Google Forms ಮೂಲಕ ತ್ವರಿತವಾಗಿ ಒಳನೋಟಗಳನ್ನು ಪಡೆಯಿರಿ
ಆನ್ಲೈನ್ ಫಾರ್ಮ್ಗಳು ಮತ್ತು ಸಮೀಕ್ಷೆಗಳನ್ನು ಸುಲಭವಾಗಿ ರಚಿಸಿ ಮತ್ತು ಹಂಚಿಕೊಳ್ಳಿ, ಹಾಗೂ ಪ್ರತಿಕ್ರಿಯೆಗಳನ್ನು ನೈಜ-ಸಮಯದಲ್ಲಿ ವಿಶ್ಲೇಷಿಸಿ.
ಡಾಕ್ಯುಮೆಂಟ್ ಒಂದನ್ನು ರಚಿಸಿದಷ್ಟೇ ಸುಲಭವಾಗಿ ಆನ್ಲೈನ್ ಫಾರ್ಮ್ ರಚಿಸಿ
ಅನೇಕ ಪ್ರಕಾರದ ಪ್ರಶ್ನೆಗಳಿಂದ ಆಯ್ಕೆಮಾಡಿ, ಪ್ರಶ್ನೆಗಳನ್ನು ಮರುಕ್ರಮಗೊಳಿಸಲು ಅವುಗಳನ್ನು ಎಳೆದು ಬಿಡಿ ಮತ್ತು ಪಟ್ಟಿಯೊಂದನ್ನು ಅಂಟಿಸಿದಷ್ಟೇ ಸುಲಭವಾಗಿ ಮೌಲ್ಯಗಳನ್ನು ಕಸ್ಟಮೈಸ್ ಮಾಡಿ.
ಆಕರ್ಷಕ ಸಮೀಕ್ಷೆಗಳು ಮತ್ತು ಫಾರ್ಮ್ಗಳನ್ನು ಕಳುಹಿಸಿ
ನಿಮ್ಮ ಸಂಸ್ಥೆಯ ಬ್ರ್ಯಾಂಡಿಂಗ್ನ ನೋಟ ಮತ್ತು ಅನುಭವವನ್ನು ಸರಿಹೊಂದಿಸಲು ಅಥವಾ ಅದನ್ನು ಪ್ರತಿಬಿಂಬಿಸಲು ಬಣ್ಣಗಳು, ಚಿತ್ರಗಳು ಮತ್ತು ಪಾಂಟ್ಗಳನ್ನು ಕಸ್ಟಮೈಸ್ ಮಾಡಿ. ಮತ್ತು ಅಡೆತಡೆಗಳಿಲ್ಲದ ಅನುಭವವನ್ನು ಪಡೆಯಲು, ಉತ್ತರಗಳನ್ನು ಆಧರಿಸಿ ಪ್ರಶ್ನೆಗಳನ್ನು ತೋರಿಸುವ ಕಸ್ಟಮ್ ಲಾಜಿಕ್ ಅನ್ನು ಸೇರಿಸಿ.
ಸ್ವಯಂಚಾಲಿತ ಸಾರಾಂಶಗಳ ಮೂಲಕ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿ
ಪ್ರತಿಕ್ರಿಯೆ ಡೇಟಾ ಅಪ್ಡೇಟ್ ಹೊಂದಿರುವ ಚಾರ್ಟ್ಗಳನ್ನು ನೈಜ-ಸಮಯದಲ್ಲಿ ನೋಡಿರಿ. ಅಥವಾ ಆಳವಾದ ವಿಶ್ಲೇಷಣೆ ಮತ್ತು ಸ್ವಯಂಚಾಲನೆಗಾಗಿ ಕಚ್ಚಾ ಡೇಟಾವನ್ನು Google Sheets ಮೂಲಕ ತೆರೆಯಿರಿ.
