ, Google Photos ಆ್ಯಪ್ ಅನ್ನು ವಿನ್ಯಾಸಗೊಳಿಸಿ, ಪ್ರಾರಂಭಿಸಲು ನಮಗೆ ಸಾಧ್ಯವಾಯಿತು.

ವಿಷಯ ಮತ್ತು ಜಾಹೀರಾತುಗಳು ಸೇರಿದಂತೆ, ವೈಯಕ್ತೀಕರಿಸಿದ ಸೇವೆಗಳನ್ನು ಒದಗಿಸುವುದು

ವೈಯಕ್ತಿಕಗೊಳಿಸಿದ ವಿಷಯವನ್ನು ಒದಗಿಸಲು ನಾವು ಡೇಟಾವನ್ನು ಬಳಸುತ್ತೇವೆ, ಉದಾಹರಣೆಗೆ, ನೀವು ಇಷ್ಟಪಡಬಹುದಾದ ವೀಡಿಯೊಗಳಿಗಾಗಿ ಮಾಡುವ ಶಿಫಾರಸುಗಳು. ನಿಮ್ಮ ಸೆಟ್ಟಿಂಗ್‌ಗಳು ಮತ್ತು ವಯಸ್ಸನ್ನು ಆಧರಿಸಿ, ನಿಮ್ಮ ಆಸಕ್ತಿಗಳಿಗೆ ಅನುಗುಣವಾಗಿ ನಾವು ನಿಮಗೆ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ತೋರಿಸುತ್ತೇವೆ.

ಕಾರ್ಯಕ್ಷಮತೆಯನ್ನು ಮಾಪನ ಮಾಡಿ

ಕಾರ್ಯಕ್ಷಮತೆಯನ್ನು ಮಾಪನ ಮಾಡಲು ಮತ್ತು ನಮ್ಮ ಸೇವೆಗಳನ್ನು ಹೇಗೆ ಬಳಸಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ನಾವು ಡೇಟಾವನ್ನು ಬಳಸುತ್ತೇವೆ

ನಿಮ್ಮೊಂದಿಗೆ ಸಂವಹಿಸಲು

ಒಂದು ವೇಳೆ ನಾವು ಸಂಶಯಾಸ್ಪದ ಚಟುವಟಿಕೆಯನ್ನು ಪತ್ತೆಹಚ್ಚಿದರೆ ನಿಮಗೆ ಅಧಿಸೂಚನೆ ಕಳುಹಿಸಲು ನಿಮ್ಮ ಇಮೇಲ್ ವಿಳಾಸವನ್ನು ನಾವು ಬಳಸಬಹುದು

Google, ನಮ್ಮ ಬಳಕೆದಾರರು ಮತ್ತು ಸಾರ್ವಜನಿಕರನ್ನು ಸಂರಕ್ಷಿಸಲು

ವಂಚನೆಯನ್ನು ಪತ್ತೆಹಚ್ಚಲು ಮತ್ತು ತಡೆಯುವ ರೀತಿಯಲ್ಲಿ, ಜನರನ್ನು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿಸಲು ನಾವು ಡೇಟಾವನ್ನು ಬಳಸುತ್ತೇವೆ

ವಿಷಯಗಳನ್ನು ವೈಯಕ್ತಿಕಗೊಳಿಸಲು ಡೇಟಾವನ್ನು Google ಹೇಗೆ ಬಳಸುತ್ತದೆ?

“ವೈಯಕ್ತಿಕಗೊಳಿಸುವಿಕೆ” ಎಂಬುದು ನಮ್ಮ ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ನಿಮಗಾಗಿ ರೂಪಿಸಲು ನಾವು ಸಂಗ್ರಹಿಸಿರುವ ಮಾಹಿತಿಯನ್ನು ಬಳಸುವುದರ ಕುರಿತು ಆಗಿದೆ, ಉದಾಹರಣೆಗೆ:

  • ನೀವು ಇಷ್ಟಪಡಬಹುದಾದ ವೀಡಿಯೊಗಳಿಗಾಗಿ ಶಿಫಾರಸುಗಳು
  • Google ಆ್ಯಪ್‌ಗಳು ಮತ್ತು ಸೈಟ್‌ಗಳನ್ನು ನೀವು ಹೇಗೆ ಬಳಸುವಿರಿ ಎಂಬುದಕ್ಕೆ ಭದ್ರತಾ ಸಲಹೆಗಳನ್ನು ಅಳವಡಿಸಲಾಗಿದೆ (ಭದ್ರತಾ ಪರಿಶೀಲನೆ) ಅನ್ನು ನೋಡಿ

ಸೆಟ್ಟಿಂಗ್ ಆಫ್ ಇದ್ದಾಗ ಅಥವಾ ನಿರ್ದಿಷ್ಟ ವಯಸ್ಸಿನವರಿಗೆ ತೋರಿಸದೇ ಇರುವ ಸಂದರ್ಭಗಳನ್ನು ಹೊರತುಪಡಿಸಿ, ಜಾಹೀರಾತುಗಳನ್ನು ವೈಯಕ್ತಿಕಗೊಳಿಸಲು ಸಹ ನಾವು ಡೇಟಾವನ್ನು ಬಳಸುತ್ತೇವೆ.

ನಾನು ನೋಡುವ ಜಾಹೀರಾತುಗಳನ್ನು Google ವೈಯಕ್ತಿಕಗೊಳಿಸುವುದೇ?

ನಾವು ತೋರಿಸುವ ಜಾಹೀರಾತುಗಳು ಸಾಧ್ಯವಾದಷ್ಟು ಉಪಯುಕ್ತವಾಗಿರುವಂತೆ ಮಾಡಲು ನಾವು ಪ್ರಯತ್ನಿಸುತ್ತೇವೆ. ಆದರೆ, ನಿರ್ದಿಷ್ಟ ವಯೋಮಾನಗಳಿಗೆ ಅಥವಾ ಜಾಹೀರಾತು ವೈಯಕ್ತೀಕರಣವನ್ನು ಆಫ್ ಮಾಡಿರುವವರಿಗೆ ನಾವು ಜಾಹೀರಾತುಗಳನ್ನು ವೈಯಕ್ತಿಕಗೊಳಿಸುವುದಿಲ್ಲ.

ಜಾಹೀರಾತುಗಳನ್ನು ವೈಯಕ್ತಿಕಗೊಳಿಸದೆಯೂ ಸಹ ನಾವು ಅವುಗಳನ್ನು ಈಗಲೂ ಉಪಯುಕ್ತವಾಗಿಸುತ್ತೇವೆ. ಉದಾಹರಣೆಗೆ, ನೀವು “ಹೊಸ ಶೂಗಳು” ಎಂಬ ಫಲಿತಾಂಶಗಳ ಪುಟವನ್ನು ನೋಡುತ್ತಿದ್ದರೆ ನೀವು ಸ್ನೀಕರ್ ಕಂಪನಿಯೊಂದರ ಜಾಹೀರಾತನ್ನು ಸಹ ನೋಡಬಹುದು. ದಿನದ ಸಮಯ, ಸಾಮಾನ್ಯ ಸ್ಥಳ ಮತ್ತು ನೀವು ನೋಡುತ್ತಿರುವ ಪುಟದ ವಿಷಯದಂತಹ ಸಾಮಾನ್ಯ ಅಂಶಗಳನ್ನು ಜಾಹೀರಾತು ಆಧರಿಸಿರಬಹುದು.

ಇದು ನಿಮ್ಮ ನಿಯಂತ್ರಣದಲ್ಲಿದೆ

ನನ್ನ ಖಾತೆಗೆ Google ಏನನ್ನು ಉಳಿಸುತ್ತದೆ ಎಂಬುದನ್ನು ನಾನು ಹೇಗೆ ನಿರ್ಧರಿಸಬೇಕು?

Photos ನಂತಹ Google ಸೇವೆಯನ್ನು ನೀವು ಬಳಸಿದಾಗ, ಅದರಲ್ಲಿರುವ ಸೆಟ್ಟಿಂಗ್‌ಗಳು ನಿಮ್ಮ ಫೋಟೋಗಳನ್ನು ಬ್ಯಾಕಪ್ ಮತ್ತು ಸಿಂಕ್ ಮಾಡಬೇಕೆ ಎಂಬ ವಿಷಯಗಳನ್ನು ನಿರ್ಧರಿಸಲು ಅನುಮತಿಸುತ್ತವೆ.