ಎಲ್ಲಿಂದ ಬೇಕಾದರೂ ಸಮೀಕ್ಷೆಗಳನ್ನು ರಚಿಸಿ ಮತ್ತು ಅವುಗಳಿಗೆ ಪ್ರತಿಕ್ರಿಯಿಸಿ
ನೀವು ಪ್ರಯಾಣದಲ್ಲಿರುವಾಗಲೂ ಸಹ, ದೊಡ್ಡ ಮತ್ತು ಸಣ್ಣ ಸ್ಕ್ರೀನ್ಗಳಿಂದ ಫಾರ್ಮ್ಗಳನ್ನು ಪ್ರವೇಶಿಸಿ, ರಚಿಸಿ ಮತ್ತು ಎಡಿಟ್ ಮಾಡಿ. ಉಳಿದವರು ಎಲ್ಲಿದ್ದಾರೋ ಅಲ್ಲಿಂದಲೇ—ಯಾವುದೇ ಮೊಬೈಲ್ ಸಾಧನ, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ನಿಂದಲೂ ನಿಮ್ಮ ಸಮೀಕ್ಷೆಗೆ ಪ್ರತಿಕ್ರಿಯಿಸಬಹುದು.
ಫಾರ್ಮ್ಗಳನ್ನು ರಚಿಸಿ ಮತ್ತು ಫಲಿತಾಂಶಗಳನ್ನು ಜೊತೆಗೂಡಿ ವಿಶ್ಲೇಷಿಸಿ
Google Docs, Sheets ಮತ್ತು Slides ನಲ್ಲಿ ಇರುವ ಹಾಗೆಯೇ, ರಿಯಲ್ ಟೈಮ್ನಲ್ಲಿ ಜೊತೆಗೂಡಿ ಪ್ರಶ್ನೆಗಳನ್ನು ರಚಿಸಲು ಸಹಯೋಗಿಗಳನ್ನು ಸೇರಿಸಿ. ಆನಂತರ, ಫೈಲ್ನ ಅನೇಕ ಆವೃತ್ತಿಗಳನ್ನು ಹಂಚಿಕೊಳ್ಳುವ ಅಗತ್ಯವಿಲ್ಲದೆಯೇ, ಫಲಿತಾಂಶಗಳನ್ನು ಜೊತೆಗೂಡಿ ವಿಶ್ಲೇಷಿಸಿ.
ಸ್ವಚ್ಛವಾದ ಪ್ರತಿಕ್ರಿಯೆ ಡೇಟಾದೊಂದಿಗೆ ಕೆಲಸ ಮಾಡಿ
ಪ್ರತಿಕ್ರಿಯೆ ಅಂಗೀಕರಿಸುವಿಕೆಯ ನಿಯಮಗಳನ್ನು ಸೆಟ್ ಮಾಡಲು ಅಂತರ್ನಿರ್ಮಿತ ಬುದ್ಧಿಮತ್ತೆಯನ್ನು ಬಳಸಿ. ಉದಾಹರಣೆಗೆ, ಇಮೇಲ್ ವಿಳಾಸಗಳನ್ನು ಸರಿಯಾಗಿ ಫಾರ್ಮ್ಯಾಟ್ ಮಾಡಲಾಗಿದೆ ಅಥವಾ ಸಂಖ್ಯೆಗಳು, ನಿರ್ದಿಷ್ಟ ವ್ಯಾಪ್ತಿಯೊಳಗೆ ಇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇಮೇಲ್, ಲಿಂಕ್ ಅಥವಾ ವೆಬ್ಸೈಟ್ನ ಮೂಲಕ ಫಾರ್ಮ್ಗಳನ್ನು ಹಂಚಿಕೊಳ್ಳಿ
ನಿಮ್ಮ ವೆಬ್ಸೈಟ್ನಲ್ಲಿ ಫಾರ್ಮ್ಗಳನ್ನು ಎಂಬೆಡ್ ಮಾಡುವ ಮೂಲಕ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಲಿಂಕ್ಗಳನ್ನು ಹಂಚಿಕೊಳ್ಳುವ ಮೂಲಕ, ನಿರ್ದಿಷ್ಟ ಜನರೊಂದಿಗೆ ಅಥವಾ ವ್ಯಾಪಕ ಶ್ರೇಣಿಯ ಪ್ರೇಕ್ಷಕರೊಂದಿಗೆ ಫಾರ್ಮ್ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದು.