Google ಆ್ಯಪ್‌ಗಳು ಮತ್ತು ಸೈಟ್‌ಗಳಾದ್ಯಂತ ನಿಮ್ಮ ಅನುಭವವನ್ನು ವೈಯಕ್ತಿಕಗೊಳಿಸಲು ಸಹಾಯ ಮಾಡುವ ಸೆಟ್ಟಿಂಗ್‌ಗಳು ಸಹ ಇವೆ. ಎರಡು ಮುಖ್ಯವಾದ ಅಂಶಗಳೆಂದರೆ ವೆಬ್ & ಆ್ಯಪ್ ಚಟುವಟಿಕೆ ಮತ್ತು YouTube ಇತಿಹಾಸ.

ಈ ನಿಯಂತ್ರಣಗಳು ಆನ್ ಇದ್ದಾಗ:

  • Google ಆ್ಯಪ್‌ಗಳು ಮತ್ತು ಸೈಟ್‌ಗಳಲ್ಲಿನ ನಿಮ್ಮ ಚಟುವಟಿಕೆಯ ಕುರಿತಾದ ಮಾಹಿತಿಯನ್ನು ನಿಮ್ಮ Google ಖಾತೆಗೆ ಉಳಿಸಲಾಗಿದೆ ಮತ್ತು
  • ನಿಮ್ಮ Google ಅನುಭವವನ್ನು ವೈಯಕ್ತಿಕಗೊಳಿಸಲು, ಉಳಿಸಲಾದ ಮಾಹಿತಿಯನ್ನು ಬಳಸಲಾಗುವುದು

ವೆಬ್ ಮತ್ತು ಆ್ಯಪ್ ಚಟುವಟಿಕೆ

Search ಮತ್ತು Maps ನಂತಹ Google ಸೈಟ್‌ಗಳು ಮತ್ತು ಆ್ಯಪ್‌ಗಳಲ್ಲಿ ನಿಮ್ಮ ಚಟುವಟಿಕೆಯನ್ನು ಉಳಿಸುತ್ತದೆ ಮತ್ತು ಸಂಯೋಜಿತವಾಗಿರುವ, ಸ್ಥಳದಂತಹ ಮಾಹಿತಿಯನ್ನು ಒಳಗೊಳ್ಳುತ್ತದೆ. ಇದು Google ಸೇವೆಗಳನ್ನು ಬಳಸುವ ಸೈಟ್‌ಗಳು, ಆ್ಯಪ್‌ಗಳು ಮತ್ತು ಸಾಧನಗಳಿಂದ ಸಿಂಕ್ ಮಾಡಿದ Chrome ಇತಿಹಾಸ ಮತ್ತು ಚಟುವಟಿಕೆಯನ್ನು ಸಹ ಉಳಿಸುತ್ತದೆ.

Maps, Search ಮತ್ತು ಇತರ Google ಸೇವೆಗಳಲ್ಲಿ ನಿಮ್ಮ ಹುಡುಕಾಟಗಳ ವೇಗ ವರ್ಧಿಸಲು, ಉತ್ತಮ ಶಿಫಾರಸುಗಳನ್ನು ನೀಡಲು ಮತ್ತು ನಿಮಗೆ ಇನ್ನಷ್ಟು ವೈಯಕ್ತಿಕಗೊಳಿಸಿದ ಅನುಭವಗಳನ್ನು ನೀಡಲು ನಿಮ್ಮ ಚಟುವಟಿಕೆಯನ್ನು ಬಳಸಲಾಗುತ್ತದೆ.

YouTube ಇತಿಹಾಸ

ನೀವು YouTube ಅನ್ನು ಬಳಸಿದಾಗ ನೀವು ವೀಕ್ಷಿಸುವ ವೀಡಿಯೊಗಳನ್ನು ಮತ್ತು ನೀವು ಹುಡುಕುವ ವಿಷಯಗಳನ್ನು ಉಳಿಸುತ್ತದೆ.

ನಿಮ್ಮ YouTube ಅನುಭವವನ್ನು ಮತ್ತು ಹುಡುಕಾಟ ಫಲಿತಾಂಶಗಳಂತಹ ಇತರ ಆ್ಯಪ್‌ಗಳನ್ನು ವೈಯಕ್ತಿಕಗೊಳಿಸಲು ನಿಮ್ಮ YouTube ಇತಿಹಾಸವನ್ನು ಬಳಸಲಾಗುವುದು.

ನನ್ನ ಚಟುವಟಿಕೆ ಡೇಟಾವನ್ನು ನಾನು ಹೇಗೆ ಅಳಿಸುವುದು?

ನಿಮ್ಮ Google ಖಾತೆಯಲ್ಲಿ ಉಳಿಸಲಾದ ಡೇಟಾವನ್ನು ನೀವು ಅಳಿಸಬಹುದು. ಶಾಶ್ವತವಾಗಿ ಅಳಿಸಬೇಕು ಎಂದು ನೀವು ಆಯ್ಕೆ ಮಾಡುವ ಡೇಟಾವನ್ನು ನಮ್ಮ ಸಿಸ್ಟಮ್‌ಗಳಿಂದ ತೆಗೆದುಹಾಕಲಾಗುವುದು. ಈ ಡೇಟಾವನ್ನು ನಮ್ಮ ಸರ್ವರ್‌ಗಳಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಅಥವಾ ನಿಮಗೆ ಸಂಯೋಜಿಸಿರದ ಮಾದರಿಯಲ್ಲಿ ಮಾತ್ರ ಇರಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಎಚ್ಚರಿಕೆಯ ಪ್ರಕ್ರಿಯೆಯನ್ನು ಅನುಸರಿಸುತ್ತೇವೆ.

ನಿಮ್ಮ Google ಖಾತೆಯಲ್ಲಿ ಉಳಿದಿರುವ, ನೀವು ಓದಲು ಮತ್ತು ವೀಕ್ಷಿಸಲು ಹುಡುಕಾಟ ಮಾಡಿರುವ ವಿಷಯಗಳಂತಹ ಚಟುವಟಿಕೆಯನ್ನು ಪರಿಶೀಲಿಸಲು ನನ್ನ ಚಟುವಟಿಕೆ ಗೆ ಭೇಟಿ ಕೊಡಿ. ನಿರ್ದಿಷ್ಟ ಸಮಯ ವ್ಯಾಪ್ತಿಯೊಳಗಿನ ಚಟುವಟಿಕೆಯ ನಿರ್ದಿಷ್ಟ ಭಾಗಗಳನ್ನು ಅಥವಾ ನಿಮ್ಮ ಎಲ್ಲಾ ಚಟುವಟಿಕೆಯನ್ನು ನೀವು ಅಳಿಸಬಹುದು.

ನಿಮ್ಮ ಚಟುವಟಿಕೆಯುಸ್ವಯಂಚಾಲಿತವಾಗಿ ಅಳಿಸುವುದನ್ನು ಸಹ ನೀವು ಆಯ್ಕೆ ಮಾಡಬಹುದು.

ನನ್ನ ವಿಷಯವನ್ನು ನಾನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ?

ನಿಮ್ಮ ವಿಷಯವು ಇಮೇಲ್‌ಗಳು, ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್‌ಗಳು, ಶೀಟ್‌ಗಳು, ಕಾಮೆಂಟ್‌ಗಳು, ಸಂಪರ್ಕಗಳು ಮತ್ತು ಕ್ಯಾಲೆಂಡರ್ ಈವೆಂಟ್‌ಗಳಂತಹ ಅಂಶಗಳನ್ನು ಒಳಗೊಂಡಿರುತ್ತದೆ.

ನಿಮ್ಮ ವಿಷಯದ ಆರ್ಕೈವ್ ಅನ್ನು ರಚಿಸಲು — ಅದನ್ನು ಬ್ಯಾಕಪ್ ಮಾಡಲು ಅಥವಾ ಒಂದು ವೇಳೆ ನೀವು ಬೇರೆ ಸೇವೆಯನ್ನು ಬಳಸಲು ಬಯಸಿದರೆ, ಅದನ್ನು ಬೇರೊಂದು ಕಂಪನಿಗೆ ತೆಗೆದುಕೊಳ್ಳಲುನಿಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಿ ಗೆ ಭೇಟಿ ಕೊಡಿ.