ಸುರಕ್ಷತೆ, ಅನುಸರಣೆ ಹಾಗೂ ಗೌಪ್ಯತೆ
ಡೀಫಾಲ್ಟ್ ಆಗಿ ಸುರಕ್ಷಿತವಾಗಿದೆ
ಮಾಲ್ವೇರ್ಗಳಿಂದ ಸುಧಾರಿತ ರಕ್ಷಣೆಯೂ ಸೇರಿದ ಹಾಗೆ, ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸಲು, ಉದ್ಯಮದಲ್ಲಿನ ಅತ್ಯುನ್ನತ ಸುರಕ್ಷತಾ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ. Forms ಸಹ ಕ್ಲೌಡ್ ಆಧಾರಿತವಾಗಿದೆ, ಇದರಿಂದಾಗಿ ಸ್ಥಳೀಯ ಫೈಲ್ಗಳ ಅಗತ್ಯ ಕಡಿಮೆಯಾಗುತ್ತದೆ ಮತ್ತು ನಿಮ್ಮ ಸಾಧನಗಳಿಗೆ ಅಪಾಯದ ಸಾಧ್ಯತೆಯೂ ಕಡಿಮೆಯಾಗಿರುತ್ತದೆ.
ರವಾನಿಸುವಾಗ ಮತ್ತು ಸಂಗ್ರಹಣೆ ಮಾಡುವಾಗ ಎನ್ಕ್ರಿಪ್ಟ್ ಮಾಡಲಾಗುತ್ತದೆ
Google Drive ನಲ್ಲಿ ಅಪ್ಲೋಡ್ ಮಾಡಲಾದ ಅಥವಾ Forms ನಲ್ಲಿ ರಚಿಸಲಾದ ಎಲ್ಲಾ ಫೈಲ್ಗಳನ್ನು ರವಾನಿಸುವಾಗ ಹಾಗೂ ಸಂಗ್ರಹಣೆ ಮಾಡುವಾಗ ಎನ್ಕ್ರಿಪ್ಟ್ ಮಾಡಲಾಗುತ್ತದೆ.
ನಿಯಂತ್ರಕ ಅವಶ್ಯಕತೆಗಳನ್ನು ಬೆಂಬಲಿಸುವುದಕ್ಕಾಗಿ ಅನುಸರಣೆ
Forms ಸೇರಿದ ಹಾಗೆ ನಮ್ಮ ಉತ್ಪನ್ನಗಳನ್ನು, ನಿಯಮಿತವಾಗಿ ಸುರಕ್ಷತೆ, ಗೌಪ್ಯತೆ ಮತ್ತು ಅನುಸರಣೆ ನಿಯಂತ್ರಣಗಳ ಸ್ವತಂತ್ರ ದೃಢೀಕರಣಕ್ಕೆ ಒಳಪಡಿಸಲಾಗುತ್ತದೆ.
ವಿನ್ಯಾಸದಲ್ಲೇ ಗೌಪ್ಯತೆ ಅಡಕವಾಗಿದೆ
Google Cloud ನ ಇತರ ಎಂಟರ್ಪ್ರೈಸ್ ಸೇವೆಗಳು ಅನುಸರಿಸುವ ಅದೇ ಸದೃಢ ನೀತಿ ಬದ್ಧತೆಗಳು ಮತ್ತು ಡೇಟಾ ರಕ್ಷಣೆಯ ನಿಯಮಗಳನ್ನು Forms ಸಹ ಪಾಲಿಸುತ್ತದೆ.
ನಿಮ್ಮ ಡೇಟಾವನ್ನು ನೀವೇ ನಿಯಂತ್ರಿಸುತ್ತೀರಿ.
ನಿಮ್ಮ Forms ವಿಷಯವನ್ನು ನಾವು ಜಾಹೀರಾತುಗಳಿಗಾಗಿ ಎಂದೂ ಬಳಸಿಕೊಳ್ಳುವುದಿಲ್ಲ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಥರ್ಡ್-ಪಾರ್ಟಿಗಳಿಗೆ ಎಂದೂ ಮಾರಾಟ ಮಾಡುವುದಿಲ್ಲ.