ನಾನು ಸೈನ್ ಔಟ್ ಆಗಿರುವಾಗ ನಾನು ಯಾವ ನಿಯಂತ್ರಣಗಳನ್ನು ಹೊಂದಿರುತ್ತೇನೆ?

ನೀವು ಸೈನ್ ಔಟ್ ಮಾಡಿದ್ದರೂ ಸಹ, Google ಅನ್ನು ಹೇಗೆ ಬಳಸುವುದು ಎಂಬುದನ್ನು ಆಯ್ಕೆಮಾಡಲು ನಿಮಗೆ ಅನುಮತಿಸುವ ನಿಯಂತ್ರಕಗಳನ್ನು ನೀವು ಹೊಂದಿದ್ದೀರಿ. ನೀವು ಸೈನ್ ಔಟ್ ಆಗಿರುವಾಗ, ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಲು g.co/privacytools ಗೆ ಭೇಟಿ ಕೊಡಿ:

ಹುಡುಕಾಟ ಕಸ್ಟಮೈಸ್ ಮಾಡುವಿಕೆ

ಇನ್ನಷ್ಟು ಪ್ರಸ್ತುತ ಫಲಿತಾಂಶಗಳು ಮತ್ತು ಶಿಫಾರಸುಗಳಿಗಾಗಿ ಈ ಬ್ರೌಸರ್‌ನಿಂದ ನಿಮ್ಮ Google ಹುಡುಕಾಟಗಳನ್ನು ಬಳಸುತ್ತದೆ.

YouTube ಹುಡುಕಾಟ ಮತ್ತು ವೀಕ್ಷಣೆ ಇತಿಹಾಸ

ನಿಮಗೆ YouTube ಅನ್ನು ವೈಯಕ್ತಿಕಗೊಳಿಸಲು, ನೀವು ವೀಕ್ಷಿಸುವ ವೀಡಿಯೊಗಳು ಮತ್ತು ನೀವು ಹುಡುಕುವ ವಿಷಯಗಳಂತಹ YouTube ನಲ್ಲಿನ ನಿಮ್ಮ ಚಟುವಟಿಕೆಯನ್ನು ಬಳಸುತ್ತದೆ.

ನಿಮ್ಮ ಬ್ರೌಸರ್‌ನಲ್ಲಿ ನೀವು ಕೆಲವು ಅಥವಾ ಎಲ್ಲಾ ಕುಕಿಗಳನ್ನು ನಿರ್ಬಂಧಿಸಬಹುದು, ಆದರೆ ಇದು ವೆಬ್‌ನಾದ್ಯಂತ ಕೆಲವು ವೈಶಿಷ್ಟ್ಯಗಳು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುವುದಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ನೀವು ಸೈನ್ ಇನ್ ಮಾಡಲು ಬಯಸಿದಾಗ ಅನೇಕ ವೆಬ್‌ಸೈಟ್‌ಗಳಿಗೆ ಕುಕಿಗಳನ್ನು ಆನ್ ಮಾಡಬೇಕಾಗುತ್ತದೆ.

ಸೈನ್ ಔಟ್ ಆಗಿರುವ ಬಳಕೆದಾರರು ಸಹ ವೈಯಕ್ತಿಕಗೊಳಿಸಿದ ಜಾಹೀರಾತುಗಳನ್ನು ಅವರು ನೋಡಲು ಬಯಸುತ್ತಾರೆಯೇ ಎಂಬುದನ್ನು ಆಯ್ಕೆ ಮಾಡಬಹುದು, ಯಾಕೆಂದರೆ ನಾವು ನಿರ್ದಿಷ್ಟ ವಯೋಮಾನಗಳಿಗೆ ಜಾಹೀರಾತುಗಳನ್ನು ವೈಯಕ್ತಿಕಗೊಳಿಸುವುದಿಲ್ಲ.