ನಿಮಗೆ ಸರಿಹೊಂದುವ ಪ್ಲಾನ್ ಅನ್ನು ಹುಡುಕಿಕೊಳ್ಳಿ
Google Forms ಎಂಬುದು Google Workspace ನ ಭಾಗವಾಗಿದೆ
ಪ್ರತಿ ಪ್ಲಾನ್ ಇವುಗಳನ್ನು ಒಳಗೊಂಡಿರುತ್ತದೆ
ವೈಯಕ್ತಿಕ ಬಳಕೆಗಾಗಿ (ಶುಲ್ಕ ರಹಿತ) |
Business Standard$12 USD
ಪ್ರತಿ ಬಳಕೆದಾರರಿಗೆ ತಿಂಗಳಿಗೆ, 1 ವರ್ಷದ ಬದ್ಧತೆ ಅಥವಾ ಮಾಸಿಕವಾಗಿ ಬಿಲ್ ಮಾಡಿದಾಗ ಪ್ರತಿ ಬಳಕೆದಾರರಿಗೆ ತಿಂಗಳಿಗೆ $14.40
|
|
---|---|---|
Docs, Sheets, Slides, Forms
ಕಂಟೆಂಟ್ ರಚನೆ |
||
Drive
ಸುರಕ್ಷಿತ ಕ್ಲೌಡ್ ಸಂಗ್ರಹಣೆ |
ಪ್ರತಿ ಬಳಕೆದಾರರಿಗೆ 15 GB |
ಪ್ರತಿ ಬಳಕೆದಾರರಿಗೆ 2 TB |
ನಿಮ್ಮ ತಂಡಕ್ಕಾಗಿ ಹಂಚಿಕೊಂಡ ಡ್ರೈವ್ಗಳು |
||
Gmail
ಸುರಕ್ಷಿತ ಇಮೇಲ್ |
||
ಕಸ್ಟಮ್ ವ್ಯಾಪಾರದ ಇಮೇಲ್ |
||
Meet
ವೀಡಿಯೊ ಮತ್ತು ಧ್ವನಿ ಕಾನ್ಫರೆನ್ಸಿಂಗ್ |
100 ಭಾಗವಹಿಸುವವರು |
150 ಭಾಗವಹಿಸುವವರು |
ಮೀಟಿಂಗ್ ರೆಕಾರ್ಡಿಂಗ್ಗಳನ್ನು Drive ನಲ್ಲಿ ಉಳಿಸಲಾಗಿದೆ |
||
ನಿರ್ವಾಹಕರು
ಕೇಂದ್ರೀಕೃತ ಆಡಳಿತ |
||
ಗುಂಪು ಆಧಾರಿತ ಭದ್ರತಾ ನೀತಿ ನಿಯಂತ್ರಣಗಳು |
||
ಗ್ರಾಹಕ ಬೆಂಬಲ |
ಸ್ವಯಂ ಸೇವಾ ಆನ್ಲೈನ್ ಮತ್ತು ಸಮುದಾಯ ಫೋರಂಗಳು |
24/7 ಆನ್ಲೈನ್ ಬೆಂಬಲ ಹಾಗೂ ಸಮುದಾಯ ಫೋರಂಗಳು |
ಟೆಂಪ್ಲೇಟ್ಗಳನ್ನು ಬಳಸಲು ಪ್ರಾರಂಭಿಸಿ
ಕೆಲಸಗಳನ್ನು ತ್ವರಿತವಾಗಿ ಪ್ರಾರಂಭಿಸಲು ವಿವಿಧ ಸಮೀಕ್ಷೆಗಳು, ಪ್ರಶ್ನಾವಳಿಗಳು ಮತ್ತು ವೃತ್ತಿಪರವಾಗಿ ವಿನ್ಯಾಸಗೊಳಿಸಲಾದ ಇತರ ಟೆಂಪ್ಲೇಟ್ಗಳಿಂದ ಆಯ್ಕೆ ಮಾಡಿ.
ಇನ್ನಷ್ಟು ಟೆಂಪ್ಲೇಟ್ಗಳನ್ನು ನೋಡಲು Forms ಟೆಂಪ್ಲೇಟ್ ಗ್ಯಾಲರಿಗೆ ಭೇಟಿ ನೀಡಿ.